Latest Updates
-
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ?
ಕಣ್ಣಿನ ಕೆಳಭಾಗದಲ್ಲಿ ಗೋಚರಿಸುವ ಉಬ್ಬುವಿಕೆ ತಡೆಯಲು ಸಲಹೆಗಳು
ಪ್ರತಿಯೊಬ್ಬರಿಗೂ ಕಣ್ಣು ಎನ್ನುವುದು ಅತ್ಯಂತ ಆಕರ್ಷಣೀಯ ಹಾಗೂ ಅಗತ್ಯವಾದ ಅಂಗ. ಮುಖದ ಸೌಂದರ್ಯವು ಕಣ್ಣುಗಳಿಂದ ಕೂಡಿರುತ್ತದೆ. ಬಣ್ಣ ಬಣ್ಣದ ಲೋಕವನ್ನು ನೋಡಿ ಆನಂದಿಸಲು ಸಹಾಯ ಮಾಡುವ ಅಂಗ ಕಣ್ಣು. ನಮ್ಮ ದೇಹಕ್ಕೆ ಆಯಾಸವಾದರೆ, ಭಾವನೆಗಳಲ್ಲಿ ಸಂತೋಷದ ಹೊನಲಿದ್ದರೆ, ಬೇಸರದ ಅಳಲಿದ್ದರೆ ಎಲ್ಲವೂ ಕಣ್ಣಿನ ಮೂಲಕವೇ ಪ್ರತಿಬಿಂಬಿತವಾಗುತ್ತವೆ. ಹಾಗಾಗಿ ನಮ್ಮ ಭಾವನೆಗಳಿಗೆ ಮತ್ತು ಆರೋಗ್ಯಕ್ಕೆ ಕಣ್ಣುಗಳೇ ಕನ್ನಡಿಯಾಗಿರುತ್ತವೆ.
ನಮ್ಮ ದೇಹದಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆಗಳು ಕಣ್ಣಿನ ಸುತ್ತಲೂ ಇರುವ ತ್ವಚೆಯ ವಿನ್ಯಾಸದಲ್ಲಿ ವ್ಯಕ್ತವಾಗುತ್ತವೆ. ನಿಮ್ಮ ಕಣ್ಣಿನ ಸುತ್ತಲೂ ಕಪ್ಪು ರೇಖೆಗಳು ಆವೃತವಾಗಿವೆ, ಚರ್ಮವು ಊದಿಕೊಂಡಂತಿದೆ ಅಥವಾ ಕೆಂಪು ಬಣ್ಣದಿಂದ ನೋವಿನ ಅನುಭವ ನೀಡುತ್ತಿದೆ ಎಂದರೆ ಅದು ನಿಮ್ಮ ದೇಹದಲ್ಲಾದ ಆಯಾಸ ಹಾಗೂ ಕೆಲವು ಪೋಷಕಾಂಶಗಳ ಕೊರತೆಯ ಪರಿಣಾಮ ಎಂದು ಪರಿಗಣಿಸಬಹುದು.

ನಿತ್ಯದ ಧೂಳು, ಮಾಲಿನ್ಯ, ಹೊಗೆ, ಸೂರ್ಯನ ಅತಿಯಾದ ಕಿರಣ, ರಾಸಾಯನಿಕ ವಸ್ತುಗಳಿಂದ ಕೂಡಿರುವ ಸೌಂದರ್ಯ ವರ್ಧಕ ಉತ್ಪನ್ನಗಳು ನಮ್ಮ ಚರ್ಮ ಹಾಗೂ ಕಣ್ಣಿನ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಈ ರೀತಿಯ ಅನುಚಿತ ತೊಡಕುಗಳು ಕಣ್ಣಿನ ಸುತ್ತಲು ಉಬ್ಬುವುದು ಹಾಗೂ ಸುಕ್ಕುಗಟ್ಟಿದಂತೆ ಆಗುವುದು, ಕಪ್ಪು ಕಲೆಯಿಂದ ಆವೃತವಾಗಿರುವಂತೆ ತೋರುತ್ತವೆ. ಅಂತಹ ಸಮಸ್ಯೆಗಳಿಂದ ನೀವು ಬಳಲುತ್ತಿದ್ದೀರಿ ಎಂದಾದರೆ ಈ ಕೆಳಗಿನ ಮನೆ ಆರೈಕೆಯನ್ನು ಪ್ರಯತ್ನಿಸಿ.

