Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೋಕಾ ಬಟರ್‌ನಿಂದ ತ್ವಚೆ ಆರೈಕೆ: ಚಳಿಗೆ ತ್ವಚೆ ಡ್ರೈಯಾಗಲ್ಲ, ಫೇಶಿಯಲ್ ಹೊಳಪು ಕೂಡ ಸಿಗುತ್ತೆ
ಚಳಿಗಾಲದಲ್ಲಿ ತ್ವಚೆ ಡ್ರೈಯಾಗುವುದು ಸಹಜ. ಆದರೆ ತ್ವಚೆಯನ್ನು ಆರೈಕೆ ಮಾಡಿದರೆ ಈ ರೀತಿ ತ್ವಚೆ ಡ್ರೈಯಾಗುವುದನ್ನು ತಪ್ಪಿಸಬಹುದು, ತ್ವಚೆ ಮಾಯಿಶ್ಚರೈಸರ್‌ನಿಂದ ಕೂಡಿರುತ್ತದೆ, ಹೀಗಾಗಿ ಹೊಳಪು ಕೂಡ ಇರುತ್ತದೆ. ಚಳಿಗಾಲದಲ್ಲಿ ತ್ವಚೆ ಡ್ರೈಯಾಗುವುದನ್ನು ತಡೆಗಟ್ಟಲು ಹಲವಾರು ಮನೆಮದ್ದುಗಳಿವೆ, ಅದರಲ್ಲೊಂದು ಕೋಕಾ ಬಟರತ್.
ನಿಮ್ಮ ತ್ವಚೆ ತುಂಬಾನೇ ಡ್ರೈಯಾಗಿ ಅದರಿಂದ ನಿಮಗೆ ತೊಂದರೆಯಾಗುತ್ತಿದ್ದರೆ ಕೋಕಾ ಬಟರ್ ತುಂಬಾನೇ ಪ್ರಯೋಜನಕಾರಿಯಾಗಿದೆ, ಈ ಕೋಕಾ ಬಟರ್ ತ್ವಚೆಗೆ ಹೇಗೆ ಬಳಸಬೇಕು, ಇದರಿಂದ ತ್ವಚೆಗಾಗುವ ಗುಣಗಳೇನು ಎಂದು ನೋಡೋಣ ಬನ್ನಿ:

ಕೋಕಾ ಬಟರ್ ತ್ವಚೆಗೆ ಹಚ್ಚಿದರೆ ತ್ವಚೆಯಲ್ಲಿ ತೇವಾಂಶ ಕಾಪಾಡುತ್ತದೆ
ಕೋಕಾ ಬಟರ್ ಮೈಗೆ ಮಾತ್ರವಲ್ಲ,ನೀವು ತ್ವಚೆಗೂ ಹಚ್ಚಬಹುದು, ಕೋಕಾ ಬಟರ್ ತ್ವಚೆಗೆ ಹಚ್ಚಿದಾಗ ತ್ವಚೆ ಡ್ರೈಯಾಗುವುದಿಲ್ಲ, ಇದರಿಂದ ತ್ವಚೆ ಬಿಗಿಯಾಗುವುದು ಅಥವಾ ತುರಿಕೆ ಉಂಟಾವುಗುವುದು, ತ್ವಚೆ ಒಡೆದು ನೋವುಂಟಾಗುವುದು ಈ ಬಗೆಯ ಸಮಸ್ಯೆಯನ್ನು ತಡೆಗಟ್ಟಬಹುದು.
ಉರಿಯೂತದ ಸಮಸ್ಯೆ ತಡೆಗಟ್ಟುತ್ತದೆ
ನೀವು ರಾತ್ರಿ ಮಲಗುವಾಗ ಮುಖಕ್ಕೆ ಕೋಕಾ ಬಟರ್ ಹಚ್ಚುವುದರಿಂದ ಮುಖದ ಆರೈಕೆ ಮಾಡುತ್ತದೆ, ಅಲ್ಲದೆ ಮುಖ ಒಡೆಯುವುದು, ಮುಖಬಿಳಿ ಬಿಳಿಯಾಗುವುದು ಈ ಬಗೆಯ ಸಮಸ್ಯೆ ತಡೆಗಟ್ಟಲು ಸಹಕಾರಿ. ಕೋಕಾ ಬಟರ್ ಹಚ್ಚಿ ಮುಖವನ್ನು ಆರೈಕೆ ಮಾಡಿದರೆ ಮುಖ ಫೇಶಿಯಲ್ ಹಾಕಿದಂತಿರುತ್ತದೆ.
ಮುಖದಲ್ಲಿ ನೆರಿಗೆ ಬೀಳುವುದನ್ನು ತಡೆಗಟ್ಟುತ್ತದೆ
ಕೋಕಾ ಬಟರ್ ಮುಖ ಚಳಿಗಾಲದಲ್ಲಿ ಒಡೆಯದಂತೆ ರಕ್ಷಣೆ ಮಾಡುವುದು ಮಾತ್ರವಲ್ಲ ಮುಖದಲ್ಲಿ ನೆರಿಗೆ ಬೀಳುವುದನ್ನು ತಡೆಗಟ್ಟಲು ಸಹಕಾರಿ.
