Latest Updates
-
ದೀಪಾವಳಿ ಹಬ್ಬದ ಸಂಭ್ರಮ: ಡಯಾಬಿಟಿಸ್ ಇದ್ದರೂ ಸಿಹಿ ಸವಿಯಲು ಈ ಟಿಪ್ಸ್ ಫಾಲೋ ಮಾಡಿ -
ಅಯೋಧ್ಯೆ ದೀಪೋತ್ಸವ 2026: 36 ಲಕ್ಷ ದೀಪಗಳ ಬೆಳಕಿನ ವೈಭವ, ಸಂಚಾರ ಮಾರ್ಗ ಮತ್ತು ವೀಕ್ಷಣೆಯ ಟಿಪ್ಸ್ -
ದೀಪಾವಳಿ ಸಂಭ್ರಮದಲ್ಲಿ ಬೆನ್ನು ನೋವಾ? ಲಕ್ಷ್ಮಿ ಪೂಜೆಗೂ ಮುನ್ನ ಈ 7 ನಿಮಿಷದ ಸ್ಟ್ರೆಚಿಂಗ್ ಟ್ರೈ ಮಾಡಿ! -
ದೀಪಾವಳಿ ಸಂಭ್ರಮಕ್ಕೆ ಮೆಗಾ ಬ್ಲಾಕ್ ಅಡ್ಡಿ: ಮುಂಬೈ ರೈಲು ಪ್ರಯಾಣಿಕರೇ ಎಚ್ಚರ, ಪ್ಲಾನ್ ಬದಲಾಯಿಸಿ! -
ದೀಪಾವಳಿ ಸಿಹಿ ತಿಂಡಿಗಳಲ್ಲಿ ಕಲಬೆರಕೆ? 30 ಸೆಕೆಂಡ್ಗಳಲ್ಲಿ ಪರೀಕ್ಷಿಸಿ ನಿಮ್ಮ ಕುಟುಂಬದ ಆರೋಗ್ಯ ಕಾಪಾಡಿ! -
ಬಿಗ್ ಬಾಸ್ ಕನ್ನಡ 13: ಈ ವಾರ ಎಲಿಮಿನೇಷನ್ ಇಲ್ಲವೇ? ಭಾವುಕ ಪತ್ರಗಳೇ ಬದಲಾಯಿಸಿದ ಆಟದ ಸಮೀಕರಣ! -
ದೆಹಲಿ ವಾಯುಮಾಲಿನ್ಯದ ಭೀತಿ: ಮನೆಯಲ್ಲೇ 12 ನಿಮಿಷದ ಸರಳ ವರ್ಕೌಟ್ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ -
ವಾಟ್ಸಾಪ್ನಲ್ಲಿ ದೀಪಾವಳಿ ಬೋನಸ್ ಲಿಂಕ್ ಬಂದಿದೆಯೇ? ಮೋಸ ಹೋಗುವ ಮುನ್ನ ಈ 30 ಸೆಕೆಂಡ್ ಕೆಲಸ ಮಾಡಿ! -
ದೆಹಲಿ ಮಾಲಿನ್ಯದ ಭೀತಿ: ₹150 ಬಜೆಟ್ನಲ್ಲಿ ನಿಮ್ಮ ಆರೋಗ್ಯ ರಕ್ಷಿಸುವ ಆಂಟಿ-ಸ್ಮಾಗ್ ಡಯಟ್ ಪ್ಲಾನ್ ಇಲ್ಲಿದೆ! -
ದೀಪಾವಳಿ 2026: ಬೆಂಗಳೂರು, ದೆಹಲಿ, ಮುಂಬೈನಲ್ಲಿ ಪಟಾಕಿ ಸಿಡಿಸಲು ಹೊಸ ನಿಯಮಗಳು, ಸಮಯದ ಮಿತಿ!
ಸುಲಭವಾಗಿ ಮೇಕಪ್ ತೆಗೆಯುವುದು ಹೀಗೆ

ಮೇಕಪ್ ತೆಗೆಯುವ ಸುಲಭ ವಿಧಾನ ಹೀಗಿದೆ:
1. ಮೇಕಪ್ ತೆಗೆಯದೆ ಮಲಗಬೇಡಿ, ರಾತ್ರಿಯಿಡೀ ಮೇಕಪ್ ಮುಖದ ಮೇಲಿದ್ದರೆ ಅದು ತ್ವಚೆಯ ರಂಧ್ರವನ್ನು ಮುಚ್ಚಿ ಮೊಡವೆ ಏಳಲು ಅನುವು ಮಾಡಿಕೊಡುತ್ತದೆ. ಹಾಗೆಯೇ ಕಣ್ಣಿಗೆ ಬಳಸಿದ ಮೇಕಪ್ ಕೂಡ ಹಾಗೇ ಉಳಿಸಿದರೆ ಕಣ್ಣಿನ ಉರಿ ಅಲರ್ಜಿ ಉಂಟಾಗುತ್ತದೆ.
