Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಬಿಸಿ ನೀರಿನ ಸ್ನಾನದಿಂದ ವಿಶ್ರಾಂತಿ ಪಡೆಯುವುದು ಹೇಗೆ?
ದಿನವಿಡೀ ದುಡಿದು ದಣಿದ ಜೀವಕ್ಕೆ ನಿರಾಳತೆ ಬೇಕೆನಿಸುತ್ತಿದೆಯೇ? ದೇಹದ ಸುಸ್ತು, ಮನಸಿನ ಏಕತಾನತೆಗಳಿಂದ ಸಡಿಲಗೊಂಡು, ಸ್ಫಾಗಳಲ್ಲಿ ಮಸಾಜ್ ಮಾಡಿಸಿಕೊಂಡಾಗ ಸಿಗುವಷ್ಟೇ ಆನಂದವನ್ನು ಮನೆಯಲ್ಲಿಯೇ ಬಿಸಿನೀರು ಸ್ನಾನ ಮಾಡುವ ಮೂಲಕ ಪಡೆಯಬಹುದು. ಹೇಗೆ ಅನ್ನುತ್ತೀರಾ? ಈ ಲೇಖನ ಓದಿ.
ಹಂತಗಳು:
೧. ಕೊನೆಯ ಬಾರಿ ನೀವು ಸ್ನಾನ ಮಾಡಿದ ಸಂದರ್ಭವನ್ನು ನೆನಪು ಮಾಡಿಕೊಳ್ಳಿ. ಸ್ನಾನದ ತರುವಾಯ ನಿಮ್ಮ ದೇಹದ ದಣಿವು ಮತ್ತು ಒತ್ತದ ನಿವಾರಣೆಯಾಗಿದ್ದು ನಿಮ್ಮ ಗಮನಕ್ಕೆ ಬರುತ್ತದೆ.

೨. ದಿನದಲ್ಲಿ ಮನಸಿನ ದಣಿವಾರಿಸಿಕೊಳ್ಳುವುದಕ್ಕೂ ಕೊಂಚ ಸಮಯ ನೀಡಿ. ಸ್ನಾನಕ್ಕೂ ಪೂರ್ವದಲ್ಲಿ ಮನೆಗೆಲಸ ಹಾಗೂ ನಿಮ್ಮೆಲ್ಲಾ ಜವಾಬ್ಧಾರಿಗಳನ್ನು ಮುಗಿಸಿ. ಮನಸು, ದೇಹ ಹಾಗೂ ಚೈತನ್ಯವನ್ನು ಕಾಪಾಡಿಕೊಂಡು ಸದಾ ಜಾಗೃತಾವಸ್ಥೆಯಲ್ಲಿರಲು ಪ್ರಯತ್ನಿಸಿ.
೩. ನಿಮ್ಮ ಸ್ನಾನವನ್ನು ವಿಶೇಷವಾಗಿಸುವ ಬಗೆ ಇಲ್ಲಿದೆ....ವೈನ್ ಬೇಕೆನಿಸಿದ್ದರೆ ಗ್ಲಾಸಿಗೆ ಸುರಿದುಕೊಳ್ಳಿ. ನಿಮ್ಮಿಷ್ಟದ ಯಾವುದೋ ಪತ್ರಿಕೆ ಆಯ್ದುಕೊಳ್ಳಿ. ಓದುವುದಕ್ಕೋ.. ನೋಡುವುದಕ್ಕೋ ನಿಮಗೆ ಬಿಟ್ಟದ್ದು. ಬಳಿಕ ಕೋಣೆಯ ಬೆಳಕನ್ನು ಆರಿಸಿ, ಮೊಂಬತ್ತಿಯನ್ನು ಬೆಳಗಿ.ಪರಿಮಳಯುಕ್ತವಾದ ಮೊಂಬತ್ತಿ ಇದ್ದರೆ ಇನ್ನೂ ಒಳ್ಳೆಯದು. ಈ ಮಂಪರು ಬೆಳಕು ಮನಸಿಗೆ ಖುಷಿ ಕೊಡುತ್ತದೆ. ಬಳಿಕ ಬಿಸಿ ನೀರಿಗೆ ಎಣ್ಣೆ ಬೆರೆಸಿ. ಪರಿಮಳ ದ್ರವ್ಯವನ್ನು ಬಳಸಿ. ನಿಮ್ಮ ಸ್ನಾನದ ವ್ಯವಸ್ಥೆಯನ್ನು ನೋಡಿ ಅರೋಮಾ ಥೆರಪಿಸ್ಟುಗಳು ಕೂಡಾ ಹೌಹಾರಬೇಕು! ಹೀಗೆಲ್ಲಾ ಸಿದ್ಧತೆ ಮಾಡಿಕೊಳ್ಳುವುದು ಮಾರುಕಟ್ಟೆಯ ಪ್ರಾಬಲ್ಯವಿರುವ ಈ ದಿನಗಳಲ್ಲಿ ಅಷ್ಟೇನೂ ಕಷ್ಟವಿಲ್ಲ ಬಿಡಿ.
