Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಈ ಫೊಟೋ ನೋಡಿ ಹುಬ್ಬೇರಿಸಿದವಳೇ ಜಾಣೆ

ವಯಸ್ಸಾಗುತ್ತಿದ್ದಂತೆ ಹುಬ್ಬಿನ ಬೆಳವಣಿಗೆ ನಿಲ್ಲುತ್ತದೆ ಮತ್ತು ಬಿಳಿ ಬಣ್ಣಕ್ಕೆ ತಿರುಗುತ್ತದೆ. ಹುಬ್ಬುಗಳನ್ನು ಮತ್ತೆ ಬೆಳೆಸುವುದು ಹೇಗೆ ಮತ್ತು ಹುಬ್ಬುಗಳಿಗೆ ನೈಸರ್ಗಿಕ ಬಣ್ಣ ತರುವುದು ಹೇಗೆ ಎಂದು ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ.
ಹುಬ್ಬನ್ನು ನೈಸರ್ಗಿಕವಾಗಿ ಸುಂದರಗೊಳಿಸುವ ವಿಧಾನ:
1. ಮೊದಲು ಸರಳ ಕ್ಲೀನಪ್ ಮಾಡಬೇಕು. ಕೆಲವರಿಗೆ ಹುಬ್ಬುಗಳಲ್ಲಿಯೂ ಹೊಟ್ಟಿರುತ್ತದೆ. ಅಂತಹವರು ಗಡುಸಲ್ಲದ ಫೇಸ್ ವಾಶ್ ಬಳಸಬೇಕು. ಇದರಿಂದ ಒಣ ತ್ವಚೆ ನಿವಾರಣೆಗೊಳ್ಳುತ್ತದೆ. ನೆನೆಸಿಟ್ಟ ಬಾದಾಮಿ ರುಬ್ಬಿ ಅದಕ್ಕೆ ಸ್ವಲ್ಪ ಮೊಸರು ಬೆರೆಸಿ ಹಚ್ಚಿಕೊಳ್ಳುವುದರಿಂದ ಒಣ ಕೂದಲು ಉದುರಿ ಚರ್ಮವನ್ನು ಗಟ್ಟಿಗೊಳಿಸುತ್ತದೆ.
2. ಮೃದು ಹಲ್ಲುಳ್ಳ ಟೂಥ್ ಬ್ರಶ್ ಖರೀದಿಸಿ (ಮಗುವಿನ ಟೂಥ್ ಬ್ರಶ್) ಸೋಪಿನ ನೀರಿನಲ್ಲಿ ಅದ್ದಿ ಹುಬ್ಬನ್ನು ಉಜ್ಜಿದ್ದರೆ ನಿರ್ಜೀವ ಕೂದಲು ಹೊರಬರುತ್ತದೆ.
3. ಎಳ್ಳೆಣ್ಣೆ, ಮೆಹಂದಿ ಮತ್ತು ಕರಿಬೇವನ್ನು ತಾಮ್ರದ ಬಾಣಲೆಯಲ್ಲಿ ಬಿಸಿ ಮಾಡಿ ಗಾಜಿನ ಸೀಸೆಯಲ್ಲಿ ಹಾಕಿ ಎಚ್ಚರಿಕೆಯಿಂದ ಫ್ರಿಡ್ಜ್ ನಲ್ಲಿಡಬೇಕು. ಕೆಲವು ದಿನಗಳ ನಂತರ ಈ ಮಿಶ್ರಣ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದನ್ನು ದಿನಕ್ಕೆ ಎರಡು ಬಾರಿ ಹುಬ್ಬಿಗೆ ಹಚ್ಚಿಕೊಳ್ಳುವುದರಿಂದ ನೈಸರ್ಗಿಕವಾಗಿ ಹುಬ್ಬಿನ ಕೂದಲು ಬೆಳೆದು ಕಪ್ಪಗಾಗುತ್ತದೆ.
4. ಉರಿಯುತ್ತಿರುವ ದೀಪಕ್ಕೆ ಒಂದು ಚಮಚ ತುಪ್ಪ ಹಾಕಬೇಕು. ದೀಪದ ಮೇಲೆ ತಾಮ್ರದ ಶೀಟನ್ನು ಅಡ್ಡಲಾಗಿಡಬೇಕು. ಉರಿಯಿಂದ ತಾಮ್ರದ ಶೀಟ್ ಮೇಲೆ ಕಪ್ಪುಬಣ್ಣದ ಹೊಗೆ ಶೇಖರಣೆಯಾಗುತ್ತದೆ. ಈ ಕಪ್ಪು ಬಣ್ಣ ನೈಸರ್ಗಿಕ ಮತ್ತು ರಾಸಾಯನಿಕ ಮುಕ್ತವಾಗಿರುವುದರಿಂದ ಶೇಖರಿಸಿಟ್ಟುಕೊಂಡು ಹಚ್ಚಿಕೊಳ್ಳಬಹುದು.
5. ಕೋಲ್ಡ್ ಕ್ರೀಂ ಅಥವಾ ಮಾಯಿಶ್ಚರೈಸರ್ ಕ್ರೀಂ ಅನ್ನು ಐಬ್ರೊ ಮೇಲೆ ಹಚ್ಚಿಕೊಳ್ಳಬೇಕು. ನಂತರ ಮಸ್ಕಾರಾವನ್ನು ಹಚ್ಚಿಕೊಂಡರೆ ಬಣ್ಣ ನೈಸರ್ಗಿಕವಾಗಿರುವಂತೆ ಕಾಣುತ್ತದೆ.
6. ಬ್ಲಾಕ್ ಕಾಫಿ ಡಿಕಾಕ್ಷನನ್ನು ಮೆಹಂದಿ ಜೊತೆ ಬೆರೆಸಿ ಹಚ್ಚಿಕೊಂಡರೆ ಹುಬ್ಬನ್ನು ಕಪ್ಪಾಗಿಸಿಕೊಳ್ಳಬಹುದು.
ಇದರ ಹೊರತಾಗಿಯೂ ಐಬ್ರೊಗಳನ್ನು ಸಂರಕ್ಷಿಸಿಕೊಳ್ಳುವ ಬೇರೆ ವಿಧಾನವಿದೆ. ಹೆಚ್ಚು ಬಾರಿ ಹುಬ್ಬುಗಳಿಗೆ ಶೇಪ್ ನೀಡಬಾರದು. ಒಂದು ತಿಂಗಳ ಅಂತರವಾದರೂ ನೀಡಬೇಕು. ಐಬ್ರೊಗಳ ಮೇಲೆ ಹೆಚ್ಚು ರಾಸಾಯನಿಕ ಪದಾರ್ಥಗಳನ್ನು ಬಳಸಬಾರದು. ಈ ತ್ವಚೆ ತುಂಬಾ ಸೂಕ್ಷ್ಮವಾಗಿರುವುದರಿಂದ ಹೆಚ್ಚು ಜಾಗ್ರತೆಯಿಂದಿರಬೇಕು. ಮಲಗುವ ಮುನ್ನವೇ ಮೇಕಪ್ ತೆಗೆದರೆ ಒಳ್ಳೆಯದು.



Click it and Unblock the Notifications
