Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಲಿಂಬೆಹಣ್ಣು ಬಳಸಿ ಸ್ನಾನ ಮಾಡುವುದು ಹೇಗೆ?
ಲಿಂಬೆಹಣ್ಣನ್ನು ಬಳಸಿ ಸ್ನಾನ ಮಾಡುವುದು ದೇಹದ ಪುನಶ್ಚೇತನಕ್ಕೆ ಮತ್ತು ಸೋಪನ್ನು ಬಳಸದೇ ಪರಿಣಾಮಕಾರಿಯಾಗಿ ಸ್ನಾನ ಮಾಡುವ ವಿಧಾನ. ಕ್ಲೋರಿನ್ ಹಾಕಿದ ನೀರಿಗೆ ಲಿಂಬೆಹಣ್ಣು ಬಳಸಿ ಸ್ನಾನ ಮಾಡುವುದರಿಂದ ಚರ್ಮ ತನ್ನ ಮೊದಲಿನ ಸ್ಥಿತಿಗೇ ಹಿಂದಿರುಗುತ್ತದೆ.ಲಿಂಬೆಯಲ್ಲಿರುವ ಆಸಿಡಿಕ್ ರಸ ಕೂದಲಿನ ಬುಡವನ್ನು ಮೃದುಗೊಳಿಸುತ್ತದೆ ಮತ್ತು ದೇಹದ ಪುನಶ್ಚೇತನಕ್ಕೆ ಮತ್ತು ಚರ್ಮದ ಕಾಂತಿ ಮರಳಲು ಸ್ವಲ್ಪ ಪ್ರಮಾಣದ ರಾಸಾಯನಿಕದಂತೆ ವರ್ತಿಸುತ್ತದೆ.
ಹಂತಗಳು:
1. ಲಿಂಬೆಹಣ್ಣನ್ನು ಆರಿಸಿ: ಸ್ನಾನಕ್ಕೆ ಬಳಸುವ ನಿಂಬೆ ಬಣ್ಣದಲ್ಲಿ ಮೆದುವಾಗಿರಬೇಕು. ಹಸಿರು ಚಿಕ್ಕೆಗಳಿದ್ದರೂ ಒಳ್ಳೆಯದೇ. ದಟ್ಟವಾದ ಬಣ್ಣವುಳ್ಳ ನಿಂಬೆ ಒಳಗಿನಿಂದ ಹೆಚ್ಚು ಹಿಟ್ಟು ಹಿಟ್ಟಾಗಿರುತ್ತದೆ. ಹೆಚ್ಚು ಹಣ್ಣಾಗಿರುವುದ ಒಳ್ಳೆಯದಲ್ಲ.

2. ನಿಂಬೆಹಣ್ಣಿನ ಸಿಪ್ಪೆ ಸುಲಿಯಿರಿ. ಸಾಧ್ಯವಿದ್ದಷ್ಟು ದೊಡ್ಡ ಭಾಗಗಳಾಗಿ ಸಿಪ್ಪೆ ಸುಲಿಯಿರಿ. ಸಿಪ್ಪೆ ಸುಲಿದ ನಿಂಬೆಹಣ್ಣನ್ನು ಎರಡು ಭಾಗಗಳಾಗಿ ವಿಂಗಡಿಸಿ. ಬಿಳಿಯ ಪದರಗಳು ಹಾಗೇ ಉಳಿದರೂ ಅಡ್ಡಿಯಿಲ್ಲ.
3. ಮೊದಲು ನಿಮ್ಮ ಕೂದಲನ್ನು ತೊಳೆದುಕೊಳ್ಳಿ. ಅರ್ಧ ನಿಂಬೆಯ ರಸವನ್ನು ನಿಮ್ಮ ಕೂದಲಿಗೆ ಹಾಕಿ ತಿಕ್ಕಿರಿ. ಸಿಪ್ಪೆ ಸುಲಿದ ಭಾಗವನ್ನು ನಿಮ್ಮ ಕೂದಲಿಗೆ ತಾಗಿಸಿ ತಿಕ್ಕಿ. ನಿಂಬೆಯ ಮತ್ತೊಂದು ಭಾಗವನ್ನು ಬಳಸಿದರೆ ಅದರ ತುಣುಕುಗಳು ನಿಮ್ಮ ಕೂದಲಿಗೆ ಅಂಟಿಕೊಳ್ಳುತ್ತವೆ. ಕೂದಲಿನ ಅಷ್ಟೂ ಕಡೆಗಳಲ್ಲಿ ನಿಂಬೆಹಣ್ಣಿನ ರಸ ಸೇರುವಂತೆ ಮಾಡಿ.