2. ಕಣ್ಣಿನ ಮೇಕಪ್ ತೆಗೆಯಲು ಹತ್ತಿಗೆ ಕೊಬ್ಬರಿ ಅಥವಾ ಆಲಿವ್ ಎಣ್ಣೆ ಸೋಕಿಸಿ ಒರೆಸಿ ನೀರು ಹಾಕಿಕೊಂಡು ಐ ಶ್ಯಾಡೊ, ಐ ಲೈನರ್ ಮತ್ತು ಮಸ್ಕಾರ ಹೋಗುವವರೆಗೂ ತೊಳೆದುಕೊಳ್ಳಬೇಕು. ಮಕ್ಕಳಿಗೆ ಬಳಸುವ ಎಣ್ಣೆಯನ್ನೂ ಕೂಡ ಕಣ್ಣಿನ ಮೇಕಪ್ ತೆಗೆಯಲು ಬಳಸಬಹುದು.
3. ಮೇಕಪ್ ತೆಗೆಯುವಲ್ಲಿ ಕ್ಲೆನ್ಸರ್ ಹೆಚ್ಚು ಪರಿಣಾಮಕಾರಿ. ನಿಮ್ಮ ತ್ವಚೆಗೆ ಸರಿಹೊಂದುವ ಕ್ಲೆನ್ಸರ್ ಖರೀದಿಸಿ, ಹತ್ತಿಯಿಂದ ಕ್ಲೆನ್ಸರ್ ಅದ್ದಿಕೊಂಡು ಒರೆಸಿ ಸುಲಭವಾಗಿ ಮೇಕಪ್ ತೆಗೆಯಬಹುದು.
4. ಕಣ್ಣಿನ ಮೇಕಪ್ ತೆಗೆಯಲು ಕ್ಲೆನ್ಸರ್ ಬಳಸಬಾರದು, ಹಾಗೆಯೇ ಕಣ್ಣಿನ ಮೇಕಪ್ ತೆಗೆಯಲು ಬಳಸುವ ವಿಧಾನವನ್ನು ಮುಖಕ್ಕೆ ಬಳಸಬಾರದು.
5. ಮೇಕಪ್ ತೆಗೆಯಲು ನೈಸರ್ಗಿಕ ಅಂಶವೆಂದರೆ ಮೊದಲು ತಣ್ಣಗಿನ ನೀರಿನಿಂದ ಮುಖ ತೊಳೆದುಕೊಂಡು ಹಾಲು ಅಥವಾ ಮೊಸರನ್ನು ಹತ್ತಿಯ ಸಹಾಯದಿಂದ ಮುಖಕ್ಕೆ ಹಚ್ಚಿ ಕೆಲ ನಿಮಿಷದ ನಂತರ ಉಗುರುಬೆಚ್ಚಗಿನ ನೀರಿನಲ್ಲಿ ತೊಳೆದುಕೊಂಡರೆ ತ್ವಚೆ ತಾಜಾ ಆಗಿ, ಮೇಕಪ್ ಒಂದಿಷ್ಟೂ ಉಳಿಯದೆ ಹೋಗುತ್ತದೆ.
6. ಮುಖದ ಮೇಕಪ್ ತೆಗೆಯುವಾಗ, ಕುತ್ತಿಗೆ ಮತ್ತು ಕಿವಿಯ ಹಿಂದಿನ ಭಾಗವನ್ನು ಒಮ್ಮೆ ಹತ್ತಿಯಿಂದ ಒರೆಸುವುದನ್ನು ಮರೆಯಬೇಡಿ. ಎರಡು ಬಾರಿ ಮುಖವನ್ನು ನೀರಿನಿಂದ ಚೆನ್ನಾಗಿ ತೊಳೆದು, ಕೊನೆಗೆ ನಿಮ್ಮ ಮುಖಕ್ಕೆ ಹೊಂದುವ ಮಾಯಿಶ್ಚರೈಸರ್ ಹಚ್ಚಿಕೊಂಡು ಮಲಗಬಹುದು.



Click it and Unblock the Notifications
