Latest Updates
-
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು? -
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ! -
ಗಣೇಶ ಹಬ್ಬದ ಸಂಭ್ರಮ: ಮಧುಮೇಹಿಗಳಿಗೂ ಸುರಕ್ಷಿತವಾದ ಆರೋಗ್ಯಕರ 'ಉಕಡಿಚೆ ಮೋದಕ' ತಯಾರಿಸುವುದು ಹೇಗೆ? -
ಸೆಪ್ಟೆಂಬರ್ ಇಕ್ವಿನಾಕ್ಸ್: ನಿಮ್ಮ ಕ್ಯಾಮೆರಾದಲ್ಲಿ ಸೂರ್ಯೋದಯ-ಸೂರ್ಯಾಸ್ತದ ಅದ್ಭುತ ದೃಶ್ಯ ಸೆರೆಹಿಡಿಯಿರಿ! -
ವಿಶ್ವ ಕಾರ್-ಫ್ರೀ ಡೇ: ಟ್ರಾಫಿಕ್ ಬಿಟ್ಟು 20 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ! -
ಸೈಫ್-ಕರೀನಾ ಪ್ರೇಮಪತ್ರದ ರಹಸ್ಯ: ನಿಮ್ಮ ಸಂಬಂಧವನ್ನೂ ಗಟ್ಟಿಗೊಳಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಈರುಳ್ಳಿ ಬೆಲೆ ಏರಿಕೆ: ಬಜೆಟ್ ಉಳಿಸಲು ಮತ್ತು ಈರುಳ್ಳಿ ದೀರ್ಘಕಾಲ ಸಂಗ್ರಹಿಸಲು ಸರಳ ಟಿಪ್ಸ್ -
ಏಕಾದಶಿ ಉಪವಾಸ: ಆರೋಗ್ಯಕರವಾಗಿರಲು ₹300ರಲ್ಲಿ ಪೌಷ್ಟಿಕ ಆಹಾರದ ಪ್ಲಾನ್ ಇಲ್ಲಿದೆ! -
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ? -
ಮಳೆಗಾಲದಲ್ಲಿ ಫಿಟ್ ಆಗಿರಲು 12 ನಿಮಿಷಗಳ ಇಂಡೋರ್ ವರ್ಕೌಟ್: ಜಿಮ್ ಇಲ್ಲದೆ ಮನೆಯಲ್ಲೇ ಮಾಡಿ!
ಮುಖ ಬಿಳಿಯಾಗಬೇಕಾದ್ರೆ ಇಲ್ಲಿದೆ ಸಿಂಪಲ್ ಟಿಪ್ಸ್: ಇದನ್ನು ಯಾರು ಹೇಳುವುದಿಲ್ಲ..!
ಯುವಕ ಆಗಿರಲಿ ಯುವತಿ ಆಗಿರಲಿ ಅವರು ಸುಂದರವಾಗಿ ಕಾಣಿಸಬೇಕು ಎಂದು ಯಾವಾಗಲು ಬಯಸುತ್ತಾರೆ. ಅಲ್ಲದೆ ಸುಂದರವಾಗಿ ಕಾಣವೇಕಾದರೆ ಎಲ್ಲಾ ರೀತಿಯ ಪ್ರಯತ್ನವನ್ನೂ ಅವರು ಮಾಡುತ್ತಾರೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಕ್ರೀಮ್‌ಗಳು, ಔಷಧಿಗಳ ಬಳಸುವುದನ್ನು ನಾವು ನೋಡಿದ್ದೇವೆ.
