Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ತುಟಿಗಳು ಕಪ್ಪಾಗಿದ್ದರೆ ಕೆಂಪಗಾಗಿಸಲು 1 ವಾರ ಸಾಕು..! ಹೇಗೆ ಗೊತ್ತಾ?
ನಿಮ್ಮ ಮುಖದ ಅಂದವನ್ನು ಮತ್ತಷ್ಟು ಹೆಚ್ಚಿಸುವುದು ಅಂದ್ರೆ ಅದು ತುಟಿಗಳು. ಪುರುಷರಿಗಿಂತ ಹೆಚ್ಚಾಗಿ ಯುವತಿಯರು ಹೆಚ್ಚಾಗಿ ತುಟಿಯ ಬಗ್ಗೆ ಹೆಚ್ಚಾಗಿ ಕಾಳಜಿ ವಹಿಸುತ್ತಾರೆ. ಅದ್ರಲ್ಲೂ ತುಟಿಗಳು ಚೆನ್ನಾಗಿ ಕಾಣಬೇಕು ಅಂತ ಯುವತಿಯರು ತರ ತರದ ಲಿಪ್‌ಸ್ಟಿಕ್ ಬಳಸುತ್ತಾರೆ. ಅಲ್ಲದೆ ಕೆಲವು ಬಾರಿ ತುಟಿ ಕೆಂಪಗಾಗುವಂತೆ ಮಾಡಲು ಮನೆ ಮದ್ದುಗಳ ಬಳಸುತ್ತಾರೆ.
ಮತ್ತೆ ಕೆಲವರು ಸಾವಿರಾರು ರೂಪಾಯಿ ಖರ್ಚು ಮಾಡಿ ತುಟಿ ಕೆಂಪಗಾಗಿಸಲು ಮುಂದಾಗುತ್ತಾರೆ. ಆದ್ರೆ ನಾವಿಂದು ತುಟಿ ಕೆಂಪಾಗಿ ಕಾಣಿಸಲು ಮನೆ ಮದ್ದು ಯಾವುದು ಅದನ್ನು ಹೇಗೆ ಬಳಸಬೇಕು ಎಂಬುದನ್ನು ನೋಡೋಣ.

ನಿಂಬೆ ಹಣ್ಣು ಮತ್ತು ಸಕ್ಕರೆ
ಅರ್ಧ ನಿಂಬೆ ಹಣ್ಣನ್ನು ಕತ್ತರಿಸಿಕೊಂಡು ಅದಕ್ಕೆ ಸಕ್ಕರೆಯನ್ನು ಚೆನ್ನಾಗಿ ಪುಡಿ ಮಾಡಿ ಹಚ್ಚಿಕೊಳ್ಳಬೇಕು. ಬಳಿಕ ತುಟಿಗಳ ಮೇಲೆ ನಿಂಬೆ ಹಣ್ಣನ್ನು ಚೆನ್ನಾಗಿ ಹಚ್ಚಿಕೊಳ್ಳಬೇಕು. 5 ನಿಮಿಷಗಳ ಕಾಲ ತುಟಿ ಮೇಲೆ ಇದನ್ನು ಹಚ್ಚಿ ಕೆಲವು ಕಾಲ ಬಿಟ್ಟು ತೊಳೆಯಬೇಕು. ಸುಮಾರು 1 ವಾರ ನಿರಂತರವಾಗಿ ಹೀಗೆ ಮಾಡಿದರೆ ನಿಮ್ಮ ತುಟಿಯ ಬಣ್ಣ ಕೆಂಪಗಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.
ಜೇನುತುಪ್ಪ ಮತ್ತು ಸಕ್ಕರೆಯ ಸ್ಕ್ರಬ್
ಜೇನುತುಪ್ಪ ಹಾಗೂ ಸಕ್ಕರೆ ನಿಮ್ಮ ತುಟಿಗಳ ಮೇಲ್ಪದರವನ್ನು ನಿವಾರಿಸುವ ಮೂಲಕ ನಿಮ್ಮ ಚರ್ಮದ ಹಾನಿಗೊಳಗಾದ ಪದರವನ್ನು ತೆಗೆದುಹಾಕುತ್ತದೆ ಮತ್ತು ನಿಮ್ಮ ತುಟಿಗಳಿಗೆ ಪುನರ್ಯೌವನ ನೀಡುತ್ತದೆ. ಇದಕ್ಕಾಗಿ ನೀವು ಒಂದು ಸ್ಪೂನ್ ಜೇನು ತುಪ್ಪಕ್ಕೆ ಸಕ್ಕರೆ ಹಾಕಿ ಚೆನ್ನಾಗಿ ಕರಗಿಸಿಕೊಂಡು ತುಟಿ ಮೇಲೆ ಹಚ್ಚಿಕೊಳ್ಳಬೇಕು. ಹೀಗೆ ಸುಮಾರು 1 ವಾರಗಳ ಕಾಲ ಮಾಡಿ ನೋಡಿ ನಿಮ್ಮ ಮುಂದೆ ಫಲಿತಾಂಶ ಕಾಣಲು ಸಿಗುತ್ತದೆ.
