Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪುನರ್ಪುಳಿ ಬೆಣ್ಣೆಯಲ್ಲಿರುವ ಈ ಸೌಂದರ್ಯವರ್ಧಕ ಗುಣಗಳ ಬಗ್ಗೆ ಗೊತ್ತೇ?
ಇತ್ತೀಚೆಗೆ ಎಲ್ಲರೂ ಕೆಮಿಕಲ್ ರಹಿತ ವಸ್ತುಗಳನ್ನು ತ್ವಚೆ ಆರೈಕೆಗೆ ಬಳಸಲು ಆಸಕ್ತಿ ತೋರಿಸುತ್ತಿದ್ದಾರೆ. ನಮ್ಮ ನಿಸರ್ಗದಲ್ಲಿಯೇ ತ್ವಚೆ ಸೌಂದರ್ಯಕ್ಕೆ ಬೇಕಾದ ತುಂಬಾ ವಸ್ತುಗಳಿವೆ. ಅದರಲ್ಲೊಂದು ಕೋಕಂ ಇದನ್ನು ಪುನರ್ಪುಳಿ ಎಂದು ಕರೆಯಲಾಗುವುದು.

ಪುನರ್‌ಪುಳಿ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ ಇದರ ಪುಡಿಯನ್ನು ತ್ವಚೆ ಆರೈಕೆಗೆ ಬಳಸಬಹುದು, ಪನರ್ಪುಳಿ ಪುಡಿಯನ್ನು ಹೇಗೆ ಬಳಸಬೇಕು, ಇದರಿಂದ ಸೌಂದರ್ಯಕ್ಕೆ ದೊರೆಯುವ ಪ್ರಯೋಜನಗಳೇನು ಎಂದು ನೋಡೋಣ ಬನ್ನಿ:
ಕೋಕಂ ಪುಡಿಯಿಂದ ತ್ವಚೆ ಹಾಗೂ ಕೂದಲಿಗೆ ದೊರೆಯುವ ಪ್ರಯೋಜನಗಳು
ಕೋಕಂ ಬೀಜದಲ್ಲಿ ವಿಟಮಿನ್ ಇ ಹಾಗೂ ಶಕ್ತಿಯುತವಾತ ಆ್ಯಂಟಿಆಕ್ಸಿಡೆಂಟ್ ಇದೆ. ಇದರಿಂದಾಗಿ ತ್ವಚೆಗೆ ತುಂಬಾ ಒಳ್ಳೆಯದು.
ತ್ವಚೆ
ಕೋಕಂ ಪುಡಿ ತ್ವಚೆಯನ್ನು ಮೃದುವಾಗಿಡುತ್ತದೆ. ಇದನ್ನು ಬಳಸುವುದರಿಂದ ತುಟಿ ಮೃದುವಾಗುವುದು, ತ್ವಚೆಗೆ ಹಚ್ಚುವುದರಿಂದ ತ್ವಚೆ ಮೃದುವಾಗಿರುವುದು.
ಕೋಕಂ ಬಟರ್ ಬಳಸುವುದರಿಂದ ತ್ವಚೆ ಕಣಗಳ ಆರೋಗ್ಯ ವೃದ್ಧಿಸುವುದು
ತ್ವಚೆ ಒಡೆದಿದ್ದರ, ತುಟಿ ಒಡೆದಿದ್ದರೆ , ತ್ವಚೆಗೆ ಗಾಯವಾಗಿದ್ದರೆ ಕೋಕಂ ಬಟರ್ ಹಚ್ಚಿದರೆ ಸಾಕು ತ್ವಚೆ ಮೊದಲಿನಂತಾಗುವುದು.
ಯೌವನದ ಕಳೆ ಮಾಸದಂತೆ ರಕ್ಷಣೆ ಮಾಡುತ್ತದೆ
ಕೋಕಂ ಬಟರ್ ಹಚ್ಚವುದರಿಂದ ತ್ವಚೆಯಲ್ಲಿ ಮಾಯಿಶ್ಚರೈಸರ್ ಕಾಪಾಡುವುದರಿಂದ ಮುಖದಲ್ಲಿ ಯೌವನದ ಕಳೆ ಮಾಸದಂತೆ ಸೌಂದರ್ಯ ರಕ್ಷಣೆ ಮಾಡುತ್ತದೆ. ವಾಯು ಮಾಲಿನ್ಯ ನಮ್ಮ ತ್ವಚೆಯ ಮೇಲೆ ತುಂಬಾನೇ ಪರಿಣಾಮ ಬೀರುತ್ತದೆ. ಈ ಕೋಕಂ ಬಟರ್ ತ್ವಚೆಯಲ್ಲಿ ಮಾಯಿಶ್ಚರೈಸರ್ ಕಾಪಾಡಿ ಅಕಾಲಿಕ ನೆರಿಗೆ ತಡೆಗಟ್ಟಲು ಸಹಾಯ ಮಾಡುತ್ತದೆ.
