Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಕೇವಲ 2 ಸಲ ಹಚ್ಚಿದ್ರೆ ಕಪ್ಪು ಕಲೆಗಳೇ ಇಲ್ಲವಾಗುತ್ತೆ..! ಹೇಗೆ ಗೊತ್ತಾ?
ಯುವಕ ಆಗಿರಲಿ ಯುವತಿ ಆಗಿರಲಿ ಅವರು ಸುಂದರವಾಗಿ ಕಾಣಿಸಬೇಕು ಎಂದು ಯಾವಾಗಲು ಬಯಸುತ್ತಾರೆ. ಆದ್ರೆ ಮುಖದ ಮೇಲೆ ಬಹುಬೇಕ ಕಲೆಗಳು ಕಾಣಿಸಿಕೊಳ್ಳುತ್ತೆ. ನಿರಂತರವಾಗಿ ಬಿಸಿಲಿಗೆ ತೆರೆದುಕೊಳ್ಳುವುದು, ಧೂಳಿನಲ್ಲಿ ಓಡಾಟ ನಡೆಸುವುದು, ಅತಿಯಾದ ಜಿಡ್ಡಿನ ತ್ವಚೆ ಹೊಂದುವುದರಿಂದ ಹಾಗೂ ಆನುವಂಶಿಕ ಸಮಸ್ಯೆಯಿಂದಾಗಿ ಕೆಲವು ಚರ್ಮ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುವುದು.
ಮುಖದ ಮೇಲೆ ಕಪ್ಪು ಕಲೆ/ಚುಕ್ಕೆಗಳು ಕಾಣಿಸಿಕೊಳ್ಳುವುದರಿಂದ ಮುಖದ ಆಕರ್ಷಣೆ ಕುಂದುವುದು. ಈ ಸಮಸ್ಯೆ ಪ್ರಾಥಮಿಕ ಸ್ಥಿತಿಯಲ್ಲಿರುವಾಗಲೆ ಸೂಕ್ತ ಪರಿಹಾರ ಅಥವಾ ಆರೈಕೆಯನ್ನು ಕೈಗೊಳ್ಳಬೇಕು. ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಕ್ರೀಮ್‌ಗಳು, ಔಷಧಿಗಳ ಬಳಸುವುದನ್ನು ನಾವು ನೋಡಿದ್ದೇವೆ.

ಮುಖದ ಕಾಂತಿ ಹೆಚ್ಚಿಸಿಕೊಳ್ಳಬೇಕು ಅಂದರೆ ಸುಲಭದ ವಿಚಾರವಲ್ಲ. ಏಕೆಂದರೆ ಸುಲಭವಾಗಿ ಮುಖವನ್ನು ಬಿಳಿಯಾಗಿ ಹೊಳಪಾಗಿ ಮಾಡಲು ಬಹಳ ಕಷ್ಟಪಡಬೇಕಾಗುತ್ತದೆ. ಆದರೆ ನೈಸರ್ಗಿಕ ಆರೈಕೆಗೆ ಒಳಗಾಗುವುದು ಅಥವಾ ನೈಸರ್ಗಿಕ ಚಿಕಿತ್ಸೆ ಪಡೆದುಕೊಳ್ಳುವುದರ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದು.
ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಯಾವ ರೀತಿಯ ಸಿದ್ಧತೆ ಬೇಕು. ಇದರ ಸುಲಭದ ಟಿಪ್ಸ್ ಏನು? ಮುಖ ಹೊಳೆಯುವಂತೆ ಮಾಡಲು ಇರುವ ಮನೆ ಮದ್ದು ಏನಿರಬಹುದು ಎಂಬುದನ್ನು ನಾವಿಂದು ತಿಳಿಯೋಣ.
ಮನೆಯಲ್ಲೇ ಮಾಡಿ ಫೇಸ್ ಪ್ಯಾಕ್
ಮೊದಲು ಬೌಲ್‌ನಲ್ಲಿ 2 ಸ್ಪೂನ್ ಮೊಸರು, ಒಂದು ಚಿಟಿಕೆ ಉಪ್ಪು, ಅರ್ಧ ಸ್ಪೂನ್ ಅರಶಿಣ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಇದನ್ನು ಕಪ್ಪಗಿರುವ ಕಲೆಗಳ ಮೇಲೆ ಹಚ್ಚಬೇಕು. ಮುಖ, ಕುತ್ತಿಗೆ ಭಾಗ, ಕೈ, ಕಾಲು ಹೀಗೆ ಕಪ್ಪಾಗಿರುವ ಭಾಗಕ್ಕೆ ಈ ಫೇಸ್ ಪ್ಯಾಕ್ ಹಚ್ಚಿ ಬೆಳಗ್ಗೆ ತೊಳೆಯಬೇಕು. ವಾರದಲ್ಲಿ ಮೂರು ಬಾರಿ ಈ ರೀತಿ ಮಾಡಿದರೆ ಖಂಡಿತ ಸುಟ್ಟ ಕಲೆಗಳು ಮಾಯವಾಗುತ್ತವೆ.
