Latest Updates
-
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ!
ಬೇಸಿಗೆಯಲ್ಲಿ ಪಿಗ್ಮೆಂಟೇಷನ್ ಹೆಚ್ಚಾಗುವುದನ್ನು ತಡೆಗಟ್ಟುವುದು ಹೇಗೆ?
ಸ್ಕಿನ್ ಪಿಗ್ಮೆಂಟೇಷನ್ ಯಾರಿಗೆ ಬೇಕಾದರೂ ಬರಬಹುದು. ಸ್ಕಿನ್ ಪಿಗ್ಮೆಂಟೇಷನ್ ಬಂದರೆ ಮುಖದಲ್ಲಿ ಕಂದು ಅಥವಾ ಕಪ್ಪು ಚುಕ್ಕಿ ಬಿದ್ದು ಕಲೆ ಹೈಲೈಟ್ ಆಗುವುದು. ಅದರಲ್ಲೂ ಈ ಸಮಸ್ಯೆ ಇದ್ದರೆ ಬೇಸಿಗೆಯಲ್ಲಿ ಮತ್ತಷ್ಟು ಹೆಚ್ಚಾಗುವುದು. ಬೇಸಿಗೆಯಲ್ಲಿ ಮೆಲಾನಿನ್ ಉತ್ಪತ್ತಿ ಹೆಚ್ಚಾಗುತ್ತೆ, ಇದರಿಂದ ಮುಖದಲ್ಲಿ ಕಪ್ಪು ಕಲೆ ಎದ್ದು ಕಾಣುವುದು.
ಸ್ಕಿನ್ ಪಿಗ್ಮೆಂಟೇಷನ್ ಪುರುಷರು ಹಾಗೂ ಮಹಿಳೆಯರಲ್ಲಿ ಕಂಡು ಬರುತ್ತದೆ, ಆದರೆ ಮಹಿಳೆಯರಲ್ಲಿ ಮುಖದಲ್ಲಿ ಕಲೆ ಬೇಗನೆ ಹೈಲೈಟ್ ಆಗುತ್ತೆ, ಪುರುಷರು ಗಡ್ಡ ಬಿಟ್ಟಿದ್ದರೆ ಅಷ್ಟು ಗೊತ್ತಾಗುವುದಿಲ್ಲ, ಅದೇ ಕ್ಲೀನ್ ಶೇವ್ ಮಾಡಿದರೆ ಗೊತ್ತಾಗುತ್ತೆ.
ಬೇಸಿಗೆಯಲ್ಲಿ ಪಿಗ್ಮೆಂಟೇಷನ್ ಸಮಸ್ಯೆ ಕಡಿಮೆ ಮಾಡಲು ಈ ರೀತಿ ತ್ವಚೆಯ ಆರೈಕೆ ಮಾಡಿ:

ಮೊದಲು ನಿಮ್ಮ ಸ್ಕಿನ್ ಟೈಪ್‌ನ ಗಮನ ನೀಡಿ
ನಿಮ್ಮದು ಮೊಡವೆ ತ್ವಚೆಯಾಗಿದ್ದರೆ ನೀವು ಚಿಕಿತ್ಸೆ ಪಡೆಯುವುದು ಒಳ್ಳೆಯದು,ನಿಮ್ಮದು ತುಂಬಾ ಸೆನ್ಸಿಟಿವ್ ತ್ವಚೆಯಾಗಿದ್ದರೆ ನೀವು ತುಸು ಹೆಚ್ಚಿನ ಗಮನ ನೀಡಬೇಕಾಗುತ್ತೆ.

SPF ತುಂಬಾ ಅವಶ್ಯಕ
ನೀವು ಪಿಗ್ಮೆಂಟೇಷನ್ ತಡೆಗಟ್ಟಲು ಬಿಸಿಲಿಗೆ ಹೋಗುವ ಮುನ್ನ ಸನ್‌ಸ್ಕ್ರೀನ್ ಲೋಷನ್ ಹಚ್ಚಿ. ನೀವು SPF 15 ಅಥವಾ 30 ಇರುವುದನ್ನು ಬಳಸಿ. ಇದನ್ನು ಪ್ರತಿ ಗಂಟೆಗೊಮ್ಮೆ ಹಚ್ಚಿ. ಇದರಿಂದ ಕಲೆ ಹೆಚ್ಚಾಗುವುದನ್ನು ತಡೆಗಟ್ಟಬೇಕು. ಅಲ್ಲದೆ ಇರುವ ಪಿಗ್ಮೆಂಟೇಷನ್ ಕಲೆ ತೆಳುವಾಗುವುದು.

