Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಬ್ರೂ ಪ್ಯಾಕ್-ಟೊಮೆಟೋ ಇದ್ರೆ ಮುಖ ಹೊಳೆಯುವಂತೆ ಮಾಡಬಹುದು..! ಇಲ್ಲಿದೆ ಸೀಕ್ರೆಟ್ ಬ್ಯೂಟಿ ಟಿಪ್ಸ್!!
ಎಲ್ಲಿರಿಗೂ ತಾವು ಸುಂದರವಾಗಿ ಕಾಣಿಸಬೇಕು, ನಮ್ಮ ಮುಖ ಕೂಡ ಬಿಳಿಯಾಗಿರಬೇಕು. ಇದಕ್ಕಾಗಿ ದುಬಾರಿ ಕ್ರೀಮ್‌ಗಳಾದರೂ ಸರಿಯೇ ಅದನ್ನು ಖರೀದಿಸಿ ತಂದು ಪ್ರಯೋಗ ಮಾಡುವುದು ಸಾಮಾನ್ಯ. ಇದಿಷ್ಟೇ ಅಲ್ಲ ಮನೆಯಲ್ಲಿ ಸಿಕ್ಕ ಸಿಕ್ಕ ವಸ್ತುಗಳ ಬಳಸಿ ಮನೆಮದ್ದು ಕೂಡ ಮಾಡುತ್ತಾರೆ. ಅರಶಿನ, ಕಡಲೆ ಹಿಟ್ಟು, ಅಲೂವೆರಾ ಸೇರಿ ಹಲವು ರೀತಿಯಲ್ಲಿ ಮನೆಮದ್ದುಗಳ ಮಾಡಿ ಪ್ರಯೋಗ ಮಾಡುತ್ತಾರೆ.
ಇದೆಲ್ಲವು ಮುಖದಲ್ಲಿ ಕಪ್ಪು ಕಲೆ ಹೋಗಲಾಡಿಸಲು, ಮುಖ ಬಿಳಿಯಾಗಿರಬೇಕು ಎಂಬ ಕಾರಣಕ್ಕೆ ಎಲ್ಲರು ಮಾಡುವ ಕೆಲಸವಾಗಿದೆ. ಅದಿಷ್ಟೇ ಅಲ್ಲ ಯುವತಿಯರು ಪಾರ್ಲರ್‌ಗೆ ಅಂತಾನೆ ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ. ಇಷ್ಟಾದರು ಕೆಲವೊಮ್ಮೆ ಉತ್ತಮ ಫಲಿತಾಂಶ ನೋಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಈಗಂತು ಹಲವು ರೀತಿಯ ಚಿಕಿತ್ಸೆಗಳು ಕೂಡ ಲಭ್ಯವಿದೆ.

ಹೀಗಾಗಿ ನಾವಿಂದು ಮನೆಯಲ್ಲಿ ಕುರಿತು ನಿಮ್ಮ ಮುಖವನ್ನು ಕಾಂತಿಯುತವಾಗಿ ಹೊಳೆಯುವಂತೆ ಕೆಲವು ಟಿಪ್ಸ್ ಕುರಿತು ನಾವಿಂದು ತಿಳಿದುಕೊಳ್ಳೋಣ. ಹಾಗೆ ಎಲ್ಲಾದರು ಮನೆಯಿಂದ ಹೊರಡುವ ಮುನ್ನ ಈ ಟಿಪ್ಸ್ ಫಾಲೋ ಮಾಡಿದ್ರೆ ನಿಮ್ಮ ಮುಖ ಹೊಳೆಯುತ್ತಿರುತ್ತೆ. ಹಾಗಾದ್ರೆ ಯಾವ ಟಿಪ್ಸ್ ನಿಂದ ನಿಮ್ಮ ಮುಖ ಹೊಳೆಯುವಂತೆ ಮಾಡಬಹುದು ಎಂಬುದನ್ನು ತಿಳಿದುಕೊಳ್ಳೋಣ.
