Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ಮೊಡವೆ ತಡೆಗಟ್ಟಲು ಬೆಳ್ಳುಳ್ಳಿಯನ್ನು ಹೇಗೆ ಬಳಸಬೇಕು?
ಮೊಡವೆ ಎಂಬುವುದು ಹದಿಹರೆಯದ ಪ್ರಾಯದವರನ್ನು ಕಾಡುವ ತ್ವಚೆ ಸಮಸ್ಯೆ. ಹದಿಹರೆಯದಲ್ಲಿ ಹಾರ್ಮೋನ್‌ಗಳ ಬದಲಾವಣೆಯಾಗುತ್ತದೆ, ಈ ಸಮಯದಲ್ಲಿ ಮೊಡವೆ ಕಾಡುವುದು, ಅದರಲ್ಲೂ ಎಣ್ಣೆ ತ್ವಚೆಯವರಿಗೆ ಈ ಸಮಸ್ಯೆ ಕಾಡುವುದು.
ಇನ್ನು ಕೆಲವೊಂದು ಆರೋಗ್ಯ ಸಮಸ್ಯೆ, ಮಾನಸಿಕ ಒತ್ತಡ, ತುಂಬಾ ಬೆವರುವುದು, ತ್ವಚೆಯನ್ನ ಸರಿಯಾಗಿ ಆರೈಕೆ ಮಾಡಿರುವುದು ಇದರಿಂದ ಕೂಡ ಮೊಡವೆ ಸಮಸ್ಯೆ ಹೆಚ್ಚಾಗುವುದು. ಈ ಮೊಡವೆ ತಡೆಗಟ್ಟುವಲ್ಲಿ ಬೆಳ್ಳುಳ್ಳಿ ತುಂಬಾನೇ ಪರಿಣಾಮಕಾರಿ, ಹಾಗೇ ಜಜ್ಜಿ ಮುಖಕ್ಕೆ ಹಚ್ಚಿದರೆ ಮುಖ ಸುಟ್ಟು ಹೋಗುವುದು, ಆದ್ದರಿಂದ ಇದನ್ನು ಹೇಗೆ ಬಳಸಬೇಕು ಎಂದು ನೋಡೋಣ ಬನ್ನಿ:

ಮೊಡವೆ ನಿಯಂತ್ರಣಕ್ಕೆ ಬೆಳ್ಳುಳ್ಳಿ ಹೇಗೆ ಬಳಸಬೇಕು?
2 ಬಳ್ಳುಳ್ಳಿ ಎಸಳು
1 ಚಮಚ ರೋಸ್ ವಾಟರ್
ಇವುಗಳನ್ನು ಮಿಶ್ರ ಮಾಡಿ ಮೊಡವೆ ಇರುವ ಕಡೆಗೆ ಹಚ್ಚಿ ಸ್ವಲ್ಪ ಹೊತ್ತು ಬಿಡಿ, ನಂತರ ತಣ್ಣೀರು ಅಥವಾ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.
ಮೊಸರು ಮತ್ತು ಬೆಳ್ಳುಳ್ಳಿ
4 ಬೆಳ್ಳುಳ್ಳು ಎಸಳು ಜಜ್ಜಿ ರಸ ತೆಗೆದು ಅದನ್ನು 1 ಚಮಚ ಮೊಸರು ಜೊತೆ ಹಾಕಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಒಣಗಿದ ಮೇಲೆ ಮುಖ ತೊಳೆಯಿರಿ.
ಮೊಸರು, ಜೇನು, ಬೆಳ್ಳುಳ್ಳಿ
ನೀವು3-4 ಬೆಳ್ಳುಳ್ಳಿ ಜಜ್ಜಿ ಅದರ ರಸ ತೆಗೆದು ಅದಕ್ಕೆ ಜೇನು, 1/2 ಚಮಚ ಮೊಸರು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. 20 ನಿಮಿಷ ಬಿಟ್ಟು ಮುಖ ತೊಳೆಯಿರಿ.
