Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ಮದುಮಗಳಿಗೆ ಬ್ಯೂಟಿ ಟಿಪ್ಸ್: ಮದುವೆಗೆ 1 ವಾರ ಇರುವಾಗ ಈ ಟಿಪ್ಸ್ ಪಾಲಿಸಿ, ಮುಖದ ಕಾಂತಿ ಹೆಚ್ಚಿ ನಿಮ್ಮ ಸೌಂದರ್ಯ ಹೆಚ್ಚಿಸಿ
ಮದುವೆಗೆ ಇನ್ನೇನು ಒಂದು ವಾರವಷ್ಟೇ ಬಾಕಿಯಿದೆ, ಮನೆಯಲ್ಲಿ ಎಲ್ಲರೂ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿರುವಾಗ ಮದುಮಗಳಿಗೆ ತಾನು ಆ ದಿನ ಮತ್ತಷ್ಟು ಆಕರ್ಷಕವಾಗಿ ಕಾಣಲು ಬೇಕಾದ ಸಿದ್ಧತೆಯಲ್ಲಿ ತೊಡಗಿರುತ್ತಾಳೆ.
ಫೇಷಿಯಲ್ ಮಾಡಿಸಿಯಾಯಿತು, ಆದರೆ ಮುಖದಲ್ಲಿ ಒಂದೆರಡು ಮೊಡವೆ ಬಂದಿರುತ್ತದೆ, ಛೇ ಮದುವೆ ದಿನ ಚೆನ್ನಾಗಿ ಕಾಣಬೇಕೆಂದಿರುವಾಗ ಈ ರೀತಿ ಆಯ್ತಲ್ಲಾ ಎಂದು ಬೇಸರವಾಗುವುದು. ಮದುವೆಗೆ ಒಂದು ವಾರ ಇದೆಯೇ ಈ ರೀತಿ ಆರೈಕೆ ಮಾಡಿ ಮುಖದ ಕಾಂತಿ ಹೆಚ್ಚುವುದು.
ಮದುಮಗಳು ಮಾತ್ರವಲ್ಲ, ಈ ದಿನ ಅವಳ ಫ್ರೆಂಡ್ಸ್, ಕಸಿನ್ಸ್ ಅಷ್ಟೇ ಮಿಂಚುತ್ತಾರೆ, ನೀವು ಇನ್ನು ಒಂದು ವಾರದಲ್ಲಿ ಮದುವೆ ಫಂಕ್ಷನ್‌ಗೆ ಹೋಗುವುದಾದರೆ ಈ ಟಿಪ್ಸ್ ಅನುಸರಿಸಿ, ಮುಖದ ಕಾಂತಿ ಹೆಚ್ಚುವುದು.

1. ವಿಟಮಿನ್ ಸಿ ಸೆರಮ್ ಬಳಸಿ
ವಿಟಮಿನ್ ಸಿ ಸೆರಮ್ ಬಳಸುವುದರಿಂದ ಮುಖದ ಕಾಂತಿ ಹೆಚ್ಚುವುದು, ಅಲ್ಲದೆ ಮದುವೆ ಸಮಯದಲ್ಲಿ ಮೊಡವೆಯಂಥ ಸಮಸ್ಯೆ ತಡೆಗಟ್ಟಲು ಇದು ಸಹಕಾರಿ.
2. ಆರೋಗ್ಯಕರ ಆಹಾರ ಸೇವಿಸಿ
ನಿಮ್ಮ ಮುಖದಲ್ಲಿ ಕಾಂತಿ ಹೆಚ್ಚಬೇಕೆಂದರೆ ಹಣ್ಣು, ತರಕಾರಿಗಳನ್ನು ಸೇವಿಸಿ, ನೆನೆಹಾಕಿದ ಬಾದಾಮಿ, ಡ್ರೈ ಫ್ರೂಟ್ಸ್ ಇವೆಲ್ಲಾ ಮುಖದ ಕಾಂತಿ ಹೆಚ್ಚಿಸುತ್ತದೆ.
ಜಂಕ್ ತಿನ್ನಲೇಬೇಡಿ
ಈ ಸಮಯದಲ್ಲಿ ಜಂಕ್ ತಿನ್ನಬೇಡಿ, ಜಂಕ್ ಫುಡ್ಸ್ ನಿಮ್ಮ ಮುಖದ ಕಾಂತಿ ಕಡಿಮೆ ಮಾಡುವುದು ಅಲ್ಲದೆ ಮೊಡವೆಗೆ ಕಾರಣವಾಗುತ್ತದೆ.

