Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಬಾಳೆಹಣ್ಣಿನ ಸಿಪ್ಪೆ ಹೆಚ್ಚಿಸುತ್ತೆ ನಿಮ್ಮ ಸೌಂದರ್ಯ, ಹೇಗೆ ಬಳಸಬೇಕು?
ನಾವು ತ್ವಚೆ ಆರೈಕೆಗೆ ತುಂಬಾ ದುಬಾರಿ ಕ್ರೀಮ್, ಫೇಶಿಯಲ್ ಕೊಳ್ಳುತ್ತೇವೆ, ಪಾರ್ಲರ್‌ಗಳಿಗೆ ಹೋಗುತ್ತೇವೆ. ಆದರೆ ನಮ್ಮ ತ್ವಚೆ ಆರೈಕೆಗೆ ಸೂಪರ್ ಆದ ಸೌಂದರ್ಯವರ್ಧಕಗಳು ನಮ್ಮ ಹಿತ್ತಲಿನಲ್ಲೋ, ಅಡುಗೆ ಮನೆಯಲ್ಲೋ ಅಥವಾ ನಾವು ಬೇಡ ಅಂತ ಬಿಸಾಡುವ ವಸ್ತುಗಳಲ್ಲಿ ಇರುತ್ತದೆ. ಆದರೆ ಅದರ ಬಗ್ಗೆ ಹೆಚ್ಚಿನವರಿಗೆ ತಿಳಿದಿರುವುದೇ....
ನೀವು ಬಾಳೆಹಣ್ಣನ್ನು ಸೌಂದರ್ಯವರ್ಧನೆಗೆ ಬಳಸಿರಬಹುದು, ಆದರೆ ಅದರ ಸಿಪ್ಪೆಯನ್ನು ಬಳಸಿದ್ದೀರಾ? ಇಲ್ಲ ಅಂದ್ರೆ ಈ ಲೇಖನ ನಿಮಗಾಗಿ.
ಬಾಳೆಹಣ್ಣಿನ ಸಿಪ್ಪೆ ನಿಮ್ಮ ಮುಖದ ಹೊಳಪನ್ನು ಹೆಚ್ಚಿಸುವುದರ ಜೊತೆಗೆ ತ್ವಚೆಯನ್ನು ಮೃದುವಾಗಿಸುತ್ತೆ, ಒಳ್ಳೆಯ ನೈಸರ್ಗಿಕವಾದ ಸ್ಕ್ರಬ್ಬರ್ ಕೂಡ. ಇದರಲ್ಲಿ ವಿಟಮಿನ್ ಎ, ಸತು, ಸಿ, ಮ್ಯಾಂಗನೀಸ್ ಇರುವುದರಿಂದ ಸನ್‌ಟ್ಯಾನ್ ಆಗಿದ್ದರೆ ಅದನ್ನು ಹೋಗಲಾಡಿಸುತ್ತೆ.
ಬನ್ನಿ ಬಾಳೆಹಣ್ಣಿನ ಸಿಪ್ಪೆಯನ್ನು ಸೌಂದರ್ಯವರ್ಧನೆಗೆ ಬಳಸುವುದು ಹೇಗೆ ಎಂದು ತಿಳಿಯೋಣ:

1. ಬಾಳೆಹಣ್ಣಿನ ಸಿಪ್ಪೆಯಿಂದ ರಬ್ ಮಾಡುವುದು
ಬಾಳೆಹಣ್ಣಿನ ಸಿಪ್ಪೆ ಬಳಸುವ ಸರಳವಾದ ವಿಧಾನ ಇದಾಗಿದೆ. ಈ ರೀತಿ ವಾರದಲ್ಲಿ 3-4 ಬಾರಿ ಮಾಡಿದರೆ ನೆರಿಗೆ ತಡೆಗಟ್ಟಬಹುದು. ಇನ್ನು ನಿಮ್ಮದು ಒಣ ತ್ವಚೆಯಾಗಿದ್ದರೆ ತುಂಬಾನೇ ಒಳ್ಳೆಯದು. ಚಳಿಗಾಲದಲ್ಲಿ ತ್ವಚೆ ಒಡೆಯುವುದನ್ನು ತಡೆಗಟ್ಟಲು ಸಹಕಾರಿ.
ಬಾಳೆಹಣ್ಣಿನ ಸಿಪ್ಪೆಯನ್ನು ಮುಖಕ್ಕೆ ಉಜ್ಜುವ ಮೊದಲಿಗೆ ಮುಖವನ್ನು ತೊಳೆದು ನಂತರ ಉಜ್ಜಿ 10 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

