Latest Updates
-
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ!
ಹುಬ್ಬುಗಳು ಕಪ್ಪು ಮತ್ತು ದಪ್ಪವಾಗಲು ಇಲ್ಲಿದೆ ಮನೆಮದ್ದು..! ಟ್ರೈ ಮಾಡಿ ನೋಡಿ.!
ಈಗ ಎಲ್ಲರು ಸುಂದರವಾಗಿ ಕಾಣಿಸಬೇಕು ಎಂದು ಎಷ್ಟೆಲ್ಲಾ ಕಷ್ಟಪಡುತ್ತಾರೆ ಎಂದು ನಾವು ನೋಡಿರುತ್ರೇವೆ. ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ರೀತಿಯ ಕ್ರೀಮ್‌ಗಳು, ಔಷಧಿಗಳು, ಲೋಶನ್‌ಗಳನ್ನ ಹಚ್ಚಿ ಸುಂದರವಾಗಿ ಕಾಣಲು ಇಷ್ಟಪಡುತ್ತಾರೆ. ಕೆಲವೊಮ್ಮೆ ನೂರಾರು ರೂಪಾಯಿಯ ಕ್ರೀಮ್‌ನಿಂದ ಹಿಡಿದು ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ.
ಸೌಂದರ್ಯ ಎಂದರೆ ಮಹಿಳೆಯರು ಹೆಚ್ಚು ಆಕರ್ಷಣೆಗೆ ಒಳಗಾಗುತ್ರಾರೆ. ಅವರೇ ಈ ಬ್ಯೂಟಿ ಪಾರ್ಲರ್‌ಗಳ ಗ್ರಾಹಕರಾಗಿರುತ್ತಾರೆ. ಸುಂದರವಾಗಿ ಕಾಣಿಸಿಕೊಳ್ಳಲು ಸಹ ಹಲವು ರೀತಿ ಕಷ್ಟಪಡಬೇಕಾಗುತ್ತದೆ. ಮುಖವೊಂದೇ ಅಲ್ಲ ಬದಲಿಗೆ ಕಣ್ಣು, ಮೂಗು, ಕೈ ಕಾಲು, ಬೆರಳು, ಉಗುರು, ಹುಬ್ಬು ಹೀಗೆ ಎಲ್ಲಾ ಅಂಗಗಳು ಸಹ ಸರಿಯಾಗಿರಬೇಕು ಎಂದು ಆವರು ಬಯಸುತ್ತಾರೆ.

ಇದೇ ಕಾರಣಕ್ಕೆ ಫೇಶಿಯಲ್, ಐಬ್ರೋ, ಮೆಡಿಕ್ಯೂರ್ ಅಂತೆಲ್ಲಾ ಸುತ್ತಾಡುತ್ತಿರುತ್ತಾರೆ. ಇನ್ನು ಹುಬ್ಬಿನ ವಿಚಾರಕ್ಕೆ ಬಂದರೆ, ಎಲ್ಲರಿಗೂ ಹುಬ್ಬು ದಪ್ಪವಾಗಿ ಉದ್ದವಾಗಿ ಇರಬೇಕು ಎಂಬ ಆಸೆ ಇದ್ದೇ ಇರುತ್ತೆ. ಏಕೆಂದರೆ ಮುಖದ ಸೌಂದರ್ಯ ಹೆಚ್ಚಿಸುವುದು ಹುಬ್ಬಾಗಿದೆ. ಹುಬ್ಬು ಕಹಳೆಯಂತೆ ಬಾಗಿರಬೇಕು, ದಪ್ಪವಾಗಿ ಕಪ್ಪಾಗಿರಬೇಕು ಎಂಬುದು ಯುವತಿಯರ ಆಸೆಯಾಗಿರುತ್ತೆ.
ಆದ್ರೆ ಕೆಲವರ ಹುಬ್ಬು ಅಂದುಕೊಂಡತೆ ದಪ್ಪವೂ, ಉದ್ದವೂ ಇರುವುದಿಲ್ಲ, ಬದಲಿಗೆ ತೆಳುವಾಗಿ, ಗಿಡ್ಡವಾಗಿರುತ್ತೆ. ಆದ್ರೆ ಹುಬ್ಬುಗಳ ಬೆಳವಣಿಗೆಗೆ ಅಂತಲೇ ಮಾರುಕಟ್ಟೆಯಲ್ಲಿ ಈಗ ನೂರಾರು ಕ್ರೀಮ್‌ಗಳು ಸಹ ಬಂದಿವೆ. ಆದ್ರೆ ನಾವು ಈ ಕೆಮಿಕಲ್ ಹೊರತುಪಡಿಸಿ ಮನೆಯಲ್ಲೇ ಸುಲಭವಾಗಿ ಹುಬ್ಬು ಬೆಳೆಯಲು ಸಹಕಾರಿಯಾಗುವಂತಹ ಮನೆಮದ್ದು ಯಾವುದು ಎಂಬುದನ್ನು ನೋಡೋಣ. ಮನೆಯಲ್ಲೇ ಮಾಡಿದ ಮದ್ದಿನಿಂದ ಸುಂದರವಾದ ಹುಬ್ಬುಗಳನ್ನು ಪಡೆದುಕೊಳ್ಳೋಣ.
