Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಹಲ್ಲುಗಳ ಹಳೆಯ ಕಲೆಗಳ ದೂರ ಮಾಡೋದು ಹೇಗೆ? ಇಲ್ಲಿದೆ ಮನೆಮದ್ದು
ಸೌಂದರ್ಯ ಅಂದ ಕೂಡಲೇ ಮುಖದಲ್ಲಿ ಕಲೆ ಇಲ್ಲದಿರುವುದು ಬಿಳಿಯಾಗಿರುವುದು ಅಂದುಕೊಂಡಿರುತ್ತೇವೆ. ಅದು ನಿಜವೂ ಹೌದು. ಆದ್ರೆ ಮುಖ ಲಕ್ಷಣವಾಗಿ ಕಾಣಿಸಬೇಕು ಅಂದ್ರೆ ಅಂಗಾಂಗಳ ಸೌಂದರ್ಯವೂ ಅಗತ್ಯ. ಅಂದ್ರೆ ಮೂಗು, ಕಣ್ಣು, ಬಾಯಿ, ಹಲ್ಲು ಹೀಗೆ ಎಲ್ಲ ಅಂಗಗಳ ಸೌಂದರ್ಯವೇ ಮುಖದ ಸೌಂದರ್ಯ ಎನ್ನಬಹುದು.
ಅದ್ರಲ್ಲೂ ಹಲ್ಲುಗಳು ಮುಖದ ಸೌಂದರ್ಯದಲ್ಲಿ ಬಹುಮುಖ್ಯ ಪರಿಣಾಮಕಾರಿಯಾದ ಅಂಶವಾಗಿದೆ. ಏಕೆಂದರೆ ಹಲ್ಲುಗಳು ಎಷ್ಟು ಅಚ್ಚುಕಟ್ಟಾಗಿ, ಬಿಳಿಯಾಗಿರುತ್ತವೆಯೋ ಅಷ್ಟು ಆತ್ಮವಿಶ್ವಾಸ ನಮ್ಮಲ್ಲಿರುತ್ತದೆ. ಯಾರಿಗಾದರು ಚಿಕ್ಕ ವಯಸ್ಸಿನಲ್ಲಿಯೇ ಹಲ್ಲುಗಳು ಉದುರಿ ಹೋದರೆ ಅಥವಾ ಕೆಟ್ಟು ಹೋದರೆ ಅವರು ಮುಖ ಸೌಂದರ್ಯವೇ ಹಾಳಾದಂತೆ.

ಹಲ್ಲುಗಳು ಯಾವಾಗಲು ಬಿಳಿಯಾಗಿ ಹೊಳೆಯಬೇಕು ಎಂಬ ಕಾರಣಕ್ಕೆ ನಿತ್ಯವು ಹಲ್ಲುಗಳ ಉಜ್ಜುತ್ತೇವೆ. ಆದ್ರೆ ಹಲ್ಲುಗಳು ಸ್ವಚ್ಛವಾಗೋದು ಕಷ್ಟವೇ, ಹಲ್ಲು ಹಳದಿಯಾಗಿ, ಹಲ್ಲಿನ ವಸಡುಗಳಲ್ಲಿ ಕಲೆಗಳು, ಕೊಳೆಗಳು ಸೇರಿಕೊಳ್ಳುವುದನ್ನು ನಾವು ನೋಡುತ್ತೇವೆ. ಇದಕ್ಕೆ ಹಲ್ಲಿನ ಕರೆಗಳು ಎಂದು ಕರೆಯುತ್ತಾರೆ.
ಈ ಬಹುಕಾಲದ ಕಲೆಗಳನ್ನು ನೀವು ಎಷ್ಟು ಬಾರಿ ಯಾವುದೇ ಪೇಸ್ಟ್ ಹಾಕಿ ಉಜ್ಜಿದರು ಹೋಗುವುದಿಲ್ಲ. ಬದಲಿಗೆ ಹಲ್ಲುಗಳು ಮತ್ತಷ್ಟು ಸಮಸ್ಯೆಗೆ ಒಳಗಾಗುವಂತೆ ಮಾಡುತ್ತವೆ. ನೋವು, ರಕ್ತ ಬರುವುದು, ಹುಳು ಹಿಡಿಯುವುದು ಹೀಗೆ ಹತ್ತಾರು ಸಮಸ್ಯೆ ಉಂಟಾಗುವುದು. ಆದ್ರೆ ಈ ಹಳದಿ ಹಲ್ಲು ಮತ್ತು ಹಲ್ಲಿನ ಕಲೆಗಳ ನಿವಾರಣೆಗೆ ಆಯುರ್ವೇದ ಹಾಗೂ ಮನೆಯಲ್ಲೇ ಮದ್ದಿದೆ.