ಡ್ರೈ ತ್ವಚೆಯವರಿಗೆ ತುಂಬಾ ಒಳ್ಳೆಯದು
ಇದನ್ನು ನೀವು ತುಟಿ, ಪಾದ, ಕಾಲು, ಕೈಗಳಿಗೆ ಹಚ್ಚಬಹುದು. ಕೋಕಂ ಬಟರ್ ಅಂಟು-ಅಂಟಲ್ಲ ಆದ್ದರಿಂದ ತ್ವಚೆಗೆ ಹಚ್ಚಿದಾಗ ನಿಮಗೆ ಕಿರಿಕಿರಿ ಅನಿಸುವುದಿಲ್ಲ. ಇದನ್ನು ಸೆನ್ಸುಟುವ್ ತ್ವಚೆಯವರೂ ಬಳಸಬಹುದು. ಕೋಕಂ ಬಟರ್ ಬಳಸುತ್ತಿದ್ದರೆ ಒಣ ತ್ವಚೆಯ ಸಮಸ್ಯೆಯೇ ಇರಲ್ಲ.
ಮೊಡವೆ ತಡಗಟ್ಟುತ್ತದೆ
ಮುಖದಲ್ಲಿ ತುಂಬಾ ಜಿಡ್ಡಿನಂಶವಿದ್ದರೆ ಮೊಡವೆ ಸಮಸ್ಯೆ ಉಂಟಾಗುವುದು, ಅದನ್ನು ತಡೆಗಟ್ಟಲು ಪುನರ್ಪುಳಿ ಬಟರ್ ಸಹಕಾರಿಯಾಗಿದೆ.ಇದನ್ನು ಬಳಸುವುದರಿಂದ ಮೊಡವೆ ಸಮಸ್ಯೆ ಕಡಿಮೆಯಾಗುವುದು.
ಕೂದಲಿನ ಆರೈಕೆಗೆ
ತಲೆಹೊಟ್ಟು ಸಮಸ್ಯೆ ತಡೆಗಟ್ಟುತ್ತದೆ
ತುಂಬಾ ಜನರಿಗೆ ತಲೆಹೊಟ್ಟಿನ ಸಮಸ್ಯೆ ಕಾಡುವುದು. ತಲೆಹೊಟ್ಟಿನ ಸಮಸ್ಯೆಯಿದ್ದರೆ ಕೂದಲು ಉದುರುವುದು, ಮೊಡವೆ ಸಮಸ್ಯೆ ಉಂಟಾಗುವುದು, ತಲೆ ಬುಡದಲ್ಲಿ ಉರಿಯೂತ ಉಂಟಾಗುವುದು. ಇದು ತಲೆ ಬುಡದಲ್ಲಿ ಮಾಯಿಶ್ಚರೈಸರ್ ಕಾಪಾಡುವುದರಿಂದ ಮೊಡವೆ ಸಮಸ್ಯೆಯೇ ಇರಲ್ಲ.
ನೈಸರ್ಗಿಕವಾದ ಕಂಡೀಷನರ್
ಇದರಲ್ಲಿ ಒಮೆಗಾ 3 ಕೊಬ್ಬಿನಂಶವಿರುವುದರಿಂದ ಇದು ಕೂದಲಿಗೆ ನೈಸರ್ಗಿಕವಾದ ಕಂಡೀಷನರ್ ಆಗಿದೆ. ಡ್ರೈ ಹೇರ್‌ನ ಸಮಸ್ಯೆ ಇರುವವರು ಇದನ್ನು ಬಳಸುವ ಮೂಲಕ ತುಂಬಾ ಒಳ್ಳೆಯ ರಿಸಲ್ಟ್ ಪಡೆಯಬಹುದು.
ಕೂದಲಿನ ಬೆಳವಣಿಗೆಗೆ ಸಹಕಾರಿ
ಇದರಲ್ಲಿರುವ ಕೊಬ್ಬಿನಂಶ ಹಾಗೂ ಲೌರಿಕ್ ಆಮ್ಲ ಕೂದಲಿನ ಬೆಳವಣಿಗೆಗೆ ತುಂಬಾನೇ ಸಹಕಾರಿಯಾಗಿದೆ.
ಕೋಕಂ ಬಟರ್ ಗುಣಲಕ್ಷಣಗಳು
* ಸುವಾಸನೆ ಇರಲ್ಲ: ಸುವಾಸನೆ ಇಲ್ಲದೆ ಸೌಂದರ್ಯವರ್ಧಕ ತ್ವಚೆಗೆ ತುಂಬಾನೇ ಒಳ್ಳೆಯದು
* ತ್ವಚೆ ಹಾಗೂ ಕೂದಲು ಸುಲಭವಾಗಿ ಕೋಕಂ ಬಟರ್ ಹೀರಿಕೊಳ್ಳುತ್ತದೆ: ಕೋಕಂ ಬಟರ್ ಅನ್ನು ತ್ವಚೆ ಹಾಗೂ ಕೂದಲಿನ ಬುಡ ಸುಲಭವಾಗಿ ಹೀರಿಕೋಳ್ಳುವುದರಿಂದ ತುಂಬಾನೇ ಒಳ್ಳೆಯದು.



Click it and Unblock the Notifications
