Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಹೀಗೆ ಮಾಡಿದ್ರೆ 1 ವಾರದಲ್ಲಿ ಮುಖದ ಮೇಲಿನ ಬ್ಲಾಕ್‌ಹೆಡ್ಸ್ ಮಾಯ!
ಮುಖದ ಮೇಲಿನ ಕಲೆಗಳು ಯಾವಾಗಲು ಕಿರಿಕಿರಿ ಉಂಟುಮಾಡುತ್ತವೆ. ಮುಖ ಬಿಳಿಯಾಗಿ ಹೊಳಪಾಗಿರಬೇಕು ಎಂಬುದು ಎಲ್ಲರ ಆಸೆಯಾಗಿರುತ್ತೆ. ಆದ್ರೆ ಕೆಲವರ ಮುಖದಲ್ಲಿ ಕಪ್ಪು ಕಲೆಗಳು ಉಳಿದುಬಿಡುತ್ತವೆ. ಅದ್ರಲ್ಲೂ ಬ್ಲಾಕ್ ಹೆಡ್ಸ್ ಎಂದು ಕರೆಯಲ್ಪಡುವ ಕಲೆಗಳು ಉಳಿಯೋದು ಸರ್ವೇ ಸಾಮಾನ್ಯ.
ಸತ್ತ ಜೀವಕೋಶಗಳು, ಕೊಳಕು ಮತ್ತು ಧೂಳು ಚರ್ಮದ ರಂಧ್ರಗಳೊಳಗೆ ಸಿಲುಕಿಕೊಂಡಾಗ ಈ ಕಪ್ಪು ಚುಕ್ಕೆಗಳು ರೂಪುಗೊಳ್ಳುತ್ತವೆ. ಅದರಲ್ಲೂ ಮೂಗಿನ ಮೇಲೆ ಹಾಗೂ ಕೆನ್ನೆಯ ಮೇಲೆ ಹೆಚ್ಚಾಗಿ ಈ ರೀತಿ ಕಪ್ಪು ಕಲೆಗಳ ನೋಡಬಹುದು. ಇವುಗಳನ್ನು ಬ್ಲಾಕ್ ಹೆಡ್ಸ್ ಎಂದು ಕರೆಯಲಾಗುತ್ತದೆ.

ಈ ಬ್ಲಾಕ್ ಹೆಡ್ಸ್ ತೆಗೆಯಲು ಮಾರುಕಟ್ಟೆಯಲ್ಲಿ ನೂರಾರು ಕ್ರೀಮ್‌ಗಳು, ಆಧುನಿಕ ರೀತಿಯ ಚಿಕಿತ್ಸೆಯು ಲಭ್ಯವಿದೆ. ಆದರೆ ಇದೆಲ್ಲಾ ಕೆಲವು ಬಾರಿ ಮಾತ್ರ ಯಶಸ್ವಿಯಾಗುತ್ತದೆ. ಉಳಿದಂತೆ ಬ್ಲಾಕ್ ಹೆಡ್ಸ್ ಮತ್ತೆ ಕಾಣಿಸಿಕೊಳ್ಳಲು ಆರಂಭಿಸುತ್ತದೆ. ಕೆಲವೊಮ್ಮೆ ಈ ಕ್ರೀಮ್ ಹಚ್ಚುವುದನ್ನು ನಿಲ್ಲಿಸಿದ ತಕ್ಷಣ ಬ್ಲಾಕ್ ಹೆಡ್ಸ್ ಮತ್ತೆ ಕಾಣಿಸಿಕೊಳ್ಳಲು ಆರಂಭಿಸುತ್ತದೆ.
