Latest Updates
-
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ!
ಮನೆಯಲ್ಲೇ ಬೀಟ್ರೂಟ್ ಲಿಪ್‌ಬಾಮ್ ಮಾಡೋದು ಹೇಗೆ? ಎಷ್ಟು ಸಿಂಪಲ್ ನೋಡಿ!
ಬೇಸಿಗೆಯಲ್ಲಿ ಚರ್ಮದ ಕಾಳಜಿ ವಹಿಸುವುದು ಬಹಳ ಮುಖ್ಯವಾಗುತ್ತೆ. ಈ ಸಮಯದಲ್ಲಿ ನೀವು ಸೂರ್ಯನ ಕಿರಣಗಳಿಂದ ತ್ವಚೆ ಹಾಳಾಗುವುದನ್ನು ತಡೆಯಲು ಹಲವು ಬಗೆಯ ಕ್ರೀಮ್‌ಗಳು, ಕಾಸ್ಮೆಟಿಕ್, ಫೇಷಿಯಲ್ ಕಿಟ್‌ಗಳು, ದುಬಾರಿ ಮೆಡಿಸಿನ್‌ಗಳು, ಸನ್‌ಸ್ಕ್ರೀನ್‌ಗಳು ಬಂದಿವೆ. ಒಂದಲ್ಲಾ ಒಂದು ಬಗೆಯ ಕ್ರೀಮ್ ಅನ್ನು ನಾವು ಹಚ್ಚುವುದು ನೋಡಿರುತ್ತೇವೆ. ಅದರಲ್ಲೂ ಈ ಬಿಸಿಲಿನಿಂದ ಚರ್ಮವನ್ನು ಕಾಪಾಡಿಕೊಳ್ಳಲು ಕ್ರೀಮ್‌ಗಳ ಬಳಕೆ ಮಾಡದೇ ಇರಲು ಸಾಧ್ಯವಿಲ್ಲ.
ಹಾಗೆ ತುಟಿಗಳ ರಕ್ಷಣೆಗೂ ಕೂಡ ನಾವು ಲಿಪ್‌ಬಾಮ್ ಬಳಸುವುದು ನೋಡಿರುತ್ತೇವೆ. ಬೇಸಿಗೆಯಲ್ಲಿ ಸೂರ್ಯನ ಕಿರಣಗಳ ಹಾನಿಯಿಂದ ತುಟಿಯು ಕಪ್ಪಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಹಾಗೆ ತುಟಿಯು ಮಹಿಳೆಯರ ಸೌಂದರ್ಯದ ಭಾಗವಾಗಿದೆ. ಅವರು ತುಟಿಯ ಅಂದ ಹೆಚ್ಚಿಸಲು ದುಬಾರಿ ಬೆಲೆಯ ಲಿಪ್‌ಸ್ಟಿಕ್ ಹಾಗೆ ದುಬಾರಿ ಶಸ್ತ್ರಚಿಕಿತ್ಸೆಗೂ ಒಳಗಾಗುವುದು ನೋಡಬಹುದು.

ತುಟಿಯ ಅಂದ ಹೆಚ್ಚಿಸಲು ಹಲವು ರೀತಿಯ ಕಸರತ್ತು ಮಾಡುತ್ತಾರೆ. ಅದರಲ್ಲೂ ಬೇಸಿಗೆ ಹಾಗೂ ಚಳಿಗಾಲದಲ್ಲಿ ತುಟಿಯ ಆರೋಗ್ಯಕ್ಕಾಗಿ ಲಿಪ್‌ಬಾಮ್ ಹಚ್ಚುವುದು ನೋಡಿರುತ್ತೇವೆ. ಹಾಗೆ ಇದು ಬಹಳ ದುಬಾರಿ ಅಲ್ಲದಿದ್ದರೂ ತುಟಿಗೆ ಬಳಸುವುದರಿಂದ ಆರೋಗ್ಯಕರವಾದ ಹಾಗೆ ನೈಸರ್ಗಿಕ ರೀತಿಯಲ್ಲಿ ಸಿಗುವಂತಹ ಲಿಪ್ ಬಾಮ್ ಬಳಸುವುದನ್ನು ಇಷ್ಟಪಡುತ್ತಾರೆ.
ಆದ್ರೆ ನೀವು ಎಂದಾದ್ರು ಮನೆಯಲ್ಲೇ ಈ ಲಿಪ್ ಬಾಮ್ ತಯಾರಿಸಿದ್ದೀರಾ? ಹೌದು ಮನೆಯಲ್ಲಿ ನೈಸರ್ಗಿಕ ವಿಧಾನದಲ್ಲಿ ಲಿಪ್ ಬಾಮ್ ತಯಾರಿಸಬಹುದು. ಹಾಗೆ ಅದನ್ನು ಬಳಸುವುದು ಬಹಳ ಸುರಕ್ಷಿತ. ಮಕ್ಕಳ ತುಟಿಗೆ ನೀವು ರಾಸಾಯನಿಕಯುಕ್ತ ಲಿಪ್‌ಬಾಮ್ ಬಳಸಲು ಭಯ ಪಡುವುದಾದರೆ ಈ ರೀತಿಯಾಗಿ ಮನೆಯಲ್ಲೇ ಮಾಡಿರುವ ನೈಸರ್ಗಿಕ ಲಿಪ್‌ಬಾಮ್ ಬಳಸಿ ನೋಡಿ.
