Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ನಿಮ್ಮ ಸ್ಕಿನ್ ಟೈಪ್‌ಗೆ ಸರಿಯಾದಂಥ ಸನ್‌ಸ್ಕ್ರೀನ್ ಆಯ್ಕೆ ಮಾಡುವುದು ಹೇಗೆ?
ಬೇಸಿಗೆ ಮಾತ್ರವಲ್ಲ ಪ್ರತಿಯೊಂದು ಸೀಸನ್‌ನಲ್ಲೂ ಸನ್‌ಸ್ಕ್ರೀನ್ ಅಂತೂ ಬೇಕೇ ಬೇಕು. ಎಲ್ಲರ ಚರ್ಮದ ಟೈಪ್ ಬೇರೆಬೇರೆಯೇ ಆಗಿರೋದ್ರಿಂದ ಎಲ್ಲರಿಗೂ ಒಂದೇ ರೀತಿಯ ಸನ್‌ಸ್ಕ್ರೀನ್ ಸರಿಹೋಗದು. ಕೆಲವರಿಗೆ ಸನ್‌ಸ್ಕ್ರೀನ್ ಹಚ್ಚಿದರೆ ಮುಖ ಪೂರ್ತಿ ಎಣ್ಣೆ ಹಚ್ಚಿಕೊಂಡಂತೆ ಕಾಣಬಹುದು.
ಇನ್ನು ಕೆಲವರ ಸ್ಕಿನ್‌ಟೈಪ್‌ಗೆ ಇದು ಹಚ್ಚಿಕೊಂಡರೂ ಅದರಿಂದ ಏನು ಉಪಯೋಗವೂ ಆಗದು. ಹಾಗಿದ್ದರೆ ನಿಮ್ಮ ಚರ್ಮಕ್ಕೆ ಸರಿಹೊಂದು ಸನ್‌ಸ್ಕ್ರೀನ್ ಆಯ್ಕೆ ಹೇಗೆ ಮಾಡೋದು ಎನ್ನುವ ಗೊಂದಲ ನಿಮಗಿದ್ರೆ ಈ ಲೇಖನ ಮಿಸ್ ಮಾಡದೇ ಓದಿ.

ಸನ್‌ಸ್ಕ್ರೀನ್ ಯಾಕೆ ಹಚ್ಚಿಕೊಳ್ಳಬೇಕು..?
ಸನ್‌ಸ್ಕ್ರೀನ್ ಲೋಷನ್ ಸೂರ್ಯನ ತೀಕ್ಷ್ಣವಾದ ಕಿರಣಗಳಿಂದ ನಿಮ್ಮ ಚರ್ಮದ ಮೇಲ್ಮೈಯನ್ನು ರಕ್ಷಿಸುತ್ತೆ. ಸೂರ್ಯನ ಅತಿ ನೇರಳೆ ಕಿರಣಗಳಿಂದಾಗಿ ಉಂಟಾಗುವ ಹಾನಿ ಎಂದರೆ, ಚರ್ಮದ ದದ್ದುಗಳು, ಬಿಸಿಲು, ಮೊಡವೆ, ಕಪ್ಪು ತೇಪೆಗಳು, ಸುಕ್ಕುಗಳು ಮತ್ತು ಕ್ಯಾನ್ಸರ್‌ನಂತಹ ಚರ್ಮದ ಸಮಸ್ಯೆಗಳನ್ನು ಇದು ತಗ್ಗಿಸುತ್ತದೆ.
ಸನ್‌ಸ್ಕ್ರೀನ್ ಲೋಷನ್ ಚರ್ಮಕ್ಕೆ ರಕ್ಷಣೆಯನ್ನು ಒದಗಿಸುವುದರ ಜೊತೆಗೆ, ಕೆರಾಟಿನ್, ಕಾಲಜನ್ ಮತ್ತು ಎಲಾಸ್ಟಿನ್ ಸೇರಿದಂತೆ ಪ್ರಮುಖ ಚರ್ಮದ ಪ್ರೋಟೀನ್‌ಗಳನ್ನು ಸಂರಕ್ಷಿಸುವ ಮೂಲಕ ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ಸನ್‌ಸ್ಕ್ರೀನ್ ನಿಮ್ಮನ್ನು ತುಂಬಾ ಹಾನಿಯಿಂದ ರಕ್ಷಿಸುವುದರಿಂದ, ನೀವು ಅದನ್ನು ನಿಮ್ಮ ತ್ವಚೆಯ ಆರೈಕೆಯಲ್ಲಿ ಸೇರಿಸಿಕೊಳ್ಳಬೇಕು.
ನಿಮ್ಮ ಚರ್ಮಕ್ಕೆ ಒಪ್ಪುವ ಸನ್‌ಸ್ಕ್ರೀನ್ ಆಯ್ಕೆ ಹೇಗೆ..?