ನೀವು ಸೂರ್ಯನ ಬೆಳಕಿಗೆ ಬರುವುದರಿಂದಾಗಿ, ಹೆಚ್ಚು ಮೇಕಪ್ ಬಳಸುವುದು, ಚರ್ಮವನ್ನು ಸ್ಕ್ರಬ್ ಮಾಡದಿರುವುದು, ಮಾಪಕಗಳು, ಹೆಚ್ಚುವರಿ ಮೇದೋಗ್ರಂಥಿಗಳ ಸ್ರಾವ ಉತ್ಪಾದನೆ, ದೇಹದ ಹಾರ್ಮೋನುಗಳ ಬದಲಾವಣೆಗಳು, ಗರ್ಭಾವಸ್ಥೆ, ಮುಟ್ಟಿನ, ಗರ್ಭನಿರೋಧಕ ಮಾತ್ರೆಗಳ ಬಳಕೆ, ಸ್ಟೀರಾಯ್ಡ್ ಕ್ರೀಮ್‌ಗಳ ದೀರ್ಘಾವಧಿಯ ಬಳಕೆ ಇತ್ಯಾದಿ. ಈ ಕಪ್ಪು ಕಲೆಗಳನ್ನು ಉಂಟುಮಾಡುತ್ತದೆ.
ಹಾಗಾದ್ರೆ ನಾವಿಂದು ಈ ಬ್ಲಾಕ್ ಹೆಡ್ಸ್ ಹೋಗಾಲಾಗಿಸಲು ಈ ಕ್ರೀಮ್‌ಗಳಲ್ಲದೆ ಮನೆಯಲ್ಲೇ ಹೇಗೆ ಮದ್ದು ಮಾಡಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ. ಈ ಮೂಲಕ ಸುಲಭವಾಗಿ ಬ್ಲಾಕ್ ಹೆಡ್ಸ್‌ನಿಂದ ಮುಕ್ತಿ ಪಡೆಯುವ ಕುರಿತು ಇಲ್ಲಿ ತಿಳಿದುಕೊಳ್ಳೋಣ.
ನಿಂಬೆ ರಸ
ನಿಂಬೆ ರಸವು ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್-ಸಿ ಅನ್ನು ಹೊಂದಿರುತ್ತದೆ, ಇದು ಸತ್ತ ಚರ್ಮದ ಜೀವಕೋಶಗಳು ಮತ್ತು ಕಪ್ಪು ಚುಕ್ಕೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ನಿಮ್ಮ ಮುಖದಲ್ಲಿ ಬ್ಲಾಕ್ ಹೆಡ್ಸ್ ಇದ್ದರೆ ಅರ್ಧ ಚಮಚ ನಿಂಬೆ ರಸ ಹಾಗೂ 1 ಚಮಚ ಉಪ್ಪು ಮತ್ತು ನೀರು ತೆಗದುಕೊಂಡು ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಬೇಕು. ಬಳಿಕ ಬ್ಲಾಕ್‌ಹೆಡ್ಸ್ ಮೇಲೆ ಚೆನ್ನಾಗಿ ಹಚ್ಚಿ 15 ನಿಮಿಷ ಬಿಟ್ಟು ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಬೇಕು. ಹೀಗೆ ಒಂದು ವಾರಗಳ ಕಾಲ ನಿತ್ಯ ಮಾಡಿ ಅದರ ಫಲಿತಾಂಶ ನೀವೆ ನೋಡಬಹುದು.
ಮೊಟ್ಟೆಯ ಬಿಳಿಭಾಗ
ಮೊಟ್ಟೆಯ ಬಿಳಿಭಾಗವು ವಿಟಮಿನ್ ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಮೊಟ್ಟೆ ಸೌಂದರ್ಯ ವರ್ಧಕವಾಗಿಯೂ ಕೆಲಸ ಮಾಡುತ್ತದೆ. ಮೊಟ್ಟೆಯಿಂದ ಹಳದಿಯನ್ನ ಬೇರ್ಪಡಿಸಿ ಉಳಿದ ಬಿಳಿ ಭಾಗವನ್ನು ಮುಖಕ್ಕೆ ಹಚ್ಚಿ 30 ನಿಮಿಷಗಳ ಕಾಲ ಹಾಗೆ ಬಿಟ್ಟ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ಪ್ರತಿದಿನ ಮಲಗುವ ಮುನ್ನ ಹೀಗೆ ಮಾಡಿದರೆ ಕಪ್ಪು ಕಲೆಗಳು ಬೇಗನೆ ನಿವಾರಣೆಯಾಗುತ್ತದೆ.
