Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಮೊಡವೆ-ಕಪ್ಪು ಕಲೆ ಒಂದೇ ವಾರಕ್ಕೆ ನಿವಾರಣೆ..! ಇಲ್ಲಿದೆ ಸಿಂಪಲ್ ಮನೆಮದ್ದು!
ಮುಖದ ಸೌಂದರ್ಯ ಕಾಪಾಡಿಕೊಳ್ಳಬೇಕು ಅನ್ನೋದು ಎಲ್ಲರ ಬಯಕೆಯಾಗಿರುತ್ತೆ. ಮುಖ ಬಿಳಿಯಾಗಿ ಕಪ್ಪು ಕಲೆಗಳಿಲ್ಲದೆ ಮೊಡವೆಗಳು ಇಲ್ಲದಂತೆ ಹೊಳೆಯುತ್ತಿರಬೇಕು ಎನ್ನುವುದು ಯುವಕ ಮತ್ತು ಯುವತಿಯರ ಆಸೆ, ಬೇಡಿಕೆಯೂ ಆಗಿರುತ್ತೆ. ಆದ್ರೆ ಇದು ಸಾಧ್ಯವಿದ್ಯಾ?
ಸ್ವಚ್ಛ ಕಲೆಗಳಿಲ್ಲದ ಮುಖ ಪಡೆಯೋದು ಬಹಳ ಕಷ್ಟ ಏಕೆಂದರೆ ನಮ್ಮ ಜೀವನ ಶೈಲಿ, ಆಹಾರ ಪದ್ದತಿಯಿಂದಾಗಿ ಮುಖದಲ್ಲಿ ಮೊಡವೆಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಇತ್ತೀಚಿಗೆ ಯುವಜನತೆಗೆ ಕಾಡುತ್ತಿರುವ ಸಮಸ್ಯೆಗಳಲ್ಲಿ ಈ ಮೊಡವೆ ಹಾಗೂ ಕಪ್ಪು ಕಲೆಯೂ ಒಂದಾಗಿದೆ.

ಆದರೆ ಮೊಡವೆ ಹಾಗೂ ಕಪ್ಪು ಕಲೆಯನ್ನು ಹೋಗಲಾಡಿಸಲು ಮಾರುಕಟ್ಟೆ ನಾನಾ ತರಹದ ಕ್ರೀಮ್‌ಗಳು, ಔಷಧಿಗಳು ಸಿಗುತ್ತವೆ, ಆದ್ರೆ ಇದೆಲ್ಲವು ಅಷ್ಟೊಂದು ಪ್ರವಾವಶಾಲಿಯಾಗಿ ಕೆಲಸ ಮಾಡೋದಿಲ್ಲ. ಅದರಲ್ಲು ಕೆಮಿಕಲ್ ತುಂಬಿರುವ ಈ ಔಷಧಿಗಳಿಂದ ಮುಖವೇ ಹಾಳಾಗುವ ಹಲವು ಪ್ರಕರಣ ನಾವು ನೋಡಿದ್ದೇವೆ. ಹಾಗಾಗಿ ಇಂತಹ ಕ್ರೀಮ್‌ಗಳ ಬಳಸುವ ಮುನ್ನ ವೈದ್ಯರ ಭೇಟಿಯಾಗಬೇಕಾಗುತ್ತದೆ.
ಜೊತೆಗೆ ಈ ಕ್ರೀಮ್‌ಗಳ ಹಚ್ಚಲು ಆರಂಭಿಸಿದರೆ ಒಮ್ಮೆ ಅದನ್ನು ಬಳಸಿ ಬಿಡಲು ಆಗುವುದಿಲ್ಲ, ನಿರಂತರವಾಗಿ ಅದನ್ನು ಬಳಸುತ್ತಿರಬೇಕಾಗುತ್ತದೆ. ಇಲ್ಲದಿದ್ದರೆ ಮತ್ತೆ ಮೊಡವೆಗಳು ಕಾಣಿಸಿಕೊಳ್ಳಲು ಆರಂಭವಾಗುತ್ತದೆ. ಆದರೆ ನಾವಿಂದು ಈ ರಾಸಾಯನಿಕ ಯುಕ್ತ ಕ್ರೀಮ್ ಬಳಸದೆ ಮನೆಯಲ್ಲೇ ಮನೆಮದ್ದು ಬಳಸಿ ಒಂದೇ ವಾರದಲ್ಲಿ ಕಪ್ಪು ಕಲೆ ಹಾಗೂ ಮೊಡವೆಗಳಿಂದ ದೂರಾಗುವ ಕುರಿತು ಮಾಹಿತಿ ನೀಡುತ್ತೇವೆ.
ಹೌದು ಮನೆಯಲ್ಲಿ ಸಿಗುವ ಕೆಲವು ವಸ್ತುಗಳಿಂದ ನಿಮ್ಮ ಮುಖದ ಕಲೆ ಹಾಗೂ ಮೊಡವೆ ಕಡಿಮೆ ಮಾಡಬಹುದು. ಹಾಗಾದ್ರೆ ಯಾವುದು ಆ ಮನೆ ಮದ್ದು ಮಾಡುವುದು ಹೇಗೆ ಎಂಬ ಕುರಿತ ವಿವರಣೆ ಇಲ್ಲಿದೆ.
