Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಆಫೀಸ್ ನಲ್ಲಿ ಮೇಕಪ್ ಮಾಡಲು ಸಪ್ತಸೂತ್ರ

ದುಡಿಯುವ ಮಹಿಳೆಯರ ಬ್ಯಾಗ್ ನಲ್ಲಿ ಬಾಚಣಿಕೆ, ಕ್ರೀಮ್, ಲಿಪ್ ಜೆಲ್ ಹೀಗೆ ಕೆಲ ಮೇಕಪ್ ಸಾಧನಗಳನ್ನು ಬ್ಯಾಗ್ ನಲ್ಲಿ ಇಟ್ಟುಕೊಂಡಿರುತ್ತಾರೆ. ಆದರೆ ಆಫೀಸ್ ನಲ್ಲಿ ಮೇಕಪ್ ಮಾಡುವಾಗ ಸಮಯ ಸಂದರ್ಭ ನೋಡದೆ ಮಾಡುತ್ತಿದ್ದರೆ ಮೇಕಪ್ ರಾಣಿ ಪಟ್ಟ ಗ್ಯಾರಂಟಿ. ಆದ್ದರಿಂದ ಆಫೀಸ್ ನಲ್ಲಿ ಹೇಗೆ ಮೇಕಪ್ ಮಾಡಿಕೊಳ್ಳಬೇಕು ಎಂಬ ಸರಳ ಉಪಾಯ ಇಲ್ಲಿದೆ ನೋಡಿ.
1. ಆಫೀಸ್ ಗೆ ಹೊಗುವಾಗ ಲಿಕ್ವಿಡ್ ಪೌಂಡೇಶನ್ ಬಳಸುವುದು ಉತ್ತಮ. ಏಕೆಂದರೆ ತ್ವಚೆ ಬೇಗನೆ ಲಿಕ್ವಿಡ್ ಪೌಂಡೇಶನ್ ಹೀರಿಕೊಳ್ಳುವುದು, ಲೋಷನ್ ಹಚ್ಚಿ ಅದರ ಮೇಲೆ ಪೌಂಡೇಶನ್ ಪೌಡರ್ ಹಚ್ಚುವುದು ಒಳ್ಳೆಯದು.
2. ಕಣ್ಣಿನ ಮೇಕಪ್ ಸೌಂದರ್ಯಕ್ಕೆ ಮತ್ತಷ್ಟು ಮೆರಗು ನೀಡುತ್ತದೆ. ಈ ರೀತಿ ಕಣ್ಣಿನ ಮೇಕಪ್ ಮಾಡುವಾಗ ಆಫೀಸ್ ಗೆ ಹೊಂದುವ ಹಾಗೆ ಮಾಡಬೇಕು. ಕಪ್ಪು, ನೀಲಿ, ಬ್ರೌನ್ (ಕಂದು) ಬಣ್ಣದ ಲೈನರ್ ಬಳಸಿ ಕಣ್ಣಿನ ಅಂದ ಹೆಚ್ಚಿಸಬಹುದು.
3. ಈ ರೀತಿ ಲೈನರ್ ಹಚ್ಚುವಾಗ ತುಂಬಾ ಗಾಢವಾಗಿ ಹಚ್ಚಬಾರದು.
4. ಕಣ್ಣಿಗೆ ಮಸ್ಕರಾ ಹಚ್ಚಿದರೆ ನೋಡಲು ಆಕರ್ಷಕವಾಗಿ ಕಾಣಿವಿರಿ.
5. ತುಟಿಗೆ ತೆಳುವಾದ ಬಣ್ಣದ ಲಿಪ್ ಸ್ಟಿಕ್ ಹಚ್ಚಬೇಕು. ಆದರೆ ಅದು ತುಂಬಾ ಹೊತ್ತು ನಿಲ್ಲುವುದಿಲ್ಲ. ಆದರೆ ಆಗಾಗ ಲಿಪ್ ಸ್ಟಿಕ್ ಹಚ್ಚಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಲಿಪ್ ಗ್ಲೋಸ್ ಬಳಸಬೇಕು.
6. ಕೆನ್ನೆಗೆ ಮೇಕಪ್ ಮಾಡುವುದಕ್ಕಿಂತ ಕಣ್ಣಿನ ಮೇಕಪ್ ಉತ್ತಮ. ಆಗಾಗ ಲಿಪ್ ಸ್ಟಿಕ್ ಮತ್ತು ಐ ಲೈನರ್ ಹಚ್ಚದರೆ ಮೇಕಪ್ ಗಾಢವಾಗಿ ಕಾಣುವುದು.
7. ತುಟಿಗೆ ಲಿಪ್ ಗ್ಲೋಸ್ ಹಾಕಿದರೆ ತುಟಿ ಒಣಗುವುದಿಲ್ಲ. ವಿಶ್ರಾಂತಿ ತೆಗೆಯುವಾಗ ತೆಳುವಾಗಿ ಪೌಂಡೇಶನ್ ಪೌಡರ್ ಹಚ್ಚಬಹುದು.
ಆಫೀಸ್ ನಲ್ಲಿ ಸರಳ ಮೇಕಪ್ ನಿಂದ ಸುಂದರವಾಗಿ ಕಾಣಿ.



Click it and Unblock the Notifications
