Latest Updates
-
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ? -
ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್: ಭಾರತದ ಗೆಲುವಿನ ಸಂಭ್ರಮಕ್ಕೆ ಇಲ್ಲಿದೆ ವೈರಲ್ ಮೀಮ್ಸ್ ಮತ್ತು ಸೇಫ್ ಸೆಲೆಬ್ರೇಷನ್ ಗೈಡ್!
ಬೇಸಿಗೆಯಲ್ಲಿ ಕೂದಲ ರಕ್ಷಣೆಗೆ ಈ ಹೇರ್ ಮಾಸ್ಕ್ ಬೆಸ್ಟ್ ನೋಡಿ
ಬರೀ ತ್ವಚೆಯನ್ನು ಮಾತ್ರವಲ್ಲ, ಕೂದಲನ್ನು ಕೂಡ ಆಯಾ ಸಮಯಕ್ಕೆ ತಕ್ಕಂತೆ ಆರೈಕೆ ಮಾಡಬೇಕು. ಇದು ಬೇಸಿಗೆ ಕಾಲ, ಬಿಸಿಲು, ಧೂಳು ಇವೆಲ್ಲಾ ಕೂದಲಿಗೆ ಹಾನಿಯುಂಟು ಮಾಡುತ್ತದೆ. ಆದ್ದರಿಂದ ಕೂದಲಿನ ಆರೋಗ್ಯದ ಕಡೆಗೆ ಗಮನಹರಿಸುವುದು ಒಳ್ಳೆಯದು. ನಾವಿಲ್ಲಿ ಬೇಸಿಗೆಯಲ್ಲಿ ನೈಸರ್ಗಿಕ ಹೇರ್ ಪ್ಯಾಕ್ ಬಳಸಿ ಕೂದಲಿನ ರಕ್ಷಣೆ ಮಾಡುವುದು ಹೇಗೆ ಎಂಬ ಟಿಪ್ಸ್ ನೀಡಿದ್ದೇವೆ ನೋಡಿ:

ಎಳನೀರಿನ ಹೇರ್ ಮಾಸ್ಕ್
ನೀವು ಗಂಜಿ ಎಳನೀರನ್ನು ಇದನ್ನು ಬಳಸಬೇಕು. ಅದರ ಗಂಜಿಯನ್ನು ಪೇಸ್ಟ್ ರೀತಿ ಮಾಡಿ, ಸ್ವಲ್ಪ ಎಳನೀರಿನ ಜೊತೆ ಮಿಶ್ರ ಮಾಡಿ ಕೂದಲಿನ ಬುಡಕ್ಕೆ ಹಚ್ಚಿ ಅರ್ಧ ಗಂಟೆ ಬಿಡಿ. ನಂತರ ಮೈಲ್ಡ್ ಶ್ಯಾಂಪೂ ಹಚ್ಚಿ ತೊಳೆಯಿರಿ. ಹೀಗೆ ಮಾಡುವುದರಿಂದ ತಲೆಹೊಟ್ಟಿನಂಥ ಸಮಸ್ಯೆ ತಡೆಗಟ್ಟುವುದು ಮಾತ್ರವಲ್ಲ ಕೂದಲಿನ ಹೊಳಪು ಕೂಡ ಹೆಚ್ಚುವುದು. ನೀವು ವಾರಕ್ಕೆ ಎರಡು ಬಾರಿ ಈ ರೀತಿ ಮಾಡಿದರೆ ಸಾಕು ಕೂದಲು ಆಕರ್ಷಕವಾಗುವುದು. ಅಲ್ಲದೆ ಎಳನೀರು ತಲೆಗೆ ಹಾಕಿದಾಗ ತಲೆ ತಂಪಾಗುವುದರಿಂದ ಬೇಸಿಗೆ ಒಳ್ಳೆಯದು.
