Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಮುಖದ ಕಾಂತಿ ಹೆಚ್ಚಿಸೋಕೆ ಕೆ-ಬ್ಯೂಟಿ ಟಿಪ್ಸ್: ಇಷ್ಟು ಮಾಡಿ ನೋಡಿ!
ಸೌಂದರ್ಯ ಹೆಚ್ಚಿಸಿಕೊಳ್ಳುವುದು ಅಂದ್ರೆ ಮಹಿಳೆಯರ ಪಾಲಿಗೆ ಸಂತಸದ ವಿಚಾರ. ಮಹಿಳೆರು ಯಾವಾಗಲು ತಮ್ಮ ಸೌಂದರ್ಯದ ಕುರಿತು ಆಲೋಚಿಸುತ್ತಿರುತ್ತಾರೆ. ಅದರಲ್ಲೂ ಮನೆಯಲ್ಲಿ ಯಾವುದಾದರು ಶುಭ ಕಾರ್ಯ ನಡೆಯುತ್ತಿದ್ದರೆ ಇಲ್ಲವೆ, ಯಾವುದಾದರು ಕಾರ್ಯಕ್ರಮವಿದ್ದರೆ ಸುಂದರವಾಗಿ ಕಾಣಬೇಕು ಎಂಬುದು ಅವರ ಆಸೆಯಾಗಿರುತ್ತೆ.
ಆದ್ರೆ ಮನೆಯಲ್ಲಿ ಸುಲಭವಾಗಿ ಸೌಂದರ್ಯವನ್ನು ಹೆಚ್ಚಿಕೊಳ್ಳುವುದು ಹೇಗೆ ಎಂಬುದು ತಿಳಿದಿರುವುದಿಲ್ಲ. ಈಗ ಬ್ಯೂಟಿ ಪಾರ್ಲರ್‌ಗೆ ಹೋಗುವುದು ದುಬಾರಿಯಾಗಲಿದೆ. ಆದ್ರೆ ಕೆ-ಬ್ಯೂಟಿ ಎಂದು ಕರೆಯುವ ಕೆಲವು ಸಿಂಪಲ್ ಟಿಪ್ಸ್‌ಗಳು ನಿಮ್ಮ ಸೌಂದರ್ಯವನ್ನ ಮನೆಯಲ್ಲೇ ಹೆಚ್ಚಿಸಿಕೊಳ್ಳುವ ಟಿಪ್ಸ್‌ಗಳಿವೆ.

ಅದ್ರಲ್ಲೂ ಕೊರಿಯನ್ ಬ್ಯೂಟಿ ಟಿಪ್ಸ್‌ಗಳು ಈಗ ಆನ್‌ಲೈನ್‌ನಲ್ಲಿ ಸಿಕ್ಕಾಪಟ್ಟೆ ವರಲ್ ಆಗುತ್ತಿರುತ್ತವೆ. ಕೊರಿಯನ್ ಯುವತಿಯರು ಬಿಳಿಯಾಗಿ ಒಂದೇ ಒಂದು ಕಪ್ಪು ಕಲೆಯು ಇಲ್ಲದಂತೆ ಅವರ ಸೌಂದರ್ಯ ಕಾಪಾಡಿಕೊಂಡಿರುತ್ತಾರೆ. ಹಾಗಾದ್ರೆ ಅವರ ಸೌಂದರ್ಯದ ಗುಟ್ಟೇನು? ಅವರು ಮುಖದ ಕಾಂತಿಗೆ ಮಾಡುವ ಸಿಂಪಲ್ ಟಿಪ್ಸ್ ಏನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕೊರಿಯನ್ ಸೌಂದರ್ಯವು ಆರೋಗ್ಯಕರ ಮತ್ತು ಹೊಳೆಯುವ ಚರ್ಮದಿಂದಾಗಿಯೇ ಹೆಸರುವಾಸಿಯಾಗಿದೆ. ಅಚ್ಚರಿ ಅಂದರೆ ಅವರು ಹೆಚ್ಚಿನ ಹೈಡ್ರೇಷನ್‌ಗೆ ಒತ್ತು ನೀಡುತ್ತಾರೆ. ಅಂದ್ರೆ ಅವರು ಹೆಚ್ಚು ಹೆಚ್ಚು ನೀರು ಕುಡಿಯುವುದನ್ನು ಅಭ್ಯಾಸವನ್ನಾಗಿಸುತ್ತಾರೆ. ಇದು ಮುಖದ ಕಾಂತಿ ಹೆಚ್ಚಿಸಲು ನೆರವಾಗುತ್ತದೆ. ಹಾಗೆ ಅವರು ಹೈಡ್ರೇಟಿಂಗ್ ಟೋನರ್ ಅನ್ನು ಕೂಡ ಮುಖಕ್ಕೆ ಬಳಸುತ್ತಾರೆ.
