Latest Updates
-
ದೆಹಲಿ ಧೂಳಿನ ಬಿರುಗಾಳಿ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 500 ರೂಪಾಯಿಯ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಬದಲಾವಣೆ ನಿಮ್ಮನ್ನು ಹೀಟ್ಸ್ಟ್ರೋಕ್ನಿಂದ ರಕ್ಷಿಸುತ್ತದೆ! -
ರೆಡ್ ಕಾರ್ಪೆಟ್ನಿಂದ ನಿಮ್ಮ ವಾರ್ಡ್ರೋಬ್ಗೆ: ಕಾನ್ 2026ರ ಈ ಫ್ಯಾಷನ್ ಟ್ರೆಂಡ್ಸ್ ಈಗ ಸಿಕ್ಕಾಪಟ್ಟೆ ವೈರಲ್! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲ ಬೇಗೆಯಲ್ಲಿ ಮದುವೆ ಸಂಭ್ರಮ ಹಾಳಾಗದಿರಲಿ: ಅತಿಥಿಗಳ ಆರೋಗ್ಯ ಕಾಪಾಡಲು ಇಲ್ಲಿವೆ ಸೀಕ್ರೆಟ್ ಟಿಪ್ಸ್! -
ಬಿಸಿಗಾಳಿಯ ಆರ್ಭಟ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ರೆಡ್ ಅಲರ್ಟ್: ಆಯುಷ್ ಸಚಿವಾಲಯದ ಈ ಸಿಂಪಲ್ ಟಿಪ್ಸ್ ಪಾಲಿಸಿದರೆ ಸಾಕು, ದೇಹ ತಂಪಾಗಿರುತ್ತೆ! -
ಬಿಸಿಲಿನ ಬೇಗೆಯಿಂದ ತತ್ತರಿಸಿದ ಕರ್ನಾಟಕ: ಮನೆಯಲ್ಲೇ ತಂಪಾಗಿರಲು ನೀವು ಮಾಡಬೇಕಾದ ಆ 5 ಬದಲಾವಣೆಗಳೇನು? -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
45 ಡಿಗ್ರಿ ಬಿಸಿಲಲ್ಲಿ ಮದುವೆ ಪ್ಲಾನ್ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ ಎಚ್ಚರಿಕೆ ಮರೆಯದಿರಿ!
ಕೊಡವ ಸೀರೆ ಧರಿಸಿರುವಿರಾ? ಕೊಡಗಿನ ಹೆಣ್ಮಕ್ಕಳು ಈ ರೀತಿ ಭಿನ್ನವಾಗಿ ಸೀರೆ ಧರಿಸುವುದರ ಹಿಂದಿದೆ ಈ ಆಸಕ್ತಿಕರ ಸಂಗತಿಗಳು
ಕೊಡಗಿನ ಜನರು ಆಚಾರ-ವಿಚಾರ, ವೇಷ-ಭೂಷಣ ಎಲ್ಲವೂ ಭಿನ್ನ, ಕೊಡಗಿಗೆ ಬರುವಾಗ ಪ್ರವಾಸಿಗರ ಗಮನ ಸೆಳೆಯುವುದು ಅಲ್ಲಿಯ ಮಹಿಳೆಯರು ಸೀರೆ ಧರಿಸುವ ರೀತಿ, ಅರೆ ಸೀರೆ ಎಷ್ಟೊಂದು ಚೆನ್ನಾಗಿ ಹುಟ್ಟಿದ್ದಾರೆ, ನನಗೂ ಒಮ್ಮೆ ಈ ರೀತಿ ಉಡಿಸಿ ಕೊಡ್ತೀರಾ ಅನೇಕ ಪ್ರವಾಸಿಗರು ಇಲ್ಲಿನ ಮಹಿಳೆಯರಲ್ಲಿ ಕೇಳಿ ಉಟ್ಟು ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಾರೆ. ಕೊಡವತಿಯರು ಸಾಮಾನ್ಯವಾಗಿ ಈ ಬಗೆಯ ಸೀರೆಯನ್ನು ಉಡುತ್ತಾರೆ.