ನಿಂಬೆ ಹಣ್ಣು ಹಾಗೂ ಗಂಧ
ನಿಂಬೆ ಹಣ್ಣಿನ ರಸದಲ್ಲಿ ಸಿಟ್ರಿಕ್ ಆಮ್ಲವಿರುತ್ತದೆ ಇದನ್ನು ಗಂಧದೊಂದಿಗೆ ತೇದು ಅದರಿಂದ ಪೇಸ್ಟ್ ರೆಡಿ ಮಾಡಿಕೊಳ್ಳಬೇಕು. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಸುಮಾರು 1 ಗಂಟೆ ಬಳಿಕ ಬರಿ ನೀರಿನಿಂದ ಮುಖ ತೊಳೆಯಬೇಕು. ಇದನ್ನು ಬೆಳಗ್ಗೆ ಹೊತ್ತು ಮಾಡಿದರೆ ಉತ್ತಮ. ಹೀಗೆ ಒಂದು ವಾರಗಳ ಕಾಲ ನಿರಂತರವಾಗಿ ಮಾಡೋದ್ರಿಂದ ಖಂಡಿತ ಮುಖದಲ್ಲಿರುವ ಕಪ್ಪು ಕಲೆ ಹಾಗೂ ಮೊಡವೆ ಮಾಯಾಗುತ್ತವೆ.
ಹೊಂಗೆ ಮರದ ಬೀಜದ ಪೇಸ್ಟ್
ಹೊಂದೆ ಮರದ ಬೀಜ ಅಪರೂಪವಾಗಿ ಸಿಗುತ್ತವೆ. ಈ ಬೀಜವನ್ನು ನೀರಿನಲ್ಲಿ ತೇದಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆಯಬೇಕು. ನಿತ್ಯ ಇದೇ ರೀತಿ ಮಾಡಿದರೆ ಒಂದು ವಾರದಲ್ಲಿ ಮೊಡವೆ ಮರೆಯಾಗುತ್ತವೆ.
ಬೆಟ್ಟದ ನಲ್ಲಿಕಾಯಿ ರಸ
ಬೆಟ್ಟದ ನಲ್ಲಿಕಾಯಿಯ ರಸನ್ನು ನಿತ್ಯ ಕುಡಿಯಬೇಕು. ಇದರಿಂದ ರಕ್ತ ಶುದ್ಧಿಯಾಗಲಿದೆ. ಜೊತೆಗೆ ಜಠರದ ಆರೋಗ್ಯಕ್ಕೂ ಇದು ಉತ್ತಮ. ಹೀಗೆ ಮಾಡೋದ್ರಿಂದ ಮೊಡವೆಗಳು ನಿವಾರಣೆಯಾಗುತ್ತದೆ.
ಅಲೂವೆರಾ ಮತ್ತು ಗರಿಕೆ
ಅಲೂವೆರಾ ಹಾಗೂ ಬೇವಿನ ಸೊಪ್ಪಿನ ರಸ ಹಾಗೂ ಗರಿಕೆ ಹುಲ್ಲಿನ ರಸವನ್ನು ಸೇರಿಸಬೇಕು. ಇದಕ್ಕೆ ಒಂದು ನಿಂಬೆ ಹಣ್ಣಿನ ರಸ ಸೇರಿಸಿ ಚೆನ್ನಾಗಿ ಕಲಸಿ ಮಿಶ್ರಣ ಮಾಡಿಕೊಳ್ಳಿ. ಬಳಿಕ ಮುಖಕ್ಕೆ ಹಚ್ಚಿಕೊಂಡು ಒಂದು ಗಂಟೆಗಳ ಕಾಲ ಬಿಟ್ಟು ನಂತರ ತಣ್ಣೀರಿನಿಂದ ತೊಳೆದರೆ ಮೊಡವೆ, ಕಲೆಗಳು ಸಂಪೂರ್ಣವಾಗಿ ಕಡಿಮೆಯಾಗುತ್ತದೆ.
ಅರಶಿನ ಮತ್ತು ಶ್ರೀಗಂಧ
ಅರಶಿನವನ್ನು ತೆಗೆದುಕೊಂಡು ಅದಕ್ಕೆ ಶ್ರೀಗಂಧ ಹಾಗೂ ಗುಲಾಬಿ ನೀರು ಹಾಕಿ ಮಿಶ್ರಣ ಮಾಡಿಕಳ್ಳಿ, ಬಳಿಕ ಮುಖಕ್ಕೆ ಹಚ್ಚಿ ಒಂದು ಗಂಟೆಗೂ ಹೆಚ್ಚು ಕಾಲ ಬಿಡಿ. ಬಳಿಕ ತಣ್ಣೀರಿನಿಂದ ತೊಳೆಯಿರಿ. ಹೀಗೆ ನಿತ್ಯವು ಮಾಡೋದ್ರಿಂದ ನಿಮ್ಮ ಮುಖದಲ್ಲಿ ಕಾಂತಿ ಹಾಗೂ ಮೊಡವೆಗಳು ಒಂದೇ ವಾರಕ್ಕೆ ಕಡಿಮೆಯಾಗುತ್ತದೆ.



Click it and Unblock the Notifications

