Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹೆನ್ನಾ ಹಚ್ಚಿದಾಗ ಎಷ್ಟೊತ್ತುಆದ ಮೇಲೆ ತಲೆತೊಳೆದರೆ ಒಳ್ಳೆಯದು?
ಹೇರ್ ಕಲರಿಂಗ್ ಮಾಡಲು ತುಂಬಾ ಜನರು ಹೆನ್ನಾ ಬಳಸುತ್ತಾರೆ. ತಲೆಯಲ್ಲಿ ಬಿಳಿ ಕೂದಲು ಕಾಣುತ್ತಿದೆ ಎಂದಾದರೆ ಹೆನ್ನಾ ಬಳಸಿದರೆ ಅದನ್ನು ಮರೆಮಾಚಬಹುದು. ಮೆಹಂದಿ ಎಲೆಯನ್ನು ಅರೆದು ಬಳಸುವುದಾದರೆ ಕೂದಲಿಗೆ ಯಾವ ಹೇರ್ ಕಲರಿಂಗ್ ಬೇಕಾಗಿಲ್ಲ, ಅಷ್ಟೊಂದು ಆಕರ್ಷಕವಾಗಿರುತ್ತದೆ. ಆದರೆ ಮೆಹಂದಿ ಎಲೆಯ ಬದಲಿಗೆ ಮಾರ್ಕೆಟ್‌ನಲ್ಲಿ ಬಳಸುವ ಹೆನ್ನಾವನ್ನು ಹೆಚ್ಚಿನವರು ಬಳಸುತ್ತಾರೆ.
ನೀವು ಕೂಡ ಹೇರ್ ಕಲರಿಂಗ್‌ಗೆ ಹೆನ್ನಾ ಬಳಸುತ್ತಿದ್ದರೆ ಈ ಟಿಪ್ಸ್ ತಿಳಿದುಕೊಂಡರೆ ಹೆನ್ನಾದ ಪ್ರಯೋಜನವನ್ನು ತುಂಬಾ ಪರಿಣಾಮಕಾರಿಯಾಗಿ ಪಡೆಯಬಹುದು ನೋಡಿ:
ಹೆನ್ನಾ ಬಳಸುವವರಿಗೆ ಉಪಯುಕ್ತ ಟಿಪ್ಸ್
* ಹೆನ್ನಾವನ್ನು ಯಾವುದೇ ಬಗೆಯ ಕೂದಲಿಗೆ ಬಳಸಬಹುದು. ನೀವು ಹೆನ್ನಾ ಬಳಸುವಾಗ ಆದಷ್ಟು ನೈಸರ್ಗಿಕ ಹೆನ್ನಾ ಬಳಸಬೇಕು. ರಾಸಾಯನಿಕವಿರುವ ಹೆನ್ನಾ ಬಳಸುವುದರಿಂದ ಕೂದಲು ಹಾಳಾಗುವುದು. ಆದ್ದರಿಂದ ರಾಸಾಯನಿಕಗಳಿರುವ ಹೆನ್ನಾದಿಂದ ದೂವಿರಿ.
* ನೀವು ಬರೀ ಹೆನ್ನಾ ಮಿಕ್ಸ್ ಮಾಡಿ ಬಳಸುವ ಬದಲಿಗೆ ಒಂದು ಚಮಚ ಅರಿಶಿಣ ಪುಡಿ, ಸಾಸಿವೆ ಎಣ್ಣೆ, 1 ಚಮಚ ಮೆಂತೆ ಪುಡಿ, ಹೆನ್ನಾ ಪುಡಿಗೆ ಸ್ವಲ್ಪ ನೀರು ಸೇರಿಸಿ ಮಿಕ್ಸ್ ಮಾಡಿದ ತಕ್ಷಣವೇ ಕೂದಲಿಗೆ ಹಚ್ಚಿ.

* ನಂತರ ಕೂದಲಿಗೆ ಶವರ್ ಕ್ಯಾಪ್ ಹಾಕಿ 2-3 ಗಂಟೆಯವರೆಗೆ ಬಿಡಿ. ಶವರ್ ಕ್ಯಾಪ್ ಬಳಸುವುದರಿಂದ ಹೆನ್ನಾ ಮುಖದ ಮೇಲೆ ಹರಡುವುದನ್ನು ತಡೆಗಟ್ಟಬಹುದು.
* ಕೆಲವರು ಕೂದಲಿಗೆ ಹೆನ್ನಾ ಹಚ್ಚಿ ತುಂಬಾ ಹೊತ್ತು ಬಿಡುವುದು ಅಥವಾ ರಾತ್ರಿ ಮಲಗುವಾಗ ಹಚ್ಚಿ ಬೆಳಗ್ಗೆ ತೊಳೆಯುವುದು ಮಾಡುತ್ತಾರೆ, ಹಾಗೇ ಮಾಡಬೇಡಿ. ಹೆಚ್ಚೆಂದರೆ 3 ಗಮಟೆ ಇಟ್ಟರೆ ಸಾಕು.
