Latest Updates
-
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್!
ಕಾಂಟಾಕ್ಟ್ ಲೆನ್ಸ್ ನವರಿಗೆ ಕಣ್ಣಿನ ಮೇಕಪ್ ಹೇಗೆ?

ಕಾಂಟಾಕ್ಟ್ ಲೆನ್ಸ್ ಹಾಕಿಕೊಳ್ಳುವವರಿಗೆ ಕಣ್ಣಿನ ಮೇಕಪ್ ಟಿಪ್ಸ್:
1. ಕಣ್ಣಿಗೆಂದು ಕಾಸ್ಮೆಟಿಕ್ ಖರೀದಿಸುವಾಗ ಆಯಿಲ್ ಫ್ರೀ ಕಾಸ್ಮೆಟಿಕ್ ತೆಗೆದುಕೊಳ್ಳಬೇಕು. ಇದರಿಂದ ಕಣ್ಣಿನೊಂದಿಗೆ ಕಾಸ್ಮೆಟಿಕ್ ಸೇರಿಕೊಂಡು ಪರಿಣಾಮ ಬೀರುವುದನ್ನು ತಡೆಯಬಹುದು. ವಾಟರ್ ರೆಸಿಸ್ಟಂಟ್ ಮೇಕಪ್ ಸಾಧನ ಕಣ್ಣಿನೊಂದಿಗೆ ಬೆರೆಯುವುದಿಲ್ಲ ಮತ್ತು ಲೆನ್ಸ್ ಗೂ ತೊಂದರೆ ಉಂಟುಮಾಡುವುದಿಲ್ಲ.
2. 2-3 ತಿಂಗಳಾದ ನಂತರ ಅದೇ ಸಾಧನವನ್ನು ಉಪಯೋಗಿಸಬಾರದು. ಕಾಸ್ಮೆಟಿಕ್ ಹಳತೆನಿಸಿದಂತೆ ಎಸೆದು ಹೊಸತನ್ನು ಬಳಸಬೇಕು. ಇದರಿಂದ ಕಣ್ಣಿನ ಆರೋಗ್ಯವೂ ಚೆನ್ನಾಗಿರುತ್ತೆ, ಕಣ್ಣಿಗೆ ಸೋಂಕು ಕೂಡ ತಗುಲುವುದಿಲ್ಲ.
3. ಕಣ್ಣಿಗೆ ಮೇಕಪ್ ಮಾಡುವ ಮುನ್ನವೇ ಲೆನ್ಸ್ ಹಾಕಿಕೊಳ್ಳಬೇಕು. ಲೆನ್ಸ್ ಹಾಕಿಕೊಳ್ಳುವ ಮುನ್ನ ಕೈಗಳನ್ನು ತುಂಬಾ ಚೆನ್ನಾಗಿ ತೊಳೆದುಕೊಳ್ಳಬೇಕು. ಕಣ್ಣಿನ ಮೇಕಪ್ ತೆಗೆಯುವ ಮುನ್ನವೇ ಲೆನ್ಸ್ ತೆಗೆದುಬಿಡಬೇಕು.
4. ಕಣ್ಣಿಗೆ ವಾಟರ್ ಪ್ರೂಫ್ ಮಸ್ಕಾರ ಮತ್ತು ಐ ಲೈನರ್ ತೆಗೆದುಕೊಳ್ಳಬೇಕು. ಮಸ್ಕಾರ ಅಥವಾ ಐಲೈನರ್ ಹಾಕಿಕೊಳ್ಳಲು ಬಯಸುವವರು ಕಣ್ಣಿನ ಮೇಲೆ ಹಾಕಿಕೊಳ್ಳಬೇಕು. ಕಣ್ಣಿನ ಒಳಗೆ ಮೇಕಪ್ ಸಾಧನ ಹೋಗದಂತೆ ನೋಡಿಕೊಳ್ಳಬೇಕು.
5. ಐ ಶಾಡೊ ಹಚ್ಚಿಕೊಳ್ಳುವಾಗ ಕಣ್ಣುಗಳನ್ನು ಮುಚ್ಚಿ ಇದು ಹರಡದಂತೆ ನೋಡಿಕೊಂಡು ಸ್ವಲ್ಪ ಸಮಯದ ನಂತರ ಕಣ್ಣು ತೆರೆಯಬೇಕು.
6. ಕಾಂಟಾಕ್ಟ್ ಲೆನ್ಸ್ ಬಳಸುವವರಿಗೆ ಕ್ರೀಂ ಐ ಶ್ಯಾಡೊ ಒಳ್ಳೆಯ ಆಯ್ಕೆ. ಇದು ಕಣ್ಣಿನ ಒಳಗೆ ಹೋಗದೆ, ಉರಿಯನ್ನೂ ಉಂಟುಮಾಡುವುದಿಲ್ಲ.
7. ಕಣ್ಣಿನ ಸುತ್ತ ಪೌಡರ್ ಹಾಕಿಕೊಳ್ಳುವಾಗ ಸ್ಪಾಂಜ್ ಬಳಕೆ ಮಾಡಿ. ಪೌಡರ್ ಕಣ್ಣಿನ ಒಳಗೆ ಹೋಗದಂತೆ ಜಾಗ್ರತೆವಹಿಸಿ. ಹೋದರೂ ಕಣ್ಣನ್ನು ಉಜ್ಜಬೇಡಿ.
8. ಕಾಂಟಾಕ್ಟ್ ಲೆನ್ಸ್ ಹಾಕಿಕೊಳ್ಳುವವರಿಗೆ ಕಾಜಲ್ ಬಳಕೆ ಸಲ್ಲದು. ಆದರೆ ಹರಡದಂತಹ ಕಾಜಲ್ ಅನ್ನು ನೋಡಿ ಕೊಂಡುಕೊಳ್ಳಬೇಕು.



Click it and Unblock the Notifications
