Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಆಕರ್ಷಕ ಮೇಕಪ್ ಗೆ ಬೇಕು ಬ್ರೆಷ್ ಸಹಾಯ

ಆದರೆ ಮೇಕಪ್ ಬ್ರೆಷ್ ಆಯ್ಕೆ ಮಾಡುವಾಗ ಇಷ್ಟ ಬಂದ ಡ್ರೆಸ್ ಗಳನ್ನು ಆಯ್ಕೆ ಮಾಡಿದ ಹಾಗೆ ಮಾಡಲು ಸಾಧ್ಯವಿಲ್ಲ. ಕಣ್ಣು, ತುಟಿ, ಕೆನ್ನೆಗೆ ಮೇಕಪ್ ಮಾಡುವಾಗ ಬೇರೆ -ಬೇರೆ ರೀತಿಯ ಬ್ರೆಷ್ ಗಳನ್ನು ಬಳಸಿ ಮಾಡಿದರನೆ ಚೆಂದ ಕಾಣುವುದು. ಮೇಕಪ್ ಬಗ್ಗೆ ಮೇಕಪ್ ಆಸಕ್ತಿಯಿರುವವರು ಈ ಕೆಳಗಿನ ಬ್ರೆಷ್ ಗಳನ್ನು ಬಳಸಿ ಅಂದ ಹೆಚ್ಚಿಸಿಕೊಳ್ಳಬಹುದು.
1. ರೌಂಡ್ ಪೌಡರ್ ಬ್ರೆಷ್: ದುಂಡನೆಯ ಆಕಾರದ ಈ ಬ್ರೆಷ್ ಮೇಕಪ್ ಬ್ರೆಷ್ ಗಳಲ್ಲಿಯೆ ಡೊಡ್ಡದಾದ ಬ್ರೆಷ್. ಇದನ್ನು ಬಳಸಿ ಕಾಂಪ್ಯಾಕ್ಟ್ ಪೌಡರ್ ಹಾಕಿದರೆ ಪೌಡರ್ ಮುಖದ ಎಲ್ಲಾ ಕಡೆ ಸಮವಾಗಿ ಹರಡುವುದು.
2. ಬ್ಲಶ್ ಬ್ರೆಷ್: ಕೆನ್ನೆಗೆ ಮೇಕಪ್ ಮಾಡುವಾಗ ಗೋಲಾಕಾರದಲ್ಲಿರು ಬ್ಲಶ್ ಬ್ರೆಷ್ ನಿಂದ ಮಾಡಿದರೆ ಮುಖ ತುಂಬಾ ಬಣ್ಣ ಮೆತ್ತಿದ ಹಾಗೆ ಕಾಣದೆ, ಕೆನ್ನೆಯನ್ನು ಎದ್ದು ಕಾಣುವಂತೆ ಮಾಡುತ್ತದೆ.
3. ಕಣ್ಣಿನ ಮೇಕಪ್ ಬ್ರೆಷ್: ಕಣ್ಣಿನ ಮೇಕಪ್ ಗೆ 2 ಬಗ್ಗೆಯ ಬ್ರೆಷ್ ಗಳನ್ನು ಬಳಸಬಹುದು.
* ಐ ಲೈನರ್ ಹಾಕುವಾಗ ಬ್ರೆಷ್ ಅದರಲ್ಲಿಯೆ ಬರುವುದರಿಂದ ತೆಗೆಯುವ ಅವಶ್ಯಕತೆ ಹೆಚ್ಚಾಗಿ ಕಂಡುಬರುವುದಿಲ್ಲ. ಆದರೆ ಆ ಬ್ರೆಷ್ ಬಳಸಲು ಇಷ್ಟವಾಗದಿದ್ದರೆ ಉದ್ದ ಹಿಡಿಯ ಐಲೈನರ್ ಬ್ರೆಷ್ ಗಳನ್ನು ಬಳಸಬಹುದು.
* ಮತ್ತೊಂದು ಬ್ರೆಷ್ ಐ ಶ್ಯಾಡೊ ಬ್ರೆಷ್. ಇದು ಐ ಶ್ಯಾಡೊ ಪ್ಯಾಕ್ ಗಳಲ್ಲಿಯೆ ದೊರೆಯುತ್ತದೆ. ಐಶ್ಯಾಡೊ ಬಳಸಲು ಇಚ್ಚೆ ಪಡುವರು ಬ್ರೆಷ್ ಬಳಸಿ, ಇಲ್ಲದಿದ್ದರೆ ಅದು ಪೇಯಿಂಟ್ ಹಾಕಿದ ಹಾಗೆ ಕಾಣುತ್ತದೆ.
4.ಲಿಪ್ ಬ್ರೆಷ್: ತುಟಿಗೆ ಬ್ರೆಷ್ ಬಳಸಿ ಮೇಕಪ್ ಮಾಡುವುದು ತುಂಬಾ ಕಡಿಮೆ. ತುಟಿಗೆ ನೇರವಾಗಿಯೆ ಲಿಪ್ ಸ್ಟಿಕ್ ಹಚ್ಚಿವುದರ ಬದಲು ಬ್ರೆಷ್ ಬಳಸಿ ಹಚ್ಚಿದರೆ ಲಿಪ್ ಸ್ಟಿಕ್ ಎಲ್ಲಾ ಕಡೆ ಸಮವಾಗಿ ಹರಡಿ ನೋಡಲು ಮತ್ತಷ್ಟು ಚೆಂದವಾಗಿ ಕಾಣಿಸುವುದು. ಈ ಬ್ರೆಷ್ ಚಪ್ಪಟೆ ಆಕಾರವನ್ನು ಹೊಂದಿರುತ್ತದೆ. ಚಿಕ್ಕದಾಗಿ ಚೂಪಾಗಿರುವ ಬ್ರೆಷ್ ಅನ್ನು ಲಿಪ್ ಲೈನಿಂಗ್ ಗೆ ಬಳಸಬಹುದು.



Click it and Unblock the Notifications
