Latest Updates
-
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ? -
ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್: ಭಾರತದ ಗೆಲುವಿನ ಸಂಭ್ರಮಕ್ಕೆ ಇಲ್ಲಿದೆ ವೈರಲ್ ಮೀಮ್ಸ್ ಮತ್ತು ಸೇಫ್ ಸೆಲೆಬ್ರೇಷನ್ ಗೈಡ್!
ಕೂದಲು ಉದುರುವುದನ್ನು ತಡೆಗಟ್ಟಲು ಕರಿ ಜೀರಿಗೆ ಹೇಗೆ ಬಳಸಬೇಕು?
ಕೂದಲು ಉದುರುವುದು ಬಹುತೇಕರ ಸಮಸ್ಯೆಯಾಗಿದೆ, ವಯಸ್ಕರು, ವಯಸ್ಸಾದವರು ಎನ್ನದೆ ಎಲ್ಲರಿಗೂ ಕೂದಲು ಉದುರುವ ಸಮಸ್ಯೆ ಕಂಡು ಬರುತ್ತಿದೆ, ಅನೇಕ ಕಾರಣಗಳಿಂದಾಗಿ ಕೂದಲು ಉದುರುವ ಸಮಸ್ಯೆ ಕಂಡು ಬರುತ್ತಿದೆ. ವಾಯುಮಾಲಿನ್ಯ, ಪೋಷಕಾಂಶದ ಕೊರತೆ, ಅನಾರೋಗ್ಯದ ಸಮಸ್ಯೆ ಹೀಗೆ ಅನೇಕ ಕಾರಣಗಳಿಂದಾಗಿ ಕೂದಲು ಉದುರಬಹುದು.
ಅನಾರೋಗ್ಯದ ಕಾರಣ ಹೊರತುಪಡಿಸಿ ಇತರ ಕಾರಣಗಳಿಂದಾಗಿ ನಿಮ್ಮ ಕೂದಲು ಉದುರುತ್ತಿದ್ದರೆ ಅದಕ್ಕೆ ಕರಿಜೀರಿಗೆಯ ಎಣ್ಣೆ ಬಳಸಿದರೆ ನೀವು ಉತ್ತಮ ಫಲಿತಾಂಶ ಪಡೆಯಬಹುದು. ಕರಿ ಜೀರಿಗೆಯನ್ನು ಕೂದಲು ಉದುರುವುದನ್ನು ತಡೆಗಟ್ಟಲು ಹೇಗೆ ಬಳಸಬೇಕು ಎಂದು ನೋಡೋಣ:

ಕರಿಜೀರಿಗೆ
ಹಳ್ಳಿಗಳಲ್ಲಿ, ತೋಟಗಳಲ್ಲಿ ಕರಿಜೀರಿಗೆ ಗಿಡ ಅದಾಗಿಯೇ ಹುಟ್ಟಿಕೊಂಡಿರುತ್ತದೆ, ನೋಡಲು ಕಪ್ಪು ಬಣ್ಣದಲ್ಲಿರುವ ಇದು ತುಂಬಾ ಕಹಿ, ಇದನ್ನು ಹೊಟ್ಟೆನೋವಿಗೆ, ಬಾಣಂತಿಗೆ ಇತರ ಆರೋಗ್ಯ ಸಮಸ್ಯೆ ಮನೆಮದ್ದಾಗಿ ಬಳಸಲಾಗುವುದು. ಕರಿಜೀರಿಗೆ ನಿಮಗೆ ಆಯುರ್ವೇದ ಅಂಗಡಿಗಳಲ್ಲಿಯೂ ದೊರೆಯುತ್ತದೆ.
ಕರಿಜೀರಿಗೆ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು ಹೇಗೆ?