ಶೀಟ್ ಮಾಸ್ಕ್
ಕೊರಿಯನ್ ಸುಂದರಿಯರು ಮುಖದ ಕಾಂತಿಗಾಗಿ ಶೀಟ್ ಮಾಸ್ಕ್ ಅನ್ನು ಬಳಸುತ್ತಾರೆ, ಈ ಮಾಸ್ಕ್‌ನಲ್ಲಿ ತೇವಾಂಶ ವರ್ಧಕ ಅಂಶವಿರುತ್ತದೆ. ಇದನ್ನು ಸೌಂದರ್ಯ ವರ್ಧಕ ಸೀರಮ್‌ಗಳಲ್ಲಿ ನೆನೆಸಿ ನಂತರ ಮುಖದ ಮೇಲೆ ಹಾಕಲಾಗುತ್ತದೆ. ಇದು ಚರ್ಮದ ಹೈಡ್ರೇಷನ್‌ಗೆ ಮುಖ್ಯವಾಗಿದೆ. ಇದರಿಂದ ಮುಖದ ಕಾಂತಿ ಹೆಚ್ಚುತ್ತದೆ.
ಜೆಂಟಲ್ ಎಕ್ಸ್ಫೋಲಿಯೇಶನ್
ನೀವು ಬ್ಯೂಟಿ ಪಾರ್ಲರ್‌ಗೆ ತೆರಳಿದರೆ ಮುಖದ ಕಾಂತಿ ಹೆಚ್ಚಿಸುವ ಸಲುವಾಗಿ ಎಕ್ಸ್‌ಫ್ಲೋಲಿಯೇಷನ್ ಮಾಡಲಾಗುತ್ತದೆ. ಇಲ್ಲಿ ರಾಸಾಯನಿಕಗಳ ಬಳಸಿ ಕೆಟ್ಟಿರುವ ಚೆರ್ಮದ ಕೋಶಗಳನ್ನು ತೆಗೆಯಲಾಗುತ್ತದೆ. ಆದ್ರೆ ಕೆ-ಬ್ಯೂಟಿಯಲ್ಲಿ ಸೌಂಮ್ಯ ಪ್ರಭಾವದ ಕೆಮಿಕಲ್‌ಗಳ ಎಕ್ಸ್‌ಫೋಲಿಯಂಟ್‌ಗಳ ಬಳಸಿ ಮುಖಕ್ಕೆ ಹಚ್ಚಲಾಗುತ್ತದೆ. ಈ ರೀತಿಯ ವಿಧಾನ ಚರ್ಮದ ಕಾಂತಿ ಹೆಚ್ಚಲು ಕಾರಣವಾಗುತ್ತದೆ.