2. ಬಾಳೆಹಣ್ಣಿನ ಸಿಪ್ಪೆಯ ಮಾಸ್ಕ್
* ಸಿಪ್ಪೆ ಸಹಿತ 1/2 ಬಾಳೆಹಣ್ಣನ್ನು ಚಿಕ್ಕದಾಗಿ ಕತ್ತರಿಸಿ ಮಿಕ್ಸಿಯಲ್ಲಿ ರುಬ್ಬಿ.
* ಇದಕ್ಕೆ 1 ಚಮಚ ಜೇನು ಅಥವಾ ಮೊಸರು ಸೇರಿಸಿ ಮಿಕ್ಸ್ ಮಾಡಿ.
* ನೀವು ರೋಸ್ ವಾಟರ್ ಬೇಕಿದ್ದರೆ ಸೇರಿಸಬಹುದು.
* ನಂತರ ಮುಖ, ಕುತ್ತಿಗೆ ಭಾಗಕ್ಕೆ ಹಚ್ಚಿ 15 ನಿಮಿಷ ಬಿಡಿ.
* ಬಳಿಕ ಹದ ಬಿಸಿ ನೀರಿನಿಂದ ಮುಖ ತೊಳೆಯಿರಿ.

3. ಬಾಳೆಹಣ್ಣಿನ ಸಿಪ್ಪೆಯ ಸ್ಕ್ರಬ್ಬರ್
* ಒಂದು ಬೌಲ್‌ನಲ್ಲಿ ಬಾಳೆಹಣ್ಣಿನ ಸಿಪ್ಪೆಯನ್ನು ಚಿಕ್ಕದಾಗಿ ಕತ್ತರಿಸಿ ಹಾಕಿ.
* ಈಗ 1 ಚಮಚ ಸಕ್ಕರೆ ಹಾಗೂ 1 ಚಮಚ ಅರಿಶಿಣ ಪುಡಿ ಸೇರಿಸಿ.
* ಈಗ ಈ ಪೇಸ್ಟ್‌ನಿಂದ ಮುಖವನ್ನು 5 ನಿಮಿಷ ಸ್ಕ್ರಬ್ ಮಾಡಿ.
* ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
ಈ ರೀತಿ ವಾರದಲ್ಲಿ 3-4 ಬಾರಿ ಬಳಸುವುದು ಒಳ್ಳೆಯದು.

4. ಕಣ್ಣಿನ ಕೆಳಗಡೆ ಕಪ್ಪು ಕಲೆ ಹೋಗಲಾಡಿಸಲು
ಕಣ್ಣಿನ ಕೆಲಗಡೆ ಕಪ್ಪು ಕಲೆ ಬಿದ್ದಿದ್ದರೆ ನೀವು ರಿಲ್ಯಾಕ್ಸ್ ಆಗಿ ಕೂತಾಗ ಬಾಳೆಹಣ್ಣಿನ ಸಿಪ್ಪೆಯನ್ನು ಕಣ್ಣಿನ ಮೇಲೆ ಇಟ್ಟು ವಿಶ್ರಮಿಸಿ. ಇಲ್ಲದಿದ್ದರೆ ಅದನ್ನು ಅರಿದು ಕಣ್ಣಿನ ಕೆಳಭಾಗ ಕ್ರೀಮ್ ರೀತಿ ಹಚ್ಚಿ 15 ನಿಮಿಷ ಬಿಟ್ಟು ತೊಳೆಯಿರಿ. ಹೀಗೆ ಪ್ರತಿದಿನ ಮಾಡಿದರೆ ಕಪ್ಪು ಕಲೆ ಮಾಯವಾಗುವುದು.



Click it and Unblock the Notifications
