Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಉಪ್ಪಿನ ಗಾತ್ರದ ಬ್ಯಾಗ್ ಬರೋಬರಿ ₹51 ಲಕ್ಷಕ್ಕೆ ಮಾರಾಟ..! ಯಾಕೆ ಗೊತ್ತಾ?
ಪ್ರಪಂಚಲ್ಲಿ ನಾವು ಎಂತಹ ವಿಚಿತ್ರ ಸಂಗತಿಗಳ ನೋಡುತ್ತೇವೆ ಎಂದರೆ ಒಮ್ಮೊಮ್ಮೆ ನಂಬಲು ಸಹ ಸಾಧ್ಯವಾಗುವುದಿಲ್ಲ. ಈಗಲೂ ಇಂತಹದೊಂದು ವಿಚಿತ್ರ ವಿದ್ಯಮಾನ ನಡೆದಿದ್ದು, ನಂಬಲಸಾಧ್ಯವಾಗಿದೆ. ಐಷಾರಾಮಿ ಬ್ರಾಂಡ್‌ಗಳ ವಸ್ತು ಬಳಸುವುದು ಅಂದರೆ ದುಬಾರಿ ಮೊತ್ತ ನೀಡಲೇಬೇಕು. ಹಾಗೆ ಇಲ್ಲಿಂದು ಘಟನೆ ಐಷಾರಾಮಿ ಬ್ರಾಂಡ್‌ನ ವಸ್ತುವಿಗೆ ಸಂಬಂಧಿಸಿದೆ.
ಐಷಾರಾಮಿ ಬ್ಯಾಗ್‌ಗಳು, ಬೆಲ್ಟ್ ಇಂತಹ ವಸ್ತುಗಳ ಮಾರಾಟ ಮಾಡುವ ಬ್ರಾಂಡೆಡ್ ಕಂಪನಿಯಾದ ಲೂಯಿ ವಿಟಾನ್ ಬಗ್ಗೆ ಕೇಳಿದ್ದಿರ. ಈ ಕಂಪನಿಯ ವಸ್ತುಗಳನ್ನು ಸಾಮಾನ್ಯರು ಬಳಸುವುದು ತುಸು ಕಷ್ಟ. ಏಕೆಂದರೆ ಈ ವಸ್ತುಗಳು ಬಲು ದುಬಾರಿಯಾಗಿರುತ್ತವೆ. ಉದ್ಯಮಿಗಳು, ಸೆಲೆಬ್ರಿಟಿಗಳು ಅದು ಬಿಟ್ಟರೆ ಅತೀ ಹೆಚ್ಚು ಸಂಬಳ ಪಡೆಯುವ ಒಂದಿಷ್ಟು ಮಂದಿ ಈ ಕಂಪನಿಯ ವಸ್ತು ಬಳಸುತ್ತಾರೆ.
ಆದ್ರೆ ಇದೇ ಕಂಪನಿಯ ಸಕ್ಕರೆ ಗಾತ್ರದ ಬ್ಯಾಗ್‌ವೊಂದು ದಾಖಲೆಯ ಮೊತ್ತಕ್ಕೆ ಹರಾಜಾಗಿದ್ದು, ಎಲ್ಲರ ಗಮನ ಸೆಳೆದಿದೆ. ಜೊತೆಗೆ ಅಚ್ಚರಿಗೂ ಕಾರಣವಾಗಿದೆ.
ಐಕಾನಿಕ್ ಲೂಯಿ ವಿಟಾನ್ OnTheGo ಟೋಟ್‌ನಿಂದ ಪ್ರೇರಿತವಾದ ಮೈಕ್ರೋಸ್ಕೋಪಿಕ್ ಹ್ಯಾಂಡ್‌ಬ್ಯಾಗ್ ಬರೋಬ್ಬರಿ $63,750 ಗೆ ಮಾರಾಟ ಮಾಡಲಾಗಿದೆ, ಭಾರತದ ರೂಪಾಯಿಗೆ ಹೋಲಿಸಿದರೆ ಅದರ ಮೊತ್ತ ಸರಿ ಸುಮಾರು 51.7 ಲಕ್ಷ ರೂ. ಆಗಲಿದೆ. ನಿಮಗೆ ಅಚ್ಚರಿ ಎನಿಸಿದರು ಇದು ಸತ್ಯ. ಆ ಚಿಕ್ಕ ಬ್ಯಾಗ್‌ನ ಮೊತ್ತ 51 ಲಕ್ಷ ರೂ.