ಕೊಬ್ಬರಿ ಎಣ್ಣೆ
ತೆಂಗಿನ ಎಣ್ಣೆ ತೃವಾಂಶವನ್ನು ಹಿಡಿದಿಟ್ಟುಕೊಳ್ಳುವ ಕೆಲಸ ಮಾಡಲಿದೆ. ಹೀಗಾಗಿ ನೀವು ಕಪ್ಪು ಕಲೆಗಳ ಮೇಲೆ ಶುದ್ಧ ಕೊಬ್ಬರಿ ಎಣ್ಣೆಯನ್ನು ಹಚ್ಚಿ ಬಿಟ್ಟರೆ ಸಾಕು ನಿಯಮಿತವಾಗಿ ಆ ಕಲೆಗಳು ನಿವಾರಣೆಯಾಗುವುದನ್ನು ನಾವು ನೋಡಬಹುದು.
ಅಲೋವೆರಾ
ಇದು ಅತ್ಯುತ್ತಮವಾದ ಶುಚಿಗೊಳಿಸುವ ಗುಣಗಳನ್ನು ಹೊಂದಿದೆ ಮತ್ತು ನಿಮ್ಮ ತ್ವಚೆಯಿಂದ ಕಪ್ಪು ಚುಕ್ಕೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಅಲೋವೆರಾವು ನಿಮ್ಮ ಚರ್ಮವನ್ನು ನೈಸರ್ಗಿಕವಾಗಿ ತೇವಗೊಳಿಸುವಂತೆ ಮಾಡುತ್ತದೆ ಮತ್ತು ನಿಮ್ಮ ಚರ್ಮವನ್ನು ಎಲ್ಲಾ ಸಮಯದಲ್ಲೂ ತೇವಾಂಶದಿಂದ ಇಡುತ್ತದೆ.
ಅರಿಶಿನ ಪುಡಿ
ಅರಿಶಿನದಲ್ಲಿರುವ ಉರಿಯೂತ ನಿವಾರಕ ಗುಣಗಳು ಬ್ಲ್ಯಾಕ್ ಹೆಡ್ಸ್ ತಡೆಯುವಲ್ಲಿ ತುಂಬಾ ಪರಿಣಾಮಕಾರಿ. ಇದು ಕಲೆಗಳನ್ನು ಹೋಗಲಾಡಿಸಲು ಮತ್ತು ಚರ್ಮದ ಹೊಳಪನ್ನು ಸುಧಾರಿಸಲು ಸಹಾಯ ಮಾಡುತ್ತದೆ. 1 ಚಮಚ ಅರಿಶಿನ ಪುಡಿಯನ್ನು ತೆಗೆದುಕೊಂಡು ಅದನ್ನು 1 ಟೀಚಮಚ ಪುದೀನಾ ರಸದೊಂದಿಗೆ ಚೆನ್ನಾಗಿ ಮಿಶ್ರಣ ಮಾಡಬೇಕಾಗುತ್ತದೆ. ಈ ಮಿಶ್ರಣವನ್ನು ಮುಖದ ಮೇಲೆ ಹಚ್ಚಿ 15-20 ನಿಮಿಷಗಳ ಕಾಲ ಇರಿಸಿ ನಂತರ ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ. ಪ್ರತಿದಿನ ಮಲಗುವ ಮುನ್ನ ಇದೇ ವಿಧಾನವನ್ನು ಅನುಸರಿಸಬೇಕು.



Click it and Unblock the Notifications