ಅಕ್ಕಿ ಹಿಟ್ಟಿನ ಫೇಸ್ ಪ್ಯಾಕ್
ಒಂದು ಬೌಲ್‌ನಲ್ಲಿ ಅಕ್ಕಿ ಹಿಟ್ಟು ಹಾಕಿ ಅದಕ್ಕೆ ಸ್ವಲ್ಪ ಮೊಸರು ಹಾಕಿಕೊಳ್ಳಿ, ಬಳಿಕ ಇದಕ್ಕೆ ರೋಸ್ ವಾಟರ್, ನಿಂಬೆ ಹಣ್ಣಿನ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಮುಖಕ್ಕೆ ಹಚ್ಚಿ ಒಣಗಲು ಬಿಡಿ. ರಾತ್ರಿ ಮಲಗುವ ಮುನ್ನ ಹಚ್ಚಿಕೊಂಡು ಬೆಳಗ್ಗೆ ಎದ್ದು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಮುಖಕ್ಕೆ ಅಕ್ಕಿ ಹಿಟ್ಟಿನಿಂದ ಮಾಡಲಾಗುವ ಪ್ಯಾಕ್ ಬಳಸುವುದರಿಂದ ಮುಖದ ಕಾಂತಿ ಹೆಚ್ಚಿಸಲಿದೆ.
ಜೇನು - ಮೊಟ್ಟೆಯ ಫೇಸ್ ಮಾಸ್ಕ್
ಜೇನು ಹಾಗೂ ಮೊಟ್ಟೆಯ ಬಿಳಿ ಮಿಶ್ರ ಮಾಡಿ ಅದಕ್ಕೆ ಸ್ವಲ್ಪ ನಿಂಬೆರಸ ಸೇರಿಸಿ ಮುಖಕ್ಕೆ ಹಚ್ಚಿ. ನಂತರ 20 ನಿಮಿಷ ಬಿಟ್ಟ ಮೇಲೆ ಮುಖ ತೊಳೆಯಿರಿ. ಹೀಗೆ ವಾರಕ್ಕೊಮ್ಮೆ ಅಥವಾ ಎರಡು ಬಾರಿ ಮಾಡಿದರೆ ಮುಖದ ಕಾಂತಿ ಹೆಚ್ಚುವುದು.
ನಿಂಬು ಮತ್ತು ಸಕ್ಕರೆ
ನಿಂಬೆ ರಸ ಹಾಗೂ ಸಕ್ಕರೆಯ ಸಂಯೋಗವು ಚರ್ಮದಲ್ಲಿ ಇರುವ ನಿರ್ಜೀವ ಕೋಶಗಳನ್ನು ತೆಗೆಯಲು ಉತ್ತಮ ಪರಿಹಾರ. ಇದರ ಇನ್ನೊಂದು ಉಪಯೋಗವೆಂದರೆ ಚರ್ಮದಲ್ಲಿ ಇರುವ ಕಪ್ಪು ಕಲೆ ಅಥವಾ ಚುಕ್ಕೆಯನ್ನು ತೆಗೆಯಲು ಸಹಾಯ ಮಾಡುವುದು. ಈ ಆರೈಕೆಯ ಪ್ರಾರಂಭಿಸುವಾಗ ಹರಳು ಹರಳಾಗಿರುವ ಸಕ್ಕರೆಯನ್ನು ಉಪಯೋಗಿಸಬೇಕು.
ಓಟ್ಸ್ ಮತ್ತು ಜೇನುತುಪ್ಪ
ಓಟ್ಸ್ ಅನ್ನು ಚೆನ್ನಾಗಿ ಪುಡಿಮಾಡಿಕೊಳ್ಳಿ. ಓಟ್ಸ್‌ನ ಪುಡಿಗೆ ಜೇನುತುಪ್ಪ ಮತ್ತು ಹಾಲನ್ನು ಸೇರಿಸಿ ಮಿಶ್ರಗೊಳಿಸಿ. ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, 5 ನಿಮಿಷಗಳ ಕಾಲ ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಸ್ವಲ್ಪ ಸಮಯದ ನಂತರ ಮೃದು ನೀರಿನಲ್ಲಿ ಸ್ವಚ್ಛಗೊಳಿಸಿ. ಉತ್ತಮ ಫಲಿತಾಂಶಕ್ಕೆ ವಾರಕ್ಕೊಮ್ಮೆ ಮುಖಕ್ಕೆ ಹಚ್ಚಿಕೊಳ್ಳಿ, ಇದರಿಂದ ಮುಖದ ಮೇಲಿನ ಕಲೆಗಳು ಮಾಯವಾಗುವುದು ಖಚಿತ.



Click it and Unblock the Notifications
