Latest Updates
-
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ!
ಮದುವೆ ಸೆಟ್ ಆಗಿದೆಯೇ? ಮದುಮಗಳ ಅಂದ ಹೆಚ್ಚಿಸುತ್ತೆಈ 5 ಸಪ್ಲಿಮೆಂಟ್ಸ್
ಮದುವೆ ಸೆಟ್ ಆಗಿ ಮದುವೆಗೆ ದಿನಾಂಕ, ಮುಹೂರ್ತ ಗೊತ್ತಾಗುತ್ತಿದ್ದಂತೆ ಮದುಮಗಳಿಗೆ ಸೌಂದರ್ಯದ ಕಾಳಜಿ ವಿಪರೀತ ಬಂದು ಬಿಡುತ್ತದೆ, ಏಕೆಂದರೆ ಅದು ಅವಳ ದಿನ, ಆ ದಿನದಂದು ಅವಳೇ ಸೆಂಟರ್ ಆಫ್ ಅಟ್ರಾಕ್ಷನ್ ಆಗಿರುವಾಗ ಸೌಂದರ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳದಿದ್ದರೆ ಹೇಗೆ ಅಲ್ವಾ?
ಹಾಗಂತ ಕೆಲವರು ತ್ವಚೆ ಆರೈಕೆ ವಿಷಯದಲ್ಲಿ ಕೆಲವು ತಪ್ಪುಗಳನ್ನು ಮಾಡುತ್ತಾರೆ, ಮುಖಕ್ಕೆ ಬ್ಲೀಚ್ ಮಾಡುವುದು, ನಮ್ಮ ಮುಖದ ಹೊಂದದೇ ಇರುವ ಕ್ರೀಮ್ ಬಳಸುವುದು ಎಲ್ಲಾ ಮಾಡುತ್ತಾರೆ. ನಿಮಗೆ ಮದುವೆ ದಿನ ತುಂಬಾ ಚೆನ್ನಾಗಿ ಕಾಣಬೇಕೆ? ಹಾಗಾದರೆ ಈ ಸಪ್ಲಿಮೆಂಟ್ಸ್ ಮಿಸ್ ಮಾಡಲೇಬಾರದು? ಏನಿದು ಸಪ್ಲಿಮೆಂಟ್ಸ್, ಇವುಗಳು ತ್ವಚೆ ಆರೈಕೆಗೆ ಹೇಗೆ ಸಹಕಾರಿ ಎಂದು ನೋಡೋಣ ಬನ್ನಿ:

ತ್ವಚೆ ಹೊಳಪು ಹೆಚ್ಚಿಸಲು ಈ 5 ಸಪ್ಲಿಮೆಂಟ್ಸ್ ಅವಶ್ಯಕ
ವಿಟಮಿನ್ ಇ
ವಿಟಮಿನ್ ಈ ತ್ವಚೆ ಮತ್ತು ಕೂದಲಿನ ಆರೋಗ್ಯಕ್ಕೆ ತುಂಬಾನೇ ಅವಶ್ಯಕ. ಇದು ತ್ವಚೆ ಹಾಗೂ ಕೂದಲಿನ ಕಣಗಳ ಆರೋಗ್ಯವನ್ನು ವೃದ್ಧಿಸುತ್ತದೆ ಅಲ್ಲದೆ ವಿಟಮಿನ್ ಇ ಕೂದಲು ಉದುರುವುದನ್ನು ತಡೆಗಟ್ಟುವುದರ ಜೊತೆಗೆ ಇದು ಮುಖದ ಹೊಳಪು ಹೆಚ್ಚಿಸುತ್ತೆ.

ಒಮೆಗಾ 3, 6 ಮತ್ತು 9
ಒಮೆಗಾ 3 ಕೊಬ್ಬಿನಂಶ ಕೂದಲಿನ ಆರೋಗ್ಯ ಹೆಚ್ಚಿಸುತ್ತೆ ಹಾಗೂ ತ್ವಚೆ ಹೊಳಪು ವೃದ್ಧಿಸುತ್ತೆ ಇವಲ್ಲದೆ ಕ್ಯಾನ್ಸರ್ ಅಪಾಯ ಕೂಡ ಕಡಿಮೆ ಮಾಡುತ್ತೆ. ಮದುಮಗಳು ಬಯಸುವುದು ಕೂಡ ಇದೇ ತಾನೆ. ವೈದ್ಯರ ಸಲಹೆ ಮೇರೆಗೆ ಈ ಸಪ್ಲಿಮೆಂಟ್ಸ್ ತೆಗೆದುಕೊಳ್ಳಿ, ಇಲ್ಲದಿದ್ದರೆ ಒಮೆಗಾ ಅಂಶವಿರುವ ಆಹಾರ ಹೆಚ್ಚಾಗಿ ಸೇವಿಸಿ. ಮೀನು, ಅಗಸೆ ಬೀಜ, ಆಲೀವ್, ವಾಲ್ನಟ್, ಮೊಟ್ಟೆ, ಕೆಂಪು ಮಾಂಸ, ಸಮುದ್ರಾಹಾರ, ಸಿಹಿ ಕುಂಬಳಕಾಯಿ ಬೀಜ, ಅವಕಾಡೋ ಇವುಗಳಲ್ಲಿ ಹೆಚ್ಚಾಗಿ ಇರುತ್ತದೆ.