1. ಆಲೂಗಡ್ಡೆಯನ್ನು ಬಳಸಿ
- ಒಂದು ಶುಚಿಯಾದ ಆಲೂಗಡ್ಡೆಯನ್ನು ಸ್ಲೈಸ್ ರೀತಿಯಲ್ಲಿ ಕತ್ತರಿಸಿಕೊಳ್ಳಿ.
- ನಂತರ ಅವುಗಳನ್ನು 2-5 ನಿಮಿಷಗಳ ಕಾಲ ಪ್ರಿಜ್ ನಲ್ಲಿ ಇಟ್ಟು ತಣ್ಣಗಾಗಿಸಿಕೊಳ್ಳಿ.
- ನಂತರ ಎರಡು ಸ್ಲೈಸ್ ಗಳನ್ನು ಕಣ್ಣಗಳ ಮೇಲೆ ಇಟ್ಟುಕೊಳ್ಳಿ.
- ಉಳಿದ ಸ್ಲೈಸ್ ಗಳನ್ನು ಚರ್ಮದ ಮೇಲೆ ವೃತ್ತಾಕಾರದಲ್ಲಿ ಮಸಾಜ್ ಮಾಡಿ.
- 15-20 ನಿಮಿಷಗಳ ಕಾಲ ಕಣ್ಣುಗಳ ಮೇಲೆ ವಿಶ್ರಮಿಸಲು ಬಿಡಿ.
- ಆಗ ಕಣ್ಣಿನ ಕೆಳಗೆ ಉಂಟಾದ ಉಬ್ಬುಗಳು ಮತ್ತು ಕಲೆಗಳು ಕಡಿಮೆಯಾಗುತ್ತವೆ.

2. ಹಾಲಿನ ಆರೈಕೆ
ತಣ್ಣನೆಯ ಹಾಲು ಕಣ್ಣುಗಳ ಆರೋಗ್ಯ ಹಾಗೂ ತ್ವಚೆಯನ್ನು ಸಂರಕ್ಷಿಸುತ್ತವೆ.
- ಸ್ವಲ್ಪ ಹಾಲನ್ನು ತಣ್ಣಗಾಗಿಸಿ ಕೊಳ್ಳಿ.
- ಒಂದು ಹತ್ತಿಯ ಚಂಡನ್ನು ಹಾಲಿನಲ್ಲಿ ಅದ್ದಿ, ನಂತರ ಕಣ್ಣಿನ ರೆಪ್ಪೆಯ ಮೇಲೆ ಇರಸಿಕೊಳ್ಳಿ.
- 20-30 ನಿಮಿಷಗಳ ಕಾಲ ವಿಶ್ರಮಿಸಲು ಬಿಡಿ.
- ನಂತರ ಸ್ವಚ್ಛ ನೀರಿನಲ್ಲಿ ತೊಳೆಯಿರಿ.
- ಹೀಗೆ ಮಾಡುವುದರಿಂದ ಕಣ್ಣಿಗೆ ತಂಪಾದ ಅನುಭವ ನೀಡುವುದರ ಮೂಲಕ ಉತ್ತಮ ಆರೈಕೆ ಮಾಡುವುದು.

3. ಎಣ್ಣೆಯ ಆರೈಕೆ
- ಒಂದು ಬೌಲ್ ಅಲ್ಲಿ ಸ್ವಲ್ಪ ನೀರನ್ನು ತೆಗೆದುಕೊಳ್ಳಿ.
- ಅದರಲ್ಲಿ ಸ್ವಲ್ಪ ವಿಟಮಿನ್ ಇ ಎಣ್ಣೆಯನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.
- ಒಂದು ಹತ್ತಿಯ ಉಂಡೆಯನ್ನು ಅದ್ದಿ, ರೆಪ್ಪೆಯ ಮೇಲೆ ಇಡಿ.
- 15-20 ನಿಮಿಷಗಳ ಕಾಲ ವಿಶ್ರಮಿಸಲು ಬಿಡಿ.
- ಹೀಗೆ ಮಾಡುವುದರಿಂದ ಕಣ್ಣಿನಲ್ಲಿ ಉರಿ ಮತ್ತು ಸೆಳೆತ ಕಡಿಮೆ ಆಗುವುದು.

