Latest Updates
-
ಡೇಟಿಂಗ್ ಆಪ್ ಬಳಸುವಾಗ ಎಚ್ಚರ: ಸೈಬರ್ ವಂಚನೆ ಮತ್ತು ಸೆಕ್ಸ್ಟಾರ್ಷನ್ನಿಂದ ಪಾರಾಗುವುದು ಹೇಗೆ? -
ಈರುಳ್ಳಿ ಬೆಲೆ ಇಳಿಕೆ: ಗೃಹಿಣಿಯರಿಗೆ ನಿರಾಳ, ಬಜೆಟ್ ಸ್ನೇಹಿ ಅಡುಗೆಗೆ ಈಗ ಸುಲಭ! -
ಕಿಚ್ಚ ಸುದೀಪ್-ಪ್ರೇಮ್ ಟೀಸರ್ ರಿಲೀಸ್: ಸಂಭ್ರಮಿಸಲು ಸಿದ್ಧರಾಗಿ, ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ದೆಹಲಿ ವಿಷಕಾರಿ ಗಾಳಿ: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 15 ನಿಮಿಷದ ವರ್ಕೌಟ್ -
ಮದುವೆ ಭರವಸೆ ವಂಚನೆ: ಹಣ ಕೊಟ್ಟು ರಾಜಿ ಮಾಡಿಕೊಳ್ಳುವವರಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ -
ಚಳಿಗಾಲದ ಸ್ಪೆಷಲ್: 30 ನಿಮಿಷದಲ್ಲಿ ತಯಾರಾಗುವ 5 ಹೈ-ಪ್ರೋಟೀನ್, ಡಯಾಬಿಟಿಸ್-ಸ್ಮಾರ್ಟ್ ಸೂಪ್ಗಳು! -
ಸಂವಿಧಾನ ದಿನ: ಬೆಳಿಗ್ಗೆ 11 ಗಂಟೆಗೆ ಪ್ರಸ್ತಾವನೆ ಓದಿ, ನಿಮ್ಮ ಡಿಜಿಟಲ್ ಪ್ರಮಾಣಪತ್ರ ಪಡೆಯುವುದು ಹೇಗೆ? -
ಮಳೆಗಾಲದ ಬೆಳಿಗ್ಗೆ ಆಲಸ್ಯವೇ? ಬೆಂಗಳೂರಿನಲ್ಲಿ ಫಿಟ್ ಆಗಿರಲು 20 ನಿಮಿಷಗಳ ಸರಳ ವರ್ಕೌಟ್ ಇಲ್ಲಿದೆ! -
16 ದಿನಗಳ ಸುರಕ್ಷತಾ ಅಭಿಯಾನ: ನಿಮ್ಮ ರಕ್ಷಣೆಗಾಗಿ ಈ ತುರ್ತು ಸಂಖ್ಯೆಗಳು ಮತ್ತು ಸಲಹೆಗಳು ಇಂದೇ ತಿಳಿಯಿರಿ -
ಸಪ್ಲಿಮೆಂಟ್ ಖರೀದಿಸುವ ಮುನ್ನ ಎಚ್ಚರ! ಮಹಾರಾಷ್ಟ್ರ FDA ಕಠಿಣ ನಿಯಮ: ಸುಳ್ಳು ಜಾಹೀರಾತುಗಳಿಗೆ ಬ್ರೇಕ್
ಮೂವತ್ತು ವಯಸ್ಸಿನ ನಂತರದ ಡ್ರೆಸ್ ಸೆನ್ಸ್ ನಿಮಗೆ ಗೊತ್ತಾ?

ಅದರಲ್ಲೂ ಮನೆಯಿಂದ ಹೊರಗೆ ಕೆಲಸಕ್ಕೆ ಹೋಗುವ ಎಷ್ಟೋ ಪುರುಷರಿಗೆ ತಾವೂ ಹೀರೋನ ತರ ಕಾಣಬೇಕು ಅನ್ನುವ ಆಸೆ ಇರುತ್ತೆ. ಮೂವತ್ತು ವರ್ಷದ ನಂತರ ಅಂತೂ ಎಷ್ಟೋ ಪುರುಷರಿಗೆ ತಾವೂ ಮುದುಕರಾಗುತ್ತಿದ್ದೇವೆ ಅಂತ ಅನಿಸಲಿಕ್ಕೆ ಶುರುವಾಗುತ್ತೆ.
