Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ತೆಂಗಿನ ಎಣ್ಣೆಯಲ್ಲಿ ಹೀಗೆ ಮಾಡಿದ್ರೆ ಫೇಶಿಯಲ್ ಮಾಡಿಸೋದೆ ಬೇಡ.! ಇಲ್ಲಿದೆ ಸರಳ ಉಪಾಯ!
ಸೌಂದರ್ಯಕ್ಕೆ ಮತ್ತೊಂದು ಹೆಸರು ಹೆಣ್ಣು ಮಕ್ಕಳು ಎನ್ನಲಾಗುತ್ತದೆ, ಅವರಿಗೆ ಸೌಂದರ್ಯ ಕಾಪಾಡಿಕೊಳ್ಳುವುದು ಎಷ್ಟು ಮುಖ್ಯ ಎಂಬುದು ಎಲ್ಲರಿಗೂ ತಿಳಿದಿದೆ. ಮುಖ ಸುಂದರವಾಗಿ ಕಲೆ ಇಲ್ಲದಂತೆ ಹೊಳೆಯಬೇಕು ಎಂಬುದು ಅವರ ಆಸೆಯಾಗಿರುತ್ತೆ. ಕೇವಲ ಅವರ ಆಸೆಯಲ್ಲ ಹುಡುಗರು ಸಹ ಇಂತಹ ಬಯಕೆ ಇಟ್ಟುಕೊಂಡಿರುತ್ತಾರೆ.
ಆದರೆ ಮಹಿಳೆಯರಲ್ಲಿ ಸೌಂದರ್ಯ ಕಾಪಾಡಿಕೊಳ್ಳಲು ಒಂದು ಹೆಜ್ಜೆ ಮುಂದಿರುತ್ತಾರೆ. ಮುಖದ ಕಾಂತಿಯುತವಾಗಿ ಕಾಣುವಂತೆ ಮಾಡಲು ಅವರು ಹತ್ತು ಹಲವು ಕ್ರೀಮ್‌ಗಳು, ಔಷಧಿಗಳು, ಮನೆಮದ್ದು ಸಹ ಮಾಡುತ್ತಾರೆ. ಕಾಂತಿಯುತ ಮುಖ ಚೆರ್ಯೆ ಅವರ ಸ್ವಾಭಿಮಾನ ಹೆಚ್ಚಿಸುತ್ತೆ. ಕೆಲವರು ಸೌಂದರ್ಯಕ್ಕಾಗಿ ತಿಂಗಳಿಗೆ ಸಾವಿರದಿಂದ ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡುತ್ತಾರೆ. ಕೆಲವರು ವಾರಕ್ಕೊಮ್ಮೆ ಪಾರ್ಲರ್‌ಗೆ ತೆರಳುತ್ತಾರೆ.

ಆದ್ರೆ ಇಷ್ಟಾದರೂ ಮಹಿಳೆಯರಿಗೆ ಸಮಾಧಾನ ಇರುವುದಿಲ್ಲ. ಮನೆಯಲ್ಲಿ ಏನಾದರು ಸಣ್ಣ ಪುಟ್ಟ ಮನೆಮದ್ದು ಮಾಡುತ್ತಾರೆ. ಅರಶಿನ ಪುಡಿಯ ಪೇಸ್ಟ್ ಹಚ್ಚಿಕೊಳ್ಳುವುದು, ಆಲೂವೇರಾ ಬಳಸುವುದು, ಸನ್‌ಸ್ಕ್ರೀನ್, ಬ್ಯೂಟಿ ಕ್ರೀಮ್ ಹಚ್ಚುವುದನ್ನು ನಾವು ನೋಡಿರಬಹುದು. ಆದ್ರೆ ನಾವು ಮನೆಯಲ್ಲಿ ಬಳಸುವ ಅದೆಷ್ಟೋ ವಸ್ತುಗಳಿಂದಲ ನಮ್ಮ ಮುಖದ ಕಾಂತಿ ಹೆಚ್ಚಿಸಿಕೊಳ್ಳಬಹುದಾಗಿದೆ.
ಹೌದು ನಾವು ಮನೆಯಲ್ಲಿ ನಿತ್ಯವೂ ಬಳಸುವ ವಸ್ತುಗಳಿಂದಲೇ ನಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು. ಅದರಲ್ಲಿ ಮುಖ್ಯವಾಗಿ ತೆಂಗಿನ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ ಸಹ ಒಂದಾಗಿದೆ. ತೆಂಗಿನ ಎಣ್ಣೆಯಲ್ಲಿ ಸರಿ ಸುಮಾರು ಶೇಕಡ 90 % ಸ್ಯಾಚುರೇಟೆಡ್ ಫ್ಯಾಟಿ ಆಸಿಡ್ ಗಳೇ ತುಂಬಿರುತ್ತವೆ. ತೆಂಗಿನ ಎಣ್ಣೆಯ ಒಟ್ಟು ಕೊಬ್ಬಿನ ಪ್ರಮಾಣದಲ್ಲಿ ಅಳೆದು ನೋಡುವುದಾದರೆ ಲಾರಿಕ್ ಆಮ್ಲ ಎಂಬ ಕೊಬ್ಬಿನ ಆಮ್ಲ ಶೇಕಡ 40 % ತುಂಬಿಕೊಂಡಿರುತ್ತದೆ.