ಸನ್‌ಸ್ಕ್ರೀನ್ ಪ್ರತಿ ದಿನದ ಸ್ಕಿನ್‌ಕೇರ್ ರುಟೀನ್‌ನ ಭಾಗವಾಗಿರಬೇಕು. ಅದರಲ್ಲೂ ನಿಮ್ಮ ಚರ್ಮಕ್ಕೆ ಸರಿಹೊಂದುವ ಲೋಷನ್ ಆಯ್ಕೆ ಮಾಡಬೇಕು.ನಿಮ್ಮ ಚರ್ಮದ ಪ್ರಕಾರಕ್ಕೆ ಅನುಗುಣವಾಗಿ ನೀವು ಯಾವ ರೀತಿಯ ಸನ್‌ಸ್ಕ್ರೀನ್ ಅನ್ನು ಬಳಸಬೇಕು ಎನ್ನುವ ಮಾಹಿತಿ ಈ ಕೆಳಗಿದೆ.
1. ಎಲ್ಲಾ ಚರ್ಮದ ಪ್ರಕಾರಗಳಿಗೆ ಹೊಂದುವ ಸನ್‌ಸ್ಕ್ರೀನ್
ಎಲ್ಲಾ ರೀತಿಯ ಚರ್ಮಕ್ಕೆ ಸೂಕ್ತವಾದ ಕೆಲವು ಸನ್‌ಸ್ಕ್ರೀನ್‌ಗಳು ಮಾರುಕಟ್ಟೆಯಲ್ಲಿವೆ. ಅದರಲ್ಲೂ ಫ್ಯೂಷನ್ ವಾಟರ್ ಸನ್‌ಸ್ಕ್ರೀನ್ ನೀವು ಎಣ್ಣೆ ಅಥವಾ ಸೂಕ್ಷ್ಮ ಅಥವಾ ಅಟೊಪಿಕ್ ಚರ್ಮವನ್ನು ಹೊಂದಿದ್ದರೂ, ಇದು ಎಲ್ಲಾ ರೀತಿಯ ಚರ್ಮದ ವಿನ್ಯಾಸಗಳಿಗೆ ಸರಿಹೊಂದುತ್ತದೆ.
2. ಮೊಡವೆ ಇರುವ ಚರ್ಮಕ್ಕಾಗಿ
ನೀವು ಮೊಡವೆ ಅಥವಾ ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದರೆ, ನೀವು ಆಯ್ಕೆ ಮಾಡುವ ತ್ವಚೆಯ ಉತ್ಪನ್ನಗಳೊಂದಿಗೆ ನೀವು ಜಾಗರೂಕರಾಗಿರಬೇಕು. ಸನ್‌ಸ್ಕ್ರೀನ್‌ಗೂ ಕೂಡಾ ಇದೇ ಅನ್ವಯವಾಗುತ್ತೆ. ತೆರೆದ ರಂಧ್ರಗಳು, ಎಣ್ಣೆಯುಕ್ತ ಚರ್ಮ ಮತ್ತು ಮೊಡವೆ ಪೀಡಿತ ಚರ್ಮ ನಿಮ್ಮದಾಗಿದ್ದರೆ ಸಿಲಿಕಾನ್ ಆಧಾರಿತ ಸನ್‌ಸ್ಕ್ರೀನ್ ಬಳಸಬೇಕು.
3. ಹೆಚ್ಚು ಕಲೆ ಇರುವ ಚರ್ಮಕ್ಕೆ
ಕಲೆ ಇರುವ ಚರ್ಮವು ಅದರ ಮೇಲೆ ಬಹಳಷ್ಟು ಗುರುತುಗಳನ್ನು ಹೊಂದಿರುತ್ತದೆ. ನಿಮ್ಮ ಕಲೆಗಳು ಹಾನಿಕಾರಕವಾಗಿರಲಿ ಅಥವಾ ಇಲ್ಲದಿರಲಿ, ಸನ್‌ಸ್ಕ್ರೀನ್ ಅನ್ನು ಬಳಸುವುದು ಮುಖ್ಯವಾಗಿದೆ. ಆದರೆ, ನೀವು ಕಲೆಗಳನ್ನು ಸ್ವಲ್ಪಮಟ್ಟಿಗೆ ಮರೆಮಾಡಲು ಬಯಸಿದರೆ, ನಿಮ್ಮ ನೀವು ಟಿಂಟ್ ಇರುವ ಬಣ್ಣದ ಸನ್‌ಸ್ಕ್ರೀನ್ ಅನ್ನು ಬಳಸಬಹುದು. ವಾಸ್ತವವಾಗಿ, ಮೇಕ್ಅಪ್ ಧರಿಸಲು ಇಷ್ಟಪಡದ ಮಹಿಳೆಯರಿಗೆ, ವಿಶೇಷವಾಗಿ ಬೇಸಿಗೆಯಲ್ಲಿ ಇದು ಅತ್ಯುತ್ತಮ ಆಯ್ಕೆಯಾಗಿದೆ.
