Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಕಾಸ್ಮೆಟಿಕ್ ಇಲ್ಲದ ನ್ಯಾಚುರಲ್ ಮೇಕಪ್

1. ಪೌಡರ್ ಬದಲಾಗಿ ಗಂಧ: ಗಂಧದ ಪುಡಿ ಪೌಡರ್, ಫೌಂಡೇಷನ್, ಕಾಂಪಾಕ್ಟ್ ಎಲ್ಲಕ್ಕಿಂತ ಹೆಚ್ಚಿನ ಗೌರವರ್ಣ ನೀಡುತ್ತೆ. ಗಂಧದ ಪುಡಿಯನ್ನು ತೆಳುವಾಗಿ ಪೇಸ್ಟ್ ನಂತೆ ಕಲೆಸಿ ಮುಖಕ್ಕೆ ಮತ್ತು ಕುತ್ತಿಗೆಯ ಭಾಗಕ್ಕೆ ಲೇಪಿಸಬೇಕು. ಅದು ಒಣಗಿದ ನಂತರ ಅದನ್ನು ಒರೆಸಿಕೊಂಡುಬಿಡಬೇಕು. ಈಗ ನಿಮ್ಮ ಮುಖ ತಾಜಾ ಮತ್ತು ಹೊಳಪುಭರಿತವಾಗಿರುತ್ತದೆ.
2. ಐಸ್ ಕ್ಯೂಬ್: ನೀವು ತುಂಬಾ ಸುಸ್ತಾಗಿರುವುದು ನಿಮ್ಮ ಮುಖದ ಮೇಲೆ ಎದ್ದು ಕಾಣುತ್ತಿದ್ದರೆ ಐಸ್ ಕ್ಯೂಬ್ ನಿಂದ ಮುಖದ ಮೇಲೆ ಉಜ್ಜಿಕೊಳ್ಳಬೇಕು. ಆಗ ತ್ವಚೆ ಧೂಳು ಕೊಳೆಯಿಂದ ಮುಕ್ತವಾಗಿ ಹೆಚ್ಚುಕಾಲ ತಾಜಾ ಕಾಣುವಂತೆ ಮಾಡುತ್ತದೆ. ಇದರಿಂದ ಮುಖದ ಸ್ನಾಯುಗಳೂ ಸುಧಾರಿಸುತ್ತವೆ.
3. ನೈಸರ್ಗಿಕ ಫೌಂಡೇಶನ್: ನೈಸರ್ಗಿಕವಾದ ಫೌಂಡೇಶನ್ ತಯಾರಿಸಿಕೊಳ್ಳಲು 25 ಮಿಲಿ ಅಲೊವೆರ ಜೆಲ್, 50 ಮಿಲಿ ಜೊಜೊಬಾ ಎಣ್ಣೆ, 1\3 ಚಮಚ ಜೇನಿನ ಮೇಣ (ಬೀಸ್ ವ್ಯಾಕ್ಸ್), ಒಂದು ಚಮಚ ರೋಸ್ ವಾಟರ್ ಇಟ್ಟುಕೊಳ್ಳಬೇಕು. ಬಾಣಲೆಯನ್ನು ಕಾಯಿಸಿ ಅದಕ್ಕೆ ಬೀಸ್ ವ್ಯಾಕ್ಸ್ ಹಾಕಬೇಕು. ಅದು ಕರಗಲು ಆರಂಭವಾಗುತ್ತಿದ್ದಂತೆ ಕೆಳಗಿಳಿಸಬೇಕು. ನಂತರ ಎಲ್ಲ ಪದಾರ್ಥಗಳನ್ನು ಅದಕ್ಕೆ ಮಿಶ್ರಣ ಮಾಡಬೇಕು. ಅದು ತಣ್ಣಗಾದ ನಂತರ ನೈಸರ್ಗಿಕ ಫೌಂಡೇಶನ್ ತಯಾರಾಗಿರುತ್ತದೆ. ಇದು ನಿಮ್ಮ ತ್ವಚೆಯ ಆರೋಗ್ಯಕ್ಕೂ ಅಷ್ಟೇ ಒಳ್ಳೆಯದು.
4. ಲಿಪ್ ಸ್ಟಿಕ್: ಒಂದು ಚಮಚ ಬೀಸ್ ವ್ಯಾಕ್ಸ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ಬೀಟ್ ರೂಟ್ ಮಿಶ್ರಣ ಮಾಡಬೇಕು. ಮೇಣ ಕರಗುತ್ತಿದ್ದಂತೆ ಕೆಳಗೆ ಇಳಿಸಿ ಅದರ ಬಿಸಿ ಆರುವ ತನಕ ಕಾಯಬೇಕು. ಈಗ ಕೆಂಪು ಲಿಪ್ ಸ್ಟಿಕ್ ರೆಡಿಯಾಗಿದೆ. ಇದನ್ನೇ ಐಶ್ಯಾಡೋಗೂ ಕೂಡ ಬಳಸಬಹುದು. ಇದು ಅಡ್ಡಪರಿಣಾಮಗಳನ್ನು ಉಂಟುಮಾಡುವ ಕಾಸ್ಮೆಟಿಕ್ ಗಳಿಗಿಂತ ಎಷ್ಟೋ ಪಟ್ಟು ಉತ್ತಮ.



Click it and Unblock the Notifications