೪. ಮನಸೋ ಇಚ್ಚೇ ಟಬ್‌ನಲ್ಲಿ ಹೊರಳಾಡಿ. ಹೊರಚೆಲ್ಲುವ ನೀರಿನ ಜತೆಯಲ್ಲಿ ನಿಮ್ಮ ಒತ್ತಡಗಳೂ ಹೊರಹೋದಂತೆ ನಿಮಗೆ ಭಾಸವಾಗುತ್ತದೆ.
೫. ಮನಸನ್ನು ನಿರಾಳತೆಯತ್ತ ಕೊಂಡೊಯ್ಯರಿ. ದಿನವಿಡೀ ಪೂರ್ವದಿಂದ ಪಶ್ಚಿಮಕ್ಕೆ ಬಂದ ಸೂರ್ಯ ಕಡಲಿಗೆ ಮುತ್ತಿಕ್ಕಿ ನಿನಿರಾಳನಾಗುತ್ತಿದ್ದಾನೆಂದು ಭಾವುಸಿ. ಅದೇ ಹೊತ್ತಿಗೆ ಮುಗಿಲಲ್ಲಿ ಕಾಣಿಸಿಕೊಳ್ಳುವ ತಾರಕೆಗಳು, ಮಕ್ಕಳ ಸಂತಸವನ್ನೆಲ್ಲಾ ಕಣ್ಮುಂದೆ ತಂದುಕೊಳ್ಳಿ. ಈ ಹೊತ್ತಿನಲ್ಲಿ ಕೆಲಸ ಹಾಗೂ ಹಣ ಗಳಿಕೆಯ ಚಿಂತೆ ಬೇಡ. ಮನಸ್ಸನ್ನು ತೆರೆದು,ಎಲ್ಲವನ್ನೂ ಧ್ಯಾನದಂತೆ ಆನಂಧಿಸಿ.
೬. ಬಹು ಸಮಯದಿಂದ ನಿಮ್ಮ ದೇಹದಲ್ಲಿ ಮುಳುಗಿಕೊಂಡಿದ್ದ ಹೊಲಸನ್ನು ತೊಳೆಯುವುದಕ್ಕೆಂದೇ ಸ್ನಾನ ಮಾಡುತ್ತಿದ್ದೇನೆಂಬ ಸ್ಥಿತಿಯಿಂದ ಹೊರಬಂದ ಬಳಿಕವೇ ಸ್ನಾನಕ್ಕೆ ಮುಂದಾಗಿ.
೭. ಸ್ನಾನದ ವೇಳೆ ನಿಮ್ಮ ಮನಸ್ಸಿಗೆ ಆನಂದ ಕೊಡುವ ಹಾಡುಗಳನ್ನು ಹಚ್ಚಿಕೊಳ್ಳಿ.
೮. ಪೇಸ್‌ಪ್ಯಾಕ್, ಪೇಸ್ ಮಾಸ್ಕುಗಳು ನಿಮ್ಮ ಮುಖದ ಕಾಂತಿ ಹೆಚ್ಚಿಸುವ ಜತೆ, ಸ್ನಾನಕ್ಕೆ ಹೆಚ್ಚಿನ ಅರ್ಥಪೂರ್ಣತೆಯನ್ನು ಕೊಡುತ್ತದೆ. ನಿಮಗೆ ಅಗತ್ಯವಾದ ಪೇಸ್ ಮಾಸ್ಕ್ ಗಳನ್ನು ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು. ಮನೆಯಲ್ಲಿ ನೀವೇ ಶೃದ್ಧೆಯಿಂದ ತಯಾರಿಸಿದ ಪೇಸ್ ಮಾಸ್ಕ್ ಗಳು ನಿಮ್ಮ ಖುಷಿಯನ್ನು ವೃದ್ಧಿಸುತ್ತವೆ. ಚೆನ್ನಾಗಿ ಹಿಸುಕಿದ ಒಂದು ಬಾಳೆ ಹಣ್ಣು, ಒಂದು ಚಮಚಾ ಜೇನುತುಪ್ಪ, ೫ ಚಮಚಾ ಓಟ್ಸ್ ಅನ್ನು ಚೆನ್ನಾಗಿ ಮಿಶ್ರಣ ಮಾಡಿ ಬಳಸಬಹುದು. ಮಾರುಕಟ್ಟೆಯಲ್ಲೂ ತರಹೇವಾರಿ ಪೇಸ್‌ಪ್ಯಾಕ್‌ಗಳು ಕೈಗೆಟುಕುವ ದರದಲ್ಲಿ ಲಭ್ಯವಿದೆ.