ಬೆಳ್ಳುಳ್ಳಿ ಮತ್ತು ಲೋಳೆಸರ
ನೀವು ಲೋಲೆಸರಕ್ಕೆ ಬೆಳ್ಳುಳ್ಳಿ ರಸ ಹಾಕಿ ಪ್ರತಿನಿತ್ಯ ಮುಖಕ್ಕೆ ಹಚ್ಚಿ 10-15 ನಿಮಿಷ ಬಿಟ್ಟು ಮುಖ ತೊಳೆಯಿರಿ ಹೀಗೆ ಮಾಡಿದರೆ ಮೊಡವೆಯನ್ನು ನಿಯಂತ್ರಿಸಬಹುದು.
ಬೆಳ್ಳುಳ್ಳಿಯಲ್ಲಿರುವ ಸೌಂದರ್ಯವರ್ಧಕ ಗುಣಗಳು
ನೆರಿಗೆ ತಡೆಗಟ್ಟುತ್ತದೆ
ವಯಸ್ಸಾಗುತ್ತಿದ್ದಂತೆ ನೆರಿಗೆ ಬೀಳುವುದು ಸಹಜ, ಆದರೆ ಕೆಲವರು ಬೇಗನೆ ವಯಸ್ಸಾದಂತೆ ಕಾಣುತ್ತಾರೆ, ಮುಖದಲ್ಲಿ ಬೇಗನೆ ನೆರಿಗೆಗಳು ಬೀಳುವುದು, ಯೌವನದ ಕಳೆ ತುಂಬಾ ಸಮಯ ಕಾಪಾಡಲು ಬೆಳ್ಳುಳ್ಳಿ ಸಹಕಾರಿ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಎಸಳು ಬೆಳ್ಳುಳ್ಳಿ ತಿನ್ನಿ. ಹೀಗೆ ತಿನ್ನುವುದರಿಂದ ಅಕಾಲಿಕ ನೆರಿಗೆ ತಡೆಗಟ್ಟಬಹುದು.
ಬ್ಲ್ಯಾಕ್ ಹೆಡ್ಸ್ ತಡೆಗಟ್ಟಲು
ಟೊಮೆಟೊವನ್ನು ಕತ್ತರಿಸಿ, ಅದಕ್ಕೆ ಬೆಳ್ಳುಳ್ಲಿ ಜಜ್ಜಿ ರಸ ಹಾಕಿ ಅದನ್ನು ಮುಖಕ್ಕೆ ಹಚ್ಚಿ 10-15 ನಿಮಿಷ ಬಿಟ್ಟು ಮುಖವನ್ನು ತೊಳೆಯಿರಿ. ಹಿಗೆ ಮಾಡಿದರೆ ಬ್ಲ್ಯಾಕ್ ಹೆಡ್ಸ್ ಕಡಿಮೆಯಾಗುವುದು.
ತಲೆಹೊಟ್ಟು ಹೋಗಲಾಡಿಸಬಹುದು
2 ಕಪ್ ನೀರಿಗೆ 2 ಎಸಳು ಬೆಳ್ಳುಳ್ಳಿ ಹಾಕಿ ಕುದಿಸಿ, ನಂತರ ನೀರು ತಣ್ಣಗಾಗಲು ಬಿಡಿ, ನಂತರ ತಲೆಸ್ನಾನ ನಂತರ ನೀರನ್ನು ತಲೆಗೆ ಹಾಕಿ, ವಾರದಲ್ಲಿ 3 ಬಾರಿ ಈ ರೀತಿ ಮಾಡಿದರೆ ತಲೆಹೊಟ್ಟು ಕಡಿಮೆಯಾಗುವುದು.
ವೈಟ್ ಪ್ಯಾಚ್ ಹೋಗಲಾಡಿಸುತ್ತೆ
ವೈಟ್‌ಪ್ಯಾಚ್ ಅಥವಾ ಹುಳಕಡ್ಡಿಯಾಗಿದ್ದರೆ ಬೆಳ್ಳುಳ್ಳಿ ರಸವನ್ನು ಆ ಭಾಗಕ್ಕೆ ಹಾಕಿ, ಹೀಗೆ ಪ್ರತಿದಿನ ಹಾಕಿದರೆ ಒಂದು ವಾರದಲ್ಲಿ ಹುಳಕಡ್ಡಿ ಮಾಯವಾಗುವುದು.



Click it and Unblock the Notifications