ಮಲ್ಟಿವಿಟಮಿನ್ಸ್
ಮಲ್ಟಿವಿಟಮಿನ್ಸ್ ಕೂದಲು ಹಾಗೂ ತ್ವಚೆಯ ಆರೋಗ್ಯಕ್ಕೆ ತುಂಬಾನೇ ಅವಶ್ಯಕ. ಇದು ದೇಹದಲ್ಲಿರುವ ಬೇಡದ ಕಶ್ಮಲಗಳನ್ನು ಹೊರ ಹಾಕಲು ಸಹಕಾರಿ. ಕೂದಲಿನ ಬೆಳವಣಿಗೆ ಚೆನ್ನಾಗಿರುತ್ತದೆ, ಮುಖದ ಹೊಳಪು ಹೆಚ್ಚುವುದು.
ಈ ಸಪ್ಲಿಮೆಂಟ್ಸ್ ತೆಗೆದುಕೊಳ್ಳುವ ಮುನ್ನ ವೈದ್ಯರ ಸಲಹೆ ಪಡೆಯಿರಿ

ವಿಟಮಿನ್ ಬಿ
ವಿಟಮಿನ್ ಬಿ ದೇಹದಲ್ಲಿ ಹಾರ್ಮೋನ್‌ಗಳನ್ನು ಸಮತೋಲನದಲ್ಲಿಡಲು ಸಹಕಾರಿ. ಇದರಿಂದಾಗಿ ಮೊಡವೆ, ಬ್ಲ್ಯಾಕ್‌ಔಟ್ ಮುಂತಾದ ಸಮಸ್ಯೆ ಇರಲ್ಲ.
ಸಾಲಮೋನ್, ಸೊಪ್ಪು, ಲಿವರ್ ಅಥವಾ ಇತರ ಅಂಗಗಳು, ಮೊಟ್ಟೆ, ಹಾಲು, ಮೃದ್ವಂಗಿಗಳು, ಧಾನ್ಯಗಳು, ಚಿಕನ್, ಟರ್ಕಿ, ಯೋಗರ್ಟ್ ಇವುಗಳಲ್ಲಿ ಹೆಚ್ಚಾಗಿ ಇರುತ್ತದೆ.

ಬಯೋಟಿನ್
ಬಯೋಟಿನ್ ಕೂದಲಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಇದು ಕೂದಲಿನ ಬೆಳವಣಿಗೆ ಹೆಚ್ಚಿಸುವುದು ಮಾತ್ರವಲ್ಲ ಕೂದಲಿನ ಹೊಳಪು ಕೂಡ ಹೆಚ್ಚಿಸುತ್ತೆ, ಇದರಿಂದ ಕೂದಲು ತುಂಬಾ ಸುಂದರವಾಗಿ ಕಾಣುವುದು.
ಈ ಸಪ್ಲಿಮೆಂಟ್ಸ್ ಒಂದು ವಾರದ ಮೊದಲು ತೆಗೆದರೆ ಫಲಿತಾಂಶ ಕಾಣಲ್ಲ, ನೀವು ಒಂದು 3 ತಿಂಗಳ ಮೊದಲೇ ತೆಗೆದುಕೊಳ್ಳಲು ಅಥವಾ ಈ ಅಂಶಗಳಿರುವ ಆಹಾರಶೈಲಿ ಪ್ರಾರಂಭಿಸಿದರೆ ಮದುವೆ ಸಂದರ್ಭದಲ್ಲಿ ನಿಮ್ಮ ಸೌಂದರ್ಯ ವೃದ್ದಿಸುವುದು.
ಇದನ್ನು ಮದುಮಗಳು ಮಾತ್ರವಲ್ಲ ಯಾರು ಬೇಕಾದರೂ ಮಾಡಬಹುದು.



Click it and Unblock the Notifications
