Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೂದಲು ಉದ್ದವಾಗಿ ಸುಂದರವಾಗಿಸಲು ಕರಿಬೇವಿನ ಎಣ್ಣೆ..! ಮಾಡಿಕೊಳ್ಳುವ ವಿಧಾನ ಇಲ್ಲಿದೆ..!!
ಕೂದಲು ಉದುರುವುದು, ತೆಳುವಾಗುವುದು ಹೀಗೆ ಕೂದಲಿಗೆ ಸಂಬಂಧಿಸಿದ ಹತ್ತಾರು ಸಮಸ್ಯೆಗಳು ಇಂದು ಸಾಮಾನ್ಯ ಎನ್ನುವಂತಾಗಿದೆ. ಸ್ತ್ರೀಯರಲ್ಲಿ ಮಾತ್ರವಲ್ಲ ಪುರುಷರಲ್ಲಿಯೂ ಹತ್ತಾರು ಸಮಸ್ಯೆಗಳಿವೆ. ಕೆಲವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಉದುರುವ ಸಮಸ್ಯೆ ಕಾಡುತ್ತದೆ. ಅದ್ರಲ್ಲೂ ಮಹಿಳೆಯರಿಗೆ ಕೂದಲು ಉದುರುವ ಸಮಸ್ಯೆ ಶಾಪವಿದ್ದಂತೆ, ಏಕೆಂದರೆ ಮಹಿಳೆಯರ ಸೌಂದರ್ಯಕ್ಕೆ ಕೂದಲು ಸಹ ಕಾರಣವಾಗಿರುತ್ತೆ.
ಯುವತಿಯರು ಉದ್ದನೆಯ ಕೂದಲು ಹೊಂದಿರಬೇಕು ಎಂಬ ಆಸೆ ಹೊಂದಿರುತ್ತಾರೆ. ಇದಕ್ಕಾಗಿ ಎಲ್ಲ ರೀತಿಯ ಕೆಲಸ ಮಾಡುತ್ತಾರೆ. ಕೂದಲಿಗೆ ಎಣ್ಣೆ ಹಾಕುವುದು, ಶಾಂಪೂ ಹಾಕಿ ಚೆನ್ನಾಗಿ ಬೆಳೆಸುತ್ತಾರೆ. ಕೂದಲು ಉದುರಲು ಆರಂಭಗೊಂಡರೆ ಅವರಲ್ಲಿ ಆತಂಕ, ಭಯ, ಒತ್ತಡವೂ ಕಾಡಲು ಆರಂಭಿಸುತ್ತೆ. ಇದು ಇತ್ತೀಚಿಗೆ ಕಾಡುತ್ತಿರುವ ಬಹುದೊಡ್ಡ ಸಮಸ್ಯೆ.

ಆದ್ರೆ ಕೂದಲು ಉದುರಲು ಆರಂಭಿಸಿದಾಗ ಯುವತಿಯರು ಎಲ್ಲಾ ರೀತಿಯ ಎಣ್ಣೆಗಳ ಬಳಸಲು ಮುಂದಾಗುತ್ತಾರೆ. ಬರೀ ಕೂದಲು ಉದುರುವಾಗ ಮಾತ್ರವಲ್ಲ ಕೂದಲು ಚೆನ್ನಾಗಿ ಬೆಳೆಯಬೇಕು, ಉದ್ದವಾಗಬೇಕು, ನೇರವಾಗಿ ಗಾಢ ಕಪ್ಪು ಬಣ್ಣಕ್ಕೆ ತಿರುಗಬೇಕು ಎಂಬ ಕಾರಣಕ್ಕೆ ಯಾವುದೆಲ್ಲಾ ಎಣ್ಣೆ ಮಾರುಕಟ್ಟೆಯಲ್ಲಿ ಸಿಗುತ್ತದೆಯೋ ಅದನ್ನ ತಂದು ಹಚ್ಚಲು ಆರಂಭಿಸುತ್ತಾರೆ. ಆದ್ರೆ ಮತ್ತೆ ಕೆಲವರು ಮನೆಯಲ್ಲೇ ಎಣ್ಣೆ ಮಾಡಿಕೊಳ್ಳುತ್ತಾರೆ.
ಇನ್ನು ಹಲವರು ಕರಿಬೇವಿನ ಎಣ್ಣೆ ಬಳಸಿ ಕೂದಲು ಆರೋಗ್ಯ ಕಾಪಾಡಲು ಮುಂದಾಗುತ್ತಾರೆ. ಕರಿಬೇವಿನಲ್ಲಿ ಇರುವಂತಹ ಪ್ರೋಟೀನ್ ಮತ್ತು ಬೆಟಾ ಕ್ಯಾರೋಟಿನ್ ಕೂದಲು ತೆಳ್ಳಗಾಗುವುದು ಮತ್ತು ಉದುರುವುದನ್ನು ತಡೆಯುತ್ತದೆ. ಈ ಎಣ್ಣೆ ಬಳಸಿದರೆ ತಲೆಬೋಳಾಗುವುದನ್ನು ತಡೆಯಬಹುದು ಹೀಗಾಗಿಯೇ ಎಲ್ಲರು ಕರಿಬೇವಿನ ಎಣ್ಣೆ ಬಳಸಲು ಮುಂದಾಗುತ್ತಾರೆ. ಆದ್ರೆ ಈ ಕರಿಬೇವಿನ ಎಣ್ಣೆ ರೆಡಿ ಮಾಡುವುದು ಹೇಗೆ? ತಯಾರಿಸುವ ವಿಧಾನವನ್ನ ನಾವಿಂದು ಹೇಳುತ್ತೇವೆ ನೋಡಿ.
