Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಉರಿ ಬಿಸಿಲು: ಬೆವರು ಕಜ್ಜಿಗೆ ಮನೆಮದ್ದೇನು? ಇದನ್ನು ತಡೆಗಟ್ಟಲು ಏನು ಮಾಡಬೇಕು?
ಈ ವರ್ಷ ತುಂಬಾನೇ ಬಿಸಿಲು, ಬಿಸಿಲೆಂದರೆ 5 ನಿಮಿಷ ಹೊರಗಡೆ ನಿಲ್ಲುವುದಕ್ಕೆ ಸಾಧ್ಯವಿಲ್ಲ, ಅಷ್ಟೊಂದು ಉರಿ ಬಿಸಿಲು. ಈ ಉರಿಬಿಸಿಲಿನಿಂದಾಗಿ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿದೆ. ಅದರಲ್ಲೊಂದು ಬೆವರುಸಾಲೆ ಅಥವಾ ಬೆವರು ಕಜ್ಜಿ.
ಈ ಬಿಸಿಲಿಗೆ ಯಾವ ಬಟ್ಟೆ ಧರಿಸುತ್ತೇವೆ ಎಂಬುವುದು ಕೂಡ ಮುಖ್ಯ, ಫಂಕ್ಷನ್‌ಗಳಿಗೆ ಗ್ರ್ಯಾಂಡ್ ಲುಕ್‌ಗಾಗಿ ಗ್ರ್ಯಾಂಡ್ ವರ್ಕ್‌ನ ಬಟ್ಟೆ ಧರಿಸುತ್ತೇವೆ, ಇವೆಲ್ಲಾ ಮೈ ಉಷ್ಣಾಂಶ ಹೆಚ್ಚಿಸುತ್ತದೆ. ಮೈ ಬೆವರು ಬೆವರು ಕಜ್ಜಿ ಉಂಟಾಗುವುದು. ಈ ಬೆವರು ಕಜ್ಜಿ ಮಕ್ಕಳಿಗೂ ಬರುತ್ತದೆ, ಆದ್ದರಿಂದ ಅವರಿಗೆ ಸಡಿಲವಾದ ಕಾಟನ್ ಬಟ್ಟೆ ಧರಿಸಿ.
ಈ ಬೆವರು ಕಜ್ಜಿ ಬಂದರೆ ಏನು ಮಾಡಬೇಕು, ಯಾವ ಮನೆಮದ್ದು ಒಳ್ಳೆಯದು ಎಂದು ನೋಡೋಣ ಬನ್ನಿ:

ತಣ್ಣೀರಿನ ಸ್ನಾನ:
ಬೇಸಿಗೆಯಲ್ಲಿ ತಣ್ಣೀರ ಸ್ನಾನ ಒಳ್ಳೆಯದು, ತಣ್ಣೀರ ಸ್ನಾನ ಮಾಡುವುದರಿಂದ ಮೈ ಉಷ್ಣಾಂಶ ಕಡಿಮೆಯಾಗುವುದು. ಇನ್ನು ಸ್ನಾನ ಮಾಡಿದ ಮೇಲೆ ಮೈಯನ್ನು ಚೆನ್ನಾಗಿ ಒರೆಸಿ. ಡರ್ಮಿ ಕೂಲ್‌ನಂಥ ಪೌಡರ್ ಹಾಕಿ.
ಸಡಿಲವಾದ ಕಾಟನ್ ಬಟ್ಟೆ ಧರಿಸಿ
ಈ ಸಮಯದಲ್ಲಿ ಬಿಗಿಯಾದ ಬಟ್ಟೆ ಧರಿಸಿ. ಹತ್ತಿಯ ಸಡಿಲವಾದ ಬಟ್ಟೆ ಧರಿಸಿ. ವರ್ಕೌಟ್ ಮಾಡುವಾಗ ಬಿಗಿ ಬಟ್ಟೆ ಧರಿಸಬಾರದು, ವರ್ಕೌಟ್ ಮಾಡುವಾಗ ಮೈ ಬೆವರುವುದು, ಇದರಿಂದ ತೊಡೆಗಳ ಬಳಿ, ಕಂಕುಳ ಬಳಿ ತುರಿಕೆ ಉಂಟಾಗುವುದು, ಬೆನ್ನಿನಲ್ಲಿ ಕೂಡ ಬೆವರು ಕಜ್ಜಿ ಬರುವುದು. ಇನ್ನು ತುಂಬಾ ತುರಿಕೆ ಇದ್ದರೆ ಐಸ್‌ಪ್ಯಾಕ್ ರಿಲೀಫ್ ನೀಡುತ್ತೆ.