ಲೇಯರಿಂಗ್
ಕೆ-ಬ್ಯೂಟಿಯಲ್ಲಿ ಲೇಯರಿಂಗ್ ಎಂಬ ವಿಧಾನ ಸೌಂದರ್ಯ ಹೆಚ್ಚಿಸುವ ಪ್ರಮುಖ ವಿಧಾನವಾಗಿದೆ. ಲೇಯರಿಂಗ್ ಚರ್ಮದ ಅಗತ್ಯಕ್ಕೆ ತಕ್ಕಂತೆ ಮಾಡಲಾಗುತ್ತದೆ. ಚರ್ಮದ ಟೆಕಶ್ಚರ್ಗಳೊಂದಿಗೆ ಪ್ರಾರಂಭಿಸಲಾಗುತ್ತದೆ. ಲೇಯರಿಂಗ್‌ನಲ್ಲಿ ಸೌಮ್ಯ ರೀತಿಯ ಫೌಂಡೇಶನ್‌ಗಳು, ಕ್ರೀಮ್‌ಗಳ ಬಳಸಲಾಗುತ್ತದೆ.
ಸನ್‌ಸ್ಕ್ರೀನ್
ಮನೆಯಿಂದ ಹೊರಗೆ ಕಾಲಿಡುವ ಮುನ್ನ ಸನ್‌ಸ್ಕ್ರೀನ್ ಬಳಸುವುದು ಕೆ-ಬ್ಯೂಟಿಯ ಒಂದು ವಿಧಾನ, ಕೊರಿಯನ್‌ನಲ್ಲಿ ಸನ್‌ಸ್ಕ್ರಿನ್ ಬಳಕೆ ಯಾವಾಗಲು ಇದ್ದೇ ಇರುತ್ತೆ. ಬಿಸಿಲಿ ಇಲ್ಲ ಎಂಬ ಕಾರಣಕ್ಕೆ ಸನ್‌ಸ್ಕ್ರೀನ್ ಬಳಸದೆ ಇರಬಾರದು. ಮನೆಯಿಂದ ಹೊರಬರುವ ಮುನ್ನ ಸನ್‌ಸ್ಕ್ರೀನ್ ಬಳಸಬೇಕು. ಅದರಲ್ಲೂ ದುಬಾರಿ ಬೆಲೆ ಅಥವಾ ಉತ್ತಮ ಕಂಪನಿಯ ಸನ್‌ಸ್ಕ್ರೀನ್ ಬಳಸುವುದು ಉತ್ತಮ ಕನಿಷ್ಠ SPF 30 ವಿಶೇಷ ಕ್ರೀಮ್ ಉತ್ತಮ ಇದು ಸೂರ್ಯನಿಂದ ಹೊರಬರುವ ಎಲ್ಲಾ ಕಿರಣಗಳ ತಡೆಯಲಿದೆ. ಇದರಿಂದ ಚರ್ಮದ ಮೇಲಿನ ಹಾನಿ ಕಡಿಮೆಯಾಗಲಿದೆ.
ಆಲೂವೆರಾ
ಕೆ-ಬ್ಯೂಟಿಯಲ್ಲಿ ಅತೀ ಹೆಚ್ಚು ಬಳಕೆಯಲ್ಲಿರುವ ಸೌಂದರ್ಯ ಗಿಡಮೂಲಿಕೆ ಅಂದರೆ ಆಲೂವೆರಾ ಆಗಿದೆ. ಇದನ್ನು ಕತ್ತರಿಸಿ ಅದರ ಒಳಗಿನ ಲೋಳೆಯನ್ನು ತೆಗೆದು ಚೆನ್ನಾಗಿ ಮಿಕ್ಸ್ ಮಾಡಿ ಬಿಳಿ ಕಾಟನ್ ಬಟ್ಟೆಯನ್ನು ತೊಳೆದು ಬಳಿಕ ಅದನ್ನು ಆಲೂವೆರಾದಲ್ಲಿ ನೆನೆಸಿಡುತ್ತಾರೆ, ನಂತರ ಅದನ್ನು ಮುಖದ ಮೇಲೆ ಹಾಕಿಕೊಳ್ಳುತ್ತಾರೆ, ಇದರಿಂದ ಮುಖದ ಕಾಂತಿ ಹೆಚ್ಚುತ್ತದೆ.



Click it and Unblock the Notifications
