Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೂದಲು ಬೆಳವಣಿಗೆಗೆ ಖರ್ಚಿಲ್ಲದೆ ಈ ಅಕ್ಕಿ ನೀರು ಈರುಳ್ಳಿ ಪೇಸ್ಟ್ ಹಚ್ಚಿ..! ನೀವು ಅಚ್ಚರಿ ಪಡೋದು ಖಚಿತ!
ಕೂದಲಿನ ಆರೈಕೆ ಅನ್ನೋದು ಇತ್ತೀಚಿಗೆ ಉದ್ಯಮವಾಗಿ ಬೆಳೆದಿರುವುದು ನೋಡಬಹುದು. ಹಾಗೆ ಚಿಕ್ಕ ವಯಸ್ಸಿನಲ್ಲೇ ಕೂದಲು ಉದುರುವಿಕೆಗೆ ಒಳಗಾಗುವುದು ನೋಡಬಹುದು. ಇದು ಇತ್ತೀಚಿನ ಯುವ ಸಮುದಾಯದಲ್ಲಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಅವರ ಆಹಾರ ಪದ್ಧತಿ, ಜೀವನ ಶೈಲಿಯ ಪರಿಣಾಮವಾಗಿ ಹಲವು ರೀತಿಯ ಕೂದಲು ಸಂಬಂಧಿ ಸಮಸ್ಯೆಗಳ ಎದುರಿಸುತ್ತಿದ್ದಾರೆ.
ಕೂದಲು ಉದುರುವಿಕೆ ತಡೆಯಲು ಅವರು ಮಾರುಕಟ್ಟೆಯಲ್ಲಿ ಹಲವು ರೀತಿಯ ಶಾಂಪೂ, ಸೀರಮ್, ತೈಲಗಳು, ಔಷಧಿ ಲಭವಿದೆ, ಹಾಗೆ ಇದನ್ನು ಬಳಸುವವರ ಸಂಖ್ಯೆ ಕೂಡ ಹೆಚ್ಚಾಗಿಯೇ ಇದೆ. ಕೂದಲು ಉದುರುವಿಕೆಗೆ ಹತ್ತಾರು ಸಮಸ್ಯೆಗಳ ಹಾಗೂ ಕಾರಣಗಳ ಪಟ್ಟಿ ಮಾಡಬಹುದು. ಅದರಲ್ಲೂ ಕೆಲವೊಂದನ್ನು ನಾವು ಆರಂಭದಲ್ಲೇ ತಡೆಯಬಹುದು ಕೂಡ.

ಆದ್ರೆ ನಾವಿಂದು ಕೂದಲು ಉದುರುವಿಕೆ ತಡೆಯಲು ಹಾಗೆ ಬೆಳವಣಿಗೆಯನ್ನು ಹೆಚ್ಚಿಸಲು ನಾವು ಸುಲಭವಾದ ಮಾರ್ಗದ ಕುರಿತು ತಿಳಿದುಕೊಳ್ಳೋಣ. ನಾವಿಂದು ಇರುವಂತಹ ಕೆಲವೇ ಕೆಲವು ವಸ್ತುಗಳ ಬಳಸಿಕೊಂಡು ಕೂದಲು ಬೆಳವಣಿಗೆಗೆ ನೆರವಾಗುವ ಪದಾರ್ಥ ತಯಾರಿಸುವ ಕುರಿತು ತಿಳಿಯೋಣ. ಕೂದಲು ಬೆಳವಣಿಗೆಗೆ ಈರುಳ್ಳಿ ಬಹಳ ಉತ್ತಮ ಪದಾರ್ಥ ಎಂಬುದು ನಿಮಗೆಲ್ಲಾ ತಿಳಿದಿರಬಹುದು. ಹಾಗೆ ಅಕ್ಕಿಯನ್ನು ತೊಳೆದ ನೀರು ಕೂಡ ಕೂದಲು ಆರೋಗ್ಯಕ್ಕೆ ಬಹಳ ಉತ್ತಮ ಎಂಬುದು ನಿಮಗೆ ಗೊತ್ತಾ?
ಅಕ್ಕಿಯಲ್ಲಿ ಹೆಚ್ಚಿನ ಸಾಂದ್ರತೆಯ ಇನೋಸಿಟಾಲ್ ಎಂಬ ಅಂಶ ಇರಲಿದೆ. ಇದು ಕೂದಲು ಬೆಳವಣಿಗೆಗೆ ಅಗತ್ಯವಾಗಿರುವ ಕಾರ್ಬೋಹೈಡ್ರೇಟ್ ಆಗಿದ್ದು, ಕೂದಲು ಬೆಳವಣಿಗೆಗೆ ಇದು ನೆರವಾಗಲಿದೆ. ಹಾಗೆ ಇನೋಸಿಟಾಲ್ ಅಂಶವು ಹಾನಿಗೊಳಗಾದ ಕೂದಲನ್ನು ಮತ್ತಷ್ಟು ಬಲಪಡಿಸಲು ಸಹಾಯ ಮಾಡಲಿದೆ. ಹಾಗೆ ಅಕ್ಕಿ ನೀರಿನಲ್ಲಿ ಸಿಗುವ ಅಮೈನೋ ಆಮ್ಲ ಮತ್ತು ವಿಟಮಿನ್‌ಗಳಿಂದ ತುಂಬಿದೆ ಇದರಿಂದ ಕೂದಲು ಬಲವಾಗುತ್ತೆ. ಹಾಗೆ ಅಗತ್ಯ ಪೋಷಣೆಗಳು ಕೂಡ ಸಿಗಲಿವೆ.