ಆದರೆ ಮುಖದ ಕಾಂತಿ ಹೆಚ್ಚಿಸಿಕೊಳ್ಳಬೇಕು ಅಂದರೆ ಸುಲಭದ ವಿಚಾರವಲ್ಲ. ಏಕೆಂದರೆ ಸುಲಭವಾಗಿ ಮುಖವನ್ನು ಬಿಳಿಯಾಗಿ ಹೊಳಪಾಗಿ ಮಾಡಲು ಬಹಳ ಕಷ್ಟಪಡಬೇಕಾಗುತ್ತದೆ. ಆದ್ರೆ ಕೆಲವು ಟಿಪ್ಸ್‌ಗಳಿಂದ ನಾವು ಯಾವುದೇ ಖರ್ಚಿಸಲ್ಲದೆ ಮುಖದ ಕಾಂತಿ ಹೆಚ್ಚಿಸಿಕೊಳ್ಳಬಹುದು.

ಅಂದರೆ ಮುಖದ ಮೇಲಿರುವ ಕಪ್ಪು ಕಲೆಗಳು, ಮೊಡವೆಗಳ ಕಲೆ ಇಲ್ಲವಾಗಿಸಲು ಹಲವು ರೀತಿಯ ಪ್ರಯತ್ನ ಮಾಡುತ್ತಲೇ ಇರುತ್ತೇವೆ. ಹಾಗಾದ್ರೆ ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಯಾವ ರೀತಿಯ ಸಿದ್ಧತೆ ಬೇಕು. ಇದರ ಸುಲಭದ ಟಿಪ್ಸ್ ಏನು? ಮುಖ ಹೊಳೆಯುವಂತೆ ಮಾಡಲು ಇರುವ ಮನೆ ಮದ್ದು ಏನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಊಟದ ಬಳಿಕ ವಿಟಮಿನ್ ಸಿ
ನಿಮಗೆ ಅಚ್ಚರಿಯಾಗಬಹುದು, ನಾವು ಸೇವಿಸುವ ಆಹಾರ ಸಹ ನಮ್ಮ ಮುಖದ ಕಾಂತಿಗೆ ಸಂಬಂಧಿಸಿದೆ. ಹೀಗಾಗಿ ನಾವು ನಿತ್ಯ ರಾತ್ರಿ ಊಟ ಮಾಡಿದ ಬಳಿಕ ವಿಟಮಿನ್ ಸಿ ಇರುವ ಹಣ್ಣು ಸೇವಿಸಬೇಕು. ವಿಟಮಿನ್ ಸಿ ಇಲ್ಲದಿದ್ದರೂ ಸೀಸನಲ್ ಹಣ್ಣುಗಳ ಸವಿಯಬೇಕು. ಅದು ಯಾವುದೇ ಹಣ್ಣಾದರು ತಿನ್ನಬೇಕು.
ಅಕ್ಕಿ ಹಿಟ್ಟಿನ ಪ್ಯಾಕ್
ಮುಖಕ್ಕೆ ಅಕ್ಕಿ ಹಿಟ್ಟಿನಿಂದ ಮಾಡಲಾಗುವ ಪ್ಯಾಕ್ ಬಳಸುವುದರಿಂದ ಮುಖದ ಕಾಂತಿ ಹೆಚ್ಚಿಸಲಿದೆ. ಹಾಗಾದ್ರೆ ಅಕ್ಕಿ ಹಿಟ್ಟಿನ ಫೇಸ್ ಪ್ಯಾಕ್ ಮಾಡುವುದು ಹೇಗೆ? ಒಂದು ಬೌಲ್‌ನಲ್ಲಿ ಅಕ್ಕಿ ಹಿಟ್ಟು ಹಾಕಿ ಅದಕ್ಕೆ ಸ್ವಲ್ಪ ಮೊಸರು ಹಾಕಿಕೊಳ್ಳಿ, ಬಳಿಕ ಇದಕ್ಕೆ ರೋಸ್ ವಾಟರ್, ನಿಂಬೆ ಹಣ್ಣಿನ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಮುಖಕ್ಕೆ ಹಚ್ಚಿ ಒಣಗಲು ಬಿಡಿ. ಬಳಿಕ ರಾತ್ರಿ ಹಚ್ಚಿ ತೊಳೆಯಿರಿ.