ಹೆನ್ನಾ ಹಚ್ಚಿ ಮಲಗಿದರೆ ಕೂದಲಿಗೆ ಹಾನಿಯುಂಟಾಗುವುದು.
ನಿಮ್ಮ ಕೂದಲು ಬೇಗ ಜಿಡ್ಡಾಗುವುದೇ?
ನಿಮ್ಮ ಕೂದಲು ಬೇಗನೆ ಎಣ್ಣೆ-ಎಣ್ಣೆಯಾಗುವುದಾದರೆ ಹೆನ್ನಾವನ್ನು ನೀರಿನ ಜೊತೆ ಮಿಕ್ಸ್ ಮಾಡಿ ತಲೆಗೆ ಹಚ್ಚಿ ಅರ್ಧ ಗಂಟೆಯ ಬಳಿಕ ತಲೆ ತೊಳೆಯಿರಿ.
ಹೆನ್ನಾವನ್ನು ಕಂಡಿಷಿನಿಂಗ್‌ಗೆ ಬಳಸುವುದು ಹೇಗೆ?
ಹೆನ್ನಾ, ಲೋಳೆಸರ ಹಾಗೂ ನೀರು ಮಿಕ್ಸ್ ಮಾಡಿ ತಲೆಗೆ ಹಚ್ಚಿ 10 ನಿಮಿಷ ಬಳಿಕ ತಲೆ ತೊಳೆಯಿರಿ. ಈ ರೀತಿ ಮಾಡಿದರೆ ಕೂದಲು ಕಂಡೀಷನರ್ ಬಳಸಿದಂತೆ ಇರುತ್ತದೆ.
ನೀವು ಬಳಸುವ ಹೆನ್ನಾ ನೈಸರ್ಗಿಕವಾದದ್ದು ಎಂದು ಪತ್ತೆ ಹಚ್ಚುವುದು ಹೇಗೆ?
* ಸ್ವಲ್ಪ ಹೆನ್ನಾ ತೆಗೆದು ಮೇಜಿನ ಮೇಲೆ ಹಾಕಿ ಅದರ ಮೇಲೆ ಗಾಜಿನ ಗ್ಲಾಸ್ ಹಾಕಿ ಉಜ್ಜಿದಾಗ ಮರಳು ಹಾಕಿದಾಗ ಉಜ್ಜಿದಂತೆ ಶಬ್ದ ಬಂದರೆ ಅದು ಕಲಬೆರಿಕೆಯ ಮೆಹಂದಿಯಾಗಿದೆ.
* ನೀವು ಮೆಹಂದಿ ಅಥವಾ ಹೆನ್ನಾ ಕಲೆಸಿದಾಗ ಅದು ತುಂಬಾ ಹಸಿರು ಬಣ್ಣದಲ್ಲಿದ್ದರೆ ಅದಕ್ಕೆ ಹಸಿರು ಬಣ್ಣ ಸೇರಿಸಲಾಗಿದೆ ಎಂದರ್ಥ.
* ನೈಸರ್ಗಿಕವಾದ ಹೆನ್ನಾದ ವಾಸನೆ ಮೆಹಂದಿ ಎಲೆಯ ವಾಸನೆಯಂತಿರುತ್ತದೆ.
* ನ್ಯಾಚುರಲ್ ಹೆನ್ನಾ ಬಳಸಿದಾಗ ಕೂದಲು ಕೆಂಪಾಗುವುದು, ಕಪ್ಪಾಗುವುದಿಲ್ಲ.
ಇನ್ನು ನೀವು ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ಹೆನ್ನಾ ಹಾಕಿ ಅದಕ್ಕೆ 20 ಹನಿ ಪೆರಾಕ್ಸೈಡ್, 10 ಹನಿ ಅಮೋನಿಯಾ ಹಾಕಿ ಅದರಲ್ಲಿ ಉದುರಿದ ಕೂದಲನ್ನು ಹಾಕಿಟ್ಟರೆ ಆ ಕೂದಲಿನಲ್ಲಿ ಯಾವುದೇ ಬದಲಾವಣೆ ಕಂಡು ಬರದಿದ್ದರೆ ಅದು ನೈಸರ್ಗಿಕವಾದ ಹೆನ್ನಾವಾಗಿದೆ.
ಕೂದಲಿನ ವಿಷಯದಲ್ಲಿ ತುಂಬಾನೇ ಜಾಗ್ರತೆವಹಿಸಬೇಕು. ಕೂದಲು ಉದುರುವುದನ್ನು ತಡೆಗಟ್ಟಲು, ಕೂದಲು ಬೆಳ್ಳಗಾಗುವುದನ್ನು ತಡೆಗಟ್ಟಲು ನಾವು ಹೆನ್ನಾ ಬಳಸುತ್ತಾವೆ. ಆದರೆ ಬಳಸಿದ ಹೆನ್ನಾದಿಂದಲೇ ಕೂದಲು ಮತ್ತಷ್ಟು ಹಾಳಾಗಬಾರದು ಅಲ್ವೇ?



Click it and Unblock the Notifications