ಮದುವೆ, ಹಬ್ಬ ಮುಂತಾದ ವಿಶೇಷ ಸಂದರ್ಭದಲ್ಲಿ ಪುರುಷರು ಕುಪ್ಪಸ ಧರಿಸುತ್ತಾರೆ. ಕೊಡಗಿನ ಕೊಡವತಿಯರು ಧರಿಸುವ ಸೀರೆ ಪ್ರಮುಖವಾಗಿ ಗಮನ ಸೆಳೆಯುತ್ತಿದೆ, ಕಾರಣ ಈ ಸೀರೆ ಉಟ್ಟೊರುವ ರೀತಿ. ಸಾಮಾನ್ಯವಾಗಿ ಸೀರೆಯ ನೆರಿಗೆ ಮುಂದೆ ಇರುತ್ತದೆ, ಆದರೆ ಈ ಸೀರೆಯನ್ನು ನೆರಿಗೆ ಹಿಂದುಗಡೆ ಬರುವಂತೆ ಉಡಲಾಗಿರುತ್ತದೆ.

ಕೊಡವತಿಯರು ಸೀರೆ ಉಡುವ ರೀತಿಗೂ ಕಾವೇರಮ್ಮನಿಗೂ ಸಂಬಂಧವಿದೆ
ಕೊಡಗಿನವರಿಗೆ ಕಾವೇರಿ ನದಿ ಬರಿ ಜೀವನದಿ ಮಾತ್ರವಲ್ಲ ಅವರ ಆರಾಧ್ಯ ದೇವರು. ಪ್ರತಿಯೊಂದು ದಿನವೂ ಕಾವೇರಮ್ಮನಿಗೆ ಪೂಜೆ ಸಲ್ಲಿಸಿದ ಬಳಿಕವಷ್ಟೇ ಶುಭ ಕಾರ್ಯಗಳನ್ನು ಮಾಡುತ್ತಾರೆ. ಕೊಡಗಿನ ಭಾಗಮಂಡಲದಲ್ಲಿ ಕಾವೇರಿಯ ಉಗಮ ಸ್ಥಾನವಿದೆ. ಕಾವೇರಿ ತನ್ನ ಪತಿಯಾದ ಅಗಸ್ತ್ಯಯ ಮೇಲೆ ಮುನಿಸಿಕೊಂಡು ರಭಸವಾಗಿ ಹರಿಯಲಾರಂಭಿಸುತ್ತಾಳೆ, ಮದುವೆಯಾಗುವಾಗಲೇ ಅಗಸ್ತ್ಯ ಋಷಿಗೆ ಕಾವೇರಿ ಒಂದು ಕಂಡೀಷನ್ ಹಾಕಿರುತ್ತಾಳೆ, ಅದೇನೆಂದರೆ ಯಾವುದೇ ಕಾರಣಕ್ಕೆ ಅಗಸ್ತ್ಯರು ಕಾವೇರಿಯನ್ನುಅರೆಕ್ಷಣವೂ ನಿರ್ಲಕ್ಷ್ಯ ಮಾಡಿದರು ಎಂದಾದರೆ ಬಿಟ್ಟು ಹೋಗುತ್ತೇನೆ ಎಂದು ಹೇಳಿರುತ್ತಾಳೆ. ಆದರೆ ಅದನ್ನು ಪಾಲಿಸುವುದು ಅಗಸ್ತ್ಯ ಮಹರ್ಷಿಗೆ ಕಷ್ಟವಾಗುವುದು, ಇದರಿಂದ ಕೋಪಗೊಂಡ ಕಾವೇರಿ ನದಿಯಾಗಿ ರಭಸವಾಗಿ ಹರಿಯಲಾರಂಭಿಸುತ್ತಾಳೆ. ಅವಳನ್ನು ತಡೆಯಲು ಮುನಿಗಳು ಪ್ರಯತ್ನಿಸುತ್ತಾರೆ, ಕೊಡಗಿನ ಮಹಿಳೆಯರು ಪ್ರಯತ್ನಿಸುತ್ತಾರೆ, ಆವಾಗ ಅವರ ಸೀರೆಯ ನೆರಿಗೆ ಹಿಂದೆ ಹೋಯ್ತು, ಅಲ್ಲಿಂದ ಅದೇ ರೀತಿ ಉಡುಗೆ ತೊಡಲಾರಂಭಿಸಿದರು ಎಂಬ ಕತೆಯಿದೆ.
