Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ಸುಂದರವಾಗಿರುವವರು ತುಂಬಾ ಸ್ವಾರ್ಥಿಗಳಂತೆ ಹೌದಾ!

ಅಂದಕ್ಕೂ, ಸ್ವಾರ್ಥಕ್ಕೂ ಎಲ್ಲಿಂದೆಲ್ಲಿಯ ಸಂಬಂಧ? ಇದೆಲ್ಲಾ ಹೇಗೆ ಸಾಧ್ಯ ಎಂದು ನೀವನ್ನಬಹುದು. ಆದ್ರೆ ಆಕರ್ಷಕ ಮುಖ ಚರ್ಯೆ ಮತ್ತು ಮೈಮಾಟ ಹೊಂದಿದ್ದವರು ಮಾಮೂಲಿ ಜನರಿಗಿಂತ ಸ್ವಲ್ಪ ಹೆಚ್ಚೇ ಸ್ವಾರ್ಥಿಗಳಾಗಿರುತ್ತಾರೆ ಎಂದು ಬಾರ್ಸೆಲೋನ ಮತ್ತು ಮ್ಯಾಡ್ರಿಡ್ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆ ಸಾಬೀತು ಪಡಿಸಿದೆಯಂತೆ.
ಸಾಮಾನ್ಯ ಮುಖಚರ್ಯೆ ಹೊಂದಿದವರಿಗೆ ಹೋಲಿಸಿದರೆ ತುಂಬಾ ಚೆಲುವಾಗಿದ್ದವರು ಕೇವಲ ತಮ್ಮ ಬಗ್ಗೆ, ತಮ್ಮ ಅಂದ ಚೆಂದದ ಬಗ್ಗೆ ಮತ್ತು ತಮ್ಮ ಒಡವೆ ವಸ್ತ್ರ, ತಮ್ಮ ಲುಕ್ ಬಗ್ಗೆ ಮಾತ್ರ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ, ಬೇರೆಯವರ ವಿಷಯಗಳತ್ತ ಗಮನ ಕೊಡುವುದು ಕಡಿಮೆ, ಅನ್ಯರೊಂದಿಗೆ ಬೆರೆಯುವುದೂ ಕಡಿಮೆ, ಬೆರತರೂ ಕೇವಲ ತಮಗೆ ಹೊಂದಿಕೊಳ್ಳುವಂತಿದ್ದರೆ ಮಾತ್ರ ಸ್ನೇಹ ಬೆಳೆಸುತ್ತಾರೆ ಎಂದಿದೆ. ಇನ್ನೊಂದು ಮುಖ್ಯ ವಿಷಯವೆಂದರೆ ಅತಿ ಸುಂದರವಾಗಿದ್ದವರು ಇನ್ನೊಬ್ಬರಿಂದ ಸಹಾಯವನ್ನೂ ಹೆಚ್ಚು ನಿರೀಕ್ಷಿಸುವುದಿಲ್ಲವಂತೆ.
ಅಧ್ಯಯನದಲ್ಲಿ ಸಂಶೋಧನಾಕಾರರು ನಡೆಸಿದ ಸರಳ ಪರೀಕ್ಷೆಯಿಂದ ಈ ಫಲಿತಾಂಶ ಹೊರಹೊಮ್ಮಿರುವುದಾಗಿ ಡೈಲಿ ಮೇಲ್ ವರದಿ ಮಾಡಿದೆ. ಹಾಗಾದರೆ ಇನ್ನು ಮುಂದೆ ನಿಮ್ಮ ಸಂಗಾತಿ ನೋಡಲು ಸುಂದರವಾಗಿರಬೇಕು ಎಂದು ಬಯಸುವುದಾದರೆ ಅವರ ಸ್ವಾರ್ಥ ಗುಣವನ್ನೂ ಸಹಿಸಿಕೊಳ್ಳುವ ಮನೋಸ್ಥಿತಿ ನಿಮ್ಮದಾಗಿರಬೇಕಂತೆ.



Click it and Unblock the Notifications
