Latest Updates
-
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ!
ನಿಮ್ಮ ಕೂದಲಿಗೆ ವಿಟಮಿನ್ ಸಿ ಬಳಸಿದರೆ ದೊರೆಯುತ್ತೆ ಈ ಪ್ರಯೋಜನಗಳು, ಬಳಸುವುದು ಹೇಗೆ?
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರಿಂದ ಹಿಡಿದು ಚರ್ಮದ ಆರೋಗ್ಯ ಕಾಪಾಡಿಕೊಳ್ಳುವವರೆಗೆ, ಮಕ್ಕಳಿಂದ ಹಿಡಿದು ಗರ್ಭಿಣಿಯರವೆಗೆ ವಿಟಮಿನ್ ಸಿ ಎನ್ನುವುದು ಪ್ರತಿಯೊಬ್ಬರಿಗೂ ಬೇಕಾಗಿರುವ ಅಗತ್ಯ ಜೀವಸತ್ವಗಳ ಪಟ್ಟಿಯಲ್ಲಿ ಒಂದಾಗಿದೆ. ವಿಟಮಿನ್ ಸಿ ಕೇವಲ ಆಹಾರ ಪದಾರ್ಥಗಳಲ್ಲಿ ಮಾತ್ರವಲ್ಲ ನೀವು ಬಳಸುವ ಸೌಂದರ್ಯವರ್ಧಕಗಳಲ್ಲಿಯೂ ಇರುತ್ತದೆ ಎಂದರೆ ನೀವು ನಂಬಲೇಬೇಕು..!

ಅಷ್ಟರ ಮಟ್ಟಿಗಿನ ವ್ಯಾಪ್ತಿಯನ್ನು ವಿಟಮಿನ್ ಸಿ ಹೊಂದಿದೆ. ಕೂದಲಿನ ಆರೋಗ್ಯವನ್ನು ಕಾಪಾಡುವುದರಲ್ಲಿಯೂ ವಿಟಮಿನ್ ಸಿ ಹಿಂದೆ ಬಿದ್ದಿಲ್ಲ. ಅಷ್ಟೇ ಏಕೆ ಗರ್ಭದಲ್ಲಿ ಬೆಳೆಯುತ್ತಿರುವ ಭ್ರೂಣದ ಬೆಳವಣಿಗೆಯಲ್ಲಿಯೂ ವಿಟಮಿನ್ ಸಿ ಪಾತ್ರ ಮಹತ್ವವಾದದ್ದು. ಕೋವಿಡ್ ಮಹಾಮಾರಿ ಬಂದ ಸಂದರ್ಭದಲ್ಲಿ ವಿಟಮಿನ್ ಸಿ ಮನುಷ್ಯನಿಗೆ ಎಷ್ಟು ಅಗತ್ಯ ಎನ್ನುವುದು ಬಹುತೇಕ ಎಲ್ಲರ ಗಮನಕ್ಕೂ ಬಂದಿತ್ತು ಎಂದು ಹೇಳಿದರೆ ತಪ್ಪಾಗುವುದಿಲ್ಲ.
ದೇಹದ ಸಮಗ್ರ ಆರೋಗ್ಯಕ್ಕೆ ವಿಟಮಿನ್ ಸಿ ಒಳ್ಳೆಯದು ಎಂಬುದನ್ನು ನಾವು ಅರಿತಿದ್ದೇವೆ. ಆದರೆ ನಮ್ಮ ಕೇಶರಾಶಿ ಸೊಂಪಾಗಿ ಬೆಳೆಯಲು ವಿಟಮಿನ್ ಸಿ ಹೇಗೆ ಪಾತ್ರವಹಿಸುತ್ತದೆ..? ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಈ ವಿಟಮಿನ್ ಸಿಯಲ್ಲಿ ಅಡಕವಾಗಿರುವ ಯಾವ ಅಂಶವು ನಿಮ್ಮ ಕೂದಲನ್ನು ಸೊಂಪಾಗಿಸುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ವಿಟಮಿನ್ ಸಿ ಎನ್ನುವುದು ನಮ್ಮ ತ್ವಚೆಯ ಆರೋಗ್ಯ, ಕೂದಲಿನ ಆರೋಗ್ಯ ಅಷ್ಟೇ ಏಕೆ ನಮ್ಮ ನೆತ್ತಿಯ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಒಂದು ರೀತಿಯಲ್ಲಿ ವಿಟಮಿನ್ ಸಿಯನ್ನು ಸೂಪರ್ ವಿಟಮಿನ್ ಎಂದು ಕರೆಯಬಹುದಾಗಿದೆ. ಸೂರ್ಯನ ವಿಕಿರಣಗಳಿಂದ ಕೂದಲಿಗೆ ಆಗುವ ಹಾನಿ, ತೇವಾಂಶ ಕಳೆದುಕೊಂಡ ಕೂದಲು, ನೆತ್ತಿಯ ಆರೋಗ್ಯ ಸಮಸ್ಯೆ ಹೀಗೆ ನಾನಾ ಸಮಸ್ಯೆಗಳಿಗೆ ವಿಟಮಿನ್ ಸಿ ಪರಿಹಾರ ನೀಡುತ್ತದೆ.
