Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ನಿರಂತರ ಯೌವನದ ಚೆಲುವಿಗೆ ಈ ಮೇಕಪ್

'ನೀವು ವಯಸ್ಸಿನಲ್ಲಿ ಚಿಕ್ಕವರಂತೆ ಕಾಣುತ್ತಿದ್ದೀರಾ' ಎಂದು ಹೇಳಿಸಿಕೊಳ್ಳಲು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಸಿನಿಮಾ ನಟಿಯರು ಚಿಕಿತ್ಸೆ ಮಾಡಿ ಸುಂದರವಾಗಿ ಕಾಣಿಸುತ್ತಾರೆ, ಆದರೆ ಈ ಚಿಕಿತ್ಸೆ ದುಬಾರಿಯಾಗಿರುವುದರಿಂದ ಸಾಮಾನ್ಯ ಜನರಿಗೆ ಮಾಡಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಈ ಕೆಳಗಿನ ವಿಧಾನ ಬಳಸಿ ಸುಂದರವಾಗಿ ಕಾಣಿ.
1.ಮೊಸರು, ಜೇನು ಮತ್ತು ವಿಟಮಿನ್ ಇ ಎಣ್ಣೆಯನ್ನು ಮಿಶ್ರ ಮಾಡಿ ಪ್ರತಿದಿನ ಮುಖಕ್ಕೆ ಹಚ್ಚಿ, ಸ್ವಲ್ಪ ಹೊತ್ತಿನ ಬಳಿಕ ತೊಳೆಯ ಬೇಕು. ಹೀಗೆ ದಿನವೂ ಮಾಡುವುದರಿಂದ ಮುಖದಲ್ಲಿ ನೆರಿಗೆ ಬೇಗನೆ ಬೀಳುವುದಿಲ್ಲ. ಮುಖಕ್ಕೆ ಮೇಕಪ್ ಮಾಡುವ ಮೊದಲು ಮೊಸರಿನಿಂದ ಕ್ಲೆನ್ಸ್ ಮಾಡಿಕೊಳ್ಳುವುದು ಒಳ್ಳೆಯದು.
2. ಎಣ್ಣೆ ತ್ವಚೆಯವರನ್ನು ಹೊರತು ಪಡಿಸಿ ಉಳಿದವರು ಡ್ರೈ ಫೌಂಡೇಶನ್ ಬಳಸಬಾರದು. ಲಿಕ್ವಿಡ್ ಫೌಂಡೇಶನ್ ಮುಖಕ್ಕೆ ತುಂಬಾ ಒಳ್ಳೆಯದು. ತ್ವಚೆ ಬಣ್ಣಕ್ಕೆ ಹೊಂದಿಕೊಳ್ಳುವ ಲಿಕ್ವಿಡ್ ಫೌಂಡೇಶನ್ ಬಳಸಿದರೆ ಮುಖ ಸ್ವಚ್ಛವಾಗಿ ಕಾಣುತ್ತದೆ.
3. ಫೌಡರ್ ಬ್ಲಷ್ ಬಳಸುವ ಬದಲು ಕ್ರೀಮ್ ರೀತಿಯ ಬ್ಲಷ್ ಬಳಸಬೇಕು. ಬ್ಲಷ್ ಕುತ್ತಿಗೆಗೆ ಹಚ್ಚಿ ದಪ್ಪ ಸರದ ಬದಲು ಹೊಳೆಯುವ ಲಾಕೆಟ್ ಇರುವ ತೆಳ್ಳಗಿನ ಸರ ಹಾಕಿಕೊಂಡರೆ ಸುಂದರವಾಗಿ ಕಾಣುವುದು.
4. ಕಣ್ಣಿನ ಹತ್ತಿರ ನೆರಿಗೆ ಇದ್ದರೆ ಮಸ್ಕರಾ ಅಥವಾ ಕಾಡಿಗೆಯನ್ನು ಹಚ್ಚಬಾರದು. ತುಟಿಗೆ ಬಣ್ಣವನ್ನು ಹಚ್ಚಬಾರದು ಅದರ ಬದಲು ಜೇನು ಅಥವಾ ತುಪ್ಪವನ್ನು ಹಚ್ಚಿದರೆ ಸಾಕು.
ವಯಸ್ಸಾದ ಮೇಲೆ ಗಾಢ ಮೇಕಪ್ ಗಿಂತ ಸರಳವಾದ ಮೇಕಪ್ ನೋಡುಗರನ್ನು ಹೆಚ್ಚು ಆಕರ್ಷಿಸುತ್ತದೆ.



Click it and Unblock the Notifications