4. ಸೌತೆಕಾಯಿ ಆರೈಕೆ
ಸೌತೆಕಾಯಿ ಚರ್ಮ ಹಾಗೂ ಕಣ್ಣಿನ ಆರೈಕೆಯನ್ನು ಮಾಡುವ ಅದ್ಭುತವಾದ ನೈಸರ್ಗಿಕ ಉತ್ಪನ್ನ.
- ತಾಜಾ ಸೌತೆ ಕಾಯನ್ನು ಸ್ಲೈಸ್ ಆಗಿ ಕತ್ತರಿಸಿಕೊಳ್ಳಿ.
- ಅವುಗಳನ್ನು ಎರಡು ಕಣ್ಣುಗಳ ಮೇಲೆ ಇಟ್ಟುಕೊಳ್ಳಿ.
- 20-25 ನಿಮಿಷಗಳ ಜಾಲ ವಿಶ್ರಮಿಸಲು ಬಿಡಿ.
- ಸೌತೆಕಾಯನ್ನು ಕಣ್ಣಿನ ಮೇಲೆ ಇರಿಸಿಕೊಂಡು ಸಣ್ಣ ನಿದ್ರೆ ಮಾಡಬಹುದು.
- ಇದು ಮನಸ್ಸಿಗೆ ಹಾಗೂ ಕಣ್ಣಿಗೆ ತಾಜಾತನದ ಅನುಭವವನ್ನು ನೀಡುವುದು.
- ಗಣನೀಯವಾಗಿ ಈ ಕ್ರಮವನ್ನು ಅನುಸರಿಸುವುದರಿಂದ ಕಣ್ಣಿನ ಕೆಳಭಾಗದಲ್ಲಿ ಉಬ್ಬುವುದನ್ನು ತಡೆಯಬಹುದು.

5. ಶೈತ್ಯೀಕರಿಸಿದ ಚಹಾ ಚೀಲಗಳು
ಕಡಿಮೆ ಸಮಯದಲ್ಲಿ ಉತ್ತಮ ಆರೈಕೆ ಪಡೆಯಲು ನೀವು ಶೈತ್ಯೀಕರಿಸಿದ ಚಹಾ ಚೀಲಗಳ ಆರೈಕೆ ಮಾಡಬಹುದು.
- ಎರಡು ಚಹಾ ಚೀಲವನ್ನು ನೀರಿನಲ್ಲಿ ತೇವಗೊಳಿಸಿ, ಫ್ರಿಜ್ ನಲ್ಲಿ ಇಡಿ.
- ತಣ್ಣಗಾದ ನಂತರ ಚಹಾ ಚೀಲವನ್ನು ಎರಡು ಕಣ್ಣುಗಳ ಮೇಲೆ ಇರಿಸಿ.
- 25-30 ನಿಮಿಷಗಳ ಕಾಲ ವಿಶ್ರಮಿಸಲು ಬಿಡಿ.
- ನಂತರ ತಣ್ಣೀರಿನಿಂದ ಮುಖವನ್ನು ತೊಳೆಯಿರಿ.
- ಈ ಕ್ರಮ ಅನುಸರಿಸುವುದರಿಂದ ಕಣ್ಣುಗಳ ಆರೋಗ್ಯ ಹಾಗೂ ಕಣ್ಣಿನ ಕೆಳಗೆ ಕಾಣಿಸುವ ಕಪ್ಪು ಕಲೆಯನ್ನು ನಿಯಂತ್ರಿಸಬಹುದು.

6. ಐಸ್ ನೀರು ಮತ್ತು ಚಮಚ
ಇದೊಂದು ಸುಲಭ ಹಾಗೂ ಸರಳವಾದ ವಿಧಾನ.
- ಒಂದು ಗ್ಲಾಸ್ ನೀರನ್ನು ಫ್ರಿಜ್ ನಲ್ಲಿ ಇಟ್ಟು ತಣ್ಣಗಾಗಿಸಿಕೊಳ್ಳಿ.
- ನಂತರ ಅದರಲ್ಲಿ ಚಮಚವನ್ನು ಇರಿಸಿ, ತಣ್ಣಗಾಗಿಸಿಕೊಳ್ಳಿ.
- ತಣ್ಣಗಾದ ಚಮಚವನ್ನು ಕಣ್ಣಿನ ಮೇಲೆ ಇರಿಸಿ.
- ಹೀಗೆ ಚಮಚದ ತಂಪಿನ ಅಂಶ ಕಡಿಮೆ ಆದಹಾಗೆ ಪುನಃ ಪುನಃ ನೀರಿನಲ್ಲಿ ಅದ್ದಿಕೊಳ್ಳಿ.
- ಬಹುಬೇಗ ಆರೈಕೆಯನ್ನು ಪಡೆಯಬಹುದು.