ಹಾಗೆ ಈರುಳ್ಳಿಯಲ್ಲಿನ ಸಲ್ಫರ್ ಇರುವ ಕಾರಣ ಹಾಗೆ ಕಾಲಜನ್ ಉತ್ಪಾದನೆಗೆ ಇದು ಉಪಯೋಗಕಾರಿ. ಕಾಲಜನ್ ಆರೋಗ್ಯಕರ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲಿದೆ. ಇದು ಕೂದಲು ಬೆಳೆಯಲು ಸಹಕಾರಿಯಾಗಲಿದೆ. ನಾವಿಂದು ಈ ಅಕ್ಕಿ ನೀರು, ಈರುಳ್ಳಿ, ಶುಂಠಿಯನ್ನು ಬಳಸಿ ಕೂದಲಿಗೆ ಹಚ್ಚುವಂತಹ ಸುಲಭದ ಪೇಸ್ಟ್ ತಯಾರಿಸೋಣ. ಇದು ನಿಮ್ಮ ಕೂದಲು ಆರೋಗ್ಯ ಕಾಪಾಡಲಿದೆ.
ಹೇರ್ ಮಾಸ್ಕ್ ಮಾಡುವುದು ಹೇಗೆ?
ಮೊದಲು ಅಕ್ಕಿ ನೀರನ್ನು ಒಂದು ಬೌಲ್‌ಗೆ ತೆಗೆದಿಟ್ಟುಕೊಳ್ಳಿ. ಅಕ್ಕಿಯನ್ನು ಚೆನ್ನಾಗಿ ತೊಳೆದು ಉಳಿದಿರುವ ನೀರು. ಹಾಗೆ ಈ ನೀರಿಗೆ ಒಂದು ಈರುಳ್ಳಿಯ ಅರ್ಧ ಭಾಗವನ್ಉ ಕತ್ತರಿಸಿಕೊಂಡು ಇದಕ್ಕೆ ಹಾಕಿಕೊಳ್ಳಿ. ಹಾಗೆ ಸಿಪ್ಪೆ ತೆಗೆದ ಒಂದು ಇಂಚು ಶುಂಠಿಯನ್ನು ಕೂಡ ಇದಕ್ಕೆ ಹಾಕಿ (ಶುಂಠಿ ಜಜ್ಜಿಕೊಂಡು ಹಾಕುವುದು ಬಹಳ ಉತ್ತಮ) ಹಾಗೆ ಅರ್ಧ ಕಪ್ ನೀರನ್ನು ಸಹ ಇದಕ್ಕೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಮಿಶ್ರಣವನ್ನು ಒಲೆ ಮೇಲೆ ಇಟ್ಟು ಬೇಯಿಸಲು ಮುಂದಾಗಿ.
ಮಧ್ಯಮ ಉರಿಯಲ್ಲಿ ಈ ಎಲ್ಲಾ ಪದಾರ್ಥಗಳು ಕುದಿಬರಲು ಬಿಡಬೇಕು. 5 ನಿಮಿಷ ಕುದಿಬಂದ ಬಳಿಕ ಈಗ ತೊಳೆದುಕೊಂಡಿರುವ ಅಕ್ಕಿಯನ್ನು ಸಹ ಇದಕ್ಕೆ ಹಾಕಿಕೊಳ್ಳಿ. ಅಕ್ಕಿ ಬೆಂದು ಮೆತ್ತಗಾಗಬೇಕು. 15 ನಿಮಿಷ ಕುದಿಬಂದ ಬಳಿಕ ಒಲೆ ಆಫ್ ಮಾಡಿಕೊಂಡು ಮಿಶ್ರಣವು ತಣ್ಣಗಾಗಲು ಬಿಡಿ. ಈ ಮಿಶ್ರಣ ತಣ್ಣಗಾದ ಬಳಿಕ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಹಾಕಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ.
ಈ ಪೇಸ್ಟ್ ಅನ್ನು ತಲೆ ಕೂದಲಿಗೆ ಚೆನ್ನಾಗಿ ಹಚ್ಚಿ 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ಅನಂತರ ಕೂದಲನ್ನು ಉಗುರು ಬೆಜ್ಜಗಿನ ನೀರಿನಿಂದ ತೊಳೆಯಿರಿ ಅಥವಾ ಸ್ನಾನ ಮಾಡಿ ಈ ರೀತಿ ವಾರದಲ್ಲಿ ಎರಡು ಬಾರಿ ಮಾಡಿ ನೋಡಿ. ನಿಮ್ಮ ಕೂದಲ ಬೆಳವಣಿಗೆಗೆ ಇದು ಬಹಳ ಸಹಕಾರಿಯಾಗಲಿದೆ.



Click it and Unblock the Notifications