* ಇದರಲ್ಲಿ ಕಬ್ಬಿಣದಂಶ, ಸತು, ವಿಟಮಿನ್ ಎ, ವಿಟಮಿನ್ ಇ ಇರುವುದರಿಂದ ಕೂದಲಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
* ತಲೆಬುಡದಲ್ಲಿ ಫಂಗಲ್ ಮುಂತಾದ ಸಮಸ್ಯೆ ಉಂಟಾಗುವುದನ್ನು ತಡೆಗಟ್ಟಿ ಕೂದಲಿನ ಆರೋಗ್ಯ ಬುಡ ಗಟ್ಟಿಯಾಗುವಂತೆ ಮಾಡುತ್ತದೆ
* ಕೂದಲಿನ ಹೊಳಪು ಹೆಚ್ಚಿಸುವುದು
* ಕೂದಲು ಸೊಂಪಾಗಿ ಬೆಳೆಯಬೇಕೆಂದರೆ ಇದನ್ನು ಕೆಲವು ತಿಂಗಳುಗಳ ಕಾಲ ಬಳಸುತ್ತಾ ಬಂದರೆ ಕೂದಲು ಮಂದವಾಗುವುದು
ಕರಿಜೀರಿಗೆಯನ್ನು ಕೂದಲಿನ ಆರೋಗ್ಯ ವೃದ್ಧಿಸಲು ಹೇಗೆ ಬಳಸಬಹುದು
ನೀವು ಕರಿಜೀರಿಗೆಯ ಎಣ್ನೆ ಮಾಡ ಬಳಸಹುದು
ಬೇಕಾಗುವ ಸಾಮಗ್ರಿ ತೆಂಗಿನೆಣ್ಣೆ1/4 ಲೀಟರ್
2 ಚಮಚ ಕರಿ ಜೀರಿಗೆ
2 ಚಮಚ ಮೆಂತೆ
2 ನೆಲ್ಲಿಕಾಯಿ
ಚಿಕ್ಕ ಈರುಳ್ಳಿ 2
ಕರಿಬೇವು
ಮಾಡುವ ವಿಧಾನ: ಮೊದಲಿಗೆ ಒಂದು ಚಮಚ ಎಣ್ಣೆ ಹಾಕಿ ಆ ಎಣ್ಣೆಗೆ ಕರಿಜೀರಿಗೆ, ನೆಲ್ಲಿಕಾಯಿ, ಈರುಳ್ಳಿ, ಮೆಂತೆ, ಕರಿಬೇವು ಎಲ್ಲಾ ಮೆಲ್ಲನೆ ಫ್ರೈ ಮಾಡಿ, ರುಳ್ಳಿಯ ಹಸಿ ವಾಸನೆ ಸಂಪೂರ್ಣ ಹೋಗಬೇಕು ಹಾಗೆ ಫ್ರೈ ಮಾಡಬೇಕು, ನಂತರ ಎಣ್ಣೆ ಹಾಕಿ ಕಾಯಿಸಿ, ಆ ಎಣ್ಣೆಯನ್ನು ವಾರದಲ್ಲಿ 3 ಬಾರಿ ಬಳಸುತ್ತಾ ಬರುವುದರಿಂದ ಕೂದಲಿನ ಬುಡ ಬಲವಾಗುವುದು.
ಮತ್ತೊಂದು ರೆಸಿಪಿ
ತೆಂಗಿನೆಣ್ಣೆ
ಕರಿಜೀರಿಗೆ
ನೀವು ತೆಂಗಿನೆಣ್ಣೆಗೆ ಕರಿ ಜೀರಿಗೆ ಹಾಕಿ ಅದಕ್ಕೆ ಬ್ರಾಹ್ಮಿ, ಭೃಂಗರಾಜ ಈ ರೀತಿ ಕೂದಲಿನ ಆರೋಗ್ಯ ವೃದ್ಧಿಸುವ ಗಿಡಮೂಲಿಕೆಗಳನ್ನು ಹಾಕಿ ಕಾಯಿಸಿ ಅದನ್ನು ಕೂಡ ಬಳಸಬಹುದು.
ಕರಿ ಜೀರಿಗೆಯ ಮಾಸ್ಕ್
ಕೂದಲು ಉದುರುವುದು ತಡೆಗಟ್ಟಲು ಕರಿ ಜೀರಿಗೆಯ ಹೇರ್ ಮಾಸ್ಕ್ ಬಳಸಬಹುದು. ಕರಿ ಜೀರಿಗೆಯನ್ನು ಪುಡಿ ಮಾಡಿ ಅದಕ್ಕೆ ಮೊಟ್ಟೆಯ ಬಿಳಿ ಹಾಕಿ ಪೇಸ್ಟ್ ರೀತಿ ಮಾಡಿ ಅದನ್ನು ಕೂದಲಿನ ಬುಡಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತಣ್ಣೀರು ಅಥವಾ ಹದ ಬಿಸಿ ನೀರಿನಿಂದ ತಲೆ ತೊಳೆಯಿರಿ. ಹೀಗೆ ಮಾಡುವುದರಿಂದ ಕೂದಲಿನ ಬುಡ ಬಲವಾಗುವುದು, ಕೂದಲು ಉದುರುವುದು ಕಡಿಮೆಯಾಗುವುದು.



Click it and Unblock the Notifications