ಈ ಮೈಕ್ರೋ ಬ್ಯಾಗ್ ಕೇವಲ 657 ರಿಂದ 222 ರಿಂದ 700 ಮೈಕ್ರೊಮೀಟರ್ ಅಷ್ಟು ದೊಡ್ಡದಿದೆ. ಸರಳವಾಗಿ ಹೇಳುವುದಾದರೆ ಒಂದು ಉಪ್ಪಿನ ಹರಳಿನ ಗಾತ್ರ ಅಷ್ಟೆ. ಹೀಗಾಗಿ ಇದನ್ನು ನಿಮ್ಮ ಕೈಯಲ್ಲಿ ಹಿಡಿದುಕೊಂಡರು ಯಾರಿಗೂ ಕಾಣುವುದಿಲ್ಲ. ಆದ್ರೆ ಈ ಮೈಕ್ರೋ ಬ್ಯಾಗ್ ನೀವು ಊಹಿಸಲಾಗದಷ್ಟು ವಿವರಣೆಗಳ ತನ್ನಲ್ಲಿಟ್ಟುಕೊಂಡಿದೆ.
ಈ ಬ್ಯಾಗ್ ಅನ್ನು ನೀವು ನೋಡಬೇಕಾದರೆ ಮೈಕ್ರೋಸ್ಕೋಪ್‌ನ ಅಗತ್ಯವಿದೆ. ಇದರ ಮೇಲೆ ಸಂಕೀರ್ಣ ಕಲಾಕೃತಿಗಳಿವೆ, ನಿಖರ ಕರಕುಶಲತೆಯುಕ್ತ ಕಲಾವಿದರು ಈ ಬ್ಯಾಗ್ ತಯಾರಿಕೆಯ ಭಾಗವಾಗಿದ್ದರು. ಬ್ಯಾಗ್ ಮೇಲೆ ಕಂಪನಿಯ ಲೋಗೋ (ಎಲ್‌ವೈ) ಹಾಗೂ ಒಂದಿಷ್ಟು ಕಲಾಕೃತಿಗಳಿವೆ.
ಈ ಬ್ಯಾಗ್‌ನ ಫೋಟೋವನ್ನು ಕಂಪನಿ ಹಂಚಿಕೊಂಡ ಬಳಿಕ ನೆಟ್ಟಿಗರು ಶಾಕ್ ಆಗಿದ್ದಾರೆ. ಈ ಬ್ಯಾಗ್ ಖರೀದಿಸಿದವರು ಯಾರು ಎಂಬುದನ್ನು ಕಂಪನಿ ಬಹಿರಂಗಪಡಿಸಿಲ್ಲ. ಆದರೆ ನೆಟ್ಟಿಗರು ಮಾತ್ರ ಆತನ ಕುರಿತು ಭಾರೀ ಕುತೂಹಲ ವ್ಯಕ್ತಪಡಿಸಿದ್ದಾರೆ. ಈ ಬ್ಯಾಗ್‌ನಿಂದ ಆತನಿಗೆ ಏನು ಲಾಭ.? ಇಷ್ಟು ದುಬಾರಿ ಮೊತ್ತಕ್ಕೆ ಖರೀದಿಸಿದ್ದೇಕೆ? ಎಂಬ ಪ್ರಶ್ನೆ ಎದ್ದಿದೆ.
ಲೂಯಿ ವಿಟಾನ್/ಲೂಯಿಸ್ ವಿಟಾನ್ ವಸ್ತುಗಳು ದುಬಾರಿ ಏಕೆ.?