ಕೊಬ್ಬರಿಎಣ್ಣೆ ಮತ್ತು ಹರಳೆಣ್ಣೆ
ನಿಮ್ಮ ಮನೆಯಲ್ಲಿರುವ ಕೊಬ್ಬರಿ ಎಣ್ಣೆಯನ್ನು ಒಂದು ಸ್ಪೂನ್‌ನಲ್ಲಿ ತೆಗೆದುಕೊಂಡು ಬಳಿಕ ಒಂದು ಸ್ಪೂನ್‌ನಲ್ಲಿ ಹರಳೆಣ್ಣೆ ತೆಗೆದುಕೊಳ್ಳಿ. ಎರಡನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಎರಡು ಚೆನ್ನಾಗಿ ಸೇರಿಸಿ ಬೆರಳಿನಿಂದ ತುಟಿಗಳ ಮೇಲೆ ಚೆನ್ನಾಗಿ ಹಚ್ಚಿಕೊಳ್ಳಿ, ಇದರಿಂದ ತುಟಿಗಳ ಮೇಲಿರುವ ಸತ್ತ ಕೋಶಗಳ ನಿವಾರಣೆಯಾಗುತ್ತದೆ.
ಅಲೂವೇರಾ
ಅಲೋವೆರಾ ಚರ್ಮದ ಕೋಶಗಳನ್ನು ಒಗ್ಗೂಡಿಸುವ ಅಂಶಗಳನ್ನು ಹೊಂದಿದೆ. ಅವುಗಳನ್ನು ಒಟ್ಟಿಗೆ ಅಂಟಿಸಿ ಮತ್ತು ನಿಮ್ಮ ತುಟಿಗಳನ್ನು ಮೃದುಗೊಳಿಸುತ್ತದೆ. ಹೀಗಾಗಿ ಅಲೂವೇರಾವನ್ನು ತುಟಿಯ ಸುತ್ತ ಚೆನ್ನಾಗಿ ಹಚ್ಚಿ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಬೇಕು. ಆದ್ರೆ ಅಲೂವೇರಾದ ಹಲವು ಕ್ರೀಮ್‌ಗಳು ಸಿಗುತ್ತವೆ ಇವುಗಳ ಬಳಸುವುದಕ್ಕಿಂತಲೂ ಮನೆಯಲ್ಲೇ ಬೆಳೆದ ಅಲೂವೇರಾ ಇದ್ದರೆ ಉತ್ತಮ.
ಹಾಲಿನ ಕೆನೆ
ತುಟಿಗಳ ಮೇಲಿನ ಚರ್ಮವು ಅತ್ಯಂತ ಮೃದುವಾಗಿರುತ್ತದೆ. ಹೀಗಾಗಿ ತುಟಿಗಳಿಗೆ ಕ್ರೀಮ್‌ಗಳು, ಲಿಪ್ ಬಾಮ್ ಹಚ್ಚಲು ಮುಂದಾಗಬೇಡಿ. ನಿಮ್ಮ ಮನೆಯಲ್ಲಿ ಸಿಗುವ ಹಾಲಿನ ಕೆನೆಯನ್ನು ಹಚ್ಚಿ 15ರಿಂದ 20 ನಿಮಿಷ ಬಿಡಿ. ಬಳಿಕ ತೊಳೆಯಿರಿ. ಈ ರೀತಿ 15 ದಿನಗಳ ಕಾಲ ನಿತ್ಯ ಮಾಡಿದರೆ ನಿಮ್ಮ ತುಟಿ ಕಪ್ಪು ಬಣ್ಣದಿಂದ ಕೆಂಪು ಬಣ್ಣಕ್ಕೆ ತಿರುಗಲಿದೆ.
ಲಿಪ್‌ಸ್ಟಿಕ್ ಹಚ್ಚುವುದನ್ನು ಬಿಡಿ
ಮಾರುಕಟ್ಟೆಯಲ್ಲಿ ಲಭ್ಯವಿರುವ ನಾನಾ ರೀತಿಯ ಲಿಪ್‌ಸ್ಟಿಕ್‌ಗಳು ಪೆಟ್ರೋಲಿಯಂ ಪ್ರೋಡಕ್ಟ್‌ಗಳು ಎಂದು ನಮಗೆಲ್ಲಾ ಗೊತ್ತು. ಇದು ತುಟಿಯ ಆರೋಗ್ಯಕ್ಕೆ ಉತ್ತಮವಲ್ಲ. ಅಲ್ಲದೆ ಇದನ್ನು ಬಳಸುವುದು ತುಟಿಯಲ್ಲಿ ಜೀವಕೋಶಗಳ ಹಾನಗೆ ಕಾರಣವಾಗಬಹುದು. ತುಟಿಯ ಬಣ್ಣಗಳ ತಯಾರಿಕೆಗೆ ಬಳಸಲಾಗುವ ವಸ್ತುಗಳ ಪೈಕಿ ಪೆಟ್ರೋ ಕೆಮಿಕಲ್ಸ್ ಸಹ ಒಂದು. ಇದನ್ನು ಕಚ್ಚಾ ತೈಲ ಮತ್ತು ಅನಿಲಗಳಿಂದ ತಯಾರಿಸಲಾಗುತ್ತದೆ. ಇಂತಹ ಹಲವು ಅಂಶಗಳು ತುಟಿಯ ಆರೋಗ್ಯಕ್ಕೆ ಒಳ್ಳೆಯದಲ್ಲ.



Click it and Unblock the Notifications