ಇವುಗಳನ್ನು ಹಚ್ಚಿ ಸ್ನಾನ ಮಾಡಿ
ನೀವು ಸ್ನಾನ ಮಾಡುವ ಮುನ್ನ ನೀರಿಗೆ ಸ್ವಲ್ಪ ಓಟ್ಸ್ ಹಾಕಿಡಿ, ನಂತರ ಆ ನೀರಿನಿಂದ ಸ್ನಾನ ಮಾಡಿ. ಓಟ್ಸ್ ಪೇಸ್ಟ್ ಮಾಡಿ ಮೈಗೆ ಹಚ್ಚಿ 5 ನಿಮಿಷ ಬಿಟ್ಟು ಮೈ ತೊಳೆದರೆ ಒಳ್ಳೆಯದು ತುರಿಕೆ ಕಡಿಮೆಯಾಗುವುದು.
ಅಥವಾ ಬಕೆಟ್ ನೀರಿಗೆ 2-3 ಚಮಚ ಬೇಕಿಂಗ್ ಸೋಡಾ ಹಾಕಿ ಆ ನೀರಿನಲ್ಲಿ ಸ್ನಾನ ಮಾಡಿದರೆ ಕಜ್ಜಿ ತುರಿಸುವುದಿಲ್ಲ.
ಲೋಳೆಸರ ಲೋಳೆಸರ: ಲೋಳೆಸರ ಹಚ್ಚುವುದರಿಂದ ತುರಿಸುವುದಿಲ್ಲ, ಮೈ ತಣ್ಣಗೆ ಇರುತ್ತದೆ. ಸ್ನಾನಕ್ಕೆ ಸುಗಂಧ ಹೆಚ್ಚಿರುವ ಸೋಪು ಹಚ್ಚಬೇಡಿ, ಬದಲಿಗೆ ಸುವಾಸನೆ ಕಡಿಮೆ ಇರುವ ಸೋಪು ಬಳಸಿ, ಮೆಡಿಕಲ್‌ನಲ್ಲಿ ಕೇಳಿ ಬೆವರು ಕಜ್ಜಿಗೆ ಹಚ್ಚುವ ಸೋಪು ತಂದು ಅದನ್ನು ಬಳಸಿ.
ಬೆವರು ಕಜ್ಜಿಯಾದಾಗ ವೈದ್ಯರಿಗೆ ತೋರಿಸಬೇಕೆ?
ಸಾಮಾನ್ಯವಾಗಿ ಬೆವರು ಕಜ್ಜಿ 3-4 ದಿನಗಳಲ್ಲಿ ಕಡಿಮೆಯಾಗುತ್ತದೆ, 4 ದಿನ ಕಳೆದರೂ ಕಡಿಮೆಯಾಗಿಲ್ಲ, ಈ ಲಕ್ಷಣಗಳು ಕಂಡು ಬಂದರೆ ನೀವು ವೈದ್ಯರಿಗೆ ತೋರಿಸುವುದು ಒಳ್ಳೆಯದು.
ಕೀವು ತುಂಬಿದರೆ
ಜ್ವರ
ಗಂಟಲು ನೋವು
ಮೈಕೈ ನೋವು
ಊತ ಕಂಡು ಬಂದರೆ
ನೋವು ಅಧಿಕವಿದ್ದರೆ
ಈ ಕಜ್ಜಿ ಉಂಟಾಗದಂತೆ ತಡೆಗಟ್ಟುವುದು ಹೇಗೆ?
- ತುಂಬಾ ಬಿಸಿಲಿನಲ್ಲಿ ಓಡಾಡಬೇಡಿ, ಓಡಾಡುವ ಅವಶ್ಯಕತೆ ಬಿದ್ದರೆ ಬಿಸಿಲಿನಲ್ಲಿ ಕೊಡೆ ಹಿಡಿದು ಓಡಾಡಿ.
- ತುಂಬಾ ಮೈ ಬೆವರುವಾಗ ಫ್ಯಾನ್ ಅಥವಾ ಎಸಿ ಬಳಸಿ.
- ತುಂಬಾ ಮೈ ಬೆವರಿದರೆ ತಣ್ಣೀರಿನ ಸ್ನಾನ ಮಾಡಿ, ಸಡಿಲವಾದ ಕಾಟನ್ ಬಟ್ಟೆ ಧರಿಸಿ.
- ಈ ಸೆಕೆಯಲ್ಲಿ ಮನೆಯಲ್ಲಿ ಇರುವಾಗ ಮಕ್ಕಳಿಗೆ ಡಯಾಪರ್ ಬಳಸಬೇಡಿ.
- ಮಲಗಿದ್ದಲ್ಲಿಯೇ ಇರುವ ರೋಗಿಯ ಆರೈಕೆ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಅವರು ಒಂದೇ ಕೆ ಮಲಗಿಸುವ ಬದಲಿಗೆ ಮೆಲ್ಲನೆ ಲಕೂರಿಸುವುದು ಅಥವಾ ಅವರನ್ನು ಬದಲಾಯಿಸಿ ಮಲಗಿಸುವುದು ಮಾಡಬೇಕು. ಕೋಣೆ ತಂಪಾಗಿರುವಂತೆ ನೋಡಿಕೊಳ್ಳಿ.



Click it and Unblock the Notifications
