ಲ್ಯಾಕ್ಮಿ ಫ್ಯಾಷನ್ ವೀಕ್‌ನಲ್ಲಿ ತುಂಬಾನೇ ಸೆಳೆದ ಮೋಸ್ಟ್ ಕ್ರಿಯೇಟಿವ್ ಸ್ಟೇಜ್ ಶೋ

ಲ್ಯಾಕ್ಮಿ ಸಮ್ಮರ್‌ ಫ್ಯಾಷನ್‌ ವೀಕ್‌ ನಡೆಯುತ್ತಿದೆ. ಪ್ರತಿಬಾರಿ ಲ್ಯಾಕ್ಮಿ ಫ್ಯಾಷನ್ ವೀಕ್‌ನಲ್ಲಿ ಫೇಮಸ್‌ ಡಿಸೈನರ್ ಡ್ರೆಸ್ಸಿಂಗ್ ಹಾಗೂ ಜ್ಯೂವೆಲರಿಯನ್ನು ಮಾಡೆಲ್‌ಗಳು ಧರಿಸಿ ಬಂದು ಪ್ರದರ್ಶನ ಮಾಡುತ್ತಾರೆ, ಅದೇ ರೀತಿ ಈ ಬಾರಿಯೂ ನಾನಾ ವಿನ್ಯಾಸ ಡ್ರೆಸ್‌ಗಳ ಪ್ರದರ್ಶನ ನಡೆಯುತ್ತಿದ್ದು ಈ ಕಾರ್ಯಕ್ರಮ ಮಾರ್ಚ್‌ 17ಕ್ಕೆ ಮುಕ್ತಾಯವಾಗಲಿದೆ.

Lakme Fashion Week 2024

ಆದರೆ ಈ ಬಾರಿ ಮಾತ್ರ ಮೂರನೇ ದಿನ ತುಂಬಾನೇ ಭಿನ್ನವಾದ ಸಕತ್ ಕ್ರಿಯೇಟಿವ್‌ ಆದ ಸ್ಟೇಜ್‌ ಶೋ ನಡೆಯಿತು, ಇದುವರೆಗಿನ ಲ್ಯಾಕ್ಮಿ ಫ್ಯಾಷನ್‌ ಶೋದಲ್ಲಿ ಈ ಬಗೆಯ ವಿನ್ಯಾಸ ಗಮನ ಸೆಳೆದಿರಲಿಲ್ಲ, ಇದೀಗ ಮನುಷ್ಯರು ರೋಬೋಟ್‌ ಹಾಗೂ ಮೆಷಿನ್‌ಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ ಸಾಮಾಜಿಕ, ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಿ ಆರ್ಥಿಕತೆಯಲ್ಲಿ ಪ್ರಗತಿ ಸಾಧಿಸುವ ಥೀಮ್‌ನಲ್ಲಿ ಈ ಫ್ಯಾಷನ್ ಡಿಸೈನ್‌ಗಳನ್ನು ಪ್ರದರ್ಶನ ಮಾಡಲಾಯ್ತು.

ವಿಚಿತ್ರ ವೇಷ ತೊಟ್ಟು ಜ್ಯುವೆಲರಿ ಪ್ರದರ್ಶನ

ಮುಖಕ್ಕೆ ಬಣ್ಣ ಹಚ್ಚಿ ಯಾವುದೋ ಏಲಿಯಬ್ ಅಥವಾ ಫ್ಯಾಂಟಸಿ ಸಿನಿಮಾದಲ್ಲಿ ಬರುವ ಸೂಪರ್ ಮನಿಷ್ಯರಂತೆ ವೇಷ ಹಾಕಿ ಜ್ಯುವೆಲರಿಗಳ ಪ್ರದರ್ಶನ ಮಾಡಲಾಯ್ತು, ಇದನ್ನು ನೋಡಿದವರಿಗೆ ತುಂಬಾನೇ ಕ್ರಿಯೇಟಿವ್ ಅನಿಸಿತು, ಪ್ರತಿಯೊಂದು ಆಭರಣಗಳು ಹೈಲೈಟ್ಸ್ ಆದವು.

ಭಿನ್ನ ಉಡುಗೆಯಲ್ಲಿ ಮಿಂಚಿದ ಮಾಡೆಲ್‌ಗಳು
ಈ ಮಾಡೆಲ್‌ಗಳ ವೇಷಭೂಷಣ ತುಂಬಾನೇ ಭಿನ್ನವಾಗಿತ್ತು ಜೊತೆಗೆ ಅವರನ್ನು ಮಾತ್ರ ಹೈಲೈಟ್ಸ್‌ ಮಾಡುವಂತೆ ಬಿದ್ದ ಬೆಳಕು, ಅದರಲ್ಲಿ ಕಂಡು ಬಂದ ಆಭರಣಗಳ ಹೊಳಪು ನೋಡುಗರನ್ನು ವಾವ್ ಅನ್ನುವಂತೆ ಮಾಡಿತು. ಯಾವಾಗ ಮಾಡಲ್ ಹೈಲೈಟ್ಸ್ ಆದರೆ ಈ ಬಾರಿ ಮಾಡೆಲ್‌ಗಳ ಬದಲಿಗೆ ವಸ್ತುಗಳನ್ನು ಹೈಲೈಟ್ಸ್ ಮಾಡಿದ್ದಾರೆ.

