Latest Updates
-
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ!
ಮನೆಯಲ್ಲಿಯೇ ಮುಖಕ್ಕೆ ವ್ಯಾಕ್ಸ್ ಮಾಡುವುದು ಹೇಗೆ?
ನಯವಾದ ಹಾಗೂ ಸುಂದರವಾದ ಮುಖ ನಿಮ್ಮ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ನಿಮ್ಮ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ. ನಿಮ್ಮ ಮುಖದಲ್ಲಿನ ಹೆಚ್ಚುವರಿ ಕೂದಲುಗಳನ್ನು ತೆಗೆಯುವ ಮೂಲಕ ನೀವು ಸೆಕ್ಸಿ ಆಗಿ ಕಾಣಬಹುದು. ಮುಖದಲ್ಲಿನ ಕೂದಲ ನಿವಾರಣೆಗೆ ಹಲವಾರು ವಿಧಾನಗಳಿವೆ. ಎಲ್ಲಕ್ಕಿಂತ ಹೆಚ್ಚು ಜನಪ್ರಿಯ ವಿಧಾನ ವ್ಯಾಕ್ಸಿಂಗ್. ವ್ಯಾಕ್ಸಿಂಗ್ ಮೂಲಕ ಒಂದೇ ಸಲಕ್ಕೆ ಒಂದಷ್ಟು ಜಾಗದ ಕೂದಲುಗಳನ್ನು ತೆಗೆಯಬಹುದು. ಇದಲ್ಲದೆ, ವ್ಯಾಕ್ಸಿಂಗ್ ನಿಮ್ಮ ಚರ್ಮವನ್ನು ನಯವಾಗಿ ಹಾಗೂ ಆರೋಗ್ಯಕರವಾಗಿ ಇರಿಸಲು ಸಹಾಯಕವಾಗಿದೆ.
ಮುಖದ ವ್ಯಾಕ್ಸಿಂಗ್ ತುಂಬಾ ಸುಲಭವಾದ, ತುಂಬಾ ಸೂಕ್ಷ್ಮ ಕೂದಲುಗಳನ್ನೂ ಕೀಳುವ ಒಂದು ವಿಧಾನ. ಸರಿಯಾದ ವಿಧಾನಗಳನ್ನು ಅನುಸರಿಸಿದರೆ, ಸುಮಾರು ವಾರಗಳವರೆಗೆ ಇದರ ಪ್ರಯೋಜನ ಪಡೆಯಬಹುದು.

ಇದಕ್ಕಾಗಿ ನೀವು ಸಮೀಪದ ಬ್ಯೂಟಿ ಪಾರ್ಲರ್ ಗೆ ಹೋಗಬಹುದು. ಆದರೆ ಇದರ ಬದಲು ಮನೆಯಲ್ಲೇ ವ್ಯಾಕ್ಸ್ ಮಾಡುವುದರಿಂದ, ಹಣದ ಉಳಿತಾಯ ಮಾತ್ರವಲ್ಲದೆ ಸಮಯದ ಉಳಿತಾಯ ಹಾಗೂ ನಿಮಗೆ ಅನುಕೂಲಕರವಾಗುವಂತೆ ವ್ಯಾಕ್ಸಿಂಗ್ ಮಾಡಿಕೊಳ್ಳಬಹುದು.
ಮನೆಯಲ್ಲಿಯೇ ವ್ಯಾಕ್ಸಿಂಗ್ ಮಾಡಿಕೊಳ್ಳುವ ವಿಧಾನವನ್ನು ಕೆಳಗೆ ತಿಳಿಸಿಕೊಡುತ್ತಿದ್ದೇವೆ. ಇದರೊಂದಿಗೆ, ವ್ಯಾಕ್ಸಿಂಗ್ ಮಾಡಿಕೊಳ್ಳುವ ಮೊದಲು ಹಾಗೂ ನಂತರ ಅನುಸರಿಸಬೇಕಾದ ಕೆಲವು ಎಚ್ಚರಗಳನ್ನೂ ನಾವು ನಿಮ್ಮ ಮುಂದಿಡುತ್ತಿದ್ದೇವೆ.
ವ್ಯಾಕ್ಸ್ ಖರೀದಿಸಿರಿ
ಹತ್ತಿರದ ಮೆಡಿಕಲ್ ಸ್ಟೋರ್ ನಿಂದ 'dermatologist tested' ಎಂದು ಬರೆದಿರುವ ಹಾಗೂ ಸೂಕ್ಷ್ಮ ಚರ್ಮಕ್ಕೆ ವಿನ್ಯಾಸಗೊಳಿಸಿದ ವ್ಯಾಕ್ಸ್ ಖರೀದಿಸಿರಿ.
ಸ್ವಚ್ಚಗೊಳಿಸಿ
ವ್ಯಾಕ್ಸಿಂಗ್ ನಿಂದ ಹೆಚ್ಚಿನ ಪ್ರಯೋಜನ ಪಡೆಯಲು ಮೊದಲು ನಿಮ್ಮ ಮುಖಯನ್ನು ಸ್ವಚ್ಚಗೊಳಿಸಿರಿ. ನಿಮ್ಮ ಮುಖದ ಜೊತೆ ಕೈಗಳನ್ನೂ ಸ್ವಚ್ಚಗೊಳಿಸಿ, ಯಾಕೆಂದರೆ ವ್ಯಾಕ್ಸ್ ನ್ನು ಮೊದಲು ಕೈಗಳಿಂದಲೇ ಮುಟ್ಟುವುದು.
