Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ನೋವು ನಿವಾರಕ ಪುದೀನಾ ಎಣ್ಣೆ ತಯಾರಿಸುವುದು ಹೇಗೆ?
ನಿಮ್ಮದೇ ಸ್ವಂತ ಮಸಾಜ್ ಎಣ್ಣೆಯನ್ನು ಅತ್ಯಗತ್ಯವಾದ ಎಣ್ಣೆಗಳನ್ನು ಸೇರಿಸಿ ತಯಾರಿಸಿಕೊಂಡರೆ ನಿಮ್ಮ ಮಸಾಜ್ ಉತ್ತಮ ಮಟ್ಟಕ್ಕೆ ಏರುತ್ತದೆ. ನಿಮ್ಮ ಅಗತ್ಯಕ್ಕೆ ತಕ್ಕದಾದ ವಸ್ತುಗಳನ್ನು ಮಾತ್ರ ಸೇರಿಸುವುದಲಲ. ಬದಲಿಗೆ ಸೇರಿಸಿದ ವಸ್ತುಗಳು ತಾಜಾ ಮತ್ತು ಶೂದ್ದವಾಗಿರಬೇಕು.
ಈ ಲೇಖನದಲ್ಲಿ ನೀವು ಮಾಸಜ್ ಎಣ್ಣೆಗೆ ಮಿಂಟ್ ಅಥವಾ ಪೆಪ್ಪರ್ ಮಿಂಟ್ (ಕರ್ಪೂರದಂತಹ ವಸ್ತು)ವನ್ನು ಸೇರಿಸುವುದು ಹೇಗೆ ಎಂಬುದನ್ನು ತಿಳಿಯುವಿರಿ. ಪೆಪ್ಪರ್ ಮಿಂಟ್ ಒಂದು ಜಾತಿಯ ಎಣ್ಣೆಯಾಗಿದ್ದು ಜೀರ್ಣಕ್ರಿಯೆ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಇದರ ತಂಪಾದ ಮತ್ತು ಉತ್ತೇಜಿಸುವ ಪರಿಣಾಮದಿಂದಾದಿ ಸ್ನಾಯು ಸೆಳೆತ, ನೋವು, ಹಿಮ್ಮಡಿ ಸೋರುವಿಕೆ, ತಲೆನೋವು, ಅಜೀರ್ಣ, ಹೊಟ್ಟೆ ನೋವು, ನೆಗಡಿ, ಪ್ರಯಾಣದ ಆಯಾಸ ಮತ್ತು ಸಾಮಾನ್ಯವಾದ ಶೀತವೂ ಕೂಡ ಸದ್ದಿಲ್ಲದಂತೆ ಮಾಯವಾಗುತ್ತದೆ.

ಹಂತಗಳು:
1. ಒಂದು ತಟ್ಟೆಯಲ್ಲಿ 10 ಟೀ ಚಮಚೆಯಷ್ಟು ಗ್ರೇಪ್ ಸೀಡ್ ಎಣ್ಣೆಯನ್ನು ತೆಗೆದುಕೊಳ್ಳಿ. ಬಹಳಷ್ಟು ರೀತಿಯ ಎಣ್ಣೆಗಳ ಮಧ್ಯೆ ಗ್ರೇಪ್ ಸೀಡ್ ಎಣ್ಣೆಗೆ ಯಾವುದೇ ಅಡ್ಡ ವಾಸನೆಗಳಿರುವುದಿಲ್ಲ ಮತ್ತು ಎಲ್ಲ ಸೂಪರ್ ಮಾರ್ಕೇಟ್ ಗಳಲ್ಲೂ ಇದು ದೊರೆಯುತ್ತದೆ.
2. ರೋಸ್ ಮರಿಯ 4 ಹನಿಗಳು, ಯೂಕ್ಯಾಲಿಪ್ಟಸ್ ನ 3 ಹನಿಗಳು, ಅಗತ್ಯವಾದ ಪೆಪ್ಪರ್ ಮಿಂಟ್ ಎಣ್ಣೆಯ 2 ಹನಿಗಳನ್ನು ಸೇರಿಸಿ.