ಅದರಲ್ಲೂ ಮನೆಯಲ್ಲಿ ಬೀಟ್ರೂಟ್ ಬಳಸಿ ಲಿಪ್ ಬಾಮ್ ಮಾಡುವ ಕುರಿತು ನಿಮಗೆ ತಿಳಿದಿದ್ಯಾ? ನಾವಿಂದು ಸುಲಭವಾಗಿ ಮನೆಯಲ್ಲೇ ಈ ಬೀಟ್ರೂಟ್ ತರಕಾರಿ ಬಳಸಿಕೊಂಡು ಲಿಪ್‌ಬಾಮ್ ತಯಾರಿಸುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ಮೊದಲು ಒಂದು ಬೀಟ್ರೂಟ್ ತೆಗೆದುಕೊಂಡು ಅದರ ರಸವನ್ನು ಹಿಂಡಿಟ್ಟುಕೊಳ್ಳಿ. ನೀವು ಮಿಕ್ಸಿ ಜಾರ್‌ಗೆ ಹಾಕಿ ರಸ ತೆಗೆಯಬಹುದು, ಇಲ್ಲವೆ ಬೀಟ್ರೂಟ್ ಹೆಚ್ಚಿಕೊಂಡು ಒಂದು ಬೌಲ್‌ನಲ್ಲಿ ನೀರಿಗೆ ಹಾಕಿಟ್ಟರೆ ನೀರು ಬಣ್ಣ ಬದಲಿಸುತ್ತದೆ. ಮೊದಲಿಗೆ ಈ ಬೀಟ್ರೂಟ್ ರಸವನ್ನು ಒಂದು ಸಣ್ಣ ಬೌಲ್‌ಗೆ ಹಾಕಿಕೊಳ್ಳಿ ಅದಕ್ಕೆ ಸ್ವಲ್ಪ ವ್ಯಾಸಲಿನ್ ಕ್ರೀಮ್ ಹಾಕಿ ಹಾಗೆ ಒಂದು ವಿಟಮಿನ್ ಇ ಕ್ಯಾಪ್ಸುಲ್ ಸಹ ಒಡೆದು ಹಾಕಿಕೊಳ್ಳಿ. ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ರೀತಿ ಮಿಕ್ಸ್ ಮಾಡಿಕೊಂಡ ಬಳಿಕ 2 ಸ್ಪೂನ್ ತೆಂಗಿನ ಎಣ್ಣೆಯನ್ನು ಸಹ ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳಿ. ಅದನ್ನು ಗಟ್ಟಿಯಾಗಲು ಯಾವುದಾದರು ಸಣ್ಣ ಡಬ್ಬಿಯಲ್ಲಿ ಸೇರಿಸಿ ಇಡಿ. ಇದು ಗಟ್ಟಿಯಾದರೆ ನಿಮ್ಮ ಮುಂದೆ ಬೀಟ್ರೂಟ್ ಲಿಪ್‌ಬಾಮ್ ರೆಡಿಯಾಗುತ್ತದೆ. ಇದನ್ನು ಬಳಸುವುದು ಸುರಕ್ಷಿತ ಹಾಗೆ ಯಾವುದೇ ವಯಸ್ಸಿನವರು ಸಹ ಬಳಸಬಹುದು. ನೀವು ಸಹ ಒಮ್ಮೆ ಈ ರೀತಿ ಮನೆಯಲ್ಲಿ ಟ್ರೈ ಮಾಡಿ ನೋಡಿ.
ಬೀಟ್ರೂಟ್ ಅನ್ನೇ ಏಕೆ ಬಳಸಬೇಕು?
ಲಿಪ್ ಬಾಮ್ ತಯಾರಿಸಲು ಬೀಟ್ರೂಟ್ ತರಕಾರಿಯನ್ನೇ ಏಕೆ ಬಳಸಬೇಕು ಎಂಬ ಅನುಮಾನ ನಿಮ್ಮಲ್ಲಿರಬಹುದು. ಬೀಟ್ ರೂಟ್‌ನಲ್ಲಿ ಇರುವಂತಹ ಫಾಲಟೆ ಎಂಬ ಅಂಶವು ಚರ್ಮದ ಆರೋಗ್ಯಕ್ಕೆ ಬಹಳ ಉತ್ತಮವಾಗಿದೆ. ಚರ್ಮದ ಸಮಸ್ಯೆ ಮತ್ತು ನೆರಿಗೆ ವಿರುದ್ಧ ಹೋರಾಡುವುದು ಮಾತ್ರವಲ್ಲದೆ ಚರ್ಮಕ್ಕೆ ಪುನರ್ಶ್ಚೇತನ ನೀಡಲಿದೆ. ನಿಯಮಿತವಾಗಿ ಬೀಟ್ರೂಟ್ ಜ್ಯೂಸ್ ಸೇವಿಸಿದರೆ ಚರ್ಮದ ಆರೋಗ್ಯ ಹೆಚ್ಚಾಗುತ್ತದೆ. ಕಾಂತಿಯುತ ತ್ವಚೆ ಪಡೆಯಬಹುದು.



Click it and Unblock the Notifications