ಕೋಕಾ ಬಟರ್‌ನಲ್ಲಿರುವ ವಿಟಮಿನ್ ಸಿ ತ್ವಚೆ ರಿಪೇರಿ ಮಾಡುತ್ತದೆ
ಕೋಕಾ ಬಟರ್‌ನಲ್ಲಿ ವಿಟಮಿನ್ ಸಿ ಇದೆ, ಇದರಿಂದ ಇದನ್ನು ತ್ವಚೆಗೆ ಹಚ್ಚಿದಾಗ ಮುಖ ರಿಪೇರಿ ಮಾಡುತ್ತದೆ. ಅಲ್ಲದೆ ತ್ವಚೆಗೆ ಹಾನಿಯಾಗಿದ್ದರೆ ಅದನ್ನು ರಿಪೇರಿ ಮಾಡಲು ಸಹಾ6ಯ ಮಾಡುತ್ತದೆ.
ಕೋಕಾ ಬಟರ್ ಹೇಗೆ ಬಳಸಬಹುದು?
ಇದನ್ನು ನಿಮ್ಮ ಮಾಯಿಶ್ಚರೈಸರ್ ಅಥವಾ ಕ್ರೀಮ್‌ಗೆ ಸ್ವಲ್ಪ ಹಾಕಿ ಬೆಳಸಬಹುದು ಅಥವಾ ನೇರವಾಗಿ ಹಚ್ಚಬಹುದು. ಕೋಕಾ ಬಟರ್ ತುಂಬಾನೇ ಸುವಾಸನೆ ಬೀರುತ್ತದೆ, ಇದನ್ನು ಬಳಸಿದರೆ ಯಾವುದೇ ಮಾಯಿಶ್ಚರೈಸರ್ ಕೂಡ ಬೇಕಾಗಿಲ್ಲ.
ಕೋಕಾ ಬಟರ್ ತ್ವಚೆಗೆ ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ
ಕೋಕಾ ಬಟರ್ ತ್ವಚೆಗೆ ತುಂಬಾ ಒಳ್ಳೆಯದು, ಇದರಿಂದ ತ್ವಚೆಗೆ ಅಡ್ಡಪರಿಣಾಮವಿಲ್ಲ, ಗರ್ಭಿಣಿಯರೂ ಇದನ್ನು ಬಳಸಬಹುದು ಎಂದು ಹೆಲ್ತ್‌ಲೈನ್ ಹೇಳುತ್ತದೆ. ಕೆಲವರಿಗಷ್ಟೇ ಅಲರ್ಜಿ ಉಂಟಾಗಬಹುದು, ಮೈ ಮೇಲೆ ಗುಳ್ಳೆಗಳು ಕಂಡು ಬರುವುದು.
ಮಕ್ಕಳಿಗೂ ಹಚ್ಚಬಹುದು
ಈ ಕೋಕಾ ಬಟರ್ ಅನ್ನು ಮಕ್ಕಳಿಗೂ ಹಚ್ಚಬಹುದು. ಇನ್ನು 2015ರಲ್ಲಿ ನಡೆಸಿದ ಅಧ್ಯಯನವು ಕೋಕಾ ಬಟರ್ ಹೆಣ್ಮಕ್ಕಳು ಬೇಗ ಋತುಮತಿಯಾಗುವುದನ್ನು ತಡೆಗಟ್ಟುತ್ತದೆ ಎಂದು ಹೇಳಿದೆ, ಆದರೆ ಇದರ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಸಬೇಕಾಗಿದೆ.
ಕೋಕಾ ಬಟರ್ ತ್ವಚೆಯಲ್ಲಿ ಕಪ್ಪು ಕಲೆ ಕಡಿಮೆ ಮಾಡುತ್ತದೆ
ಕೋಕಾಬಟರ್ ತ್ವಚೆಯಲ್ಲಿ ನಾರಿನಂಶ ಕಾಪಾಡುತ್ತದೆ, ಅಲ್ಲದೆ ತ್ವಚೆಯಲ್ಲಿನ ಕಲೆ ಓಡಿಸಲು ಸಹಕಾರಿಯಾಗಿದೆ.
ಸೂರ್ಯನ ಕಿರಣಗಳಿಂದ ತ್ವಚೆಯನ್ನು ರಕ್ಷಣೆ ಮಾಡುತ್ತದೆ
ಕೋಕಾ ಬಟರ್ ತ್ವಚೆಗೆ ಹಚ್ಚುವುದರಿಂದ ಸೂರ್ಯ ಕಿರಣಗಳಿಂದ ತ್ವಚೆಯನ್ನು ರಕ್ಷಣೆ ಮಾಡುತ್ತದೆ. ಸನ್‌ಟ್ಯಾನ್ ಆಗುವುದನ್ನು ತಡೆಗಟ್ಟಲು ಸಹಕಾರಿಯಾಗಿದೆ.



Click it and Unblock the Notifications