ಸೃಷ್ಟಿಯಾದ ಮಾಯಲೋಕ
ಮಾಯಲೋಕದಂತೆ ಆ ಸ್ಟೇಜ್ ಕಂಡು ಬಂತು, ಬಣ್ಣದ ಲೈಟ್ಸ್‌ನಲ್ಲಿ ಮಾಡೆಲ್‌ನ ಭಿನ್ನವಾದ ವೇಷಭೂಷಣ ಜೊತೆಗೆ ಹೊಳಪಿನ ಆಭರಣಗಳು ತುಂಬಾನೇ ಆಕರ್ಷಕವಾಗಿ ಕಂಡು ಬಂತು.

ಬಿಳಿ ಬಣ್ಣದ ಉಡುಗೆಯಲ್ಲಿ ರಾಕ್ಷಸನ ಅವತಾರದಲ್ಲಿ ಮಿಂಚಿದ ಮಾಡೆಲ್
ಬಿಳಿ ಬಣ್ಣದ ಡ್ರೆಸ್ಸಿಂಗ್‌ನಲ್ಲಿ ಮಾಡೆಲ್‌ ತುಂಬಾನೇ ಭಿನ್ನವಾಗಿ ಕಂಗೊಳಿಸಿದರು. ತಲೆಯಲ್ಲಿ ವಿಚಿತ್ರವಾದ ಗರಿ, ಭಿನ್ನ ಭೂಷಣ ಸಕತ್ ಕ್ರಿಯೇಟಿವ್ ಆಗಿದೆ.

ಇಲ್ಲಿ ಜ್ಯುವೆಲರಿನೇ ಹೈಲೈಟ್ಸ್‌
ಇಲ್ಲಿ ಮಾಡೆಲ್ ಕಾಣಿಸುವುದಿಲ್ಲ, ಕಪ್ಪು ಬಟ್ಟೆಯಲ್ಲಿ ಮರೆಯಾಗಿರುವ ಮಾಡೆಲ್, ಬರೀ ಜ್ಯುವೆಲರಿ ಹೈಲೈಟ್ಸ್.

ಭಿನ್ನವೇಷ, ಹೈ ಲೆವಲ್‌ ಕ್ರಿಯೇಟಿವಿಟಿ
ಪ್ರತಿಬಾರಿ ಫ್ಯಾಷನ್ ವೀಕ್‌ನಲ್ಲಿ ಅವರ ಡ್ರೆಸ್ಸಿಂಗ್ ಗಮನ ಸೆಳೆದರೆ ಈ ಬಾರಿ ಸ್ವಲ್ಪ ಭಿನ್ನವಾಗಿ ಈ ಸ್ಟೇಜ್‌ ಫ್ಯಾಷನ್ ವೀಕ್ ಗಮನ ಸೆಳೆದಿದೆ.

ಲ್ಯಾಕ್ಮಿ ಫ್ಯಾಷನ್ ವೀಕ್ ಮಾರ್ಚ್‌ 13-17ರವರೆಗೆ ಜಿಯೋ ವರ್ಲ್ಡ್‌ ಕನ್‌ವೆನ್ಷನ್ ಸೆಂಟರ್‌, ಮುಂಬಯಿಯಲ್ಲಿ ನಡೆಯುತ್ತಿದೆ.

Valliyan on Day 3 of Lakmē Fashion Week in partnership with FDCI.

Inspired by Society 5.0, which marks a shift in our society and economy towards a new paradigm.The collection attempts to balance economic development with resolving societal and environmental problems. Industry 5.0 which refers to People working alongside robots and smart machines. Creating a new VALLIYAN world ಎಂದು ಬರೆದು ಪೋಸ್ಟ್ ಮಾಡಿರುವ ಈ ಫೋಟೋಗಳು ನಿಮಗೆ ಇಷ್ಟವಾಗುವುದು, ಫ್ಯಾಷನ್ ಜಗತ್ತಿನ ಗಮನಾರ್ಹ ಫ್ಯಾಷನ್ ಶೋಗೆ ಅನೇಕ ಸೆಲೆಬ್ರಿಟಿಗಳು ಭಾಗಿಯಾಗುತ್ತಾರೆ.

English summary

Lakme Fashion Week 2024: Creative Jewellery Presentation

Lakme Fashion Week 2024: Creative Jewellery Presentation
Story first published: Saturday, March 16, 2024, 16:38 [IST]
X
Desktop Bottom Promotion