ಹಿಂದೆ ನೆರಿಗೆ, ಸೆರಗು ಉದ್ದ ಬಿಡದೆ ಮುಂದೆಕ್ಕೆ ತಂದು ಉಡುವ ರೀತಿಯ ಭಿನ್ನ, ಆಕರ್ಷಕ
ಅವರ ಸೆರಗು ನೆರಿಗೆ ಹಿಡಿಯಲ್ಲ,ಅದನ್ನು ಹಿಂದಿನಿಂದ ಸುತ್ತಿ ಮುಂದೆ ತಂದು ಪಿನ್ ಮಾಡಲಾಗುವುದು. ಶಮಾನ್ಯವಾಗಿ ಹೀಗೆ ಪಿನ್ ಮಾಡಲು ಆಕರ್ಷಕ ವಿನ್ಯಾಸದ ಪಿನ್ ಬಳಸುತ್ತಾರೆ. ಚಿನ್ನ, ಬೆಳ್ಳಿ, ಮುತ್ತಿನ ಪಿನ್ ಕೂಡ ಬಳಸುತ್ತಾರೆ. ಫ್ಯಾಷನ್‌ಸೀರೆಯಾಗಿರಲಿ, ಸಾಂಪ್ರದಾಯಕ ಸೀರೆಯಾಗಿರಲಿ, ಎಲ್ಲಾ ಸೀರೆಯನ್ನು ಕೊಡವ ಸ್ಟೈಲ್‌ನಲ್ಲಿ ಧರಿಸಬಹುದು.
ಈ ಸೀರೆ ಆಕರ್ಷಕ ಹಾಗೂ ಗಾಂಭೀರ್ಯ ಲುಕ್ ನೀಡುತ್ತದೆ
ಕೊಡವ ಸೀರೆ ಧರಿಸಿ ಎಲ್ಲೇ ಹೋದರು ಅವರು ಸೀರೆ ಉಟ್ಟ ಸ್ಟೈಲ್‌ನಿಂದಲೇ ಇದು ಕೊಡವ ಸೀರೆ ಎಂದು ಗುರುತಿಸುತ್ತಾರೆ. ಅಲ್ಲದೆ ಕೊಡಗಿಗೆ ಸ್ನೇಹಿತೆಯ ಮದುವೆಗೆ ಬರುವ ಹೆಣ್ಮಕ್ಕಳು ಈ ಕೊಡವ ಸೀರೆ ಉಟ್ಟು ಸಂಭ್ರಮಿಸುತ್ತಾರೆ. ಸೀರೆ ಉಟ್ಟರೆ ನಡೆಯಲು ಬರಲ್ಲ ಎಂದು ತುಂಬಾ ಹೆಣ್ಮಕ್ಕಳು ಹೇಳ್ತಾರೆ. ಆದರೆಈ ಸೀರೆ ಧರಿಸಿದಾಗ ಗೌನ್ ಧರಿಸಿದ ಫೀಲ್ ಅಷ್ಟೇ, ಕಂಫರ್ಟ್ ಆಗಿ ನಡೆಯಬಹುದು.
ಮೈ ತುಂಬಾ ಮುಚ್ಚುವುದರಿಂದ ಬೆಚ್ಚಗೆಯ ಅನುಭವ ನೀಡುತ್ತದೆ
ಈ ಸೀರೆ ಇಲ್ಲಿಯ ವಾತಾವರಣಕ್ಕೆ ಸೂಕ್ತವಾಗಿ.ಕೊಡಗನ್ನು ಕರ್ನಾಟಕದ ಕಾಶ್ಮೀರ ಎಂದು ಕರೆಯಲಾಗುವುದು. ಇಲ್ಲಿ ಚಳಿ ಇರುತ್ತದೆ, ಈ ಸೀರೆಯನ್ನು ತುಂಬು ತೋಳಿನ ರವಿಕೆಯಲ್ಲಿ ಧರಿಸುತ್ತಿದ್ದರು, ಈಗ ಫ್ಯಾಷನ್ ಆಗಿ ಫ್ಯಾಷನಬಲ್ ಬ್ಲೌಸ್ ಬಳಸುತ್ತಾರೆ. ಈ ಸ್ತ್ರೀ ರಕ್ಷಣೆಯನ್ನು ನೀಡುತ್ತದೆ. ಈ ಸೀರೆ ಧರಿಸಿ ತೋಟಗಳಲ್ಲಿ ಆರಾಮವಾಗಿ ಕೆಲಸ ಕಾರ್ಯ ಮಾಡಬಹುದು.