ಹಾಗಾದ್ರೆ ತೆಂಗಿನ ಎಣ್ಣೆಯಿಂದ ಮುಖದ ಸೌಂದರ್ಯ ಹೆಚ್ಚಿಕೊಳ್ಳುವುದು ಹೇಗೆ?, ಕೊಬ್ಬರಿ ಎಣ್ಣೆಗೆ ಯಾವ ವಸ್ತು ಬೆರೆಸಿದರೆ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕೊಬ್ಬರಿ ಎಣ್ಣೆ ಮತ್ತು ನಿಂಬೆ
ಒಂದು ಬೌಲ್‌ನಲ್ಲಿ 4 ಚಮಚ ಕೊಬ್ಬರಿ ಎಣ್ಣೆ ತೆಗೆದುಕೊಳ್ಳಿ. ಬಳಿಕ ಇದಕ್ಕೆ 1 ಚಮಚ ದಾಬಾಮಿ ಎಣ್ಣೆ ಸಹ ಸೇರಿಸಿಕೊಳ್ಳಿ. ಇದಕ್ಕೆ ನಿಂಬೆ ಹಣ್ಣಿನ ಸಿಪ್ಪೆಯನ್ನು ತುರಿದುಕೊಂಡು ಸೇರಿಸಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಇಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ನೀರು ಹಾಕಿ ನೀರು ಕುದಿಯಲು ಬಿಡಿ. ನೀರು ಕುದಿಯಲು ಆರಂಭಿಸಿದಾಗ ಪಾತ್ರೆಯ ಮಧ್ಯದಲ್ಲಿ ಈ ಬೌಲ್ ಇಟ್ಟು ಕುದಿಸಬೇಕು. 10 ನಿಮಿಷ ಕುದಿಸಿಕೊಂಡ ಬಳಿಕ ಒಲೆ ಆಫ್ ಮಾಡಿ ತಣ್ಣಗಾಗಲು ಬಿಡಿ.
ನಂತರ ಒಂದು ಗಾಜಿನ ಡಬ್ಬಿಯಲ್ಲಿ ಇದನ್ನು ಹಾಕಿ ಮುಚ್ಚಳವನ್ನು ಗಟ್ಟಿಯಾಗಿ ಇಡಬೇಕು. ಇದನ್ನು ರಾತ್ರಿ ಮಲಗುವ ಮುನ್ನ ಮುಖಕ್ಕೆ ಚೆನ್ನಾಗಿ ಹಚ್ಚಿಕೊಂಡು ಸ್ವಲ್ಪ ಹೊತ್ತು ಮಸಾಜ್ ಮಾಡಿ ಬೆಳಗ್ಗೆ ಎದ್ದು ತೊಳೆದುಕೊಳ್ಳಿ. ಕೆಲವು ದಿನ ಇದನ್ನು ಹಚ್ಚುತ್ತಿದ್ದರೆ ಹೊಳೆಯುವ ಮುಖ ನಿಮ್ಮದಾಗಲಿದೆ.
ಕೊಬ್ಬರಿ ಎಣ್ಣೆ ಸಕ್ಕರೆ
ಒಂದು ಬೌಲ್‌ನಲ್ಲಿ 4 ಚಮಚ ಕೊಬ್ಬರಿ ಎಣ್ಣೆ ತೆಗೆದುಕೊಂಡು ಅದಕ್ಕೆ 3 ಚಮಚ ಸಕ್ಕರೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಸಕ್ಕರೆ ಸಂಪೂರ್ಣ ಕರಗುವುದಿಲ್ಲ ಹಾಗೆಯೇ ಉಳಿಯುವಂತೆ ಮಾಡಿ ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಚ್ಚಿ ಚೆನ್ನಾಗಿ ಉಜ್ಜಿಕೊಳ್ಳಿ. ಬಳಿಕ 30 ನಿಮಿಷದ ನಂತರ ತೊಳೆದು ಬಿಡಿ. ಇದನ್ನು ವಾರದಲ್ಲಿ ಮೂರರಿಂದ ನಾಲ್ಕು ಬಾರಿ ಮಾಡಿದರೆ ಹೊಳೆಯುವಂತಹ ಮುಖ ಪಡೆಯಬಹುದು. ಕೊಬ್ಬರಿ ಎಣ್ಣೆಯು ತ್ವಚೆಯಲ್ಲಿನ ಕೊಳೆ ತೆಗೆಯಲು ಹಾಗೂ ಹೊಳಪು ನೀಡಲು ಪ್ರಮುಖ ವಸ್ತುವಾಗಿದೆ. ಸೌಂದರ್ಯ ವರ್ಧಕವಾಗಿ ಇದು ಬಹಳ ಉಪಯುಕ್ತವಾಗಿದೆ.



Click it and Unblock the Notifications
