Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಫಿಲ್ಮಂಫೇರ್ ಅವಾರ್ಡ್ ಸೌತ್ 2022: ಭಿನ್ನ ಡ್ರೆಸ್ಸಿಂಗ್‌ನಲ್ಲಿ ಗಮನ ಸೆಳೆದ ಸೆಲೆಬ್ರಿಟಿಗಳು
67ನೇ ಫಿಲ್ಮಂಫೇರ್ ಅವಾರ್ಡ್ ಬೆಂಗಳೂರಿನಲ್ಲಿ ತುಂಬಾನೇ ಅದ್ಧೂರಿಯಿಂದ ನಡೆಯಿತು. ಈ ಕಾರ್ಯದಲ್ಲಿ ದಕ್ಷಿಣ ಭಾರತದ ತಾರೆಯರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪುನೀತ್ ರಾಜ್‌ಕುಮಾರ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಯಿತು. ಅತ್ಯುತ್ತಮ ನಟ (ಕ್ರಿಟಿಕ್ಸ) ಡಾರ್ಲಿಂಗ್ ಕೃಷ್ಣ (ಲವ್ ಮಾಕ್ಟೇಲ್) ಅವರಿಗೆ ಲಭಿಸಿದೆ, ಅತ್ಯುತ್ತಮ ನಟಿ ಪ್ರಶಸ್ತಿ ಮಿಲನ ನಾಗರಾಜ್ (ಲವ್ ಮಾಕ್ಟೇಲ್),ಅಮೃತಾ ಅಯ್ಯಂಗಾರ್(ಬಡವ ರಾಸ್ಕಲ್) ಇವರಿಬ್ಬರಿಗೆ ಲಭಿಸಿದೆ. ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ರಾಜ್ ಬಿ ಶೆಟ್ಟಿ (ಗರುಡ ಗಮನ ವೃಷಭ ವಾಹನ) ಅವರ ಪಾಲಾಗಿದೆ.

ಫಿಲ್ಮಂಪೇರ್ ಸೌತ್ ಅವಾರ್ಡ್‌ನಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗವಹಿಸಿದ್ದು ಈ ಸೆಲೆಬ್ರಿಟಿಗಳು ತಮ್ಮ ಸ್ಟೈಲ್‌ನಿಂದ ಗಮನ ಸೆಳೆದದ್ದು ಹೀಗೆ....

ಪಂಚೆಯಲ್ಲಿ ಮಿಂಚುತ್ತಿರುವ ರಾಜ್ ಬಿ ಶೆಟ್ಟಿ
ದೊಡ್ಡ ಸೆಲೆಬ್ರಿಟಿಯಾಗಿದ್ದರೂ ಇವರ ಡ್ರೆಸ್ಸಿಂಗ್ ತುಂಬಾನೇ ಸಿಂಪಲ್. ಒಂದು ಪಂಚೆ ಅದಕ್ಕೆ ಟೀ ಶರ್ಟ್ ಅಥವಾ ಶರ್ಟ್ ಇಷ್ಟೇ ಇವರ ಫ್ಯಾಷನ್, ಇದೀಗ ತುಂಬಾ ಯುವಕರು ಫಂಕ್ಷನ್‌ಗಳಲ್ಲಿ ಪಂಚೆ ಉಡುತ್ತಿದ್ದಾರೆ.

ಪಿಂಕ್ ಸೀರೆಯಲ್ಲಿ ಮಿಂಚಿದ ಪ್ರಿಯಾಮಣಿ
ಪಿಂಕ್ ಸೀರೆಗೆ ಗ್ರ್ಯಾಂಡ್ ಡಿಸೈನ್ ಬ್ಲೌಸ್, ದೊಡ್ಡ ಕಿವಿಯೋಲೆಯಲ್ಲಿ ಪ್ರಿಯಾಮಣಿ ತುಂಬಾನೇ ಆಕರ್ಷಕವಾಗಿ ಕಾಣುತ್ತಿದ್ದಾರೆ.

ಫಿಲ್ಮಂಫೇರ್‌ನಲ್ಲಿ ಅನು -ಮುಖರ್ಜಿ ದಂಪತಿ
ಬ್ಲ್ಯಾಕ್ ಸೂಟ್‌ನಲ್ಲಿ ರಘು ಮುಖರ್ಜಿ ಹಾಗೂ ಗ್ರೀನ್ ಸೆಲ್ವಾರ್‌ನಲ್ಲಿ ದಂಪತಿ ಗಮನ ಸೆಳೆದಿದ್ದು ಹೀಗೆ....

ಅಪರ್ಣ ಬಾಲಮುರಳಿ
ತಮಿಳು ನಟ ಸೂರ್ಯ ಜೊತೆ ಸೂರರೈ ಪೋಟ್ರು ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ಪಡೆದಿರುವ ನಟಿ ಫಿಲಂಫೇರ್ ಸೌತ್ ಅವಾರ್ಡ್‌ನಲ್ಲಿ ಬ್ಲ್ಯಾಕ್ ಔಟ್‌ಫಿಟ್‌ನಲ್ಲಿ ಗಮನ ಸೆಳೆದರು.

ಮಾಧವನ್ ಕ್ಲಾಸಿ ಲುಕ್
ನಟ ಮಾಧನವನ್ನು ನೋಡಿದಾಗ ವಯಸ್ಸು ಮರಳುತ್ತಿದೆಯೇ ಎಂದನಿಸುವಷ್ಟು ಆಕರ್ಷಕವಾಗಿದ್ದಾರೆ. ಈ ಕುರ್ತಾದಲ್ಲಂತೂ ಮತ್ತಷ್ಟು ಆಕರ್ಷಕವಾಗಿ ಕಾಣಿಸುತ್ತಿದ್ದಾರೆ.

ಶೆಹನಾಜ್ ಗಿಲ್
ಫಿಲ್ಮಂಫೇರ್ ಸೌತ್ ಅವಾರ್ಡ್‌ನಲ್ಲಿ ತುಂಬಾ ಗಮನ ಸೆಳೆದ ವ್ಯಕ್ತಿಯೆಂದರೆ ಶೆಹನಾಜ್ ಗಿಲ್. ಅವರ ಡ್ರೆಸ್ಸಿಂಗ್ ಅಂತೂ ತುಂಬಾನೇ ಆಕರ್ಷಕವಾಗಿತ್ತು

ಸೌತ್ ಇಂಡಿಯಾದ ಕ್ಯೂಟ್ ಸೆಲೆಬ್ರಿಟಿ ಕಪಲ್
ಸೌತ್ ಇಂಡಿಯಾದ ಕ್ಯೂಟ್ ಸೆಲೆಬ್ರಿಟಿ ಕಪಲ್ ಆಗಿರುವ ಸೂರ್ಯ-ಜ್ಯೋತಿಕಾ ಗಮನ ಸೆಳೆದದ್ದು ಹೀಗೆ.. ಜ್ಯೋತಿಕಾ ಅವರ ಡ್ರೆಸ್ಸಿಂಗ್ ಸ್ವಲ್ಪ ವಿಭಿನ್ನವಾಗಿತ್ತು, ಅವರಿಗೆ ಅದಕ್ಕಿಂತ ಬೇರೆ ಡಿಸೈನ್ ಇನ್ನೂ ಸೂಟ್ ಆಗುತ್ತಿತ್ತೇನೋ....



Click it and Unblock the Notifications