ವಿಟಮಿನ್ ಸಿ ಯಾವೆಲ್ಲ ರೀತಿಯಲ್ಲಿ ಕೂದಲಿನ ಆರೋಗ್ಯ ಕಾಪಾಡುತ್ತದೆ ಎಂಬುದನ್ನು ತಿಳಿದುಕೊಳ್ಳೋಣ :
ಕೂದಲು ಬಲಪಡಿಸುವಿಕೆ : ಬಲವಾದ ಕೂದಲು ಹೊಂದಬೇಕು ಎಂದರೆ ಕಾಲೋಜಿನ್ ಅಂಶ ಇರಬೇಕು. ವಿಟಮಿನ್ ಸಿ ಈ ಕಾಲೋಜಿನ್ ಅಂಶವನ್ನು ಬಲಪಡಿಸುವ ಸಾಮರ್ಥ್ಯ ಹೊಂದಿರುತ್ತದೆ. ಇದರಿಂದ ನಮ್ಮ ಕೇಶರಾಶಿ ದಟ್ಟವಾಗಿ ಬೆಳೆಯುತ್ತದೆ.
ನೆತ್ತಿಯ ಗಾಯ ವಾಸಿ : ಅನೇಕರಿಗೆ ತೇವಾಂಶಯುಕ್ತ ಹೊಟ್ಟಿನಿಂದಾಗಿ ನೆತ್ತಿಯಲ್ಲಿ ಗಾಯಗಳಾಗಿರುತ್ತದೆ. ಆದರೆ ವಿಟಮಿನ್ ಸಿ ನೆತ್ತಿಗೆ ಸೂಕ್ತ ಶಕ್ತಿಯನ್ನು ಒದಗಿಸುವ ಮೂಲಕ ನೆತ್ತಿಯಲ್ಲಿ ಗಾಯಗಳಾಗದಂತೆ ನೋಡಿಕೊಳ್ಳುತ್ತದೆ. ನೆತ್ತಿಯ ಆರೋಗ್ಯ ಸರಿಯಾಗಿದೆ ಎಂದರೆ ನಿಮ್ಮ ಕೂದಲು ಆರೋಗ್ಯವಾಗಿದೆ ಎಂದೇ ಅರ್ಥ.
ಹೊಸ ಕೂದಲುಗಳ ಜನನ : ವಿಟಮಿನ್ ಸಿ ಅಂಶಯುಕ್ತ ಆಹಾರ ಸೇವನೆ, ವಿಟಮಿನ್ ಸಿ ಅಂಶಯುಕ್ತ ಕೇಶವರ್ಧಕಗಳ ಬಳಕೆಯಿಂದಾಗಿ ಕ್ರಮೇಣವಾಗಿ ನೀವು ಹೊಸ ಕೂದಲುಗಳನ್ನು ನೆತ್ತಿಯ ಮೇಲೆ ಕಾಣಲಿದ್ದೀರಿ.
ಹಾರ್ಮೋನ್ಗಳ ಏರಿಳಿತ ನಿಯಂತ್ರಣ : ಅನೇಕರಿಗೆ ಒತ್ತಡ ಉಂಟಾಗಾದ ಹಾರ್ಮೋನ್ಗಳಲ್ಲಿ ಏರಿಳಿತ ಕಂಡುಬರುತ್ತದೆ. ಇದರಿಂದ ಅನೇಕರಿಗೆ ಕೂದಲು ಉದುರುವಿಕೆ ಉಂಟಾಗುತ್ತದೆ. ಆದರೆ ವಿಟಮಿನ್ ಸಿ ಅಂಶಯುಕ್ತ ಅಹಾರಗಳ ಸೇವನೆಯಿಂದಾಗಿ ಹಾರ್ಮೋನ್ಗಳ ಏರಿಳಿತವನ್ನು ನಿಯಂತ್ರಣಕ್ಕೆ ತರಬಹುದಾಗಿದೆ. ಇದರಿಂದ ಕೂದಲು ಉದುರುವಿಕೆ ಕೂಡ ಕಡಿಮೆಯಾಗುತ್ತದೆ.
