Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಜೀನ್ಸ್ ಮತ್ತು ಟಿ ಶರ್ಟ್ ಗೆ ಸ್ಟೈಲಿಷ್ ಡ್ರೆಸ್ಸಿಂಗ್

1. ಸರ: ಜೀನ್ಸ್ ಪ್ಯಾಂಟ್ ಮತ್ತು ಟಿ ಶರ್ಟ್ ಧರಿಸಿ ದಪ್ಪ ಮಣಿಯಿರುವ ಉದ್ದದ ಮಾಲೆ ಅಥವಾ ಸರವನ್ನು ಧರಿಸಬೇಕು. ಕಪ್ಪು ಮತ್ತು ಬಿಳಿ ಮಣಿಯನ್ನು ಧರಿಸುವ ಫ್ಯಾಷನ್ ಕಡಿಮೆಯಾಗಿ ಈಗ ಬೆಳ್ಳಿ ಅಥವಾ ತಾಮ್ರ ಬಣ್ಣದ ದಪ್ಪ ಮಣಿಗಳನ್ನು ಧರಿಸುವುದು ಸ್ಟೈಲ್ ಆಗಿದೆ. ಮಣಿಗಳನ್ನು ಟಿ ಶರ್ಟ್ ಗೆ ಸರಿ ಹೊಂದುವ ಬಣ್ಣದ ಬದಲು ವಿರುದ್ಧ ಬಣ್ಣದ ಸರ ಧರಿಸಿ.
2. ಜಾಕೆಟ್: ಟಿ ಶರ್ಟ್ ಮತ್ತು ಜೀನ್ಸ್ ಧರಿಸಿ ಚಳಿಗಾಲ ಆಗಿರುವುದರಿಂದ ಅದರ ಮೇಲೆ ಜಾಕೆಟ್ ಧರಿಸಿದರೆ ಅದು ತುಂಬಾ ಸ್ಟೈಲಿಷ್ ಲುಕ್ ಕೊಡುತ್ತದೆ.
3. ಬ್ರಾಸ್ ಲೆಟ್: ತುಂಬಾ ಹುಡುಗಿಯರು ಬ್ರಾಸ್ ಲೆಟ್ ಧರಿಸುವುದನ್ನು ಇಷ್ಟಪಡುವುದಿಲ್ಲ. ಜೀನ್ಸ್ ಮತ್ತು ಟಿ ಶರ್ಟ್ ಜೊತೆ ಸರಳವಾದ ಬ್ರಾಸ್ ಲೆಟ್ ಹಾಕಿಕೊಂಡರೆ ಚೆನ್ನಾಗಿ ಕಾಣಿಸುತ್ತದೆ.
4. ಸ್ಕಾರ್ಫ್: ಟಿ ಶರ್ಟ್ ಗೆ ಹೊಂದುವ ಬಣ್ಣದ ಸ್ಕಾರ್ಫ್ ಧರಿಸಿದರೆ ಅಂತಹ ಡ್ರೆಸ್ಸಿಂಗ್ ಅನ್ನು ಎಲ್ಲರು ಇಷ್ಟಪಡುತ್ತಾರೆ. ಈ ರೀತಿ ಆಫೀಸ್ ಗೆ ಹೋಗುವಾಗ ಕೂಡ ಧರಿಸಬಹುದಾಗಿದ್ದು ಇದು ಫ್ರೊಫೆಷನಲ್ ಲುಕ್ ಕೂಡ ಕೊಡುತ್ತದೆ.
5. ಚಪ್ಪಲಿ: ಜೀನ್ಸ್ ಮತ್ತು ಟಿ ಶರ್ಟ್ ಧರಿಸಿರುವಾಗ ಅದಕ್ಕೆ ಹೊಂದುವ ರೀತಿಯ ಚಪ್ಪಲಿಯನ್ನು ಧರಿಸಬೇಕು. ಅಲ್ಲದಿದ್ದರೆ ಡ್ರೆಸ್ಸಿಂಗ್ ಬಗ್ಗೆ ಅಷ್ಟೇನು ತಿಳಿವಳಿಕೆಯಿಲ್ಲ ಎಂದು ಹಾಸ್ಯ ಮಾಡುತ್ತಾರೆ. ಜೀನ್ಸ್ ಮತ್ತು ಟಿ ಶರ್ಟ್ ಗೆ ಹೀಲ್ಡ್ ಅಥವಾ ಚಪ್ಪಟೆಯಾಗಿರುವ ಚಪ್ಪಲಿಗಳು ದೊರೆಯುತ್ತವೆ. ಪೆನ್ಸಿಲ್ ಟಿಪ್ ಶೂ, ಬೂಟ್ ಇವುಗಳು ಮಾಡರ್ನ್ ಲುಕ್ ನೀಡುತ್ತದೆ.



Click it and Unblock the Notifications
