Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಕೂದಲಿಗೆ ಬಿಸಿ ಎಣ್ಣೆ ಚಿಕಿತ್ಸೆ ಮಾಡಿಕೊಳ್ಳುವುದು ಹೇಗೆ?
ಇಡೀ ದಿನ ಕೆಟ್ಟ, ಒಣಗಿದ, ಸುಕ್ಕು ಸುಕ್ಕಾಗಿ ಗಂಟುಬಿದ್ದ ಕೂದಲಿನೊಂದಿಗೆ ಹೋರಾಡುವುದೆಂದರೆ ಯಾರಿಗೆ ತಾನೇ ಇಷ್ಟ ಹೇಳಿ? ಅದೃಷ್ಟವಶಾತ್ ಇದಕ್ಕೊಂದು ತೀರಾ ಸುಲಭವಾದ ಪರಿಹಾರವೊಂದನ್ನು ನಿಮ್ಮ ಅಡುಗೆಕೋಣೆಯಲ್ಲಿಯೇ ಕಂಡುಕೊಳ್ಳಬಹುದು. ನೀವು ನಿಮ್ಮ ಅಡುಗೆಗೆ ಉಪಯೋಗಿಸುವ ತರಕಾರಿ ಎಣ್ಣೆ ಅತ್ಯುತ್ತಮವಾದ ಹೇರ್ ಕಂಡಿಷನರ್ ರೀತಿಯಲ್ಲಿ ಕೆಲಸ ಮಾಡುತ್ತದೆ.
ಇದೇ ಎಣ್ಣೆ ನಿಮ್ಮ ಕೂದಲಿಗೆ ಹೊಳಪು ತರುತ್ತದೆ ಮತ್ತು ಕೂದಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಕೂದಲು ಸೀಳಾಗುವುದನ್ನು ತಪ್ಪಿಸುತ್ತದೆ. ಎಸೆನ್ಶಿಯಲ್ ಎಣ್ಣೆಯ ಕೆಲವೇ ಕೆಲವು ಹನಿಗಳು ನಿಮ್ಮ ಬಿಸಿ ಎಣ್ಣೆ ಚಿಕಿತ್ಸೆಗೆ ಹೂವು, ವನಸ್ಪತಿಗಳ ಶಕ್ತಿಯನ್ನು ನೀಡುತ್ತವೆ.

ಸೂಚನೆಗಳು:
1. ಶುದ್ದವಾದ ಕೊಬ್ಬರಿ ಎಣ್ಣೆ, ಶುದ್ದವಾದ ಆಲೀವ್ ಎಣ್ಣೆ ಮತ್ತು ಗ್ರೇಪ್ ಸೀಡ್ ಎಣ್ಣೆಯನ್ನು ಗಾಜಿನ ಬಟ್ಟಲಿನಲ್ಲಿ ಸೇರಿಸಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಹತ್ತು ಸೆಕೆಂಡ್ ಗಳ ಕಾಲ ಮೈಕ್ರೋವೇವ್ ನಲ್ಲಿ ಬಿಸಿಮಾಡಿ. ಮೈಕ್ರೋವೇವ್ ಬದಲಿಗೆ ಬಿಸಿ ನೀರಿನ ಪಾತ್ರೆಯಲ್ಲಿಟ್ಟೂ ಕೂಡ ಎಣ್ಣೆಯ ಮಿಶ್ರಣವನ್ನು ಬಿಸಿ ಮಾಡಬಹುದು. ರೋಸ್ ಮರಿ ಎಣ್ಣೆ ಮತ್ತು ಲ್ಯಾವೆಂಡರ್ ಎಣ್ಣೆಯ ಮೂರು ಹನಿಗಳು ಮತ್ತು ಸೇಜ್ ಎಣ್ಣೆಯ ಎರಡು ಹನಿಗಳನ್ನು ಇದಕ್ಕೆ ಅಗತ್ಯವಾಗಿ ಸೇರಿಸಿ. ಸರಿಯಾಗಿ ಮಿಶ್ರಗೊಳ್ಳವವರೆಗೆ ಮರದ ಚಮಚೆಯಿಂದ ಸರಿಯಾಗಿ ಕಲಕಿ.