ವಿಟಮಿನ್ ಸಿ ಅಂಶ ಹೆಚ್ಚಿಸಲು ಯಾವೆಲ್ಲ ಆಹಾರ ಪದಾರ್ಥಗಳನ್ನು ಸೇವಿಸಬೇಕು..?
ವಿಟಮಿನ್ ಸಿ ಸಾಮಾನ್ಯವಾಗಿ ಬಹುತೇಕ ಆಹಾರಗಳಲ್ಲಿ ಸಿಗುತ್ತದೆ. ನಿಮ್ಮ ಸುತ್ತಮುತ್ತಲೇ ಸಿಗುವ ಕಿತ್ತಳೆ ಹಣ್ಣು, ನಿಂಬೆ ಹಣ್ಣು, ಬಸಳೆ, ಪಪ್ಪಾಯ, ಕಿವಿ ಹಣ್ಣು, ಬ್ರೊಕೊಲಿ, ದ್ರಾಕ್ಷಿ, ಬೆರ್ರಿ ಜಾತಿಗೆ ಸೇರಿದ ಹಣ್ಣುಗಳು, ಕಾಳು ಮೆಣಸು, ನೆಲ್ಲಿಕಾಯಿ ಹೀಗೆ ಸಾಕಷ್ಟು ಆಹಾರ ಪದಾರ್ಥಗಳು ವಿಟಮಿನ್ ಸಿಯನ್ನು ಹೊಂದಿರುತ್ತವೆ.
ಕೇವಲ ವಿಟಮಿನ್ ಸಿ ಅಂಶಯುಕ್ತ ಆಹಾರ ಪದಾರ್ಥಗಳು ಮಾತ್ರವಲ್ಲ. ಮಾರುಕಟ್ಟೆಯಲ್ಲಿ ನಿಮಗೆ ವಿಟಮಿನ್ ಸಿ ಅಂಶವನ್ನು ಒಳಗೊಂಡ ಸಾಕಷ್ಟು ಕೇಶವರ್ಧಕ ಉತ್ಪನ್ನಗಳು ದೊರೆಯುತ್ತವೆ. ವಿಟಮಿನ್ ಸಿ ಅಂಶವನ್ನು ಒಳಗೊಂಡ ಶಾಂಪೂ, ಕಂಡೀಷನರ್, ಹೇರ್ ಪ್ಯಾಕ್ಗಳು, ಹೇರ್ ಸೀರಂಗಳನ್ನು ನಿರಂತರ ಬಳಕೆ ಮಾಡುವ ಮೂಲಕ ಕೂಡ ನೀವು ನಿಮ್ಮ ನೆತ್ತಿಯ ಹಾಗೂ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ ಎನ್ನಲಾಗಿದೆ.
ವಿಟಮಿನ್ ಸಿ ಆ್ಯಂಟಿ ಆಕ್ಸಿಡಂಟ್ ಗುಣಗಳನ್ನು ಹೊಂದಿರುವುದರಿಂದ ಕೂದಲಿಗೆ ಅತ್ಯಂತ ಅವಶ್ಯಕವಾಗಿ ಬೇಕಾದ ಜೀವಸತ್ವಗಳಲ್ಲಿ ಒಂದಾಗಿದೆ. ಕೂದಲನ್ನು ಹಾನಿಗೊಳಗಾಗುವುದರಿಂದ ರಕ್ಷಿಸುವುದು ಮಾತ್ರವಲ್ಲದೇ, ನೆತ್ತಿಯ ಆರೋಗ್ಯ ಕಾಪಾಡುವ ಮೂಲಕ ಕೂದಲನ್ನು ಬಲಪಡಿಸಿ, ಹೊಸ ಕೂದಲುಗಳ ಉಗಮಕ್ಕೆ ಅವಕಾಶ ಒದಗಿಸುವ ಕಾರ್ಯವನ್ನು ಮಾಡುವ ವಿಟಮಿನ್ ಸಿ ಕೇಶರಾಶಿಯ ಆರೋಗ್ಯದ ವಿಚಾರದಲ್ಲಿ ಆಲ್ರೌಂಡರ್ ಎಂದೇ ಹೇಳಬಹುದಾಗಿದೆ.



Click it and Unblock the Notifications