Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
ಕಾಲು ಬೆರಳಿನ ಉಗುರುಗಳನ್ನು ಸ್ವಚ್ಚಗೊಳಿಸುವುದು ಹೇಗೆ?
ನೀವು ಹೆಚ್ಚು ಬಿಗಿಯಾದ ಸಾಕ್ಸ್ ಗಳನ್ನು ಉಪಯೋಗಿಸಿದರೆ ಮತ್ತು ನಿಮ್ಮ ಪಾದಗಳಿಗೆ ಹೆಚ್ಚು ಗಾಳಿ ತಾಕದಿದ್ದರೆ ನಿಮ್ಮ ಪಾದಗಳ ಉಗುರುಗಳು ಕೊಳೆಯಾಗುತ್ತವೆ. ಕೊಳೆಯಾದ ಕಾಲುಗುರುಗಳನ್ನು ಹೊಂದಿದ್ದರೆ ನೋಡುವುದಕ್ಕೆ ಅಸಹ್ಯವೆನಿಸಬಹುದು, ಪಾದಗಳು ತಮ್ಮ ಆಕರ್ಷಣೆ ಕಳೆದುಕೊಳ್ಳುತ್ತವೆ ಮತ್ತು ಕೊಳೆಯಾದ ಕಾಲಿನ ಉಗುರುಗಳು ನೋಡುವುದಕ್ಕೆ ಮತ್ತೂ ಕೆಟ್ದಾಗಿರುತ್ತವೆ.
ಕಾಲಿನ ಉಗುರುಗಳಲ್ಲಿ ಕೊಳೆ ಸೇರಿಕೊಳ್ಳುವುದು ಸಹಜ ಮತ್ತು ಬಹಳಷ್ಟು ಜನರು ತಮ್ಮ ಕಾಲಿನ ಉಗುರುಗಳನ್ನು ಕೊಳೆಯಾಗಿಟ್ಟುಕೊಳ್ಳುತ್ತಾರೆ. ಆದರೆ ಕಾಲಿನ ಉಗುರುಗಳನ್ನು ಸ್ವಚ್ಚಗೊಳಿಸಿಕೊಳ್ಳುವುದು ಬಹಳ ಸುಲಭ ಮತ್ತು ಅಷ್ಟೆ ಚಂದಗೊಳಿಸಿಕೊಳ್ಳುವುದ ಸುಲಭ. ನಿಮ್ಮ ಉಗುರುಗಳು ಯಾವಾಗಲೂ ಕಾಣುವಂತಿದ್ದರೆ ಅವುಗಳನ್ನು ಆದಷ್ಟು ಚೆನ್ನಾಗಿ ನೋಡಿಕೊಳ್ಳುವುದು ಅವಶ್ಯಕ.

1. ನಿಮ್ಮ ಕಾಲಿನ ಉಗುರುಗಳನ್ನು ಗಿಡ್ಡವಾಗಿಟ್ಟುಕೊಳ್ಳಿ. ಉದ್ದ ಮತ್ತು ಸುರುಳಿಯಾದ ಕಾಲಿನ ಉಗುರುಗಳು ಯಾವತ್ತೂ ಆಕರ್ಷಕವಲ್ಲ. ಕಾಲಿನ ಉಗುರುಗಳನ್ನು ಗಿಡ್ಡವಾಗಿಟ್ಟುಕೊಂಡಷ್ಟು ಅಂದವಾಗಿ ಕಾಣುತ್ತವೆ. ಅಂದರೆ, ಕಾಲುಗುರುಗಳು ಕಡಿಮೆ ಅವ್ಯವಸ್ಥಿತಿವಾಗಿರುತ್ತವೆ ಮತ್ತು ಹೆಚ್ಚು ಸ್ವಚ್ಚವಾಗಿರುವಂತೆ ತೋರುತ್ತವೆ.
2. ಉಗುರಿನ ಬ್ರಷ್ ಅನ್ನು ಬಳಸಿ. ಇವು ಬಳಸುವುದಕ್ಕೂ ಸುಲಭ ಮತ್ತು ಅನವಶ್ಯಕ ಸತ್ತ ಚರ್ಮದ ತುಣುಕುಗಳನ್ನು ತೆಗೆದುಹಾಕಿ ಉಗುರುಗಳನ್ನು ಯಥಾವತ್ ಸ್ಥಿತಿಯಲ್ಲಿಟ್ಟು ಉಗುರುಗಳ ಅಡಿಭಾಗದಿಂದಲೂ ಕೊಳೆಯನ್ನು ಹೊರತೆಗೆಯುತ್ತವೆ.
3. ಸ್ನಾನ ಮಾಡುವಾಗ ಉಗುರುಗಳನ್ನು ತೊಳೆಯಲು ಮರೆಯಬೇಡಿ. ನಿಮ್ಮ ಮೈಯ ಕೊಳೆ ಮತ್ತು ಬೆವರಿನ ವಾಸನೆ ಓಡಿಸಲು ಸೋಪ್ ಉಪಯೋಗಿಸತ್ತೀರಲ್ಲವೇ? ಮತ್ಯಾಕೆ ನಿಮ್ಮ ಪಾದಗಳಿಗೆ ಈ ಭೇಧ? ನಿಮ್ಮ ಪಾದಗಳಿಗೂ ಉತ್ತಮವಾದ ಸೋಪ್ ಬಳಸಿ ಕಾಲುಗುರುಗಳು ಮತ್ತು ಪಾದದ ಅಡಿ ಮತ್ತು ಹಿಮ್ಮಡಿಗಳನ್ನು ಸ್ವಚ್ಚಗೊಳಿಸಿಕೊಳ್ಳಿ.
