Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಪರ್ಫ್ಯೂಮ್ ಸುವಾಸನೆ ದಿನ ಪೂರ್ತಿ ಇರಬೇಕೆ? ಈ ಟ್ರಿಕ್ಸ್ ಟ್ರೈ ಮಾಡಿ
ನೀವು ಬಳಸಿದ ಪರ್‌ಫ್ಯೂಮ್ ತುಂಬಾ ಸಮಯ ಇರುತ್ತಿಲ್ಲವೇ? ತುಂಬಾ ಹೊತ್ತು ಇರಬೇಕೆಂದು ತುಂಬಾ ಹಾಕಿದರೆ ಪರ್ಫ್ಯೂಮ್ ವಾಸನೆಯಿಂದ ನಿಮ್ಮ ಸಮೀಪ ಇರುವವರಿಗೆ ತಲೆನೋವು ಬರಬಹುದು, ಆದ್ದರಿಂದ ಪರ್‌ಫ್ಯೂಮ್ ಬಳಸುವ ಟ್ರಿಕ್ಸ್ ಗೊತ್ತಿದ್ದರೆ ಸುಗಂಧವಾಸನೆ ತುಂಬಾ ಸಮಯ ಇರುತ್ತದೆ.
ಫರ್‌ಫ್ಯೂಮ್ ನಮ್ಮ ದೇಹದ ದುರ್ವಾಸನೆ ತಡೆಯುವುದರ ಜೊತೆಗೆ ನಮ್ಮ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ. ಏಕೆಂದರೆ ನಮ್ಮ ಮೈಯಿಂದ ಬೆವರ ದುರ್ವಾಸನೆ ಬೀರುತ್ತಿದ್ದರೆ ನಮಗೆ ಬೇರೆಯವರ ಸಮೀಪ ನಿಂತು ಮಾತನಾಡಲು ಒಂಥರಾ ಮುಜುಗರವಾಗುತ್ತದೆ.

ಆದರೆ ಈ ಪರ್‌ಫ್ಯೂಮ್ ತುಂಬಾ ಸಮಯ ಸುವಾಸನೆ ಬೀರುವಂತೆ ಹಾಕುವುದು ಹೇಗೆ ಎಂದು ಅನೇಕರಿಗೆ ಗೊತ್ತಿರುವುದಿಲ್ಲ. ಪರ್‌ಫ್ಯೂಮ್ ಸುಗಂಧ ವಾಸನೆ ತುಂಬಾ ಸಮಯ ಇರಲು ಪರ್ಫ್ಯೂಮ್ ಹೇಗೆ ಬಳಸಬೇಕು ಎಂದು ನೋಡೋಣ:
ಕೂದಲಿಗೆ
ಈ ಟ್ರಿಕ್ಸ್ ಬಹುತೇಕ ಜನರಿಗೆ ಗೊತ್ತೇ ಇರುವುದಿಲ್ಲ. ಹೌದು ಪರ್‌ಫ್ಯೂಮ್ ಅನ್ನು ಕೂದಲಿಗೆ ಸ್ವಲ್ಪ ಹಾಕಿದರೆ ತುಂಬಾ ಒಳ್ಳೆಯದು. ಆದರೆ ಪರ್‌ಫ್ಯೂಮ್ ಅನ್ನು ನಿಮ್ಮ ಕೂದಲಿನ ಬುಡಕ್ಕೆ ಹಾಕಬೇಡಿ. ನಿಮ್ಮ ಸ್ಪ್ರೇಯನ್ನು 10 ಇಂಚು ದೂರ ಹಿಡಿದು ಮೆಲ್ಲನೆ ಸ್ಪ್ರೇ ಮಾಡಿ. ಗಿಡ್ಡ ಕೂದಲು ಇರುವವರು ಈ ಟ್ರಿಕ್ಸ್ ಬಳಸಬೇಡಿ, ಕೂದಲಿನ ಬುಡಕ್ಕೆ ತಾಗಿದರೆ ಕೂದಲಿಗೆ ಹಾನಿಯಾಗುವುದು. ಉದ್ದ ಕೂದಲು ಇರುವವರು ಈ ಟ್ರಿಕ್ಸ್ ಬಳಸಬಹುದು.