ಯೂಕ್ಯಾಲಿಪ್ಟಸ್ ಮತ್ತು ಪೆಪ್ಪರ್ ಮಿಂಟ್ ನ ಮಿಂಟ್ ಸುವಾಸನೆ ಮನಸ್ಸು ಮತ್ತು ದೇಹವನ್ನು ಚುರುಕುಗೊಳಿಸುತ್ತದೆ. ಜೀರ್ಣಕ್ರಿಯೆ ಹೆಚ್ಚಿಸಿ, ಕಟ್ಟಿದ ಮೂಗನ್ನು ಸರಿಪಡಿಸುತ್ತದೆ. ಬೆಳಗಿನ ಸಮಯಕ್ಕೆ ಈ ಮಸಾಜ್ ಸೂಕ್ತವಾಗಿದ್ದು ಶೀತದಿಂದ ಬಳುತ್ತಿರುವವರಿಗೆ ಇದು ಸರಿಯಾದದ್ದು. ಜೊತೆಗೆ ಸ್ನಾಯು ಸೆಳೆತವನ್ನು ಸರಿಮಾಡಿ, ಮನಸ್ಸನ್ನು ಚುರುಕುಗೊಳಿಸಿ, ಚರ್ಮಕ್ಕೆ ಹೊಳಪು ನೀಡುತ್ತದೆ. ಮಿಂಟ್ ನ ಗುಣದಿಂದ ಎಲ್ಲವೂ ಶಮನಗೊಳ್ಳುವುದು ಪಕ್ಕಾ.
3. ಸೇರಿಸಿದ ಎಲ್ಲ ಪದಾರ್ಥಗಳನ್ನು ಸರಿಯಾಗಿ ಕಲಸಿರಿ. ತಯಾರಿಸಿದ ಮಿಂಟ್ ಮಸಾಜ್ ಎಣ್ಣೆಯನ್ನು ಗಟ್ಟಿಯಾದ ಕಪ್ಪು ಗ್ಲಾಸ್ ಬಾಟಲಿಗೆ ತುಂಬಿಸಿಡಿ. ಕಪ್ಪು ಬಾಟಲಿನಲ್ಲಿ ಹಿಡಿದಿಟ್ಟ ಎಣ್ಣೆ ಬೇಗ ಆಕ್ಸಿಡೈಜಿಂಗ್ ಆಗುವುದಿಲ್ಲ.
4. ಎಲ್ಲೆಲ್ಲಿ ಮಸಾಜ್ ಮಾಡಿಕೊಳ್ಳಬೇಕೋ ಅಲ್ಲೆಲ್ಲ ಮಸಾಜ್ ಮಾಡಿಕೊಳ್ಳಿ.
5. ಮಸಾಜ್ ಎಣ್ಣೆಯನ್ನು ಮಕ್ಕಳ ಕೈಗೆ ಸಿಗದಂತೆ ಕತ್ತಲಿನಲ್ಲಿಡಿ. ತಂಪಾದ ಜಾಗದಲ್ಲಿಟ್ಟರೆ ಒಳ್ಳೆಯದು.
6. ಈ ಮಸಾಜ್ ಎಣ್ಣೆಯನ್ನು ಖಾಲಿಯಾಗುವ ಮುಂಚೆ 3-4 ಬಾರಿ ಬಳಸಬಹುದು. ಇದನ್ನು ಹಾಳು ಮಾಡದೇ ನಿಮಗೆ ಬೇಕಾದ ರೀತಿಯಲ್ಲಿ ಮೊದಲ ಸಲ ಬಳಸಿದಂತೇ ಬಳಸಬಹುದು.
7. ಮಸಾಜ್ ಮಾಡಿಕೊಳ್ಳುವುದು ವಿಶ್ರಾಂತಿಗಾಗಿ. ವಿಶ್ರಾಂತಿಯೆಂದರೆ ಬಹಳಷ್ಟು ಮಂದಿಗೆ ಮೋಜು. ಈ ವಿಶ್ರಾಂತಿಯನ್ನು ಆಸ್ವಾದಿಸಿ.



Click it and Unblock the Notifications