7. ಮೊಟ್ಟೆಯ ಬಿಳಿ ಭಾಗ
- ಮೊಟ್ಟೆಯ ಬಿಳಿ ಭಾಗವನ್ನು ಪ್ರತ್ಯೇಕಿಸಿಕೊಳ್ಳಿ.
- ನಂತರ ಒಂದು ಮೃದುವಾದ ಬ್ರಶ್ ಅಥವಾ ಹತ್ತಿ ಚಂಡಿನಲ್ಲಿ ಅದನ್ನು ಕಣ್ಣಿನ ಸುತ್ತಲೂ ಅನ್ವಯಿಸಿ.
- 15-20 ನಿಮಿಷಗಳ ಕಾಲ ಆರಲು ಬಿಡಿ.
- ನಂತರ ತಣ್ಣನೆಯ ನೀರಿನಲ್ಲಿ ಸ್ವಚ್ಛಗೊಳಿಸಿ.
- ಉತ್ತಮ ಫಲಿತಾಂಶಕ್ಕೆ ಈ ಕ್ರಮವನ್ನು ಗಣನೀಯವಾಗಿ ಅನುಸರಿಸಬಹುದು.

8. ಗ್ರೀನ್ ಟೀ ಬ್ಯಾಗ್
- ಎರಡು ಗ್ರೀನ್ ಟೀ ಚೀಲವನ್ನು ನೀರಿನಲ್ಲಿ ತೇವಗೊಳಿಸಿ, ಫ್ರಿಜ್ ನಲ್ಲಿ ಇಡಿ.
- ತಣ್ಣಗಾದ ನಂತರ ಚಹಾ ಚೀಲವನ್ನು ಎರಡು ಕಣ್ಣುಗಳ ಮೇಲೆ ಇರಿಸಿ.
- 25-30 ನಿಮಿಷಗಳ ಕಾಲ ವಿಶ್ರಮಿಸಲು ಬಿಡಿ.
- ನಂತರ ತಣ್ಣೀರಿನಿಂದ ಮುಖವನ್ನು ತೊಳೆಯಿರಿ.
- ಈ ಕ್ರಮವನ್ನು ಅನುಸರಿಸುವುದರಿಂದ ನಿಮ್ಮ ಕಣ್ಣಿಗೆ ಹಾಗೂ ಮನಸ್ಸಿಗೆ ತಾಜಾತನದ ಅನುಭವ ದೊರೆಯುವುದು.

9. ಹೆಚ್ಚು ನೀರನ್ನು ಕುಡಿಯಿರಿ
ಹೆಚ್ಚು ನೀರನ್ನು ಕುಡಿಯುವುದರಿಂದ ನೀವು ನಿಮ್ಮ ದೇಹದ ಆರೋಗ್ಯ ಹಾಗೂ ಕಣ್ಣುಗಳ ಆರೈಕೆಯನ್ನು ಮಾಡಬಹುದು. ದೇಹಕ್ಕೆ ಅಗತ್ಯವಾದಷ್ಟು ನೀರನ್ನು ಸೇವಿಸಿ. ಆಗ ಕಣ್ಣಿನ ಸುತ್ತಲ ಆರೋಗ್ಯ ಹಾಗೂ ಚರ್ಮದಲ್ಲಿ ನೀರಿನಂಶವು ಅದ್ಭುತವಾಗಿ ಇರುತ್ತವೆ. ಚರ್ಮದಲ್ಲಿ ತೇವಾಂಶವನ್ನು ಹೊಂದುವುದರಿಂದ ಅನೇಕ ಬಗೆಯ ಸಮಸ್ಯೆಗಳನ್ನು ದೂರ ಇಡಬಹುದು.



Click it and Unblock the Notifications