ಮದುವೆಯಲ್ಲಿ ಕೆಂಪು ಸೀರೆ ಧರಿಸುತ್ತಾರೆ, ಇದನ್ನು ಪೊಡಿಯ ಎಂದು ಕರೆಯಲಾಗುವುದು. ಇನ್ನು ಅವರು ತಲೆಗೆ ಒಂದು ಬಟ್ಟೆ ಕಟ್ಟುತ್ತಾರೆ, ಅದನ್ನು ವಸ್ತ್ರ ಎಂದು ಕರೆಯಲಾಗುವುದು. ಸಮಾರಂಭಗಳಲ್ಲಿ ಆಕರ್ಷಕ ಉಡುಗೆ ತೊಡುವ ಭಾಗದವರು ಸಾವು ಮನೆಗೆ ಹೋಗುವಾಗ ಬಿಳಿ ಬಣ್ಣದ ಸೀರೆಯನ್ನು ಕೊಡವ ಸೀರೆಯಲ್ಲಿ ಧರಿಸಿ ಹೋಗುತ್ತಾರೆ.
ಗೌಡ ಸೀರೆಯನ್ನು ಹೀಗೆ ಉಡಾಗುವುದು, ಆದರೆ ನೆರಿಗೆ ಮುಂಭಾಗದಲ್ಲಿ ಇರುತ್ತದೆ
ಈ ಭಾಗದಲ್ಲಿ ಕೊಡವರು, ಗೌಡರು ಎಲ್ಲರೂ ಇದೇ ಬಗೆಯ ಸೀರೆ ಧರಿಸುತ್ತಾರೆ. ಆದರೆ ಗೌಡ ಸಮುದಾಯವರು ನೆರಿಗೆ ಮುಂಭಾಗದಲ್ಲಿ ಬರುವಂತೆ ಧರಿಸುತ್ತಾರೆ.
ಅವರು ಧರಿಸಿರುವ ಸೀರೆ ನೋಡಿ ಅವರು ಫಂಕ್ಷನ್‌ಗೆ ಹೋಗ್ತಾ ಇದ್ದಾರಾ, ಇಲ್ಲಾ ಸಾವು ಮನೆಗೆ ಹೋಗ್ತಾ ಇದ್ದಾರಾ ಎಂದು ತಿಳಿಯಬಹುದು
ಮಹಿಳೆಯರೆಲ್ಲಾ ಬಿಳಿ ಬಣ್ಣದ ಸೀರೆಯಲ್ಲಿ ಬರ್ತಾಇದ್ದಾರೆ ಎಂದು ಅವರು ಸಾವು ಮನೆಗೆ ಹೋಗ್ತಾ ಇದ್ದಾರೆ ಎಂಬುವುದು ನೋಡಿದಾಗ ತಿಳಿಯುತ್ತದೆ, ಅದೇ ಮದುವೆ ಮುಂತಾದ ಸಮಾರಂಭಗಳಿಗೆ ಹೋಗುವಾಗ ತಲೆಗೆ ವಸ್ತ್ರ ಹಾಕುತ್ತಾರೆ, ದಿನನಿತ್ಯದ ಕೆಲಸ ಮಾಡುವಾಗ ಸಿಂಪಲ್ ಸೀರೆ ಧರಿಸುತ್ತಾರೆ.
ಕೊಡಗಿನವರು ಮಾಡರ್ನ್ ಡ್ರೆಸ್ ತುಂಬಾ ಬಳಸುತ್ತಾರೆ, ಆದರೆ ಸಂಪ್ರದಾಯ ಮಾತ್ರ ಚಾಚೂ ತಪ್ಪದೆ ಪಾಲಿಸುತ್ತಾರೆ
ಕೊಡಗಿನ ಹೆಣ್ಮಕ್ಕಳು ಮಾಡರ್ನ್ ಡ್ರೆಸ್ ಕೂಡ ತುಂಬಾನೇ ಇಷ್ಟಪಡುತ್ತಾರೆ, ಆದರೆ ಸಾಂಪ್ರದಾಯ ಆಚರಣೆಯ ಸಮಯದಲ್ಲಿ ಸಾಂಪ್ರದಾಯಕ ಉಡುಗೆಯಲ್ಲಿಯೇ ಕಾಣಿಸಿಕೊಳ್ಳುತ್ತಾರೆ, ಅದು ಇಲ್ಲಿಯ ವಿಶೇಷ.



Click it and Unblock the Notifications