ಸಲಹೆಗಳು:
* ನೀವು ಇಷ್ಟಪಡುವ ಪಾನೀಯ ಕುಡಿಯುತ್ತಾ ಮಾಡಿದ ಸ್ನಾನ ಆ ನೆನಪನ್ನು ಬಹಳಕಾಲದವರೆಗೆ ಮಾಸದಂತೆ ಉಳಿಸುತ್ತದೆ.
* ಸ್ನಾನಕ್ಕೂ ಪೂರ್ವದಲ್ಲಿ ಪೇಶಿಯಲ್ ಮಾಸ್ಕ್ ಹಾಕಿಕೊಳ್ಳುವುದರಿಂದ ನಿಮಗೆ ಸ್ಫಾದಲ್ಲಿ ಇದ್ದಂತೆಯೇ ಅನಿಸುತ್ತದೆ.
ಎಚ್ಚರಿಕೆಗಳು:
ಸ್ನಾನದ ವೇಳೆ ಧ್ಯಾನ ಮಾಡುವುದು ನಿಜಕ್ಕೂ ಕಠಿಣವಾದುದು. ಆದರೆ ನಿಮಗೆ ನೀವೇ ಇದನ್ನು ಮನದಟ್ಟು ಮಾಡೊಳ್ಳಬೇಕೇ ಹೊರತೂ ಬೇರೆ ಯಾರೂ ಹೇಳಲಾರರು. ನೀವು ಸ್ನಾನಕ್ಕಾಗಿ ಸಿದ್ಧತೆ ನಡೆಸುವುದನ್ನು ಕಂಡು ಯಾರಾದರೂ ಪ್ರಶ್ನಿಸಿದಲ್ಲಿ, ತಾವು ಯಾರಿಗೂ ತೊಂದರೆ ಕೊಡುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಿ. ನಿಮ್ಮಷ್ಟಕ್ಕೆ ನೀವು ಸ್ನಾನ ಮುಂದುವರೆಸಿ.
ಸ್ನಾನದ ಸಂದರ್ಭದಲ್ಲಿ ಹೆಚ್ಚು ಕುಡಿಯಬೇಡಿ.ಕುಡಿತ ತೀರಾ ಜಾಸ್ತಿಯಾದರೆ ಸ್ನಾನದ ಆಪ್ಯಾಯತೆಯನ್ನು ಅನುಭವಿಸಲು ಸಾಧ್ಯವಾಗದೇ ಇರಬಹುದು. ಮತ್ತೂ ಕುಡಿಯಬೇಕು ಅನ್ನಿಸುತ್ತಿದ್ದರೆ, ಬಿಸಿನಿರಿನ ಟಬ್ ನಲ್ಲಿ ಕುಳಿತು ಮನಸ್ಸನ್ನು ಬೇರೆ ಕಡೆ ಕೇಂದ್ರೀಕರಿಸಿ ಬಚಾವಾಗಬಹದು.
ರೆಡಿಯೋ, ಟೇಪ್‌ರೆಕಾರ್ಡರ‍್, ಅಥವಾ ಸಿಡಿ ಯಾವುದೇ ಇರಬಹುದು, ಸ್ನಾನದ ವೇಳೆ ನೀವು ಹಾಡು ಕೇಳುತ್ತಿದ್ದರೆ ಅವುಗಳಿಗೆ ನೀರು ತಾಗದಂತೆ ಮುನ್ನೆಚ್ಚರಿಕೆ ವಹಿಸಿ. ಅವು ಹಾಲಾಗುವುದನ್ನು ತಪ್ಪಿಸಿ.
ಮೊಂಬತ್ತಿಯನ್ನು ಸುರಕ್ಷಿತ ಅಂತರದಲ್ಲಿಡಿ.ಬೆಳಕು ನಿಮ್ಮ ಕಣ್ಣಿಗೆ ಕಾಣುತ್ತಿದ್ದರೆ ಸಾಕು.
ತುಂಬಾ ಸಮಯ ನೀರಿನಲ್ಲಿರಬೇಡಿ. ಇದರಿಂದ ನಿಮ್ಮ ಚರ್ಮಕ್ಕೆ ಹಾನಿಯುಂಟಾಗಿ ಬೇಗ ವಯಸ್ಸಾದಂತೆ ಮಾಡುತ್ತದೆ, ಜಾಗೃತೆಯಿರಲಿ.



Click it and Unblock the Notifications