3. ದಿನದಲ್ಲಿ 30 ನಿಮಿಷ ವ್ಯಾಯಾಮ ಮಾಡಿ
ವ್ಯಾಯಾಮ ಒಂದು ವಾರ ಇರುವಾಗ ಅಲ್ಲ ಅದಕ್ಕಿಂತ ಮುಂಚೆಯಿಂದಲೇ ಮಾಡಬೇಕು, ಇನ್ನು ಮದುವೆಗೆ ಒಂದು ವಾರ ಇದೆ ಅಷ್ಟೇ ಮಾಡದೆಯೂ ಇರಬೇಡಿ, ದಿನಾ 30 ನಿಮಿಷ ವ್ಯಾಯಾಮ ಮಾಡಿ. ಇದು ಫಿಟ್ನೆಸ್ ಕಾಪಾಡಲು ಜೊತೆಗೆ ಮುಖದ ಕಾಂತಿ ಹೆಚ್ಚಿಸಲು ಸಹಕಾರಿ.
4. ಸನ್‌ಸ್ಕ್ರೀನ್ ಬಳಸಿ
ಮದುವೆ ಎಂದಾಗ ಶಾಪಿಂಗ್ ಅಂತ ತುಂಬಾ ಓಡಾಟವಿರುತ್ತದೆ. ನೀವು ಮನೆಯಿಂದ ಹೊರಗಡೆ ಹೋಗುವಾಗ ಸನ್‌ಸ್ಕ್ರೀನ್ ಬಳಸಿ.
5. ವಾರದ ಮೊದಲೇ ಫೇಶಿಯಲ್ ಮಾಡಿಸಿ
ನೀವು ಮದುವೆಗೆ ಒಂದೆರಡು ಇರುವಾಗ ಫೇಶಿಯಲ್ ಮಾಡಿಸಬೇಡಿ, ಫೇಶಿಯಲ್ ಮಾಡಿ 3-4 ದಿನಬೇಕು ಗ್ಲೋ ಬರಲು, ಆದ್ದರಿಂದ ಒಂದು ವಾರಕ್ಕೆ ಮೊದಲೇ ಮಾಡಿಸಿ.