ಈ ಕಂಪನಿ ಪ್ಯೂರ್ ಲೆದರ್‌ನಿಂದ ಮಾತ್ರವೇ ವಸ್ತುಗಳ ಉತ್ಪಾದಿಸುತ್ತದೆ. ಗುಣಮಟ್ಟ, ದೀರ್ಘಬಾಳಿಕೆಗೆ ಕಂಪನಿ ವಸ್ತುಗಳು ಹೆಸರಾಗಿವೆ. ಹಾರ್ಡ್‌ವೇರ್, ಝಿಪ್ಪರ್‌ಗಳು, ಸ್ಟಿಚಿಂಗ್ ಮತ್ತು ಸಣ್ಣ ವಿವರಗಳು ಕಠಿಣ ಗುಣಮಟ್ಟದ ಮಾನದಂಡಗಳಿಗೆ ಒಳಪಟ್ಟಿರುತ್ತವೆ. ಈ ಕಂಪನಿಯ ಹೆಚ್ಚಿನ ವಸ್ತುಗಳು ಕೈಗಳ ಸಹಾಯದಿಂದ ಮಾಡಲ್ಪಟ್ಟಿವೆ ಹಾಗೂ ನಿರ್ವಹಿಸಲ್ಪಟ್ಟಿರುತ್ತವೆ. ಅಲ್ಲದೆ ಕುಶಲ ಕರ್ಮಿಗಳು ಈ ವಸ್ತುಗಳ ತಯಾರಿಕೆಗೆ ತಿಂಗಳುಗಳ ಕಾಲ ಶ್ರಮ ವಹಿಸುತ್ತಾರೆ.
ಈ ಕಂಪನಿಯು ಮಾರುಕಟ್ಟೆಗೆ ಅಗತ್ಯವಾದಷ್ಟು ವಸ್ತುಗಳ ಮಾತ್ರ ಉತ್ಪಾದಿಸುತ್ತದೆ. ಹೆಚ್ಚುವರಿಯಾಗಿ ಯಾವ ವಸ್ತುವನ್ನು ಉತ್ಪಾದಿಸುವುದಿಲ್ಲ. ಇದರ ಜೊತೆ ಈ ಕಂಪನಿಯ ವಸ್ತುಗಳ ವಿನ್ಯಾಸ ಸಹ ವಿಭಿನ್ನವಾಗಿರುತ್ತದೆ. ಹೀಗಾಗಿಯೇ ಅನೇಕರು ಈ ಕಂಪನಿಯ ವಸ್ತುವನ್ನು ದುಬಾರಿ ಹಣ ನೀಡಿಯಾದರೂ ಖರೀದಿಸುತ್ತಾರೆ.
ಲೂಯಿ ವಿಟಾನ್ 19ನೇ ಶತಮಾನದ ಮಧ್ಯಭಾಗದಲ್ಲಿ ಪ್ರಾರಂಭವಾಯಿತು, ಯುವ ಲೂಯಿ ವಿಟಾನ್ ಪ್ಯಾರಿಸ್‌ಗೆ ಆಗಮಿಸಿ ಟ್ರಂಕ್ ಮಾಸ್ಟರ್ ಆಗಿ ತನ್ನ ಪ್ರಯಾಣವನ್ನು ಪ್ರಾರಂಭಿಸಿದನು. ಅವನ ಕರಕುಶಲತೆ ಮತ್ತು ಜಾಣ್ಮೆಯು ಶೀಘ್ರವಾಗಿ ಮನ್ನಣೆಯನ್ನು ಗಳಿಸಿತು, ನೆಪೋಲಿಯನ್ III ರ ಪತ್ನಿ ಸಾಮ್ರಾಜ್ಞಿ ಯುಜೀನಿ ಡಿ ಮೊಂಟಿಜೊ ಅವರ ಅಧಿಕೃತ ಟ್ರಂಕ್ ತಯಾರಕರಾಗಿ ನೇಮಕಗೊಳ್ಳಲು ಕಾರಣವಾಯಿತು.
ಇದರ ಬಳಿಕ ಆತನ ಕೈಚಳಕ ಎಲ್ಲ ಕಡೆ ಹಬ್ಬಿತು. ಆತ ತನ್ನದೇ ಸ್ವಂತ ಕಂಪನಿ ತೆರೆಯಲು ನಿರ್ಧರಿಸಿ ಒಂದು ಕಂಪನಿ ಹುಟ್ಟುಹಾಕಿದ. ಈ ಕಂಒನಿ ಈಗಲೂ ವಿಶ್ವದ ಅತ್ಯಂತ ದುಬಾರಿ ವಸ್ತುಗಳ ಉತ್ಪಾದಿಸುತ್ತಿದೆ.



Click it and Unblock the Notifications