ಹರಳೆಣ್ಣೆ ಮತ್ತು ಲೋಳೆಸರ
ನೀವು ಹರಳೆಣ್ಣೆ ಮತ್ತು ಲೋಳೆಸರ ತಲೆಗೆ ಮಿಕ್ಸ್ ಮಾಡಿ ಹಚ್ಚಿದರೆ ಕೂದಲಿನ ಬುಡ ಬಲವಾಗುವುದು. ಅಲ್ಲದೆ ಕೂದಲು ಉದುರುವುದು, ಕೂದಲು ಬೇಗನೆ ಬೆಳ್ಳಗಾಗುವುದು ಈ ಬಗೆಯ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ. ನೀವು ಹರಳೆಣ್ಣೆ ಹಾಗೂ ಲೋಳೆಸರ ಮಿಕ್ಸ್ ಮಾಡಿ ಹಚ್ಚುವುದರಿಂದ ಕೂದಲಿನ ಬುಡಕ್ಕೆ ಅವಶ್ಯಕವಿರುವ ಎ, ಬಿ, ಸಿ, ಇ ವಿಟಮಿನ್ ದೊರೆಯುವುದು.
ಸ್ಟ್ರಾಬೆರಿ , ಮೊಸರು
ತಲೆಹೊಟ್ಟು, ತಲೆ ತುರಿಕೆ ಈ ಬಗೆಯ ಸಮಸ್ಯೆ ಇರುವವರಿಗೆ ಈ ಹೇರ್‌ಮಾಸ್ಕ್ ತುಂಬಾನೇ ಒಳ್ಳೆಯದು. ಇದು ತಲೆಹೊಟ್ಟನ್ನು ಹೋಗಲಾಡಿಸಲು ತುಂಬಾನೇ ಸಹಕಾರಿ. ಅಲ್ಲದೆ ಈ ಹೇರ್ ಮಾಸ್ಕ್ ನಿಮ್ಮ ಕೂದಲನ್ನು ಮೃದುವಾಗಿಸುತ್ತದೆ. ಈ ಹೇರ್ ಮಾಸ್ಕ್ ಒರಟು ಕೂದಲು ಇರುವವರಿಗೆ ತುಂಬಾನೇ ಒಳ್ಳೆಯದು. ನೀವು ಸ್ಟ್ರಾಬೆರ್ರಿ ಬದಲಿಗೆ ಬರೀ ಮೊಸರು ಕೂಡ ಹಾಕಬಹುದು.
ದಾಸವಾಳದ ಎಲೆ ಹಾಗೂ ಹೂವಿನ ಹೇರ್ ಮಾಸ್ಕ್
ಈ ಹೇರ್ ಮಾಸ್ಕ್ ಕೂಡ ಕೂದಲಿಗೆ ತುಂಬಾನೇ ಒಳ್ಳೆಯದು. ದಾಸವಾಳದ ಹೂ, ಎಲೆಗಳನ್ನು ಸ್ವಲ್ಪ ನೀರಿನಲ್ಲಿ ಕಲೆಸಿ ಆ ನೀರನ್ನು ತಲೆಗೆ ಹಾಕಿ ಅರ್ಧ ಗಂಟೆ ಬಿಟ್ಟು ತಲೆತೊಳೆಯಿರಿ. ಎಣ್ಣೆಗೆ ದಾಸವಾಳದ ಹೂ ಅಥವಾ ಎಲೆಯನ್ನು ಹಾಕಿ ಕುದಿಸಿ ಆ ಎಣ್ಣೆಯನ್ನು ತಲೆಗೆ ಹಚ್ಚಿ ಸ್ನಾನ ಮಾಡಿ.
ನೆಲ್ಲಿಕಾಯಿ ಎಣ್ಣೆಯ ಮಾಸ್ಕ್
ಎಣ್ಣೆಗೆ ನೆಲ್ಲಿಕಾಯಿ ಹಾಕಿ ಕುದಿಸಿ ಆ ಎಣ್ಣೆಯನ್ನು ತಲೆಗೆ ಹಚ್ಚಿ ಇದರಿಂದ ಕೂದಲು ಉದುರುವುದು, ತಲೆಕೂದಲು ಒರಟಾಗುವುದು ಈ ಬಗೆಯ ಸಮಸ್ಯೆ ತಡೆಗಟ್ಟಲು ಸಹಕಾರಿ.



Click it and Unblock the Notifications