ಯೋಗ್ಯ ತಾಪಮಾನಕ್ಕೆ ಬಿಸಿ ಮಾಡಿರಿ
ವ್ಯಾಕ್ಸ್ ಪೊಟ್ಟಣದ ಮೇಲೆ ನಮೂದಿಸಿರುವ ನಿರ್ದೇಶನದಂತೆ ಸರಿಯಾಗಿ ತಾಪಮಾನಕ್ಕೆ ವ್ಯಾಕ್ಸ್ ಅನ್ನು ಬಿಸಿ ಮಾಡಿರಿ. ಆದರೆ, ಈ ಉಷ್ಣಾಂಶದಿಂದ ನಿಮ್ಮ ಮುಖದ ಚರ್ಮಕ್ಕೆ ಹಾನಿಯುಂಟಾಗದಂತೆ ಜಾಗ್ರತೆ ವಹಿಸಿ.
ಇಲ್ಲಿದೆ ಚಮತ್ಕಾರ
ವ್ಯಾಕ್ಸ್ ನ್ನು ನಿಮ್ಮ ಮುಖದ ಮೇಲೆ ತೆಳ್ಳಗೆ, ಸಮನಾಗಿ ಪಸರಿಸಿ. ಒಂದು ಪಟ್ಟಿಯನ್ನು ಸವರಿ, ಅದನ್ನು ಸೂಚಿಸಿದ ಸಮಯದ ವರೆಗೆ ಉಳಿಸಿರಿ. ಈಗ ಪಟ್ಟಿಯನ್ನು, ಕೂದಲು ಬೆಳೆಯುವ ವಿರುದ್ಧ ದಿಕ್ಕಿನಲ್ಲಿ, ತ್ವರಿತಗತಿಯಲ್ಲಿ ಎಳೆಯಿರಿ. ಎಳೆಯುವಾಗ, ಮೇಲ್ಮುಖವಾಗಿ ಎಳೆಯದಂತೆ ನಿಗಾವಹಿಸಿ. ಹೀಗೆ ಮಾಡುವುದರಿಂದ, ಕೂದಲು ತುಂಡಾಗುವುದಲ್ಲದೆ, ಪುನಃ ಬೇಗನೆ ಬೆಳೆಯುವುದು.
ತ್ವಚೆಯ ರಕ್ಷಣೆ
ವ್ಯಾಕ್ಸ್ ಮಾಡಿದ ಕೂಡಲೇ, ವ್ಯಾಕ್ಸ್ ಮಾಡಿದ ಜಾಗದ ಮೇಲೆ ಸ್ವಲ್ಪ ಒತ್ತಡ ಹಾಕುವುದರಿಂದ, ಸ್ವಲ್ಪ ಮಟ್ಟಿಗೆ ಚರ್ಮದ ಕಿರಿಕಿರಿಯನ್ನು ತಡೆಯಬಹುದು. ಒಂದು ಸಲಕ್ಕಿಂತ ಜಾಸ್ತಿ ವ್ಯಾಕ್ಸ್ ಮಾಡುವುದರಿಂದ ತ್ವಚೆಗೆ ಹಾನಿಯುಂಟಾಗಬಹುದಾದುದರಿಂದ, ಇದನ್ನು ತಪ್ಪಿಸುವುದೊಳಿತು. ವ್ಯಾಕ್ಸ್ ಮಾಡಿದ ಬಳಿಕ ಮುಖಕ್ಕೆ ನಿಮಗೆ ಇಷ್ಟವಾಗಿರುವ ಕ್ರೀಂ ಅನ್ನು ಹಚ್ಚಿರಿ.
ಸತ್ತ ಚರ್ಮವನ್ನು ತೆಗೆದುಹಾಕಿರಿ(exfoliate)
ವ್ಯಾಕ್ಸಿಂಗ್ ಮಾಡುವ ಒಂದು ಅಥವಾ ಎರಡು ದಿನಗಳ ಮೊದಲು, ಹಳೆಯ, ಸತ್ತ ಚರ್ಮವನ್ನು ತೆಗೆಯಿರಿ. ಇದರಿಂದ ವ್ಯಾಕ್ಸ್ ಮಾಡಲು ನಯವಾದ ಮೇಲ್ಮೈ ಇರುತ್ತದೆ. ಸಾಧಾರಣ ವ್ಯಾಕ್ಸಿಂಗ್ ಎರಡರಿಂದ ನಾಲ್ಕು ವಾರಗಳ ವರೆಗೆ ಪ್ರಯೋಜನ ನೀಡಿದರೆ, ಹಳೆಯ ಚರ್ಮ ನಿವಾರಣೆಯ ನಂತರ ಮಾಡಿದ ವ್ಯಾಕ್ಸಿಂಗ್, ಹೆಚ್ಚು ಕಾಲ ಪ್ರಯೋಜನಕ್ಕೆ ಬರುತ್ತದೆ.
ಅಪಾಯ: ವ್ಯಾಕ್ಸ್ ನಿಂದ ನಿಮ್ಮ ಚರ್ಮಕ್ಕೆ ಅಲರ್ಜಿ ಉಂಟಾಗುವುದಿಲ್ಲ ಎಂದುತಿಳಿಯಲು ಮೊದಲು ಕೈ ಅಥವಾ ಕಾಲಿನ ಮೇಲೆ ಸ್ವಲ್ಪ ವ್ಯಾಕ್ಸ್ ಹಚ್ಚಿ ಪರೀಕ್ಷಿಸಿರಿ.



Click it and Unblock the Notifications
