Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಹಳೆಯ ಸೌಂದರ್ಯ ಸಾಧನವನ್ನು ಸೈಡಲ್ಲಿಡಿ...

ಬಣ್ಣ ಮಾಸಿರುವ ಲಿಪ್ ಸ್ಟಿಕ್, ಮಸ್ಕಾರ ಮತ್ತು ಐ ಪೆನ್ಸಿಲ್ ಗಳು ಅಪಾಯಕಾರಿ ಬ್ಯಾಕ್ಟೀರಿಯಾಗಳನ್ನು ಬಿಡುಗಡೆ ಮಾಡಿ, ಇದನ್ನು ಹಚ್ಚಿಕೊಂಡರೆ ಚರ್ಮದ ಮೇಲೆ ಕೆಟ್ಟ ಪರಿಣಾಮ ಉಂಟುಮಾಡುತ್ತದೆ.
ಎಲ್ಲಾ ಕಾಸ್ಮೆಟಿಕ್ ಗಳ ಮೇಲೂ ಅವುಗಳ ಅವಧಿಯನ್ನು (ಎಕ್ಸ್ ಪೈರಿ ಡೇಟ್) ನೀಡಲಾಗಿರುತ್ತೆ. ಆದರೆ 89 ಶೇಕಡಾ ಮಹಿಳೆಯರು ಇದರ ಅರಿವಿಲ್ಲದೆಯೇ ಅಥವಾ ಅರಿವಿದ್ದೇ ಹಳೆಯ ಕಾಸ್ಮೆಟಿಕ್ ಗಳನ್ನು ಉಪಯೋಗಿಸುತ್ತಾರೆ ಎಂದು ಸಮೀಕ್ಷೆಯೊಂದು ವರದಿ ಮಾಡಿದೆ.
ಮೂವರಲ್ಲಿ ಇಬ್ಬರು ಮಹಿಳೆಯರು ಕೇವಲ ತಮ್ಮ ಸೌಂದರ್ಯ ಸಾಮಾಗ್ರಿಗಳು ಖಾಲಿಯಾದ ಬಳಿಕವಷ್ಟೇ ಮತ್ತೊಂದನ್ನು ಕೊಂಡುಕೊಳ್ಳುತ್ತಾರೆ. ಸಾಮಾನ್ಯವಾಗಿ ಮಹಿಳೆಯರು ಯಾವುದೇ ವಸ್ತುಗಳನ್ನು ಎಸೆಯಲು ಹಿಂಜರಿಯುತ್ತಾರೆ. ಅದು ಸೌಂದರ್ಯ ಸಾಮಾಗ್ರಿಗಳಿಗೂ ಅನ್ವಯಿಸುತ್ತದೆ.
ಹೆಚ್ಚು ಹಣ ಕೊಟ್ಟು ಖರೀದಿಸಿದ ಸಾಮಾಗ್ರಿಗಳನ್ನು ಯಾರಿಗೆ ತಾನೆ ಎಸೆಯಲು ಮನಸ್ಸಾಗುತ್ತದೆ? ಇಂತಹ ಸಂದರ್ಭದಲ್ಲಿ ಹಳೆಯ ಕಾಸ್ಮೆಟಿಕ್ ಗಳನ್ನು ಕೈ ಕಾಲುಗಳಿಗೆ ಬಳಸಿದರೆ ತೊಂದರೆಯಿಲ್ಲ. ನೀವು ತೊಂದರೆ ಅನುಭವಿಸಲು ಸಿದ್ಧವಿದ್ದರೆ ಮಾತ್ರ ಇಂತಹ ಸೌಂದರ್ಯ ಸಾಮಾಗ್ರಿಗಳನ್ನು ಮುಖಕ್ಕೆ ಉಪಯೋಗಿಸಬಹುದು.



Click it and Unblock the Notifications