ಮುಖವನ್ನು ಚಿವುಟಬೇಡಿ
ಮೊಡವೆ, ಬ್ಲ್ಯಾಕ್‌ಹೆಡ್ಸ್ ಏನೇ ಇರಲಿ ಮುಖವನ್ನು ಚಿವುಟಬೇಡಿ. ನಿಮ್ಮ ಉಗುರನ್ನು ಮುಖಕ್ಕೆ ತಾಗಿಸಬೇಡಿ. ಇದರಿಂದ ಕಲೆ ಹೆಚ್ಚುವುದು. ಬದಲಿಗೆ ಮುಖವನ್ನು ಕ್ಲೀನ್ ಅಪ್ ಮಾಡಿಸಿ.

ಆ್ಯಂಟಿಆಕ್ಸಿಡೆಂಟ್ ಅಧಿಕವಿರುವ ಸ್ಕಿನ್‌ಕೇರ್ ಪ್ರಾಡೆಕ್ಟ್ ಬಳಸಿ
ನೀವು ಬಳಸುವ ಕ್ರೀಮ್‌ನಲ್ಲಿ ವಿಟಮಿನ್ ಸಿ ಸೆರಮ್ ಇರಬೇಕು. ಇದು ಮುಖದ ತ್ವಚೆಯನ್ನು ರಕ್ಷಣೆ ಮಾಡುತ್ತೆ, ನೀವು ವಿಟಮಿನ್ ಎ, ಸಿ ಮತ್ತು ಇ ಇರುವ ಕ್ರೀಮ್ ಬಳಸಿ. ಇಂಥ ಕ್ರೀಮ್ ಪಿಗ್ಮೆಂಟೇಷನ್ ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತೆ.

ಪ್ರತಿದಿನ ತ್ವಚೆಯನ್ನು ಎಕ್ಸ್‌ಫೋಲೆಟ್ ಮಾಡಿ
ಡಾರ್ಕ್ ಮಾರ್ಕ್ಸ್ ಕಡಿಮೆ ಮಾಡಲು ಪ್ರತಿದಿನ ಮುಖವನ್ನು ಎಕ್ಸ್‌ಫೋಲೆಟ್ ಮಾಡಿ. ಎಕ್ಸ್‌ಫೋಲೆಟ್ ಮಾಡಿ ಡೆಡ್ ಸ್ಕಿನ್ ತೆಗೆದಾಗ ಮುಖದ ಆರೋಗ್ಯ ಹೆಚ್ಚುವುದು, ಕಲೆ ತೆಳುವಾಗುತ್ತಾ ಬರುವುದು. ಅಲ್ಲದೆ ಎಕ್ಸ್‌ಫೋಲೆಟ್ ಮಾಡಿದಾಗ ತ್ವಚೆ ತುಂಬಾ ಸೂಕ್ಷ್ಮವಾಗುತ್ತೆ, ಆದ್ದರಿಂದ ಬಿಸಿಲಿಗೆ ಹೋಗುವಾಗ ಸನ್‌ಸ್ಕ್ರೀನ್ ಲೋಷನ್ ಬಳಸಿ. ಮುಖಕ್ಕೆ ಬಿಸಿಲು ಬೀಳದಂತೆ ಕೊಡೆ ಹಿಡಿಯಿರಿ ಅಥವಾ ಬಟ್ಟೆಯಿಂದ ಕವರ್ ಮಾಡಿ.

ಪ್ರೊಫೆಷನಲ್ ಟ್ರೀಟ್ಮೆಂಟ್ ಪಡೆಯಿರಿ
ಪಿಗ್ಮೆಂಟೇಷನ್ ಚಿಕಿತ್ಸೆ ಕಡಿಮೆಯಾಗಲು ಚರ್ಮರೋಗ ತಜ್ಞರನ್ನು ಭೇಟಿಯಾಗಿ ಅವರಿಂದ ಸಲಹೆ ಪಡೆಯಿರಿ. ಡೆರ್ಮಾ ವೈಟ್ ಸ್ಕಿನ್ ಕೇರ್ ಟ್ರೀಟ್ಮೆಂಟ್ ನಿಮಗೆ ಕಲೆಯನ್ನು ಸಂಪೂರ್ಣವಾಗಿ ಹೋಗಲಾಡಿಸಲು ಸಹಕಾರಿಯಾಗಿದೆ.



Click it and Unblock the Notifications