ಕರಿಬೇವಿನ ಸೊಪ್ಪಿನ ಎಣ್ಣೆ ತಯಾರಿಸಲು ಏನೆಲ್ಲಾ ಪದಾರ್ಥಗಳು ಬೇಕು?
ಕರಿಬೇವು
ಕೊಬ್ಬರಿ ಎಣ್ಣೆ
ಮೆಂತ್ಯ
ಕರಿಬೇವಿನ ಎಣ್ಣೆ ತಯಾರಿಸುವುದು ಹೇಗೆ?
ಮೊದಲು ಒಂದು ಕಪ್ ಕರಿವೇವಿನ ಎಲೆಯನ್ನು ಮಿಕ್ಸಿ ಜಾರ್‌ಗೆ ಹಾಕಿಕೊಂಡು ಅದಕ್ಕೆ ಮೂರು ಸ್ಪೂನ್ ಮೆಂತ್ಯ ಹಾಕಿಕೊಳ್ಳಿ. ನಂತರ ಈ ಎಲೆಯನ್ನು ಚೆನ್ನಾಗಿ ಪುಡಿಯಾಗುವಂತೆ ರುಬ್ಬಿಕೊಳ್ಳಿ. ನಂತರ ಒಂದು ಬೌಲ್‌ನಲ್ಲಿ ಕೊಬ್ಬರಿ ಎಣ್ಣೆ ತೆಗೆದುಕೊಂಡು ಅದಕ್ಕೆ ರುಬ್ಬಿಕೊಂಡಿರುವ ಪುಡಿಯನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಹೀಗೆ ಮಿಕ್ಸ್ ಮಾಡಿದ ಬಳಿಕ ಒಲೆ ಮೇಲೆ ಇಟ್ಟು ಕುದಿಯಲು ಬಿಡಬೇಕು. ಉರಿ ಸಣ್ಣದಾಗಿ ಇಟ್ಟು ಕುದಿಸಬೇಕು. 20 ನಿಮಿಷದ ಬಳಿಕ ಗ್ಯಾಸ್ ಆಫ್ ಮಾಡಿಕೊಂಡು ಜರಡಿ ಹಿಡಿದು ಸೋದಿಸಿಕೊಳ್ಳಿ. ಈ ಎಣ್ಣೆಯನ್ನು ತೆಗೆದು ಮತ್ತೊಂದು ಗಾಜಿನ ಬಾಟಲಿಗೆ ಹಾಕಿ ಗಾಳಿ ಆಡದಂತೆ ಇಟ್ಟುಕೊಂಡು ಬಳಸಿ, ವಾರದಲ್ಲಿ ಕನಿಷ್ಟ ಎರಡು ಬಾರಿಯಾದರು ನಿಮ್ಮ ಕೂದಲಿಗೆ ಈ ಎಣ್ಣೆ ಬಳಸೋದ್ರಿಂದ ಕೂದಲಿನ ಆರೋಗ್ಯ ಬದಲಾಗಲಿದೆ. ಉದುರುವುದು ನಿಲ್ಲಲ್ಲಿದೆ.
ಈ ಎಣ್ಣೆ ಮಾಡುವಾಗ ಈ ತಪ್ಪು ಮಾಡಬೇಡಿ
ಈ ಕರಿಬೇವಿನ ಎಣ್ಣೆ ಮಾಡುವಾಗ ಈ ಕೆಲವು ತಪ್ಪುಗಳನ್ನ ನೀವು ಮಾಡಬೇಡಿ. ಕೊಬ್ಬರಿ ಎಣ್ಣೆ ಒಲೆ ಮೇಲೆ ಇಟ್ಟು ಕುದಿಯುವಾಗ ಅದಕ್ಕೆ ಕರಿಬೇವಿನ ಎಲೆಗಳ ಹಾಕಿ ಎಣ್ಣೆ ತೆಗೆಯುವುದು ಒಳಿತಲ್ಲ. ಹಾಗೆ ಇದಕ್ಕೆ ಕೆಲವರು ಈರುಳ್ಳಿ ಹಾಕಲು ಮುಂದಾಗುತ್ತಾರೆ ಹೀಗೆ ಬೇರೆ ಯಾವುದೇ ವಸ್ತು ಬಳಸಬಾರದು. ಜೊತೆಗೆ ಕರಿಬೇವಿನ ಎಲೆಗಳ ತೊಳೆದು ನೀರಿನ ಅಂಶ ಇರುವಾಗಲೇ ಅದನ್ನು ರುಬ್ಬಿಕೊಳ್ಳುವುದು ಅಥವಾ ಎಣ್ಣೆ ಮಾಡಲು ಬಳಸಬೇಡಿ. ಮತ್ತೆ ಈ ಎಣ್ಣೆಗೆ ಆಲೋವೆರಾ ಬಳಸಿ ಮಾಡುವುದು ಸಹ ತಪ್ಪು ಮಾರ್ಗವಾಗಿದೆ.



Click it and Unblock the Notifications