6. ಹೇರ್ ಸ್ಟೈಲ್ ಮೊದಲೇ ಟ್ರೈ ಮಾಡಿ
ಮದುವೆ ದಿನ ಯಾವ ಹೇರ್ ಸ್ಟೈಲ್ ಮಾಡಿಸಬೇಕೆಂದು ಬಯಸುತ್ತೀರೋ ಆ ಹೇರ್ ಸ್ಟೈಲ್ ಮೊದಲೇ ಒಮ್ಮೆ ಟ್ರೈ ಮಾಡಿ. ಏಕೆಂದರೆ ಕೆಲವೊಮ್ಮೆ ನೀವು ಬಯಸಿದ ಹೇರ್‌ಸ್ಟೈಲ್ ನಿಮಗೆ ಅಷ್ಟು ಸೂಟ್ ಆಗದೇ ಇರಬಹುದು. ಇನ್ನು ಮದುವೆ ವಾರದ ಮೊದಲೇ ಹೇರ್ ಕಟ್ ಕೂಡ ಮಾಡಿಸಿ, ಮದುವೆ 2-3 ದಿನ ಇರುವಾಗ ಹೇರ್ ಕಟ್‌ಮಾಡಿಸಲು ಹೋಗಬೇಡಿ.
7. ಮಾಯಿಶ್ಚರೈಸರ್ ಬಳಸಿ
ಮೈಗೆ ಮಾಯಿಶ್ಚರೈಸರ್ ಹಚ್ಚಿ, ಇದು ಮುಖದ ಕಾಂತಿ ಕಾಪಾಡಲು ಸಹಾಯ ಮಾಡುತ್ತದೆ. ನಿಮ್ಮ ತ್ವಚೆಗೆ ತಕ್ಕ ಮಾಯಿಶ್ಚರೈಸರ್ ಹಚ್ಚಿ. ದಿನಾ ಮಲಗುವ ಮುನ್ನ ಮಾಯಿಶ್ಚರೈಸರ್ ಬಳಸಿ.
8. ಬಾಡಿ ಮಸಾಜ್ ಮಾಡಿಸಿ
ಬಾಡಿ ಮಸಾಜ್ ನಿಮ್ಮ ತ್ವಚೆ ಕಾಂತಿ ಹೆಚ್ಚಿಸಲು ಸಹಾಯ ಮಾಡುತ್ತದೆ ಅಲ್ಲದೆ ಮಾನಸಿಕ ಒತ್ತಡ ಕೂಡ ಕಡಿಮೆ ಮಾಡುತ್ತದೆ. ಆಯುರ್ವೇದ ಮಸಾಜ್ ನಿಮ್ಮ ತ್ವಚೆ ಕಾಂತಿ ಹೆಚ್ಚಿಸುತ್ತದೆ.

9. ಮದುವೆ 2-3 ದಿನ ಇರುವಾಗ ತುಂಬಾ ಮೇಕಪ್ ಬಳಸಬೇಡಿ
ಮದುವೆಗೆ 2-3 ದಿನ ಅಥವಾ ಒಂದು ವಾರ ಇರುವಾಗ ಮಿನಿಮಮ್ ಮೇಕಪ್ ಮಾಡಿ, ತುಂಬಾ ಮೇಕಪ್ ಮಾಡಬೇಡಿ, ಎಲ್ಲರೂ ನಿಮ್ಮನ್ನು ಮಿನಿಮಮ್ ಮೇಕಪ್‌ನಲ್ಲಿ ನೋಡಿ, ಮದುವೆ ದಿನ ಮೇಕಪ್ ಹಾಕಿದಾಗಿ ತುಂಬಾನೇ ಆಕರ್ಷಕವಾಗಿ ಕಾಣುತ್ತಿದ್ದೀರಿ ಎಂದು ಅವರು ಹೊಗಳುತ್ತಾರೆ.
10. ಒಂದು ದಿನದ ಮೊದಲು ಮೆಹಂದಿ ಹಾಕಿ
ಮೆಹಂದಿಯನ್ನು ಮೊದಲೇ ಹಾಕಿಸಬೇಡಿ, ಒಂದು ದಿನದ ಮೊದಲು ಹಾಕಿಸಿ, ಆಗ ಮೆಹಂದಿ ಗಾಢವಾಗಿ ಆಕರ್ಷಕವಾಗಿ ಕಾಣುವುದು.
11. ಚೆನ್ನಾಗಿ ನಿದ್ದೆ ಮಾಡಿ
ಇನ್ನು ಮದುವೆ ಹತ್ರ ಬರುತ್ತಿರುವಾಗ ನಿದ್ದೆ ಮಾಡದೆ ಇರಬೇಡಿ, ಇದರಿಂದ ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ ಬೀಳುವುದು. ಚೆನ್ನಾಗಿ ನಿದ್ದೆ ಮಾಡಿ, ಇದು ನಿಮ್ಮ ಮುಖ ಕಾಂತಿ ಹೆಚ್ಚುವುದು.



Click it and Unblock the Notifications