ಆದರೆ ಹೀರೋ ತರಕಾಣಿಸಿಕೊಳ್ಳಲು ಏನು ಮಾಡಬೇಕು ಅಂತ ಮಾತ್ರ ಅವರಿಗೆ ಗೊತ್ತಿರಲ್ಲ. ಈ ತರ ಹೊರಗೆ ಸ್ಮಾರ್ಟ್ ಆಗಿ ಕಾಣಿಸಿಕೊಳ್ಳಲು ಬಯಸುವರಿಗೆ ಇಲ್ಲಿದೆ ಸಲಹೆಗಳು.
ಒಲವಿನ ಬಣ್ಣ: ಯುವಕರೂ ಯಾವ ಬಣ್ಣದ ಬಟ್ಟೆ ಧರಿಸಿದರೂ ಮಾಡ್ ಆಗಿಯೋ ಕಾಣುತ್ತಾರೆ ಬಿಡಿ. ಆದರೆ ಮೂವತ್ತು ವರ್ಷ ಕಳೆದ ಮೇಲೆ ಗಾಢ ಬಣ್ಣದ ಬಟ್ಟೆಗಳನ್ನು ಆದಷ್ಟು ಧರಿಸದೇ ಇರುವುದು ಒಳ್ಳೆಯದು. ಬದಲಿಗೆ ಟೀ ಶರ್ಟ್ ಅಥವಾ ಬೂದು ಬಣ್ಣ, ಬಿಳಿ, ಅಥವಾ ತಿಳಿ ನೀಲಿ ಬಣ್ಣ-ಳನ್ನು ಆರಿಸಿಕೊಳ್ಳಿ. ಇನ್ನು ಫಾರ್ಮಲ್ ಉಡುಗೆಗಳು ಹೆಚ್ಚಾಗಿ ಬಿಳಿ ಬಣ್ಣದಾಗಿದ್ದರೆ ಒಳ್ಳೆಯದು. ನೀವು ಬಿಳಿ ಬಣ್ಣದವರಾಗಿದ್ದರೆ ಕಪ್ಪು ಬಣ್ಣದ ಶರ್ಟ್ ಕೂಡ ಧರಿಸಬಹುದು.
ಉಡುಪಿನ ಗಾತ್ರ: ಆದಷ್ಟೂ ನಿಮ್ಮ ಸೈಜ್ ಗೆ ಸೂಕ್ತವಾಗುವ ಬಟ್ಟೆಯನ್ನು ಧರಿಸಿ. ನೀವು ದಪ್ಪ ಇದ್ದರೆ ಅಥವಾ ಬೊಜ್ಜಿನ ತರದ ಸಮಸ್ಯೆಗಳಿದ್ದರೆ ತುಂಬಾ ಬಿಳಿ ಬಣ್ಣವಿರುವ ಉಡುಪು ಧರಿಸದಿರಿ.
ಶೂಗಳು: ಮೂವತ್ತು ವಯಸ್ಸಿಗಿಂತ ಮೇಲ್ಪಟ್ಟವರು ಫಾರ್ಮಲ್ ಶೂಗಳನ್ನು ಧರಿಸಿದರೆ ಒಳ್ಳೆಯದು. ಸ್ಪೋರ್ಟ್ಸ್ ಶೂಗಳನ್ನು ಧರಿಸುವಿರಾದರೆ ತಿಳಿ ಬಣ್ಣ ಅಥವಾ ಬಿಳಿ ಬಣ್ಣದ ಶೂಗಳನ್ನು ಧರಿಸಿ.
ಆಕ್ಸೆಸರಿ: ತುಂಬಾ ಟ್ರೆಂಡಿ ಆಗಿರುವ ಆಕ್ಸೆಸರಿಗಳು ನಿಮಗೆ ಸರಿಹೊಂದದಿರಬಹುದು. ಆದಷ್ಟು ಬ್ರಾಂಡೆಡ್ ವಸ್ತುಗಳನ್ನು ಖರೀದಿಸಿ. ಮತ್ತು ಎಲ್ಲಾ ತರದ ಉಡುಪುಗಳ ಮೇಲೆ ಧರಿಸಬಹುದಾದ ಆಕ್ಸೆಸರಿಗಳನ್ನು ಖರೀದಿಸಿ.
ಕೂದಲಿನ ವಿನ್ಯಾಸ: ತುಂಬಾ ಫ್ಯಾಷನೇಬಲ್ ಆಗಿರೋ ಹೇರ್ ಸ್ಟೈಲ್ ಮೂವತ್ತಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗೆ ಚೆನ್ನಾಗಿ ಕಾಣಿಸುವುದಿಲ್ಲ. ಈ ತರದ ಹೇರ್ ಸ್ಟೈಲ್ ನಿಂದ ಕೂದಲು ಉದುರುವ ಸಾಧ್ಯತೆಗಳು ಕೂಡ ಇದೆ.



Click it and Unblock the Notifications