ಹೌದು ಮನೆಯಲ್ಲಿ ಸಿಗುವ ವಸ್ತುಗಳ ಬಳಸಿ ನಿಮ್ಮ ಹಲ್ಲಗಳಲ್ಲಿನ ಕಲೆಗಳ ನಿವಾರಣೆ ಮಾಡಬಹುದು. ಅಷ್ಟಕ್ಕೂ ಯಾವುದೆಲ್ಲಾ ಮನೆ ಮದ್ದು ಮಾಡಬೇಕು? ಮಾಡೋದು ಹೇಗೆ? ಎಂಬ ಕುರಿತ ಮಾಹಿತಿ ಇಲ್ಲಿದೆ.
ಸೋಡಾ ಪುಡಿ ಮತ್ತು ನಿಂಬೆ ರಸ
ಹಲ್ಲಿನ ಕಲೆಗಳು ಮಾಯವಾಗಬೇಕಾದರೆ ದೊಡ್ಡ ದೊಡ್ಡ ವೈದ್ಯರ ಬಳಿ ಹೋಗುವ ಮುನ್ನ ನೀವೆ ಮನೆಯಲ್ಲಿ ಕೇವಲ 2 ರೂಪಾಯಿ ಖರ್ಚು ಮಾಡಿ ಈ ರೀತಿ ಮಾಡಿ. ಮೊದಲು ಒಂದು ಸಣ್ಣ ತಟ್ಟೆಗೆ ಚಿಟಿಕೆ ಸೋಡಾ ಪುಡಿ ತೆಗೆದುಕೊಂಡು ಎರಡು ಹನಿ ನಿಂಬೆ ರಸ ಅದಕ್ಕೆ ಹಿಂಡಿಕೊಳ್ಳಿ. ನಂತರ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಅದನ್ನು ನಿಮ್ಮ ಕೈ ಬೆರಳಿನ ಸಹಾಯದಿಂದ ಹಲ್ಲಿನ ಮೇಲೆ ಮಸಾಜ್ ಮಾಡಿ. ಹೀಗೆ 4 ದಿನ ಮಾಡಿದರೆ ನಿಮ್ಮ ಹಲ್ಲುಗಳು ಬಿಳಿಯಾಗುತ್ತೆ. ಹಳೆಯ ಗುಟ್ಕಾ ಕಲೆಗಳು ಸಹ ಮಾಯವಾಗುತ್ತೆ.
ಶುಂಠಿ ನಿಂಬೆ ಹಣ್ಣಿನ ರಸ
ಒಂದು ಸಣ್ಣ ಶುಂಠಿ ಪೀಸ್ ತೆಗೆದುಕೊಂದು ಚೆನ್ನಾಗಿ ತೊಳೆದು ಅದನ್ನು ಕತ್ತರಿಸಿಕೊಳ್ಳಿ. ಬಳಿಕ ಅದನ್ನು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಪುಡಿ ಮಾಡಿ. ನಂತರ ಅದಕ್ಕೆ ಒಂದು ನಿಂಬೆ ಹಣ್ಣು ಕತ್ತರಿಸಿ ಚೆನ್ನಾಗಿ ರಸವನ್ನು ಹಿಂಡಿ. ಆನಂತರ ರಸವನ್ನು ಚೆನ್ನಾಗಿ ಕೈಯಿಂದ ಹಲ್ಲುಗಳಿಗೆ ಹಚ್ಚಿಕೊಳ್ಳಿ. ನಿತ್ಯ ಈ ರೀತಿ ಹಲ್ಲು ಉಜ್ಜಿದರೆ ಒಸಡು ಗಟ್ಟಿಯಾಗುವ ಜೊತೆಗೆ ಹಳೆಯ ಕಲೆಗಳು ನಿವಾರಣೆಯಾಗುತ್ತದೆ.
ಟೂಥ್ ಪೆಸ್ಟ್ ಮತ್ತು ಉಪ್ಪು-ಸೋಡಾ
ನೀವು ನಿತ್ಯ ಬಳಸುವ ಯಾವುದಾದರೊಂದು ಪೇಸ್ಟ್ ಹಾಗೂ ಒಂದು ಚಮಚ ಉಪ್ಪು ಒಂದು ಚಮಚ ಬೇಕಿಂಗ್ ಸೋಡಾ ಹಾಗೂ ಮೂರು ಹನಿ ನಿಂಬೆ ಹಣ್ಣು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಈ ಮಿಶ್ರಣವನ್ನ ಬ್ರಷ್‌ನಿಂದ ತೆಗೆದುಕೊಂಡು ನಿಮ್ಮ ಹಲ್ಲುಗಳನ್ನು ಉಜ್ಜಿಕೊಳ್ಳಿ. ನಿತ್ಯ ಈ ರೀತಿ ಮಾಡುವುದರಿಂದ ಕೆಲವೇ ದಿನದಲ್ಲಿ ನಿಮ್ಮ ಹಲ್ಲಿನ ಕಪ್ಪು ಕಲೆಗಳು ಮಾಯವಾಗುತ್ತದೆ.



Click it and Unblock the Notifications