2. ನಿಮ್ಮ ಕೂದಲನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿಕೊಳ್ಳಿ. ನಿಮ್ಮ ಕೈಯ ಹಿಂಬದಿಯಿಂದ ಮುಟ್ಟಿ ಪರೀಕ್ಷಿಸಿ ಬಿಸಿ ಎಣ್ಣೆ ಅತಿಯಾಗಿ ಬಿಸಿಯಾಗಿಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳಿ. ಸ್ವಲ್ಪ ಪ್ರಮಾಣದ ಬೆಚ್ಚಗಿನ ಎಣ್ಣೆಯನ್ನು ನೆತ್ತಿಯ ಭಾಗಕ್ಕೆ ಹಾಕಿ ಮಸಾಜ್ ಮಾಡಿಕೊಳ್ಳಿ. ನಂತರ ಕೂದಲಿನ ತುದಿಯವರೆಗೆ ಎಳೆದು ತನ್ನಿ. ಕೂದಲು ಮತ್ತು ನೆತ್ತಿಯ ಅಷ್ಟೂ ಭಾಗಕ್ಕೆ ಈ ಮಸಾಜ್ ಪ್ರಕ್ರಿಯೆಯನ್ನು ಪುನರಾವರ್ತಿಸಿ.
3. ಪ್ಲಾಸ್ಟಿಕ್ ಕಂಡೀಷನಿಂಗ್ ಟೊಪ್ಪಿ ಬಳಸಿ ನಿಮ್ಮ ಎಣ್ಣೆ ಹಚ್ಚಿದ ಕೂದಲನ್ನು ಮುಚ್ಚಿಕೊಳ್ಳಿ. ಹೀಟಿಂಗ್ ಕ್ಯಾಪ್ ಅಥವಾ ಬಾನೆಟ್ ಡ್ರೈಯರ್ ನ ಅಡಿಯಲ್ಲಿ 10 ರಿಂದ 15 ನಿಮಿಷಗಳ ಕಾಲ ಕುಳಿತುಕೊಳ್ಳಿ. ಅಥವಾ, ಇದಕ್ಕೆ ಪರ್ಯಾಯವಾಗಿ ಬಿಸಿಯಾದ ಟವೆಲ್ ನಿಂದ ನಿಮ್ಮ ಕೂದಲನ್ನು ಸುತ್ತಿ. ಮತ್ತು ಟವೆಲ್ ನ ಬಿಸಿ ಹಿಡಿದಿಡುವಂತೆ ಮತ್ತೊಂದು ಟವೆಲ್ ನಿಂದ ಕೂದಲನ್ನು ಮುಚ್ಚಿ. ನಿಗದಿತ ಸಮಯದ ನಂತರ ಕೂದಲಿಗೆ ನಿಮ್ಮಿಚ್ಚೆಯ ಶಾಂಪೂ ಮತ್ತು ಕಂಡಿಷನ್ ಬಳಸಿ.
ಸಲಹೆ ಮತ್ತು ಎಚ್ಚರಿಕೆಗಳು:
ಹೆಚ್ಚು ಪರಿಣಾಮಕಾರಿಯಾದ ಕಂಡಿಷನಿಂಗ್ ಚಿಕಿತ್ಸೆಗೆ ರಾತ್ರಿ ಮಲಗುವ ಮುಂಚೆ ಬಿಸಿ ಎಣ್ಣೆಯನ್ನು ಹಚ್ಚಿಕೊಳ್ಳಿ ಮತ್ತು ಮುಂಜಾನೆದ್ದು ಶಾಂಪೂ ಹಾಗೂ ಕಂಡಿಷನ್ ಬಳಸಿ ಸ್ನಾನ ಮಾಡಿ.
ಬಿಸಿ ಎಣ್ಣೆ ಚಿಕಿತ್ಸೆಗೆ ನೀವು ಬಳಸಿದ ಎಲ್ಲ ಎಣ್ಣೆಗಳನ್ನು ಪೂರ್ತಿ ತಲೆಗೆ ಹಚ್ಚಿಕೊಳ್ಳುವ ಮುನ್ನ ನಿಮ್ಮ ಮೊಣಕೈ ಒಳಭಾಗಕ್ಕೆ ಅಥವಾ ಕುತ್ತಿಗೆಯ ಭಾಗಕ್ಕೆ ಹಚ್ಚಿ, ಯಾವುದೇ ದುಷ್ಪರಿಣಾಮ ಉಂಟಾಗುವುದಿಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳಿ.



Click it and Unblock the Notifications
