Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಕತ್ತಿನ ಭಾಗದಲ್ಲಿ ಕಪ್ಪು ಕಲೆ ಆಗಿದ್ಯಾ? ಪರಿಹಾರಕ್ಕೆ ಒಂದು ಬ್ರೂ ಇದ್ರೆ ಸಾಕು..!
ಬೇಸಿಗೆಯ ಸಮಯದಲ್ಲಿ ಹಲವರು ತಮ್ಮ ತ್ವಚೆಯ ಅಂದ ಕಾಪಾಡಿಕೊಳ್ಳಲು ಮಹಿಳೆಯರು ಹಲವು ರೀತಿಯ ಕಾರ್ಯಗಳ ಮಾಡುತ್ತಾರೆ. ಸನ್ಸ್‌ಕ್ರೀನ್, ಪರ್ಲರ್, ಹಾಗೆ ವಿವಿಧ ರೀತಿಯ ಕ್ರೀಮ್ ಹಚ್ಚುವುದು ನೋಡಬಹುದು. ಹಾಗೆ ಬೇಸಿಗೆ ಸಮಯದಲ್ಲಿ ಬೆವರುವುದು, ಸೂರ್ಯನ ಕಿರಣಕ್ಕೆ ಒಡ್ಡಿಕೊಳ್ಳುವುದು ಚರ್ಮದ ಮೇಲೆ ಪರಿಣಾಮ ಬೀರುವುದು ನೋಡಬಹುದು. ಅದರಲ್ಲೂ ಬೆವರಿನ ಕಾರಣದಿಂದಾಗಿ ಒಂದಿಷ್ಟು ಸಮಸ್ಯೆ ಎದುರಾಗುವುದು ಕೂಡ ನೋಡಬಹುದು.
ಹಾಗೆ ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಾಡುವಂತಹ ಸಮಸ್ಯೆಗಳಲ್ಲಿ ಒಂದಾಗಿರುವುದು ಈ ಕುತ್ತಿಗೆ ಭಾಗದಲ್ಲಿ ಕಪ್ಪಾಗುವುದು. ಹೌದು ಕುತ್ತಿಗೆ ಭಾಗದಲ್ಲಿ ಕಪ್ಪು ಕಲೆಗಳು ಕಂಡುಬರುವುದು ನಾವು ನೋಡಬಹುದು. ಇದು ಹಲವರಲ್ಲಿ ಮುಜುಗರಕ್ಕೆ ಹಾಗೆ ಸೌಂದರ್ಯಕ್ಕೆ ಕಲೆಯಾಗಿ ಕಾಣಿಸಲಿದೆ. ಈ ರೀತಿಯ ದಪ್ಪ ಕಲೆಯನ್ನು ನೀವು ಯಾವುದೇ ಸೋಪು, ಶಾಂಪು ಬಳಸಿದರೂ ಕೂಡ ನಿವಾರಣೆ ಮಾಡಲಾಗುವುದಿಲ್ಲ.

ಈ ಕಲೆಯು ಬೆವರು ಹಾಗೂ ಬಿಸಿಲಿ ಕಾರಣದಿಂದಾಗಿ ಉಂಟಾಗುತ್ತದೆ. ಹೆಚ್ಚಾಗಿ ಕುತ್ತಿಗೆಗೆ ಹಾಕುವ ಚೈನ್‌ಗಳು, ದಾರಗಳಿಂದ ಈ ಕಲೆ ಉಂಟಾಗುತ್ತದೆ. ಈ ಕಲೆಗಳು ಗಾಢವಾಗಿ ಚರ್ಮಕ್ಕೆ ಅಂಟಿಕೊಂಡಂತೆ ಇರಲಿವೆ. ಹೀಗಾಗಿ ಸುಲಭವಾಗಿ ತೆಗೆಯಲು ಆಗುವುದಿಲ್ಲ. ಅದರಲ್ಲೂ ಬೇಸಿಗೆಯಲ್ಲಿ ಇದು ಹೆಚ್ಚಾಗಿ ಕಾಡಲು ಆರಂಭಿಸುತ್ತದೆ. ಹಾಗೆ ಕಾಲಾನಂತರದಲ್ಲಿ ಗಾಢವಾಗಿ ಉಳಿದುಬಿಡುತ್ತದೆ.
ಆದ್ರೆ ಪಾರ್ಲರ್‌ಗೆ ತೆರಳಿದರೆ ಕೂಡ ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಈ ಕಲೆಯನ್ನು ನಿವಾರಣೆ ಮಾಡಲು ಆಗುವುದಿಲ್ಲ. ಹೀಗಾಗಿ ನಾವಿಂದು ಸುಲಭವಾಗಿ ಮನೆಯಲ್ಲಿ ಸಿಗುವಂತಹ ವಸ್ತುಗಳನ್ನೇ ಬಳಸಿಕೊಂಡು ಈ ಕಲೆಗಳ ನಿವಾರಣೆ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಹಾಗಾದ್ರೆ ಈ ಕಲೆ ನಿವಾರಣೆಗೆ ಏನು ಮಾಡಬೇಕು?