ಕಿವಿ ಹಿಂದೆ
ಕಿವಿಯ ಹಿಂದೆ ಹಚ್ಚುವುದರಿಂದ ಬೇಗನೆ ಆವಿಯಾಗುವುದಿಲ್ಲ. ಇದರಿಂದ ಸುವಾಸನೆ ತುಂಬಾ ಹೊತ್ತು ಇರುತ್ತದೆ. ನೀವು ಕಿವಿ ಹಿಂದೆ ಪರ್ಫ್ಯೂಮ್ ಹಾಕಿದರೆ ಒಂದು ದಿನವಾದರೂ ಅದರ ಸುವಾಸನೆ ಹಾಗೇ ಇರಲಿದೆ.
ಪಲ್ಸ್ ಪಾಯಿಂಟ್ ಬಳಿ
ನೀವು ನಿಮ್ಮ ಪಲ್ಸ್ ಪಾಯಿಂಟ್ ಬಳಿ ಪರ್‌ಫ್ಯೂಮ್ ಹಾಕಿ, ಪಲ್ಸ್ ಪಾಯಿಂಟ್ ಅಂದ್ರೆ ನೀವು ವಾಚು ಕಟ್ಟುತ್ತೀರಾ ಅಲ್ಲಾ, ಆ ಭಾಗಕ್ಕೆ ಸ್ವಲ್ಪ ಹಾಕಿ, ಹೀಗೆ ಹಾಕಿದರೆ ಸುವಾಸನೆ ತುಂಬಾ ಸಮಯ ಇರುತ್ತದೆ.
ಮೊಣಕೈಯೊಳಗೆ
ನೀವು ಮೊಣಕೈಯೊಳಗೆ ಸ್ವಲ್ಪ ಸುಗಂಧ ದ್ರವ್ಯ ಹಾಕಿ, ಈ ಸುವಾಸನೆ ತುಂಬಾ ಸಮಯ ಹಾಗೇ ಇರುತ್ತದೆ. ಆದ್ದರಿಂದ ನೀವು ಇನ್ನು ಮುಂದೆ ಪರ್‌ಫ್ಯೂಮ್ ಬಳಸುವಾಗ ಮೊಣಕೈಗೂ ಬಳಸಿ.
ಮೊಣಕಾಲಿಗೆ ಹಾಕಿ
ನೀವು ಸ್ವಲ್ಪ ಸುಗಂಧದ್ರವ್ಯವನ್ನು ನಿಮ್ಮ ಮೊಣಕಾಲಿಗೆ ಹಾಕಿ. ನೀವು ಈ ಭಾಗಕ್ಕೆ ಸುಗಂಧದ್ರವ್ಯ ಹಾಕಿದಾಗ ಸುವಾಸನೆ ತುಂಬಾ ಸಮಯ ಇರುತ್ತದೆ. ನೆಕ್ಟ್ಸ್ ಟೈಮ್ ನೀವು ಸುಗಂಧದ್ರವ್ಯ ಬಳಸುವಾಗ ಈ ಟ್ರಿಕ್ಸ್ ಬಳಸಿ ನೋಡಿ ದಿನಪೂರ್ತಿ ಸುವಾಸನೆ ಬೀರುವುದು. ಈ ಟ್ರಿಕ್ಸ್ ಬೇಸಿಗೆಯಲ್ಲಂತೂ ತುಂಬಾನೇ ಸಹಕಾರಿಯಾಗಿದೆ.
ಪರ್‌ಫ್ಯೂಮ್ ಬಳಸುವಾಗ ಈ ತಪ್ಪು ಮಾಡದಿರಿ:
* ತುಂಬಾ ಸ್ಟ್ರಾಂಗ್ ಪರ್‌ಫ್ಯೂಮ್ ಬಳಸಬೇಡಿ, ಯಾವಾಗಲೂ ಮೈಲ್ಡ್ ಆಗಿ ಬಳಸಿ
* ಬಟ್ಟೆ ಮೇಲೆ ಸುಮ್ಮನೆ ಸ್ಪ್ರೇ ಮಾಡಬೇಡಿ



Click it and Unblock the Notifications