4. ಎಣ್ಣೆಯುಕ್ತ ಚರ್ಮಕ್ಕಾಗಿ
ಎಣ್ಣೆಯುಕ್ತ ತ್ವಚೆಯಿರುವವರಿಗೆ ಬೇಸಿಗೆಯಲ್ಲಿ ಬೆವರಿ ಮುಖ ಇನ್ನಷ್ಟು ಎಣ್ಣೆಯುಕ್ತವಾಗಿ ಕಾಣುತ್ತದೆ. ನೀವು ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದರೆ, ನೀವು ಪ್ರಯತ್ನಿಸಬಹುದಾದ ಒಂದು ಉತ್ತಮವಾದ ಸನ್‌ಸ್ಕ್ರೀನ್ ಆಯ್ಕೆ ಎಂದರೆ ಪೌಡರ್ ಸನ್‌ಸ್ಕ್ರೀನ್. ಪೌಡರ್ ಸನ್‌ಸ್ಕ್ರೀನ್ ಎನ್ನುವುದು ಸೆಟ್ಟಿಂಗ್ ಪೌಡರ್‌ನಂತಿರುವ ಉತ್ಪನ್ನವಾಗಿದೆ. ನಿಮ್ಮ ಚರ್ಮವು ಸುರಕ್ಷಿತವಾಗಿರಲು ನೀವು ಬಯಸಿದರೆ ಟಚ್-ಅಪ್ಗಳನ್ನು ಮಾಡಲು ನೀವು ಮರೆಯಬಾರದು.
5. ಒಣಚರ್ಮ ನಿಮ್ಮದಾಗಿದ್ದರೆ
ನೀವು ಒಣ ಚರ್ಮವನ್ನು ಹೊಂದಿದ್ದರೆ, ಸಿರಾಮೈಡ್ಗಳು ಅಥವಾ ಹೈಲುರಾನಿಕ್ ಆಮ್ಲವಿರುವ ಸನ್‌ಸ್ಕ್ರೀನ್ ಲೋಷನ್ ಆಯ್ಕೆ ಮಾಡಿ.ಇದು ನಿಮ್ಮ ಶುಷ್ಕ ಚರ್ಮಕ್ಕೆ ತೇವಾಂಶ ನೀಡುತ್ತದೆ. ಇಲ್ಲವಾದರೆ ನೀವು ಮಾಯಿಶ್ಚರೈಸರ್ ಹಚ್ಚಿಕೊಂಡ ನಂತರ ನಿಮ್ಮಲ್ಲಿರುವ ಸಾಮಾನ್ಯ ಸನ್‌ಸ್ಕ್ರೀನ್ ಹಚ್ಚಿಕೊಳ್ಳಿ. ಮಾಯಿಶ್ಚರೈಸರ್ ಒಣಗಿದ ನಂತರ ಸನ್‌ಸ್ಕ್ರೀನ್ ಹಚ್ಚಿಕೊಳ್ಳಿ.
6. ನೀವು ಕಪ್ಪು ಚರ್ಮವನ್ನು ಹೊಂದಿದ್ದರೆ
ನೀವು ಕಪ್ಪು ಚರ್ಮವನ್ನು ಹೊಂದಿದ್ದರೆ, ಮಿನರಲ್ಸ್ ಹೊಂದಿರುವ ಸನ್‌ಸ್ಕ್ರೀನ್‌ನಿಂದ ದೂರವಿರಿ. ಸರಿಯಾಗಿ ಉಜ್ಜಿದಾಗ, ಅದರಲ್ಲಿರುವ ಮಿನರಲ್ಸ್ ಗಾಢವಾದ ಚರ್ಮವನ್ನು ಬೂದು ಬಣ್ಣದಲ್ಲಿ ಕಾಣುವಂತೆ ಮಾಡುತ್ತದೆ. ರಾಸಾಯನಿಕಯುಕ್ತ ಸನ್‌ಸ್ಕ್ರೀನ್ ನಿಮ್ಮ ಚರ್ಮಕ್ಕೆ ಒಪ್ಪದಿದ್ದಾಗ ಟಿಂಟೆಡ್ ಮಿನರಲ್‌ಯುಕ್ತ ಸನ್‌ಸ್ಕ್ರೀನ್ ನೀವು ಆಯ್ಕೆ ಮಾಡಬಹುದು.
ನಿಮ್ಮ ಚರ್ಮದ ಪ್ರಕಾರ ಯಾವುದೇ ಆಗಿದ್ದರೂ UVA ಮತ್ತು UVB ಕಿರಣಗಳಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಲು ನಿಮ್ಮ ಚರ್ಮಕ್ಕೆ ಸನ್‌ಸ್ಕ್ರೀನ್ ಅನ್ನು ಸೇರಿಸುವುದು ಬಹಳ ಮುಖ್ಯ. ನಿಮಗೆ ಇನ್ನೂ ಸನ್‌ಸ್ಕ್ರೀನ್ ಆಯ್ಕೆಯ ಬಗ್ಗೆ ಗೊಂದಲವಿದ್ದಲ್ಲಿ ಸ್ಕಿನ್‌ಕೇರ್ ಎಕ್ಸ್‌ಪರ್ಟ್ಸ್‌ಗಳನ್ನೂ ಕೇಳಬಹುದು.



Click it and Unblock the Notifications