ನಿಮ್ಮ ಹುಬ್ಬಗಳಿಗೆ ಒಂದೊಳ್ಳೆ ಆಕಾರ ನೀಡುವುದು ಉತ್ತಮ. ಆದ್ರೆ ಅತಿಯಾಗಿ ಕೀಳಿ, ಅದನ್ನು ತೆಳ್ಳಗೆ ಮಾಡುವುದು ಸರಿಯಲ್ಲ. ಇದು ನಿಮ್ಮ ಮುಖದ ಆಕಾರವನ್ನ ಕೆಡಿಸುತ್ತದೆ. ಆದ್ರೆ ಹುಬ್ಬುಗಳ ಬಣ್ಣ ಮತ್ತಷ್ಟು ಹೆಚ್ಚುವಂತೆ ಮಾಡುವ ಮನೆ ಔಷಧ ನೋಡಿ.
ಅಲೊವೆರಾ ಮತ್ತು ಹರಳೆಣ್ಣೆ
ಹುಬ್ಬಿಗಳು ಉದುರದಂತೆ, ಹೆಚ್ಚು ದಪ್ಪವಾಗಿ ಬೆಳೆಯಬೇಕಾದರೆ ಹರಳೆಣ್ಣೆ ಹಾಗೂ ಅಲೊವೆರಾದಿಂದ ಮಾಡಲಾದ ಈ ಮನೆಮದ್ದು ಬಳಸಿ. ಇದನ್ನು ಮಾಡಲು ಮೊದಲು ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಒಂದು ಸ್ಪೂನ್ ಅಲೊವೆರಾ ಹಾಕಿ ಬಳಿಕ ಅದಕ್ಕೆ ಒಂದು ಸ್ಪೂನ್ ಹರಳೆಣ್ಣೆ, 1 ಸ್ಪೂನ್ ಕೊಬ್ಬರಿ ಎಣ್ಣೆ ಹಾಗೂ ಯಾವುದಾದರು ಒಂದು ವಿಟಮಿನ್ ಸಿ ಮಾತ್ರೆ ನಿಮ್ಮ ಮನೆಯಲ್ಲಿ ಇದ್ದರೆ ಅದನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ದಪ್ಪ ಅಕ್ಕಿ ಹಿಟ್ಟಿನಂತೆ ಇದು ಕಂಡುಬರುತ್ತದೆ. ನಂತರ ಇದನ್ನು 10 ದಿನಗಳ ಕಾಲ ಇಟ್ಟು ಹುಬ್ಬಿಗೆ ಹಚ್ಚಬಹುದು. ರಾತ್ರಿ ಮಲಗುವಾಗ ಹುಬ್ಬುಗಳಿಗೆ ಹಚ್ಚಿಕೊಂಡಿ ಮಲಗಿ ಬೆಳಗೆ ತೊಳೆಯಿರಿ.
ಈರುಳ್ಳಿ ಹಾಗೂ ಹರಳೆಣ್ಣೆ
ಮೊದಲು ಒಂದು ಈರುಳ್ಳಿಯನ್ನು ಚೆನ್ನಾಗಿ ಹೆಚ್ಚಿಕೊಂಡು ಜಜ್ಜಿಕೊಳ್ಳಿ. ನಂತರ ಒಂದು ಬೌಲ್‌ಗೆ ಹಾಕಿಕೊಳ್ಳಿ. ಇದಕ್ಕೆ 1 ಸ್ಪೂನ್ ಹರಳೆಣ್ಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಒಂದು ಸಣ್ಣ ಹತ್ತಿ ಪೀಸ್ ಅಥವಾ ಕಿವಿಗೆ ಹಾಕಲು ಬಳಸುವ ಇಯರ್ ಬಡ್ಸ್‌ಗೆ ಈ ಎಣ್ಣೆ ಹಚ್ಚಿಕೊಂಡು ಹುಬ್ಬಿನ ಕೆಳಗಿನಿಂದ ಮೇಲೆ ಹಚ್ಚಬೇಕು. ಸುಮಾರು ಒಂದು ತಿಂಗಳ ಕಾಲ ಈ ರೀತಿ ಮಾಡಿದರೆ ಹುಬ್ಬು ದಪ್ಪವಾಗಿ, ಕಪ್ಪಾಗುತ್ತದೆ.
ಐಬ್ರೋ ಜೆಲ್ ಬಳಸಿ
ಹುಬ್ಬುಗಳು ಸುಂದರವಾಗಿರಬೇಕಾದರೆ ಮಾರುಕಟ್ಟೆಯಲ್ಲಿ ಹಲವು ಐಬ್ರೋ ಜೆಲ್ ಸಿಗುತ್ತವೆ. ಇದರಲ್ಲಿ ಆಯ್ದ ಹಾಗೂ ಉತ್ತಮ ಬೆಲೆಯ, ಗುಣಮಟ್ಟದ ಯಾವುದಾದರು ಐಬ್ರೋ ಜೆಲ್ ಬಳಸಿ. ಇದರಿಂದ ನಿಮ್ಮ ಹುಬ್ಬುಗಳು ಕತ್ತಿಯಂತೆ ಬೆಳೆಯುತ್ತದೆ.



Click it and Unblock the Notifications