ಬ್ರೂ ಪ್ಯಾಕ್ ನಿಂದ ಕಲೆ ನಿವಾರಣೆ
ಈ ಕಪ್ಪು ಕಲೆಗಳ ನಿವಾರಣೆಗೆ ಒಂದೇ ಒಂದು ಬ್ರೂ ಕಾಫಿ ಪುಡಿಯ ಪ್ಯಾಕೆಟ್ ಇದ್ದರೆ ಸಾಕಾಗುತ್ತದೆ. ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಒಂದು ಪ್ಯಾಕ್ ಬ್ರೂ ಪ್ಯಾಕ್ ಒಡೆದು ಹಾಕಿಕೊಳ್ಳಿ. ನಂತರ ಇದಕ್ಕೆ ಒಂದು ಸ್ಪೂನ್ ನಿಂಬೆ ರಸ, ಹಾಗೆ ಪೇಸ್ಟ್ ಆಗುವಷ್ಟು ರೋಸ್ ವಾಟರ್ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಈ ಪೇಸ್ಟ್ ಕಪ್ಪು ಕಲೆಗಳಾಗಿರುವ ಕತ್ತಿನ ಭಾಗದಲ್ಲಿ 10 ನಿಮಿಷಗಳ ಕಾಲ ಹಚ್ಚಿಕೊಳ್ಳುತ್ತಾ ಮಸಾಜ್ ಮಾಡಿಕೊಳ್ಳಬೇಕು. ಹಾಗೆ ಮೊದಲು ಒಂದು ಬಟ್ಟೆಯಿಂದ ಒರೆಸಿ ಬಳಿಕ ತಣ್ಣೀರಿನಿಂದ ತೊಳೆಯಿರಿ. ಈ ರೀತಿ 15 ದಿನಗಳ ಕಾಲ ಮಾಡುವುದು ಆ ಕಪ್ಪು ಕಲೆಗಳ ನಿವಾರಣೆಗೆ ಸಹಕಾರಿಯಾಗಲಿದೆ.
ಆಲೂಗಡ್ಡೆ ಟೂತ್ ಪೇಸ್ಟ್
ಇನ್ನೊಂದು ಕಡೆ ಈ ಕಲೆಗಳು ಗಾಢವಾಗಿರುವ ಕಾರಣ ಸುಲಭವಾಗಿ ತೆಗೆಯಲು ಆಗುತ್ತಿಲ್ಲ ಎಂದಾದರೆ ಆಲೂಗಡ್ಡೆ ಹಾಗೂ ಟೂತ್ ಪೇಸ್ಟ್‌ನಿಂದ ಮಾಡುವಂತಹ ಸುಲಭದ ಈ ಪರಿಹಾರ ಮಾಡಿ. ಮೊದಲು ಒಂದು ದೊಡ್ಡ ಆಲೂಗಡ್ಡೆ ಮಧ್ಯದಲ್ಲಿ ಕತ್ತರಿಸಿ ಎರಡು ಭಾಗ ಮಾಡಿ, ನಂತರ ಅದರ ಮೇಲೆ ಟೂತ್ ಪೇಸ್ಟ್ ಹಾಕಿಕೊಂಡು ಅದನ್ನು ಕಪ್ಪು ಕಲೆ ಇರುವ ಜಾಗದಲ್ಲಿ ಚೆನ್ನಾಗಿ ಉಜ್ಜಿಕೊಳ್ಳಿ. ಒಂದು ಆಲೂಗಡ್ಡೆ ಭಾಗ ಉಜ್ಜಿದ ಬಳಿಕ ಮತ್ತೊಂದು ಭಾಗದಲ್ಲೂ ಕೂಡ ಇದೇ ರೀತಿ ಮಾಡಿಕೊಳ್ಳಿ. ಹಾಗೆ ವಾರದಲ್ಲಿ ಎರಡರಿಂದ ಮೂರು ಬಾರಿ ಈ ರೀತಿ ಮಾಡಿ. ಇದಕ್ಕೆ ಬಿಳಿ ಬಣ್ಣದ ಪೇಸ್ಟ್ ಅನ್ನು ಮಾತ್ರವೇ ಬಳಸಿ. ಇದರಿಂದ ಕೂಡ ಈ ಕಲೆಗಳು ನಿವಾರಣೆಯಾಗಲಿದೆ.
(ಹಕ್ಕು ತ್ಯಾಗ: ಈ ಮೇಲಿನ ಪರಿಹಾರಕಾರಿ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಈ ಲೇಖನದಲ್ಲಿ ನೀಡಲಾಗಿರುವ ವಿಧಾನವನ್ನು ಕನ್ನಡ ಬೋಲ್ಡ್ ಸ್ಕೈ ಖಚಿತಪಡಿವುಸುವುದಿಲ್ಲ, ಹಾಗೆ ಅದರ ಜವಾಬ್ದಾರಿಗೆ ಕಾರಣವಾಗಿರುವುದಿಲ್ಲ, ಈ ಪರಿಹಾರ ಮಾರ್ಗ ಬಳಸುವ ಮುನ್ನ ತಜ್ಞರಿಂದ ಸಲಹೆ ಪಡೆಯಲು ಈ ಮೂಲಕ ಸೂಚಿಸಲಾಗಿದೆ)



Click it and Unblock the Notifications