4. ನಿಮ್ಮ ಕೂದಲಿಗೆ ಕಂಡಿಷನರ್ ಮಾಡಿ: ದೊಡ್ಡ ಗಾತ್ರದ ಸಿಪ್ಪೆಯನ್ನು ಎರಡೂ ಕೈಯ್ಯಲ್ಲಿ ಹಿಡಿದುಕೊಳ್ಳಿ. ಸಿಪ್ಪೆಯ ಒಳಗಿನ ಬಿಳಿ ಭಾಗದಿಂದ ಕೂದಲಿಗೆ ತಿಕ್ಕಿ. ಉದ್ದನೆಯ ಕೂದಲನ್ನು ಉಜ್ಜುವಾಗ ಎರಡೂ ಕೈಯ್ಯನ್ನು ಬಳಸಿ. ಸಿಪ್ಪೆಯನ್ನು ಕೂದಲಿನ ಎಲ್ಲ ಭಾಗಗಳಿಗೆ ತೀಡಿದ ನಂತರ ಕೂದಲನ್ನು ತೊಳೆಯಿರಿ.
5. ಮುಖ ಮತ್ತು ಮೈಯ್ಯನ್ನ ತೊಳೆಯಿರಿ: ಕೂದಲು ತೊಳೆಯಲು ಬಳಸಿದ ತಂತ್ರವನ್ನೇ ಬಳಸಿ ಸಿಪ್ಪೆಯಿಂದ ಮುಖ ತೊಳೆದುಕೊಳ್ಳಿ. ಮುಖ ತೊಳೆದ ನಂತರ ನಿಂಬೆಯ ತಿರುಳನ್ನು ಬಳಸಿ ಮೈ ತೊಳೆದುಕೊಳ್ಳಿ.
6. ಸರಿಯಾಗಿ ತೊಳೆಯಿರಿ: ನಿಂಬೆಯ ತುಣುಕುಗಳೆಲ್ಲವನ್ನೂ ತೊಳೆದುಕೊಳ್ಳಿ. ಮೃದುವಾದ ಚರ್ಮದ ಅನುಭೂತಿಯನ್ನು ಆಸ್ವಾದಿಸಿ.
ಸಲಹೆಗಳು:
ಉದ್ದನೆಯ ಸಿಪ್ಪೆಯನ್ನು ಸುಲಿಯಲು ಕೀಲಿಯನ್ನು ಬಳಸಿ ಮತ್ತು ಸಿಪ್ಪೆಯನ್ನು ಎರಡು ಭಾಗಗಳಾಗಿ ವಿಂಗಡಿಸಿ.
ಎಚ್ಚರಿಕೆಗಳು:
ಲಿಂಬೆಯ ರಸವನ್ನು ನಿಮ್ಮ ಕಣ್ಣುಗಳಿಗೆ ಹಾಕಿಕೊಳ್ಳಬೇಡಿ.
ಆಮ್ಲೀಯತೆಗೆ ನಿಮ್ಮ ಚರ್ಮ ಸೂಕ್ಷ್ಮವಾಗಿರಬಹುದು. ನಿಂಬೆರಸ ಹಚ್ಚಿದ ಭಾಗದಲ್ಲಿ ಒಂದು ನಿಮಷಕ್ಕೂ ಹೆಚ್ಚು ಕಾಲ ಸುಡುತ್ತಿರುವ ಸಂವೇದನೆಯಾದರೆ, ಭವಿಷ್ಯದಲ್ಲಿ ನಿಂಬೆಹಣ್ಣಿನಿಂದ ಸ್ನಾನ ಮಾಡಬೇಡಿ.



Click it and Unblock the Notifications