4. ನೀವು ಶೂಗಳನ್ನು ಹಚ್ಚು ಉಪಯೋಗಿಸುತ್ತಿದ್ದರೆ ಅವುಗಳನ್ನು ಸ್ವಲ್ಪ ದಿನ ಒಣಗಿಸಿ. ಬೂಟಿನಿಂದ ನಿಮ್ಮ ಪಾದಗಳನ್ನು ಮುಚ್ಚಿಕೊಂಡಿದ್ದರೆ ತೇವಾಂಶ ಪಾದಗಳಲ್ಲಿ ಸೇರಿಕೊಳ್ಳುತ್ತದೆ ಮತ್ತು ನಿಮ್ಮ ಉಗುರುಗಳು ಒಣಗುವಂತಾಗುತ್ತವೆ. ಪೌಡರ್ ಗಳನ್ನು ಕಾಲಿಗೆ ಬಳಸಿ. ಇದರಿಂದ ಇಡೀ ದಿನ ನಿಮ್ಮ ಕಾಲು ಮತ್ತು ಉಗುರುಗಳು ನಿರ್ಮಲವಾಗಿರುತ್ತವೆ. ಕೇವಲ ನೋಡುವುದಕ್ಕಷ್ಟೇ ಚಂದಗಾಣುವುದಿಲ್ಲ. ಅದರ ಜೊತೆಗೆ ಕಾಲುಗಳಿಂದ ಸುವಾಸನೆಯೂ ಬರುತ್ತದೆ.
5. ಉಗುರು ಕತ್ತರಿಗಳಲ್ಲಿ ಉಗುರು ಕ್ಲೀನರ್ ಇದೆ ಎಂಬುದನ್ನು ಖಾತರಿಪಡಿಸಿಕೊಳ್ಳಿ. ಇದು ಕೊಳೆಯನ್ನು ತೆಗೆಯುತ್ತದೆ ಮತ್ತು ಉಗುರಿನ ಭಾಗವನ್ನು ಸ್ವಚ್ಚವಾಗಿಡುತ್ತದೆ.
6. ಕೊನೆಯದಾಗಿ, ಚರ್ಮದ ಬಣ್ಣದ ನೇಲ್ ಪಾಲಿಶ್ ಬಳಸಿ. ಉಗುರು ಸ್ವಚ್ಚವಾಗಿರುವಂತೆ ಹೊಸದರಂತೆಯೂ ಕಾಣಿಸುತ್ತದೆ. ಪ್ರತಿ ವಾರ ನಿರಂತರವಾಗಿ ಉಗುರುಗಳಿಗೆ ನೇಲ್ ಪಾಲಿಶ್ ಹಚ್ಚಿಕೊಳ್ಳುತ್ತಿರಿ.
ಸಲಹೆಗಳು:
ಉಗುರುಗಳನ್ನು ಕತ್ತರಿಸುವಾಗ ಎಲ್ಲ ಉಗುರುಗಳನ್ನೂ ಸಮಾನಾಂತರವಾಗಿ ಕತ್ತರಿಸಿಕೊಳ್ಳಿ. ಉಗುರುಗಳು ಅಸಮವಾಗಿದ್ದರೆ ನೋಡುವುದಕ್ಕೆ ಅವ್ಯವಸ್ಥಿತವಾಗಿರುತ್ತವೆ ಮತ್ತು ಕೆಟ್ಟದಾಗಿರುತ್ತವೆ.
ಉಗುರು ಕತ್ತರಿಸುವಾಗ ಸಾಧ್ಯವಾದಷ್ಟು ಉಗುರಿನ ಸಹಜ ತಿರುವು ಮತ್ತು ಗೆರೆಯಗುಂಟ ಕತ್ತರಿಸಿ. ಇದರಿಂದ ಉಗುರು ಹೆಚ್ಚು ಸಹಜ ಮತ್ತು ಸ್ವಚ್ಚವಾಗಿರುತ್ತದೆ. ನೇರವಾದ ಉಗುರಿಗಿಂತ ತಿರುವಾದ ಉಗುರು ಕಡಿಮೆ ಒರಟಾಗಿ ಕಾಣುತ್ತದೆ. ಆದರೆ ನೇರವಾಗಿ ಕತ್ತರಿಸಲು ಪ್ರಯತ್ನಿಸಿ.
ಎಚ್ಚರಿಕೆಗಳು:
ಪಾದಗಳಲ್ಲಿ ಕಡಿತವಿದ್ದರೆ ಜಾಗರೂಕರಾಗಿರಿ. ಸೋಪುಗಳ ಬಳಕೆಯಿಂದ ಚರ್ಮಕ್ಕೆ ಘಾಸಿಯಾಗಬಹುದು.
ನಿಮ್ಮ ಕಾಲಿನ ಉಗುರುಗಳು ಒಳ ಭಾಗದಿಂದ ಬೆಳೆದಿದ್ದರೆ, ಬೇರೆಯವರ ಸಹಾಯ ಪಡೆದು ಉಗುರು ಕತ್ತರಿಸಿ. ಮುನ್ನೆಚ್ಚರಿಕೆ ಅಗತ್ಯವೆನಿಸಿದರೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ.



Click it and Unblock the Notifications