ಕಡಲೆ ಹಿಟ್ಟಿನ ಪ್ಯಾಕ್
ಒಂದು ಚಮಚ ಕಡಲೆ ಹಿಟ್ಟು, ಹೆಸರು ಕಾಳಿನ ಹಿಟ್ಟು, ಅರ್ಧ ಚಮಚ ಅರಶಿಣ, ಒಂದು ಕಪ್ ಮೊಸರು, 2 ಸ್ಪೂನ್ ಜೇನುತುಪ್ಪ ಹಾಕಿ ಚೆನ್ನಾಗಿ ಕಲಸಿ ಪೇಸ್ಟ್ ಮಾಡಿಕೊಳ್ಳಬೇಕು. ಇದನ್ನು ಮುಖಕ್ಕೆ ಹಚ್ಚಿ 20 ನಿಮಿಷ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.
ಬಾಳೆಹಣ್ಣು-ಪಪ್ಪಾಯ ಪ್ಯಾಕ್
ಬಾಳೆಹಣ್ಣು ಹಾಗೂ ಪಪ್ಪಾಯ ಹಣ್ಣು ತೆಗೆದುಕೊಂಡು ಚೆನ್ನಾಗಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಬೇಕು. 5 ನಿಮಿಷ ಮುಖಕ್ಕೆ ಉಜ್ಜಬೇಕು ಬಳಿಕ ಮುಖಕ್ಕೆ ಪೇಸ್ಟ್ ಹಚ್ಚಿ ಬಿಟ್ಟು 20 ನಿಮಿಷದ ಬಳಿಕ ಮುಖ ತೊಳೆಯಬೇಕು. ಹೀಗೆ ಒಂದು ವಾರಗಳ ಕಾಲ ಮಾಡುವುದರಿಂದ ಮುಖದ ಕಾಂತಿ ಹೆಚ್ಚಾಗಲಿದೆ.
ಹುತ್ತದ ಮಣ್ಣು
ನೀವು ಮುಲ್ತಾನ್ ಮಿಟ್ಟಿಯನ್ನು ಮುಖದ ಕಲೆ ಹೋಗಲಾಡಿಸಲು ಬಳಸುವುದನ್ನು ನೋಡಿದ್ದೇವೆ. ಅದೆ ರೀತಿ ಹುತ್ತದ ಮಣ್ಣು ಸಹ ಮುಖದ ಕಾಂತಿ ಹೆಚ್ಚಿಸುತ್ತದೆ. ಈ ಮಣ್ಣನ್ನು ನೀರಿನಲ್ಲಿ ಚೆನ್ನಾಗಿ ಕಲಸಿ ಮುಖಕ್ಕೆ ಹಚ್ಚಿಕೊಳ್ಳಬೇಕು. ಮಣ್ಣು ಒಣಗಿದ ಬಳಿಕ ಮುಖ ತೊಳೆಯಬೇಕು. ಒಂದು ವಾರ ನಿರಂತರ ಮಾಡಿದರೆ ನಿಮಗೆ ಫಲಿತಾಂಶ ಸಿಗಲಿದೆ.
ಸನ್ಸ್‌ಕ್ರೀಮ್ ಬಳಸಿ
ಮನೆಯಿಂದ ಹೊರಗೆ ಹೋಗುವಾಗ ತಪ್ಪದೆ ಸನ್ಸ್‌ಕ್ರೀಮ್ ಬಳಸುವುದು ಸಹ ಮುಖದ ಸೌಂದರ್ಯ ಕಾಪಾಡಲು ಬಹಳ ಮುಖ್ಯ, ಹೀಗಾಗಿ ಹೊರಗೆ ಸೂರ್ಯ ಕಿರಣ ನೇರವಾಗಿ ಮುಖಕ್ಕೆ ತಾಕುವಂತೆ ಬಿಡುವುದಕ್ಕಿಂತಲು ಸನ್ಸ್‌ಕ್ರೀಮ್ ಬಳಸುವುದು ಉತ್ತಮ.



Click it and Unblock the Notifications