ಮೊದಲು ಒಂದು ಪ್ಯಾಕ್ ಬ್ರೂ ಕಾಫಿ ಪೌಡರ್ ಅನ್ನು ಒಂದು ಬೌಲ್‌ಗೆ ಹಾಕಿಕೊಳ್ಳಿ. ಏಕೆಂದರೆ ಕಾಫಿಯ ಅಂಶದಲ್ಲಿ ಚರ್ಮದ ಕಲುಶಿತ ವಸ್ತುಗಳ ತೆಗೆಯುವ ಅಂಶವಿರುತ್ತದೆ. ಹೀಗಾಗಿ ಈ ಕಾಫಿ ಪುಡಿಯ ಫೇಸ್ ಪ್ಯಾಕ್ ಕುರಿತು ತಿಳಿಯೋಣ. ಮೊದಲು ಈ ಕಾಫಿ ಪೌಡರ್ ಒಂದು ಬೌಲ್‌ಗೆ ಹಾಕಿಕೊಂಡು ನಂತರ ಅದಕ್ಕೆ ಒಂದು ಚಮಚ ಕಡಲೆ ಹಿಟ್ಟು ಹಾಕಿ ಮಿಕ್ಸ್ ಮಾಡಿ.
ಹಾಗೆ ಇದಕ್ಕೆ ಒಂದು ಚಿಟಿಕೆ ಅರಶಿನ ಪುಡಿ, ಒಂದು ಚಮಚ ಜೇನುತುಪ್ಪ ಕೂಡ ಹಾಕಿಕೊಂಡು ಚೆನ್ನಾಗಿ ಕಲಸಿಕೊಳ್ಳಿ. ಕಲಸಿದ ಬಳಿಕ ಒಂದು ಹಣ್ಣು ಟೊಮೆಟೋವನ್ನು ಕತ್ತರಿಸಿ ಅದರ ರಸವನ್ನು ಹಿಂಡಿಕೊಳ್ಳಿ. ಅನಂತರ ಒಂದು ಸ್ಪೂನ್ ಹಾಲು ಹಾಕಿಕೊಂಡಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಇದು ಚಾಕೊಲೆಟ್ ರೀತಿಯ ರಚನೆಯನ್ನು ನೋಡಬಹುದು.
ಈಗ ಈ ಪೇಸ್ಟ್ ಅನ್ನು ಮುಖಕ್ಕೆ ಚೆನ್ನಾಗಿ ಹಚ್ಚಿಕೊಳ್ಳಬೇಕು. ಮುಖದ ಎಲ್ಲಾ ಕಡೆ ಹಿಡಿಯುವಂತೆ ಮೊದಲು ಹಚ್ಚಿಕೊಳ್ಳಬೇಕು. ಹಾಗೆ 15 ನಿಮಿಷ ಈ ಪೇಸ್ಟ್ ಒಣಗಲು ಬಿಡಬೇಕು. ಅನಂತರ ತಣ್ಣೀರಿನಿಂದ ಮುಖವನ್ನು ತೊಳೆಯಬೇಕು. ಇಷ್ಟಾದರೆ ನಿಮ್ಮ ಮುಖ ಹೊಳೆಯುವಂತೆ ಮಾಡುತ್ತದೆ. ನೀವು ವಾರದಲ್ಲಿ ಒಮ್ಮೆ ಈ ರೀತಿ ಪೇಸ್ಟ್ ತಯಾರಿಸಿ ಹಚ್ಚಿಕೊಳ್ಳಬಹುದು.
ಆಗಾಗ ಪಾರ್ಲರ್‌ಗೆ ಹೋಗುವುದಕ್ಕಿಂತಲೂ ಈ ರೀತಿಯ ಟಿಪ್ಸ್ ಫಾಲೋ ಮಾಡಿ ನಿಮ್ಮ ಮುಖ ಅರಳುವಂತೆ ಮಾಡಬಹುದು. ಕಡಿಮೆ ಸಮಯದಲ್ಲಿ, ಕಡಿಮೆ ಹಣದಲ್ಲಿ ಈ ಪೇಸ್ಟ್ ರೆಡಿಯಾಗುತ್ತದೆ. ಇದನ್ನು ಮಾಡಿ ತಕ್ಷಣ ಮುಖಕ್ಕೆ ಹಚ್ಚಿಕೊಳ್ಳುವುದು ಉತ್ತಮ, ಈ ಪೇಸ್ಟ್ ಮಾಡಿ ಇಟ್ಟು ಬೇರೆ ದಿನದಲ್ಲಿ ಹಚ್ಚಬೇಡಿ, ಯಾವಾಗ ಮಾಡಿರುತ್ತೀರೋ ಆ ದಿನವೇ ಹಚ್ಚಿಕೊಳ್ಳಬೇಕು.



Click it and Unblock the Notifications
